ಗಿಳಿಬಾಗಿಲಿಂದ -ಮೂಗಿಲಿ ಎಷ್ಟು ಉಂಬಲೆಡಿಗು?

May 7, 2014 ರ 6:00 amಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮ ಭಾಷೆಲಿ ಮಾತಿನ ನಡುಗೆ ಬಳಕೆ ಅಪ್ಪ ಒಂದು ಚಂದದ ನುಡಿಗಟ್ಟು “ಮೂಗಿಲಿ ಎಷ್ಟು ಉಂಬಲೆಡಿಗು?”ಹೇಳುದು
ನಾವು ಉಂಬದು ಬಾಯಿಲಿ .ಅದಕ್ಕೂ ಒಂದು ಮಿತಿ ಇದ್ದು ,ಮಿತಿ ಮೀರಿ ತಿಂಬಲೆ ಎಡಿತ್ತಿಲ್ಲೆ.

ಮೂಗಿಲಿ ಅಂತೂ ಉಂಬಲೆ ಎಡಿತ್ತಿಲ್ಲೆ ಅದು ಅಸಾಧ್ಯವಾದ ವಿಚಾರ.ಹಾಂಗೂ ಒಂದು ವೇಳೆ ಪ್ರಯತ್ನ ಮಾಡಿರೆ ಒಂದೆರಡು ಅಶನ ತಿಂಬಲೆ ಎಡಿಗು ಅಷ್ಟೇ !
ಸರಿಯಾದ ರೀತಿಲಿಯೇ ಬಾಯಿಲಿ ಉಂಬದಕ್ಕೆ ಒಂದು ಮಿತಿ ಇದ್ದು ಅದರ ದಾಂಟಿ ಹೋಪಲೆ ಎಡಿತ್ತಿಲ್ಲೆ .ಮಿತಿಯ ಒಳವೇ ತಿಂಬಲೆ ಎಡಿವದು !ಹಾಂಗಿಪ್ಪಗ ಸ್ವಾಭಾವಿಕ ನೇರ ದಾರಿಯ ಬಿಟ್ಟು ಮೂಗಿಲಿ ತಿಂಬಲೆ ಹೆರಟರೆ ಎಷ್ಟು ತಿಂಬಲೆ ಎಡಿಗು ?ಹೇಳುವ ಅರ್ಥ ಇಲ್ಲಿ ಕಾಣುತ್ತು.

ನ್ಯಾಯವಾದ ಮಾರ್ಗಲ್ಲಿ ಸಂಪಾದನೆ ಮಾಡಿ ಬದುಕುವೋನ ಗಳಿಕೆಗೂ ಒಂದು ಮಿತಿ ಇದ್ದು. ನಮ್ಮ ಅಯುಸ್ಸಿಂಗು ಒಂದು ಮಿತಿ ಇದ್ದು .ಆರು ಎಂತ ಸಂಪಾದನೆ ಮಾಡಿರೂ ಎಲ್ಲವನ್ನು ಇಲ್ಲಿಯೇ ಬಿಟ್ಟು ದೇವರೆಡೆ ನಡೆಯಕ್ಕಾವುತ್ತು

ಹಾಂಗಿದ್ದರೂ ಕೆಲವು ಜನಂಗ ಬೇರೆಯೋರದ್ದರ ಎಳದು ತಿಂಬಲೆ ನೋಡುತ್ತವು!ಜಾಗೆಯ ಗಡಿಯ ರಜ್ಜ ರಜ್ಜವೇ ಮುಂದೆ ಹಾಕುದು ,ಮನೆಗೆ ಕಾಂಪೌಂಡ್ ಕಟ್ಟುವಗ ನಾಲ್ಕಿಂಚು ಅಕ್ಕ ಪಕ್ಕದ ಜಾಗೆಯ ಸೇರ್ಸಿ ಹಾಕುದು ಇತ್ಯಾದಿ ಮಾಡುದು ಕಾಣುತ್ತು!
ಇಂಥ ಸಂದರ್ಭಂಗಳಲ್ಲಿ “ಮೂಗಿಲಿ ಉಂಡ್ರೆ ಎಷ್ಟು ಉಂಬಲೆ ಎಡಿಗು” ಹೇಳುವ ಮಾತಿನ  ಕೋಳ್ಯೂರು ಸೀಮೆಲಿ ನಮ್ಮ ಭಾಷೆಲಿ ಬಳಕೆ ಮಾಡುತ್ತವು !ಬಹುಶ ಬೇರೆ ಕಡೆಯೂ ಈ ಮಾತು ಬಳಕೆಲಿ ಇಕ್ಕು ಅಲ್ಲದ ?ಇದೆ ಅರ್ಥ ಬಪ್ಪ ಬೇರೆ ನುಡಿಗಟ್ಟುಗಳೂ ಇಕ್ಕು ಅಲ್ಲದ ?ನಿಂಗಳ ಗಮನಕ್ಕೆ ಬಂದದರ ತಿಳಿಸಿ

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ಅಪ್ಪಪ್ಪು ಹೀಂಗೆ ಹೇಳ್ಸರ ಕೇಟಿದೆ. ಅಷ್ಟೇ ಗೊಂತು ನವಗೆ.

  [Reply]

  VA:F [1.9.22_1171]
  Rating: 0 (from 0 votes)
 2. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಸರಿ,ಇದೇ ಅರ್ಥಲ್ಲಿ ಕುಂಬ್ಳೆಲೂ ಬಳಕೆ ಆವ್ತು ಈ ಶಬ್ದ.

  [Reply]

  VA:F [1.9.22_1171]
  Rating: 0 (from 0 votes)
 3. ಯಮ್.ಕೆ.

  ಮನೆಯ ಒಳ ಹೋಪಲೆ ಬಾಗಿಲ್ ಬೇಕ್.
  ಆದರೆ, ಆರು ಎಲ್ಲಾ ಬ೦ದವೂ,ಒಳ-ಹೆರ ಎ೦ತ ಇದ್ದು
  ಕಾಣಕ್ಕಾದರೆ ಗಿಳಿಬಾಗಿಲು ಮೇಲು.
  ಎಲ್ಲ ಸಹಮಿತಿ ಒಳ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೇಜಿಮಾವ°ಕಾವಿನಮೂಲೆ ಮಾಣಿಡೈಮಂಡು ಭಾವಶುದ್ದಿಕ್ಕಾರ°ಮುಳಿಯ ಭಾವಸುವರ್ಣಿನೀ ಕೊಣಲೆದೊಡ್ಡಭಾವಪವನಜಮಾವಶೀಲಾಲಕ್ಷ್ಮೀ ಕಾಸರಗೋಡುವಿದ್ವಾನಣ್ಣಯೇನಂಕೂಡ್ಳು ಅಣ್ಣಬೊಳುಂಬು ಮಾವ°ಶ್ರೀಅಕ್ಕ°ಬಂಡಾಡಿ ಅಜ್ಜಿಶಾ...ರೀದೊಡ್ಡಮಾವ°ಪ್ರಕಾಶಪ್ಪಚ್ಚಿಅಕ್ಷರದಣ್ಣಪೆರ್ಲದಣ್ಣಡಾಮಹೇಶಣ್ಣಅಜ್ಜಕಾನ ಭಾವಅನಿತಾ ನರೇಶ್, ಮಂಚಿಅಕ್ಷರ°ಒಪ್ಪಕ್ಕವಿಜಯತ್ತೆಸರ್ಪಮಲೆ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