ಗಿಳಿಬಾಗಿಲಿಂದ- ಹಳೆ ಮನೆ ಪಾಪದೆ ಬೇಡ ,ಹೊಸ ಮನೆ ಪುಣ್ಯದೆ ಬೇಡ

May 14, 2014 ರ 6:00 amಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈಗೀಗ ನಮ್ಮ ಭಾಷೆಲಿ ತುಂಬಾ ಬದಲಾವಣೆ ಆವುತ್ತಾ ಇದ್ದು .ಕನ್ನಡ ಹಾಂಗೆ ಬೇರೆ ಭಾಷೆಗಳ ಪ್ರಭಾವಂದಾಗಿ ಸುಮಾರು ಆಡು ನುಡಿಗಲ ಬಳಕೆ ಅಪರೂಪ ಆವುತ್ತಾ ಇದ್ದು .

ಈಗ ಅಷ್ಟಾಗಿ ಬಳಕೆಲಿ ಇಲ್ಲದ್ದೆ ಇಪ್ಪ ಒಂದು ಅಪುರೂಪದ ನುಡಿಗಟ್ಟು ಹಳೆ ಮನೆ ಪಾಪದೆ ಬೇಡ ಹೊಸ ಮನೆ ಪುಣ್ಯದೆ ಬೇಡ ಹೇಳುದು .
ನಮಗೆ ಆರತ್ತರೆ ಆದರು ರಜ್ಜ ಅಸಮಾಧಾನ ಇದ್ದರೆ ಅಥವಾ ಅವು ತುಂಬಾ ಕಸಂಟುಗ/ಪಿಸುಂಟುಗ ಆಗಿದ್ದರೆ ಅವರ ಸುದ್ದಿಯೇ ನಮಗೆ ಬೇಡ ಹೇಳುವ ಸಂದರ್ಭದಲ್ಲಿ ಈ ಮಾತಿನ ಬಳಕೆ ಮಾಡುತ್ತವು .
ಅವರ ಒಳ್ಳೇದು ಕೆಟ್ಟದು ಎರಡುದೆ ನಮಗೆ ಬೇಡ ಅವರ ಸ್ನೇಹವೂ ಬೇಡ ವಿರೋಧವೂ ಬೇಡ ಎಷ್ಟು ಬೇಕೋ ಅಷ್ಟು ಇದ್ದರೆ ಸಾಕು ಹೇಳುವ ಅರ್ಥವ ಹಳೆ ಮನೆ ಪಾಪದೇ ಬೇಡ ಹೊಸ ಮನೆ ಪುಣ್ಯದೆ ಬೇಡ ಹೇಳುವ ಮಾತು ಧ್ವನಿಸುತ್ತು .

ಇಲ್ಲಿ ಹಳೆ ಮನೆ ಪಾಪ ಹೇಳುವ ಮಾತು ಕೆಡುಕು ,ವಿರೋಧ ದ್ವೇಷವ ಸೂಚಿಸಿದರೆ ಹೊಸ ಮನೆ ಪುಣ್ಯ ಹೇಳುವ ಮಾತು ಒಳಿತು, ಸ್ನೇಹ ವ ಸೂಚಿಸುತ್ತು .ಅವರ ಪಾಪ ಪುಣ್ಯ ಎರಡೂ ಬೇಡ ಹೇಳಿರೆ ಅವರ ಒಳ್ಳೇದು ಕೆಟ್ಟದು ಎರಡರ ಸಂಗತಿಯೂ ಅವರಲ್ಲಿ ನಮಗೆ ಬೇಡ ಅಷ್ಟಕ್ಕಷ್ಟೇ ಇದ್ದರೆ ನಮಗೆ ಒಳ್ಳೆದು ಹೇಳುವ ಭಾವದೆ ಇಲ್ಲಿ ಕಾಣುತ್ತು.
ಕೋಳ್ಯೂರು ಸೀಮೆಲಿ ಈ ನುಡಿಗಟ್ಟು ಬಳಕೆಲಿ ಇದ್ದು ಬೇರೆ ಕಡೆಲಿದೆ ಇಕ್ಕು ಅಥವಾ ಸಮಾನಾಂತರವಾಗಿ ಬೇರೆ ಯಾವುದಾದರೂ ಮಾತಿನ ಬಳಕೆ ಇಕ್ಕು ,ಗೊಂತಿದ್ದೋರು ತಿಳುಸಿ.ಓದಿ ಅಭಿಪ್ರಾಯ ತಿಳುಸಿ

