Author: ಮಂಗ್ಳೂರ ಮಾಣಿ

ರಕ್ಷಾ ಬಂಧನದ ದಿನ ಶಿಷ್ಯರಿಂಗೆ ಗುರುಗಳ ಅಭಯ ರಕ್ಷೆ 3

ರಕ್ಷಾ ಬಂಧನದ ದಿನ ಶಿಷ್ಯರಿಂಗೆ ಗುರುಗಳ ಅಭಯ ರಕ್ಷೆ

“ಅಲ್ಲ! ಗುರುಗೊ ದಿನಕ್ಕೆ ಒಂದು ರೂಪಾಯಿ ತೆಗದು ಮಡುಗು – ಎಡಿಯದ್ದೋರಿಂಗಾತು, ನಿಂಗೊ ಉಂಬ ಊಟಲ್ಲಿ ಒಂದು ಮುಷ್ಟಿ ಕಷ್ಟಲ್ಲಿಪ್ಪೋರಿಂಗೆ ತೆಗದು ಮಡುಗು, ದಿನಕ್ಕೆ ಎರಡು ಹೊತ್ತು ಜೆಪ ಮಾಡು ಹೇಳಿರೆ ಹೆಚ್ಚಿಗೆ ಕಾಣುತ್ತು ಇವಕ್ಕೆ – ಫೈವ್’ಸ್ಟಾರ್ ಹೋಟ್ಲಿಂಗೆ ಹೋಗಿ ಒಂದು ಘಂಟೆ ಕಾದು, ತುಂಬ ಅಂತೊಂಡು ರಜ್ಜ ತಿಂದು, ಸುಮಾರು ಬಿಲ್ಲು ಕೊಡುವಾಗಳೂ ಇಷ್ಟೇ ಮಾತಾಡಿಕ್ಕೋ ಮಾರಾಯ?” ” ಗುರುಗೊ ಹೇಳಿದ್ದದೇ ಅರ್ಥ ಆಯಿದಿಲ್ಲೆ ಅವಕ್ಕೆ, ಇನ್ನು ನಾವು ಹೇಳಿರೆ ಅಕ್ಕೋ?

ಹೊಸತ್ತರ ಒಪ್ಪಿಗೊಂಬದು 2

ಹೊಸತ್ತರ ಒಪ್ಪಿಗೊಂಬದು

ಸತ್ಯದ ದಾರಿಲಿ ಸುಮಾರು ಕಲ್ಲು ಮುಳ್ಳು ಇರ್ತು. ಸಾಕ್ರೆಟಿಸ್ಸಿಂಗೆ ವಿಷ ಕೊಟ್ಟವು, ಯೇಸುವಿನ ಶಿಲುಬೆಗೆ ಹಾಕಿದವು, ಕುಮಾರಿಲ ಭಟ್ಟರ ಸುಟ್ಟವು. ನಮ್ಮೊಳ ಇಪ್ಪ ಏವದೋ ಒಂದು ವಿಷಯ ನಮ್ಮ ಹೊಸತ್ತರ ಒಪ್ಪಿಗೊಂಬಲೆ ಬಿಡ್ತಿಲ್ಲೆ. ಮನೆಯ ಮೂಲೆಲಿ ಹಳೇ ಸಾಮಾನುಗೊ ಇದ್ದ ಹಾಂಗೇ, ಮನಸ್ಸಿನ ಮೂಲೆಲಿಯೂ ಬದಲದ್ದೇ ಹಳತ್ತಾದ ಉಪಯೋಗಕ್ಕಿಲ್ಲದ್ದ ನಂಬಿಕೆಗೊ ಸುಮಾರಿರ್ತು.

ಪುಸ್ತಕ ಪರಿಚಯ : How to talk with God 4

ಪುಸ್ತಕ ಪರಿಚಯ : How to talk with God

ಬೈಲ ಎಲ್ಲೋರಿಂಗೂ ಮಾಣಿಯ ನಮಸ್ಕಾರಂಗೊ, ಸುಮಾರು ದಿನ ಆತು ಬೈಲಿಂಗೆ ಬಪ್ಪಲೇ ಎಡಿಗಾಯಿದಿಲ್ಲೆ, ಹಾಂಗೆ ಬಪ್ಪಗ ಬರೇ ಕೈಲಿ ಬಪ್ಪಲಾವುತ್ತೋ? ಹಸ್ತಕ್ಕೆ ಪುಸ್ತಕ ಭೂಷಣ ಅಡ – ಗಣೇಶ ಮಾವ° ಹೇಳುಗು. ಹಾಂಗಾಗಿ ಒಂದು ಪುಸ್ತಕ ಹಿಡ್ಕೊಂಡು ಬೈಂದೆ. ದೇವರು ಹೇಳುವ concept ನ ವೈಜ್ಞಾನಿಕ ವಾಗಿ ಇದರಲ್ಲಿ ನಿರೂಪಿಸಿದ್ದವು. ಈ ಪುಸ್ತಕಲ್ಲಿ ಲೇಖಕರು ಪ್ರೀತಿ, ಜೀವನ, ನಂಬಿಕೆಯ ಶಕ್ತಿ, ಪ್ರಕೃತಿಯ ಚೈತನ್ಯ ಶಕ್ತಿ (Cosmic Energy)  ಮತ್ತೆ  ನಮ್ಮೊಳವೇ ಇಪ್ಪ ಒಂದು ದೂರವಾಣಿ  ವ್ಯವಸ್ಥೆಯ (intuitive telephonic system) ತುಂಬ ವೈಜ್ಞಾನಿಕವಾಗಿ ಹೇಳುತ್ತವು. ಅವು ದೇವರು ಮತ್ತು ಮನುಷ್ಯನ ವ್ಯಕ್ತಿತ್ವ ಮತ್ತು ಸಂಬಂಧದೊಟ್ಟಿಂಗೆ, ನಾವು ಏಕೆ  ದೇವರ  ಅಚ್ಚಿನ  ಹಾಂಗೇ ಇಪ್ಪದು ಹೇಳುದಕ್ಕೂ ಕಾರಣ ಕೊಡ್ತವು. ನಮ್ಮ ದೇವರ ಸಂಬಂಧ ಹೇಂಗಿರೆಕು ಹೇಳುದನ್ನೂ ತುಂಬ  ಸರಳವಾಗಿ – ಮಕ್ಕೊಗೂ ಅರ್ಥ ಅಪ್ಪಹಾಂಗೆ...

ಮತಾಂಧರ ಕಣ್ಣಿಂಗೆ ಕಾಣದ್ದೇ ಹೋದ ದೇಶಭಕ್ತಿಯ ವಿಶ್ವರೂಪ! 8

ಮತಾಂಧರ ಕಣ್ಣಿಂಗೆ ಕಾಣದ್ದೇ ಹೋದ ದೇಶಭಕ್ತಿಯ ವಿಶ್ವರೂಪ!

ಓ ಮೊನ್ನೆಂದ ಪೇಪರಿಲಿ ಒಂದೇ ಶುದ್ದಿ. ಕಮಲ್ ಹಾಸನ್ನಿನ ವಿಶ್ವರೂಪದ್ದು. ಅವ° ಹಾಂಗೇ, ಹೇ ರಾಮ್ ಮಾಡಿದ° – ಶುದ್ದಿ ಆತು ದಶಾವತಾರ ತೋರ್ಸಿದ° – ಅದೂ ಶುದ್ದಿ ಆತು ಈಗ ವಿಶ್ವರೂಪ – ಶುದ್ದಿ ಆಯೆಕಿದ್ದದೇ… ಆದರೆ ಈ ಸರ್ತಿ...

ಜೀವನ ಚೈತ್ರ 3: ಸಸ್ಯಾಹಾರವೇ ಎಂತಕೆ? – ಭಾಗ 2 25

ಜೀವನ ಚೈತ್ರ 3: ಸಸ್ಯಾಹಾರವೇ ಎಂತಕೆ? – ಭಾಗ 2

ಹರೇ ರಾಮ, ಕಳುದಸರ್ತಿ ನಾವು ಸಸ್ಯಾಹಾರವೇ ಎಂತಕೆ ಹೇಳ್ತ ವಿಷಯ ಮಾತಾಡಿಯೊಂಡಿತ್ತು 🙂 ಅಲ್ಲದೋ? ಈ ಸರ್ತಿ ಅದರ ಮುಂದುವರೆಸುವೊ°… *** ಆ ದಿನ ಬಚಾವಾತು, ಆದರೆ ಮತ್ತೊಂದರಿ ಸಿಕ್ಕಿ ಬೀಳದ್ದೆ ಇಕ್ಕೋ? ಮರದಿನ ಮತ್ತೆ ಕೇಳಿತ್ತು ಒಂದು ಹೆಮ್ಮಕ್ಕ, “ನೀವು...

