Oppanna
Oppanna.com

ಚೆನ್ನಬೆಟ್ಟಣ್ಣ

ಚೆನ್ನಬೆಟ್ಟಣ್ಣನ ಗುರ್ತ ಇದ್ದನ್ನೇ? ಆಟದ ಶುದ್ದಿ ಮಾತಾಡುವಗ ಅವರ ಬಗ್ಗೆ ಸುಮಾರು ಸರ್ತಿ ಮಾತಾಡಿದ್ದು. ನೆಗೆನೆಗೆ ಮೋರೆಲಿ ಯೇವತ್ತೂ ಉಲ್ಲಾಸಲ್ಲಿ ಇದ್ದೊಂಡಿಕ್ಕು! ಅವರ ಮೂಲ ಚೆನ್ನಬೆಟ್ಟು ಆದರೂ, ಈಗ ಬೆಂಗುಳೂರಿಲಿ ಇಪ್ಪದು.ಎಲ್ಲೇ ಇದ್ದರೂ, ಅವರ ಊರಿನ ಸೆಳೆತ ಇಳುದ್ದಿಲ್ಲೆ. ನವರಾತ್ರಿ ಆಚರಣೆಗೆ ಚೆನ್ನಬೆಟ್ಟು ಮಟಕ್ಕೆ ಒರಿಶಂಪ್ರತಿ ಬಂದೇ ಬಕ್ಕು! ಹತ್ತರೆ ಎಲ್ಲೇ ಸಂಗೀತ ಕಛೇರಿ, ಡೇನ್ಸು, ಬರತನಾಟ್ಯ ಆವುತ್ತರೂ, ಸೌಕರ್ಯ ಇದ್ದರೆ ಹೋಗಿಯೇ ಹೋಕು! ಯಕ್ಷಗಾನ ಅಂತೂ ಬಿಡ್ತ ಪ್ರಶ್ನೆಯೇ ಇಲ್ಲೆ!ಬೆಂಗುಳೂರಿಲಿಪ್ಪ ಕೆಲವು ಜವ್ವನಿಗರ ಯಕ್ಷಗಾನದ ಗುಂಪಿನ ಸಕ್ರಿಯ ಸದಸ್ಯ° ಅಡ ಇವು..ಅವರ ಬ್ಲಡ್ಡು ಗ್ರೂಪು ಯಕ್ಷಗಾನ ಪ್ಲಸ್ ಅಡ, – ಲಾನಣ್ಣ ನೆಗೆಮಾಡ್ತ° ಕೆಲವು ಸರ್ತಿ! ಅವರತ್ರೊಂದು ಸಣ್ಣ ಸೂಟುಕೇಸಿನಷ್ಟಕೆ ಇಪ್ಪ ಕೆಮರ ಇದ್ದು. ಎಲ್ಲಿಗೆ ಹೋವುತ್ತರೂ ತೆಕ್ಕೊಂಡು ಬಕ್ಕು.ಚೆಂದಚೆಂದದ ಪಟ ತೆಗಗು. ತುಂಬಾ ಚೆಂದದ ಪಟಂಗೊ! ನಮುನೆನಮುನೆದು. ಪರಿಸರವೋ – ಡೇನ್ಸುಕಾರ್ಯಕ್ರಮವೋ – ಹೂಗಿಂದೋ, ಮಾವಿನಮೆಡಿಯೋ – ಹೀಂಗೆಂತಾರು..!ಅವು ತೆಗದ ಒಂದು ಚಂದ್ರನ ಪಟವ ಗುರುಗೊ ಅವರ ವೆಬುಸೈಟಿಲಿ (ಹರೇರಾಮ.ಇನ್) ಲಿ ಹಾಕಿದ್ದವಡ, ಅವಕ್ಕೆ ಕೊಶಿ ಆಗಿ!! ಓ ಮೊನ್ನೆ ಉಪ್ರಂಗಡಿಯ ಆದಿತ್ಯಹೋಟ್ಳಿನ ಚಳಿಕೋಣೆಯ ಒಳದಿಕೆ ಆಚಕರೆಮಾಣಿಯ ಒಟ್ಟಿಂಗೆ ಕೂದುಗೊಂಡು ಬೆಶಿಚಾಯ ಕುಡ್ಕೊಂಡಿತ್ತಿದ್ದವು.ಒಪ್ಪಣ್ಣನ ಕೈಲಿ ಚೆಂದಕೆ ಮಾತಾಡಿದವು. ಅವು ಪಟತೆಗೆತ್ತ ಶುದ್ದಿ ಎಲ್ಲ ಬಂತು - ಬೈಲಿಂಗೆ ತೋರುಸುವನಾ – ಕೇಳಿದ್ದಕ್ಕೆ ಸಂತೋಷಲ್ಲಿ ಕೊಟ್ಟು ಕಳುಸಿದವು.ಒಂದು ಸರ್ತಿಂಗೆ ಕೊಟ್ಟದರ್ಲಿ ಒಪ್ಪಣ್ಣಂಗೆ ನಾಕುಸರ್ತಿ ಹಾಕುವಷ್ಟಕೆ ಆತು!! ಯಕ್ಷಗಾನದ ಕರ್ಣನ ನೆಂಪಾತೋ ಏನೋ! ಆಗಲಿ, ಎಲ್ಲವುದೇ ಚೆಂದಚೆಂದದ ಪಟಂಗೊ. ದೊಡ್ಡದೊಡ್ಡದು. ದೊಡ್ಡಕೆಮರಲ್ಲಿ ತೆಗದ್ದು ದೊಡ್ಡದೊಡ್ಡದೇ ಬರೆಕ್ಕಲ್ಲದೋ! ನೋಡಿ, ಹೇಂಗಿದ್ದು ಹೇಳಿ. ಆತೋ? (ಅವರತ್ರೆ ಇನ್ನುದೇ ತುಂಬ ಪಟಂಗೊ ಇದ್ದಡ!, ಎಲ್ಲ ನಿದಾನಕ್ಕೆ ಕಳುಸುಗು!)ಪಟ ನೋಡಿ, ಕೊಶಿ ಆದರೆ ಒಪ್ಪಕೊಡಿ!

