Oppanna
Oppanna.com

ಸರ್ಪಮಲೆ ಮಾವ°

ಬೈಲಿನ ಅರಡಿವೋರಿಂಗೆ ಸರ್ಪಮಲೆ ಮಾವನನ್ನೂ ಅರಡಿಗು, ಅಲ್ಲದೋ? ಇವುದೇ ಡಾಗುಟ್ರೇ, ಆದರೆ – ಹೆದರೆಡಿ, ಇಂಜೆಕ್ಷನು ಹಿಡಿತ್ತ ಡಾಗುಟ್ರಲ್ಲ. ಇವು ಪೆನ್ನು ಹಡಿತ್ತ ಡಾಗುಟ್ರು! ಸರ್ಪಮಲೆ ಮಾವ ಮುಗುಳುನೆಗೆಲಿ! ಶಿಕ್ಷಣಕ್ಷೇತ್ರಲ್ಲಿ ಹತ್ತು-ಮೂವತ್ತೊರಿಶ ಕೆಲಸಮಾಡಿದ ಅನುಭವ ಅವಕ್ಕಿದ್ದು. ಕೊಡೆಯಾಲದ ಕೋಲೇಜಿಲಿ ಲೆಗುಚ್ಚರು ಅಗಿದ್ದು, ಈಗ ರಿಠೇರ್ಡು! ರಿಠೇರ್ಡು ಆದರೂ ಮನೆಲಿ ಕೂಪಲೆ ಬಿಟ್ಟಿದವಿಲ್ಲೆ, ರಾಮಜ್ಜನ ಕೋಲೇಜಿನವು ಹೋಗಿ ಬಪ್ಪಲೇಬೇಕು ಹೇಳಿ ಕೇಳಿಗೊಂಡವು. ಆತಂಬಗ, ಹೇಳಿ ಇವುದೇ ಹೆರಟು ಬಂದವು. ಪ್ರಸ್ತುತ ರಾಮಜ್ಜನ ಕೋಲೇಜಿನ ಮೇಗಾಣ ಮಾಳಿಗೆಯ ಮೂಲೆಯ ಕೋಣೆಲಿ ಕೂದಂಡಿದ್ದವು! ಮೆನೇಜುಮೆಂಟು ಕೋಲೇಜಿನ ಗುರಿಕ್ಕಾರ್ರಾಗಿದ್ದವು! ಕೊಡೆಯಾಲಂದ ಪುತ್ತೂರಿಂಗೆ – ಮಾರ್ಗ ಹಾಳಾದರೂ ಹೋಗಿಬಂದು ಮಾಡ್ತವು ನಿತ್ಯ. ಅನುಭವಿ, ಶಿಕ್ಷಣ ತಜ್ಞ ಸರ್ಪಮಲೆಮಾವನ ಬೇಡಿಕೆಯ ಗ್ರೇಶಿರೆ ನವಗೆ ಕೊಶಿ ಅಪ್ಪದು. ಬೈಲಿನ ಆರಿಂಗಾರು ಅವರ ಭೇಟಿಮಾಡ್ಳಿದ್ದರೆ ಮಾಳಿಗೆ ಹತ್ತಿಗೊಂಡು ಹೋಯೆಕ್ಕು, ಹೆರಾಣ ಪೇನಿನ ಬುಡಲ್ಲಿ ಕಾದು ನಿಲ್ಲೆಕ್ಕು. ಒಳ ಹೋದಕೂಡ್ಳೆ ಒಂದರಿ ಇಂಗ್ಳೀಶಿಲಿ ಮಾತಾಡಿ ಹೆದರುಸುಗು, ಮತ್ತೆ ಪ್ರೀತಿಲಿ ನೆಗೆನೆಗೆಮಾಡಿ ಮಾತಾಡುಗು! ಕೋಲೇಜಿಲಿ ಎಷ್ಟೇ ಅಂಬೆರ್ಪು ಇರಳಿ, ಬೈಲಿಂಗ ಬಾರದ್ದೆ ಇರ್ತವಿಲ್ಲೆ. ಕೊಶಿ ಆದ ಶುದ್ದಿಗೆ ಒಪ್ಪಕೊಟ್ಟೊಂಡು, ಶುದ್ದಿ ಬರದವನ ಪ್ರೋತ್ಸಾಹ ಮಾಡಿಗೊಂಡು, ಕೊಶಿ ಹಂಚಿಗೊಂಡು ನಮ್ಮ ನೆಡುಕೆ ಇದ್ದವು. ಅವು ಬರದ ಒಪ್ಪಂಗಳ ಸರಿಯಾಗಿ ನೋಡಿರೇ ಜೆನಂಗೊಕ್ಕೆ ಅವರ ಪಾಂಡಿತ್ಯ ಅರಡಿಗು – ಅಷ್ಟು ಲಾಯಿಕಲ್ಲಿ ಅನುಭವಪೂರಿತವಾಗಿ ಒಪ್ಪ ಬರಗು ಶುದ್ದಿಗೊಕ್ಕೆ. ಒಪ್ಪವೇ ಅಷ್ಟು ಲಾಯಿಕಲ್ಲಿ ಕೊಡುವಗ, ಶುದ್ದಿಯ ಎಷ್ಟು ಲಾಯಿಕಲ್ಲಿ ಹೇಳುಗು, ಅಲ್ಲದೋ?! ಮೊನ್ನೆ ಅವರ ಭೇಟಿಗೆ ಹೋಗಿಪ್ಪಗ ನಾವು ಕೇಳಿಯೇಬಿಟ್ಟತ್ತು – ಬೈಲಿಂಗೆ ಶುದ್ದಿ ಹೇಳ್ತಿರೋ – ಹೇಳಿ. ಒಂದು ಕ್ಷಣ ಸುಮ್ಮನೆ ಕೂದು, ಮತ್ತೆ ಅಕ್ಕು ಹೇಳ್ತನಮುನೆ ತಲೆ ಆಡುಸಿದವು. ಎದುರು ಸಿಕ್ಕಿರೆ ಅವು ಮಾತಾಡುದು ತುಂಬಾ ಕಮ್ಮಿ; ಅತ್ತೆ ಒಟ್ಟಿಂಗೆ ಇದ್ದರೆ ಅಂತೂ ಮತ್ತೂ ಕಮ್ಮಿ!! ಅದಿರಳಿ, ನಮ್ಮತ್ರೆ ಶುದ್ದಿ ಹೇಳಿಯೇ ಹೇಳ್ತವು! ಬನ್ನಿ, ಸರ್ಪಮಲೆ ಮಾವನ ಶುದ್ದಿಗಳ ಕೇಳುವೊ°. ಒಪ್ಪ ಒಪ್ಪ ಶುದ್ದಿಗೊಕ್ಕೆ ನಮ್ಮ ಒಪ್ಪ ಕೊಡುವೊ° _________________ ಸರ್ಪಮಲೆ ಮಾವ ಸೇರಿಸಿದ್ದುಃ ೨೦೧೧ ಅಗೋಸ್ತು ೧ನೇ ತಾರೀಕಿಂದ ವೃತ್ತಿಂದ ನಿವೃತ್ತಿ ಪಡಕ್ಕೊಂಡಿದೆ.

