ಆಟಿ ಗುಡುಗಿರೆ ಅಟ್ಟ ಮುರಿಗು ಸೋಣೆ ಗುಡುಗಿರೆ ಸೊಂಟ ಮುರಿಗು

ನಮ್ಮವು ಕೃಷಿ ಸಂಸ್ಕೃತಿಯವು. ಹವೀಕರಲ್ಲಿ ತುಂಬಾ ಜನ ತುಳು ನಾಡಿಲಿ ನೆಲೆಸಿದ್ದವು.ಅದರಿಂದಾಗಿ ನಮ್ಮ ಭಾಷೆಲಿ ತುಳುವಿನ ಪ್ರಭಾವ ಇದ್ದು.

ಇದು ಒಂದು ಹಳೆಗಾದೆ.ತುಳು  ಮೂಲದ್ದು ಹೇಳಿ ಕಾಣುತ್ತು.

ಆಟಿ ಹೇಳಿದರೆ ಕರ್ಕಟಕ ಮಾಸ[ಜುಲೈ ಮಧ್ಯಂದ ಅಗೋಸ್ಟ್ ಮಧ್ಯದ ವರೆಗೆ].

ಸೋಣೆ ಹೇಳಿದರೆ ಸಿಂಹ ಮಾಸ[ಅಗೋಸ್ಟ್ ನಡುವಿಂದ ಸೆಪ್ಟೆಂಬರ ನಡುವಿನ ವರೆಗೆ].

ಆಟಿ ತಿಂಗಳಿಲಿ ಮಳೆ ಬಂದರೆ ಭತ್ತದ ಬೆಳೆ ತುಂಬಾ ಅಕ್ಕು.ಕೆಯ್ ಸರೀ ಬಂದು ಅಟ್ಟ ಮುರಿವಷ್ಟು ಹುಟ್ಟಾವಳಿ ಅಕ್ಕು.

ಇನ್ನು ಸೋಣೆಲಿ ಬಂದರೆ?ಪಡ್ಚ.

ಸೋಣಲ್ಲಿ ಮಳೆ ಜೋರು ಬಂದರೆ ಕೆಯ್ ಲಿ ಎಲ್ಲಾ ಕಣೆ [ಕಡ್ಡಿಯ ಹಾಂಗಿಪ್ಪ ರಚನೆ] ಬಕ್ಕು. ಅದು ಬಂದರೆ,ಕದುರು ಸರೀ ಬಾರ.ಏಕೆ ಹೇಳಿದರೆ ಕೆಯ್ ಆಗಳೆ  ದೊಡ್ಡ ಆಗಿ,ಕದುರು ಬಪ್ಪಲೆ ಆಗಿರುತ್ತು-ಮತ್ತೆ ಕಣೆ ಹೋಗಿ ಪುನಃ ಕದುರು ಬಪ್ಪಷ್ಟು ಸಮಯ ಇರ್ತಿಲ್ಲೆ.ಅಲ್ಲದ್ದೆ,ಕೀಟ ಬಾಧೆಯೂ ಹೆಚ್ಚಾವುತ್ತು.

ಕೃಷಿಕ ಕೆಲಸ ಮಾಡಿದ್ದಷ್ಟೆ -ಹೇಳಿ ಅಕ್ಕು.ಗುಣ ಸಿಕ್ಕ!ಸೊಂಟ ಮುರಿಗು-ಹೇಳುವ ಮಾತು ಇದರ ಸೂಚಿಸುತ್ತು.

ಬೇಸಾಯಕ್ಕೆ ಕಾಲಕಾಲಕ್ಕೆ ಮಳೆ ಬರೆಕ್ಕಾದ್ದು ಮುಖ್ಯ.

ಪ್ರಕೃತಿಯ ನೋಡಿ ಈ ಗಾದೆ ಮಾಡಿದ ಹಿರಿಯರ ಮೆಚ್ಚೆಕ್ಕು ಅಲ್ಲದೊ?

ಗೋಪಾಲಣ್ಣ

   

You may also like...

10 Responses

 1. ಗಣೇಶ says:

  ಅಪ್ಪಪ್ಪು.. ಒಳ್ಳೇದಾಯಿದು. ಆನು ಸಣ್ಣಾಗಿಪ್ಪಗ ಇದರ ಕೇಳಿದ ನೆ೦ಪು. ಮರತ್ತೇ ಹೋಗಿದ್ದತ್ತು, ಈಗ ಪುನಾ ನೆ೦ಪಾತು.

 2. “ಆಟಿ ಗುಡುಗಿರೆ ಅಟ್ಟ ಮುರಿಗು ಸೋಣೆ ಗುಡುಗಿರೆ ಸೊಂಟ ಮುರಿಗು”

  ಬಾಯಿಲಿ ಹೇಳ್ಳೆ ಲಾಯ್ಕ ಆವ್ತು. ಊರಿಲ್ಲಿ ಕಂಡಾಪಟ್ಟೆ ನೊಣ ಇದ್ದನ್ನೆ (ಬೋಸ ಭಾವಂಗೆ ನೊಣೆಯೂ). ಇದಕ್ಕೇ ಏನಾರು ಹೀಂಗಿಪ್ಪದು ಇದ್ದೋ?!