ಲೇಪಾಕ್ಷಿಯ ಪಟಂಗೊ

ಚೆನ್ನಬೆಟ್ಟಣ್ಣ 30/01/2012

ಟೀಕೆಮಾವ ಆ ಪ್ರವಾಸಕಥನವ ಕಳುದವಾರ ಬೈಲಿಲಿ ಹೇಳಿದ್ದವು. (ಅಪೂರ್ವ ಶಿಲ್ಪಕಲಾತಾಣ -

ಇನ್ನೂ ಓದುತ್ತೀರ

‘ಆನೂ ಒಬ್ಬ ಇಂಜಿನಿಯರು’ : ಪುತ್ತೂರ ಮಕ್ಕಳ ಆಲ್ಬಮ್ ಪದ್ಯ

ಚೆನ್ನಬೆಟ್ಟಣ್ಣ 06/01/2012

ಈ ವೀಡ್ಯವ ಬಿಡುಗಡೆ ಆಗಿ ನಾಲ್ಕೇ ದಿನಲ್ಲಿ 20,000ಜನ ನೋಡಿದ್ದವು ಹೇಳಿ ಯೂ-ಟ್ಯೂಬ್ ತೋರುಸುತ್ತಾ ಇದ್ದು. ನಮ್ಮ

ಇನ್ನೂ ಓದುತ್ತೀರ

ಬೆಂಗಳೂರಿಂದ ಮಂಚನಬೆಲೆಗೆ…

ಚೆನ್ನಬೆಟ್ಟಣ್ಣ 09/10/2011

ಸುಮಾರು ಸಮಯ ಆತು ಬೈಲಿಲಿ ಶುದ್ದಿ ಹೇಳದ್ದೆ. ಹಾಂಗೆ ಪುರ್ಸೊತ್ತು ಮಾಡಿ ಕಳುದ ತಿಂಗಳು 30ನೇ

ಇನ್ನೂ ಓದುತ್ತೀರ

ಶ್ವಾನ ಪ್ರದರ್ಶನ

ಚೆನ್ನಬೆಟ್ಟಣ್ಣ 20/03/2011

ಶ್ವಾನ ಪ್ರದರ್ಶನಲ್ಲಿ ಸಿಕ್ಕಿದ ಕೆಲವು ಮುದ್ದು ನಾಯಿಗೊ. ಇನ್ನುದೆ ಸುಮಾರಿದ್ದು, ಈ ಸಂಕೋಲೆಲಿ ಕಟ್ಟಿ ಹಾಕಿದ್ದೆ

ಇನ್ನೂ ಓದುತ್ತೀರ

ಕಾಡು ಪ್ರಾಣಿಗೋ – ಬನ್ನೇರುಘಟ್ಟ

ಚೆನ್ನಬೆಟ್ಟಣ್ಣ 29/01/2011

ಬನ್ನೇರುಘಟ್ಟಲ್ಲಿ ಪ್ರಾಣಿಗೋ ಎಲ್ಲಾ ಒಂದೂ ಜಾತಿ ಸಾಯ್ತಾ ಇದ್ದವು, ಪೂರ ಖಾಲಿ ಆಪ್ಪಂದ ಮೊದಲೇ ಮುಂದಾಣವಕ್ಕೆ

ಇನ್ನೂ ಓದುತ್ತೀರ

ಕಡಲ ಕರೆಯ ಕೆಲವು ಫೋಟೊ…

ಚೆನ್ನಬೆಟ್ಟಣ್ಣ 18/06/2010

ಕಡಲ ಕರೆಲಿ ತೆಗದ ಕೆಲವು ಫೋಟೋ ಇಲ್ಲಿದ್ದು. ನೋಡಿ, ಹೇಂಗಿದ್ದು

ಇನ್ನೂ ಓದುತ್ತೀರ

ಚೆನ್ನಬೆಟ್ಟು ಪಟಂಗ – 01

ಚೆನ್ನಬೆಟ್ಟಣ್ಣ 10/05/2010

10-04-2009 ರ ಶುಕ್ರವಾರ ಇರುಳು “ಬೆಂಗುಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್” ಲಿ ನಡದ “ಕಥಕ್ಕಳಿ” ಕಾರ್ಯಕ್ರಮಲ್ಲಿ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×