ಜೀವನ ಚೈತ್ರ 3: ಸಸ್ಯಾಹಾರವೇ ಎಂತಕೆ? – ಭಾಗ 1 11

ಜೀವನ ಚೈತ್ರ 3: ಸಸ್ಯಾಹಾರವೇ ಎಂತಕೆ? – ಭಾಗ 1

ಸಿಗರೇಟು ಎಳವದರಿಂದ ಅಪ್ಪಷ್ಟೇ ಅಥವಾ ಅದರಿಂದ ಅಪ್ಪದ್ದರಿಂದಲೂ ಹೆಚ್ಚು ಹಾನಿ ಮಾಂಸ ಸೇವನೆಂದ ಆವುತ್ತು.
ನವಗೆ ಸಿಕ್ಕುವ ಇತಿಹಾಸವ ನಾವು ಗಮನುಸಿಯರೆ, ತರಕಾರಿ ಮತ್ತೆ ಹಣ್ಣುಗಳೇ ಮನುಷ್ಯನ ಆಹಾರದ ಮುಖ್ಯ ಭಾಗ ಆಗಿತ್ತು

ಕಟೀಲು ಕ್ಷೇತ್ರ ದರ್ಶನ – ರುದ್ರ ಪಠಣ 24

ಕಟೀಲು ಕ್ಷೇತ್ರ ದರ್ಶನ – ರುದ್ರ ಪಠಣ

ಬೈಲಿನ ಎಲ್ಲೋರಿಂಗೂ ನಮಸ್ಕಾರ. 🙂 ಪಂಜ ಜಾತ್ರೆ ಆಗಿಯೊಂಡಿದ್ದಿದಾ, ಬ್ರಹ್ಮ ಕಲಶೋತ್ಸವ ಎಲ್ಲ ಆಗಿ ದರ್ಶನ ಬಲಿ ನೆಡಕ್ಕೊಂಡಿತ್ತು. ಸಾಲಿಲಿ ನಿಂದರೆ ಸಾಕು, ಬಟ್ಳು ಕಾಣಿಕೆ ಹಾಕಿಯಪ್ಪಗ ಪ್ರದಕ್ಷಿಣೆಯೂ ಅಕ್ಕು.  – ಅಷ್ಟು ಜೆನ. 🙂 ಅದರ ಎಡೆಲಿ ಡಾಕ್ಟ್ರ ಫೋನು “ನಾಳೆ ಕಟೀಲಿಂಗೆ ಹೋಗಿ ರುದ್ರ ಹೇಳುದು ಹೇಳಿ ತೀರ್ಮಾನ ಮಾಡಿದ್ದು, ಬತ್ತೆಯೋ?” ಹೇಳಿ. ರುದ್ರ ಹೇಳುದೂ ಹೇಳಿರೇ ಹೇಂಗಾರು ಮಾಡಿ ಸಮಯ ಹೊಂದುಸುವ ಮಾಣಿ, ಕ್ಷೇತ್ರಲ್ಲಿ, ಅದೂ ಕಟೀಲಿಲ್ಲಿ ಹೇಳಿರೆ ಬಿಡುಗೋ? “ಅಕ್ಕಕ್ಕು ಬತ್ತೆ ಬತ್ತೆ” ಹೇಳಿ ಹೇಳಿದೆ. “ಅಂಬಗ ನಾಳೆ ಉದಿಯಪ್ಪಗ ೪.೧೫ ಕ್ಕೆ ಸಿಕ್ಕು ಒಟ್ಟಿಂಗೇ ಹೋಪೋ°” ಹೇಳಿದವು. ~~ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಕಟೀಲು ಹೇಳಿರೆ ನವಗೆಲ್ಲ ಗೊಂತಿಪ್ಪದೇ ಅಲ್ಲದಾ? ತೂಷ್ಣಿಲಿ ಹೇಳ್ತರೆ, ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯಸ್ಥಳಂಗಳಲ್ಲಿ ಒಂದು.  ನಮ್ಮ ಜಿಲ್ಲೆಯ ಅನೇಕ ದೇವಸ್ಥಾನಗಳ ಹಾಂಗೇ ಕಟೀಲು ದೇಗುಲವೂ ವಿದ್ಯಾದಾನ...

ಜೀವನ ಚೈತ್ರ 2 : ಮನಸ್ಸು ಮತ್ತು ಆರೋಗ್ಯ 3 14

ಜೀವನ ಚೈತ್ರ 2 : ಮನಸ್ಸು ಮತ್ತು ಆರೋಗ್ಯ 3

ಸೋರುತಿಹುದು ಮನೆಯ ಮಾಳಿಗೆ.. ಅಜ್ಞಾನದಿಂದ 🙂

ಜೀವನ ಚೈತ್ರ 2 : ಮನಸ್ಸು ಮತ್ತು ಆರೋಗ್ಯ 2 44

ಜೀವನ ಚೈತ್ರ 2 : ಮನಸ್ಸು ಮತ್ತು ಆರೋಗ್ಯ 2

ನಮ್ಮ ಮನಸ್ಸಿಂಗೆ ಈ ಎಲ್ಲ ಕೆಟ್ಟ ಆಲೋಚನೆಗಳ ಭಾರವ ತಡಕ್ಕೊಂಬಲೆ ಎಡಿತ್ತಿಲ್ಲೆ ಹೇಳಿ ಅಪ್ಪಗ ಅದು ಆ ಎಲ್ಲದರ ಯಾವುದಾದರೂ ಒಂದು ಅಂಗದ ಮೇಲೆ ಆರೋಪ ಮಾಡ್ತು. ಅದುವೇ ರೋಗ,

ಜೀವನ ಚೈತ್ರ 2 : ಮನಸ್ಸು ಮತ್ತು ಆರೋಗ್ಯ 1 33

ಜೀವನ ಚೈತ್ರ 2 : ಮನಸ್ಸು ಮತ್ತು ಆರೋಗ್ಯ 1

ಮನಸ್ಸಿಂಗೂ ಆರೋಗ್ಯಕ್ಕೂ ಎಂತ ಸಂಬಂದ ಹೇಳಿ ರಜ್ಜ ಚಿಂತನೆ ಮಾಡುವೊ˚

ಮಾಣಿ ಮಠಲ್ಲಿ ಗುರುಗೊ 28

ಮಾಣಿ ಮಠಲ್ಲಿ ಗುರುಗೊ

ಪ್ರಶಾಂತ ಪರಿಸರಲ್ಲಿ, ಒಂದರಿಯಂಗೆ ಶಂಖ ಜಾಗಟೆಗಳ ಮಧುರ ಧ್ವನಿ, ಅದು ಮಾತ್ರ, ಕೇಳುತ್ತ ಇಪ್ಪವ್ವೆಲ್ಲ ಸುಶುಪ್ತಿಗೆ ಹೋಪ ಹಾಂಗೆ.
ಬಾಗಿಲು ತೆಗದವು, ಬರೇ ದೀಪದ ಬೆಣಚ್ಚಿಲಿ ಆರಾಧ್ಯ ದೇವತೆಗೊ ತುಂಬ ಚೆಂದ ಕಂಡೊಂಡಿತ್ತಿದ್ದವು.
ಭಾವಿಸಿದವಕ್ಕೆ ಒಂದರಿ ಎಲ್ಲ ೭ ಚಕ್ರಂಗೊ ತೆಗಕ್ಕೊಂಡು ಅದಮ್ಯ ಶಕ್ತಿಯ ಪ್ರವಾಹವೇ ಒಳಾ ನುಗ್ಗಿದ ಹಾಂಗೆ ಆದಿಕ್ಕು. ಬೆಶಿಯೂ – ತಂಪೂ ಒಟ್ಟಿಂಗೇ ಆದ ಹಾಂಗೆ.
ತುಂಬ ಶಾಂತಿ