 3. Gopalakrishna BHAT S.K. says:

  ನೆಳವು ತಿಂದು ಜಾತಿ ಕೆಟ್ಟ ಹಾಂಗೆ….
  [ಸಣ್ಣ ವಿಷಯಲ್ಲಿ ಮರ್ಯಾದೆ ಕಳಕ್ಕೊಂಬ ಹಾಂಗೆ ಮಾಡುಲಾಗ ಹೇಳಿ ಈ ಗಾದೆಯ ಅರ್ಥ.]
  ಬೇರೆ ನೆಂಪಪ್ಪಗ ಬರೆತ್ತೆ.

 4. ತಿಳಿಶಿದ್ದಕ್ಕೆ ಧನ್ಯವಾದ…

 5. ಅರ್ಥವತ್ತಾದ ಮಾತು…. ಧನ್ಯವಾದಂಗೊ..

 6. ರಘುಮುಳಿಯ says:

  ಗೋಪಾಲಣ್ಣನ ಬತ್ತಳಿಕೆಲಿ ಇಪ್ಪ ಒ೦ದೊ೦ದು ಅಸ್ತ್ರವೂ ಹೂಗಿನ ಹಾ೦ಗೆ ಹೃದಯಕ್ಕೆ ನಾಟಿ ನಿ೦ಬ ಶಗುತಿ ಇಪ್ಪದು.
  ಕೊಶೀ ಆತು ಗಾದೆಯ/ವಿವರಣೆಯ ನೋಡಿ.

 7. ಅನುಶ್ರೀ ಬಂಡಾಡಿ says:

  ಲಾಯ್ಕಾಯಿದು.
  ನಿಂಗಳ ಸಂಗ್ರಹಲ್ಲಿಪ್ಪ ಇನ್ನಷ್ಟು ಪಳಮ್ಮೆಗೊ ಬರಳಿ. ಕಾದೊಂಡಿರ್ತೆಯೊ.

  ಇದರ ಓದುವಾಗ, ಅಂದು ಒಪ್ಪಣ್ಣ ಹೇಳಿದ ಅಜ್ಜನ ಮಾತು (http://oppanna.com/oppa/hamsa-neerilippa-haange-navu-bhoomilirekku) , ಮತ್ತೆ ಶಂಬಜ್ಜನ ಈ ಪಳಮ್ಮೆ (http://oppanna.com/oppa/hallu-shambajjana-palamme) ನೆಂಪಾತು.

 8. ಈ ಗಾದೆಗಳಲ್ಲಿದೇ ಒಂದೊಳ್ಳೆ ಅರ್ಥಗೊ ಇರ್ತು. ಆಟಿಲಿ ಗುಡುಗಿರೆ ಕೃಷಿಗೆ ಹಾನಿ ಹೇಳುದ್ರ ಹೀಂಗೆ ವಿವರ್ಸಿದ್ದವು. ನೆಂಪು ಮಾಡಿದ್ದಕ್ಕೆ ಧನ್ಯವಾದ.

 9. ಸುಭಗ says:

  ಹಳ್ಳಿಗಳಲ್ಲಿ ಕೃಷಿಕಾರ್ಯಂಗೊ ನಶಿಸಿ ಹೋವ್ತಾ ಇದ್ದಹಾಂಗೆ ಅದಕ್ಕೆ ಸಂಬಂಧಿಸಿದ ಹೀಂಗಿಪ್ಪ ಅಮೂಲ್ಯವಾದ ಗಾದೆ ನುಡಿಗಟ್ಟುಗಳೂ ತನ್ನಷ್ಟಕ್ಕೇ ನಾಶ ಆವ್ತು. ಬೈಲಿನವಕ್ಕೆ ಗಾದೆಯ ನೆಂಪುಮಾಡಿಕೊಟ್ಟು ವಿವರ್ಸಿದ್ದಕ್ಕೆ ಅಭಿನಂದನೆಗೊ ಗೋಪಾಲಣ್ಣ..

  ಹಾಂಗೆಯೇ ‘ಆಟಿಯ ಬೆಶಿಲಿಂಗೆ ಆನೆಯ ಬೆನ್ನೂ ಒಡಗು’ , ‘ಆಟಿ ಆಡಿ ಆಡಿ; ಸೋಣೆ ಓಡಿ ಓಡಿ’ ಹೇಳ್ತ ಹೇಳಿಕೆಗಳೂ ಇದ್ದಡ ಅಲ್ಲದೊ? ಇದರನ್ನೂ ನಿಂಗಳೇ ವಿವರ್ಸಿರೆ ಚೆಂದ.

 10. ಗೋಪಾಲಣ್ಣನ ಲೇಖನ ಒೞೆದಾಯಿದು. ಮಳೆಗಾಲದ ವರ್ಣನೆ ಮಳೆಗಾಲಕ್ಕೂ ಮದಲೇ ಕೊಟ್ಟದು ಒೞೆದಾತು. ಈ ಸರ್ತಿ ಅದರ ಹಾಂಗೇ ಆಸ್ವಾದಿಸುಲೆ ಎಡಿತ್ತೋ ನೋಡುವ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *