Oppanna
Oppanna.com

ಮುಳಿಯ ಭಾವ

ಓ- ರಘುಭಾವ° ಆರು ಹೇಳಿ ನಿಂಗೊಗೆ ಗೊಂತಾತೋ? ಬೈಲಿನ ಒಪ್ಪಂಗಳ ನಿತ್ಯವೂ ನೋಡಿಗೊಂಡು ಇದ್ದಿದ್ದರೆ ಗೊಂತಾವುತಿತು. ಎಲ್ಲಾ ಶುದ್ದಿಗೊಕ್ಕೆ ಪ್ರೋತ್ಸಾಹಕ ಒಪ್ಪಂಗಳ ಕೊಟ್ಟೊಂಡು, ವಿಶಿಷ್ಟ ರೀತಿಯ ವಾದಂಗಳ ಮಂಡಿಸಿಗೊಂಡು, ಆಸಕ್ತಿದಾಯಕವಾಗಿ ಬರವದು ಅವರ ಹವ್ಯಾಸ. ಅವರ ಮೂಲ ನಮ್ಮ ಊರಿನ ಮುಳಿಯವೇ! ಮುಳಿಯದ ಅಜ್ಜ° ಇತ್ತಿದ್ದವಲ್ಲದೋ (ಶ್ರೀ ಮುಳಿಯ ತಿಮ್ಮಪ್ಪಯ್ಯ) - ಅವರ ತಮ್ಮನ ಪುಳ್ಳಿ! ಸದ್ಯಕ್ಕೆ ಬೆಂಗುಳೂರಿಲಿ ಯೇವದೋ ಕಂಪೆನಿಲಿ ದೊಡ್ಡ ಕೆಲಸ. ನಾಲ್ಕು ಜೆನರ ತುಂಬು ಸಂಸಾರ - ಸುಖ ಸಾಗರವಾಗಿ ನೆಡೆತ್ತಾ ಇದ್ದು. ದಿನ ಉದಿಯಾದರೆ ಆಪೀಸು - ಹೊತ್ತಪ್ಪಗ ಮನಗೆ. ಹೋಪಲೂ ಬಪ್ಪಲೂ ಕಾರಿದ್ದು- ಕಾರಿಲಿ ಒಂದು ಟೇಪ್ರೆಕಾರ್ಡು ಇದ್ದು. ಅದಕ್ಕೆ ಆಟಂಗಳೋ, ತೆಂಕು-ಬಡಗು ಪದಂಗಳೋ, ಉರುಳಿಕೆಗಳೋ, ಪಂಚವಾದ್ಯಂಗಳೋ, ಇಂಪಾದ ಬಾಗೊತಿಗೆಗಳೋ - ಎಂತಾರು ಇಪ್ಪ ಉರುಟು ತಟ್ಟೆಸೀಡಿ ಹಾಕಿರೆ ಆಪೀಸಿಲಿ ಕಾರು ತಿರುಗುಸಿದ್ದು ನೆಂಪಿಕ್ಕು. ಮತ್ತೆ ಮನಗೆ ಎತ್ತಿ, ಮುಳಿಯದಕ್ಕ° ಪರಂಚಿದ ಮೇಗೆಯೇ ನಿಲ್ಲುಸುಗಷ್ಟೇ - ಅಷ್ಟುದೇ ಆಟದ ಮರುಳು - ಚೆನ್ನಬೆಟ್ಟಣ್ಣ, ವೇಣೂರಣ್ಣನ ಹಾಂಗೆ! ಅಪ್ಪು, ಅವಕ್ಕೆ ರಜ ಆಟದ ಮರುಳು ಜಾಸ್ತಿ. ಆಟ ಹೇಳಿರೆ - ಒಪ್ಪಣ್ಣನ ಹಾಂಗೆ ಬರೇ ನೋಡುದು ಮಾಂತ್ರ ಅಲ್ಲ. ಅರ್ತವೂ ಹೇಳುಗು. ದೊಡ್ಡ ದೊಡ್ಡ ಪ್ರಸಿದ್ಧ ಕಲಾವಿದಾರ ಒಟ್ಟಿಂಗೆ ಕೂದಂಡು ಅರ್ತ ಹೇಳಿದ ಅನುಬವ ಅವಕ್ಕಿದ್ದು. ಯೇವದೇ ಪ್ರಸಂಗ, ಯೇವದೇ ಪದ ಆದರೂ ಅದಕ್ಕೆ ಅರ್ತ ಹೇಳುವಗ ಇವರದ್ದೇ ಆದ ಚಿಂತನೆಗಳ ಸೇರುಸಿ ವರ್ಣನೆ ಸಹಿತವಾಗಿ ಕೇಳ್ತವಂಗೆ ಕುತೂಹಲ ಏರಿಗೊಂಡೇ ಹೋಪ ಹಾಂಗೆ ಅರ್ತ ಹೇಳ್ತದು ಅವರ ಶೆಗ್ತಿ. ಅವು ಮಾಂತ್ರ ಅಲ್ಲ, ಅವರ ಮಕ್ಕಳುದೆ ಯಕ್ಷಗಾನಲ್ಲಿ ಮುಂದೆ ಬಪ್ಪ ನಮುನೆ ಪ್ರೇರೇಪಣೆ ಕೊಟ್ಟು, ಈಗಾಣ ಅಮುಸರದ ಜೀವನಲ್ಲಿ ಬೆಂಗುಳೂರಿಲಿ ಬದುಕ್ಕುತ್ತ ಅಪ್ಪಂದ್ರಿಂಗೆ ಮಾದರಿ ಆಯಿದವು. ಮೊನ್ನೆ ಚೆನ್ನಬೆಟ್ಟಣ್ಣನ ಮದುವೆಲಿ ಒಟ್ಟಿಂಗೆ ಅಶನಕ್ಕೆ ಹಿಡಿವಲೆ ಸಿಕ್ಕಿದವು ಒಪ್ಪಣ್ಣಂಗೆ. ಸುಮಾರು ಶುದ್ದಿ ಮಾತಾಡಿದವು. ನಮ್ಮ ಊರು - ಈಗಾಣ ಬದುಕ್ಕಾಣ -ಅದು ಇದು ಎಲ್ಲ. ಈ ಶುದ್ದಿಗಳ ಬೈಲಿಂಗೆ ಹೇಳುವಿರೋ - ಕೇಳಿದ ಒಪ್ಪಣ್ಣ. ಸಂತೋಷಲ್ಲಿ "ಅಕ್ಕು ಒಪ್ಪಣ್ಣ ಭಾವಾ.." ಹೇಳಿದವು.