ಕನ್ಯಾನದ ಭಾರತ ಸೇವಾಶ್ರಮದ ಪಟಂಗೊ

ಸರ್ಪಮಲೆ ಮಾವ° 03/06/2012

ಕನ್ಯಾನದ ಭಾರತ ಸೇವಾಶ್ರಮದ ಕೆಲವು ಪಟಂಗೊ ಇಲ್ಲಿದ್ದು: ಪುರುಸೊತ್ತು ಮಾಡಿ ಒಂದರಿ ಹೋಗಿ ನೋಡಿ, ಇನ್ನೂ ಹಲವು ಆಸಕ್ತಿಕರ ದೃಶ್ಯಂಗೊ ಸಿಕ್ಕುಗು. ~ ಸರ್ಪಮಲೆ

ಇನ್ನೂ ಓದುತ್ತೀರ

ಬಂಗಾಳದ ಭಟ್ಟಾಚಾರ್ಯಂಗೂ ಕರ್ನಾಟಕದ ಕನ್ಯಾನಕ್ಕೂ “ಎತ್ತಣಿಂದೆತ್ತ ಸಂಬಂಧವಯ್ಯಾ!’’

ಸರ್ಪಮಲೆ ಮಾವ° 03/06/2012

ಇದು ಕನ್ಯಾನ ಭಾರತ ಸೇವಾಶ್ರಮದ ಸ್ಥೂಲ ಪರಿಚಯ. ಈ ಆಶ್ರಮದ ಬಗ್ಗೆ ಪ್ರಚಾರ ಇಲ್ಲೆ ಹೇಳಿಯೇ ಹೇಳ್ಳಕ್ಕು. ಯಾವುದೇ

ಇನ್ನೂ ಓದುತ್ತೀರ

ಸರ್ಪಮಲೆ ಅತ್ತೆಯ ಕೈ ತೋಟ

ಸರ್ಪಮಲೆ ಮಾವ° 22/06/2011

ಮಾಣಿಂದ ಪುತ್ತೂರು ಹೊಡೇಂಗೆ ಹೋಯೆಕ್ಕಾರೆ ಮಳೆ ಬಪ್ಪಂದ ಮದಲೆ ಮೂಗಿಂಗೆ ಬಾಯಿಗೆ ಮಾಸ್ಕ್ ಹೇಳ್ತ ವಸ್ತ್ರವ

ಇನ್ನೂ ಓದುತ್ತೀರ

ಒಂದು ಅನಿಸಿಕೆ: ಹವಿಗನ್ನಡ – ಸವಿಗನ್ನಡ

ಸರ್ಪಮಲೆ ಮಾವ° 22/02/2011

ಇದು ಹವಿಗನ್ನಡದ ಬಗ್ಗೆ ಗಮನ ಸೆಳವ ಒಂದು ಪ್ರಯತ್ನ ಅಷ್ಟೆ. ಕೇವಲ ಚರ್ಚೆಯ ಹುಟ್ಟು

ಇನ್ನೂ ಓದುತ್ತೀರ

ಬೆಲೆ ಹೆಚ್ಚಿದ್ದು, ಹಣದುಬ್ಬರ ದರ ಇಳುದ್ದು! – ಇದು ಹೇಂಗೆ?

ಸರ್ಪಮಲೆ ಮಾವ° 28/01/2011

ಇದು ಎಲ್ಲೋರೂ ಕೇಳುವ ಪ್ರಶ್ನೆ! ಆರಿಂಗೂ ಅರ್ತ ಆಗದ್ದ ವಿಷಯ!! ಒಟ್ಟು ಕನ್ಫ್ಯೂಶನ್!!! ಹೆಚ್ಚಾಗಿ ಪ್ರತಿ ವಾರ

ಇನ್ನೂ ಓದುತ್ತೀರ

ದೇವರ ಸ್ವಂತ ರಾಜ್ಯಲ್ಲಿ ದೋಣಿಮನೆ ವಿಹಾರ…

ಸರ್ಪಮಲೆ ಮಾವ° 14/12/2010

ಉಂಡೆಮನೆ ಮಾಣಿಯ ಬ್ರೈನ್ ವೇವ್! ನಮ್ಮ ಊರಿನ ಮಕ್ಕೊ- ಒಪ್ಪಣ್ಣ ಒಪ್ಪಕ್ಕಂದಿರೆಲ್ಲ ಇಪ್ಪದು ಬೆಂಗಳೂರಿಲ್ಲಿ, ಐಟಿ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×