ಜೀವನ ಚೈತ್ರ ೧ : ಪಂಚ ಕೋಶಂಗೊ 22

ಜೀವನ ಚೈತ್ರ ೧ : ಪಂಚ ಕೋಶಂಗೊ

ಬೈಲಿಂಗೆ ಆತ್ಮೀಯ ನಮಸ್ಕಾರಂಗೊ. 🙂 ಮೊನ್ನೆ ಹುಣ್ಣಿಮೆಗೆ ಮಂಗಳೂರಿನ ಕದ್ರಿ ಹೇಳುವಲ್ಲಿ ಒಂದು ಧ್ಯಾನ ಶಿಬಿರ ಇತ್ತು. ಹೋಗಿತ್ತಿದ್ದೆ. ಅಲ್ಲಿ ಕೆಲವು ವಿಷಯಂಗೊ ಬಂತು, ಬೈಲಿಂಗೆ ಹೇಳುವೋ° ಹೇಳಿ ಕಂಡತ್ತು.. ನಮ್ಮ ದೇಹ ಸರಿಯಾಗಿ ಕೆಲಸ ಮಾಡೆಕ್ಕಾರೆ ಅದಕ್ಕೆ ಬೇಕಾದ ಎಲ್ಲಾ...

ಸಾವಿನ ಹೆದರಿಕೆ – ಆ ನಂತರದ ಜೀವನ…!!! 32

ಸಾವಿನ ಹೆದರಿಕೆ – ಆ ನಂತರದ ಜೀವನ…!!!

ಬೈಲಿನ ಎಲ್ಲರಿಂಗೂ ಪ್ರೀತಿಯ ನಮಸ್ಕಾರಂಗೊ. ಮೊನ್ನೆ ಬಡೆಕ್ಕೋಡಿಗೆ ಹೋಗಿತ್ತಿದ್ದೆ, ಹೀಂಗೆ ಒಂದು ತಂಬಿಲಕ್ಕೆ ಹೇಳಿತ್ತಿದ್ದವು. ತಂಬಿಲ ಮುಗಿಶಿ ಉಂಡು ಕಾಲು ನೀಡಿ ಕೂದು ಬಡೆಕ್ಕೋಡಿ ಭಾವನತ್ರೆ ಮಾತಾಡಿಯೊಂಡಿತ್ತಿದ್ದೆ. ರಾಜಕೀಯ, ಸಿನಿಮಾ ಎಲ್ಲಾ ಆಗಿ ಪುರಾಣ ಕಥೆಗೊಕ್ಕೆ ಬಂತು ಮಾತುಗೊ… ಮನುಷ್ಯ° ಆದವ° ಸಾರ್ಥಿ ಹೇಳುದು ಅಪ್ಪು....

ಕುಮಾರ ಪರ್ವತಕ್ಕೆ ಒಂದು ಸುತ್ತು… 35

ಕುಮಾರ ಪರ್ವತಕ್ಕೆ ಒಂದು ಸುತ್ತು…

ಅಂದು ವೇದಪಾಠದ ಕೊನೇ ದಿನ. ಪ್ರತೀ ಸರ್ತಿಯಾಣ ಹಾಂಗೇ ಈ ವರ್ಷವೂ ಸುಬ್ರಮಣ್ಯದ ವೇದಪಾಠಿಗೊ ಎಲ್ಲ ಕುಮಾರ ಪರ್ವತ ಹತ್ತುದು ಹೇಳಿ ತೀರ್ಮಾನ ಆಗಿತ್ತು.
ಅದೇ ಪ್ರಕಾರ ಸುಮಾರು ೫೦ ಪೊಡಿ ಮಕ್ಕೊ ಹೆರಟು ನಿಂದಿತ್ತಿದ್ದವು. ಅದರಲ್ಲಿ ಆನೂ ಎನ್ನ ತಮ್ಮನೂ ಇತ್ತಿದ್ದೆಯೋ°. ಅವಂಗೆ ಮದಲೇ 2 ಸರ್ತಿ ಹೋಗಿ ಗೊಂತಿತ್ತಿದಾ ಹಾಂಗಾಗಿ ಸಾಧಾರಣ ಇರ್ತ ಹಾಂಗೇ ಹೆರಟಿತ್ತಿದ°.
ಎನಗೆ ಇದು ಸುರು, ಅವ ಮದಲೇ ಹೇಳಿದ ಕಾರಣ ರಜ್ಜ ಹುಶಾರಿ ಆದೆ ಆನುದೇ. ಇಲ್ಲದ್ದರೆ, ಈ ಸುರೂಆಣ ಸರ್ತಿ ಹೆರಡ್ತವರ ಚೆಂದ ನೋಡೆಕು!!