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ವಿಜಯತ್ತೆ

  ಲಕ್ಷ್ಮಿ ಒಳ್ಳೆ ಬರಹಗಾರ್ತಿ.ಕನ್ನಡಲ್ಲೂ ಹವಿಗನ್ನಡಲ್ಲೂ, ತುಳುವಿಲ್ಲೂ ಸಾಹಿತ್ಯಕೃಷಿ ಮಾಡೀರೆ ವಿದ್ಯಾಭ್ಯಾಸಲ್ಲೂ ಕನ್ನಡ,ಸಂಸ್ಕೃತ,ಹಿಂದಿ,ಆಂಗ್ಲ ಮೊದಲಾದೆಲ್ಲದರ ಪ್ರಾವೀಣ್ಯತೆ ಇದ್ದು. ವಿಜಯಕರ್ನಾಟಕಲ್ಲಿ ತುಳುಚಾವಡಿಲಿ ಅಂಕಣ ಬರೆತ್ತಾಇದ್ದು.ಈ ಬರಹ ಒಳ್ಳೆದಿದ್ದು. “ಅವರತ್ರೆ ಕಿಚ್ಚು ಕಾಸುತ್ತ ಹಾಂಗಿದ್ದರಾತು” ಹೇಳಿ ಬಳಕೆ ಮಾಡ್ತ ಹಾಂಗೆ ಅಲ್ಲದಾ?

  [Reply]

  ಲಕ್ಷ್ಮಿ ಜಿ.ಪ್ರಸಾದ

  ಲಕ್ಷ್ಮಿ ಜಿ.ಪ್ರಸಾದ್ Reply:

  ನಿಂಗಳ ಅಭಿಮಾನ ದೊಡ್ಡದು ವಿಜಯಕ್ಕ ,ಧನ್ಯವಾದಂಗ

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಜ್ಜಕಾನ ಭಾವದೊಡ್ಡಭಾವವೆಂಕಟ್ ಕೋಟೂರುಪುತ್ತೂರಿನ ಪುಟ್ಟಕ್ಕಶ್ಯಾಮಣ್ಣಪುಣಚ ಡಾಕ್ಟ್ರುಕೆದೂರು ಡಾಕ್ಟ್ರುಬಾವ°ತೆಕ್ಕುಂಜ ಕುಮಾರ ಮಾವ°ಎರುಂಬು ಅಪ್ಪಚ್ಚಿಪವನಜಮಾವವಿನಯ ಶಂಕರ, ಚೆಕ್ಕೆಮನೆಗೋಪಾಲಣ್ಣಡಾಗುಟ್ರಕ್ಕ°ಅಕ್ಷರದಣ್ಣಕಾವಿನಮೂಲೆ ಮಾಣಿಬೋಸ ಬಾವಉಡುಪುಮೂಲೆ ಅಪ್ಪಚ್ಚಿರಾಜಣ್ಣಜಯಗೌರಿ ಅಕ್ಕ°ದೊಡ್ಮನೆ ಭಾವವಸಂತರಾಜ್ ಹಳೆಮನೆಕೇಜಿಮಾವ°ಹಳೆಮನೆ ಅಣ್ಣಗಣೇಶ ಮಾವ°ಚೆನ್ನಬೆಟ್ಟಣ್ಣಚುಬ್ಬಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