ಆಟ ನೀರಾತು -ಭಾಮಿನಿಲಿ

ಮುಳಿಯ ಭಾವ 01/02/2012

ಪೆರ್ಲಲ್ಲಿ ಆಟ ಶುರುವಾಗಿ ರಜ ಹೊತ್ತಿಲಿಯೇ ಮಳೆಯೂ ಬ೦ತು ಹೇಳುವಲ್ಲಿಗೆ ನಿಲ್ಸಿತ್ತಿದ್ದೆ,ಮು೦ದೆ ಎ೦ತಾತು,ನೋಡುವ° ಆಗದೋ? ಓಡಿದವು ಒಳ ವೇಷಧಾರಿಗೊ ಮಾಡಿನಡಿಲಿಯೆ ಸೇರಿ ನಿ೦ಬಲೆ ಬಾಡಿ ಅಸ್ಕಿತ್ತೆನ್ನ ಮೋರೆಯು ಮಳೆಯ ಹನಿ ಬಿದ್ದು| ಪಾಡು ವರ್ಣಿಸುಲೆಡಿಯ ಜೆನ ಪರ ದಾಡಿದವು ಇರುಳಿಲಿಯೆ ಕೋಳಿಯ

ಇನ್ನೂ ಓದುತ್ತೀರ

ಯಾನದ ದಾರಿ ಸರಿಯಕ್ಕೊ?

ಮುಳಿಯ ಭಾವ 18/01/2012

ಶ್ರೀ ಅಖಿಲ ಹವ್ಯಕ ಮಹಾಸಭಾ (ರಿ),ಬೆ೦ಗಳೂರು ,ಇವು ಇತ್ತೀಚೆಗೆ ನೆಡೆಶಿದ ಹವಿಗವನ ಸ್ಪರ್ಧೆಲಿ ದ್ವಿತೀಯ ಬಹುಮಾನ

ಇನ್ನೂ ಓದುತ್ತೀರ

ಆಟ ಶುರುವಾತು..-ಭಾಮಿನಿಲಿ

ಮುಳಿಯ ಭಾವ 04/01/2012

ಪೆರ್ಲದ ಆಟಕ್ಕೆ ಹೋಗಿ ಪಿಕ್ಲಾಟ ಮಾಡಿದ ಕತೆ ಹೇಳುಲೆ ಶುರು ಮಾಡಿ ತಿ೦ಗಳು ಕಳಾತು. ಎಡಕ್ಕಿಲಿ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×