ಗಿಳಿ ಬಾಗಿಲಿಂದ -ಅದು ಮಹಾ ಕೊದಂಟಿ

December 4, 2013 ರ 6:30 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

” ಅದು ಮಹಾ ಕೊದಂಟಿ !ಎಂತಕ್ಕೂ ಆಗ ಆರೊಬ್ಬಂಗೂ ಒಂದಿನಿತು ಉಪಕಾರ ಆಗ ಅದರಂದ.ಆರಿಂಗುದೆ ಅಕ್ರದ ಕಡ್ಡಿ (ಅಕ್ರದ ಕಡ್ಡಿ ಹೇಳ್ರೆ ಎಂತದು ?!ಮಲೆಯಾಳಲ್ಲಿಯೂ ಈ ಬಳಕೆ ಇದ್ದು ) ಉಪಕಾರ ಮಾಡಿಕ್ಕ”.

ಅಪ್ಪು!ಇದು ನಮ್ಮ ಭಾಷೆಲಿ ಇಪ್ಪ ಬೈಗಳಿನ ಪದ .ಕೊದಂಟಿ ಸಾಕಷ್ಟು ಖಾರದ ಗರಂ ಬೈಗಳು.ಎನಗೂ ಅಕ್ಕಂಗೂ ಒಂದೆರಡು ಸರ್ತಿ ಈ ಬೈಗಳು ಅಮ್ಮನ ಕೈಂದ ,ಅಜ್ಜಿ ಕೈಂದ ಸಿಕ್ಕಿದ್ದು ಇದ್ದು ಸಣ್ಣಾದಿಪ್ಪಗ .ಅಷ್ಟಪ್ಪಗ ಎಂಗೊಗೆ ಭಾರೀ ಅವಮರ್ಯಾದಿ ಆಗಿ ಕೊಂಡು ಇತ್ತು.ಆದರೆ ಅಸಲಿಂಗೆ ಕೊದಂಟಿ ಹೇಳ್ರೆ ಎಂತ ಅರ್ಥ ಹೇಳಿ ಎನಗೆ ಗೊಂತಿತ್ತಿಲ್ಲೆ .ಅರ್ಥ ಗೊಂತಿಲ್ಲದ್ದ ಕಾರಣ ಅದು ಮಹಾ ಬೈಗಳು ಭಾರೀ ಭಯಂಕರದ್ದು ಹೀನಾಯಕರ ಆವಾ,ಅವಮಾನಕರ ! ಹೇಳಿ ಆನು ಭಾವಿಸಿತ್ತಿದೆ !

ರಜ್ಜ ದೊಡ್ಡ ಆದಪ್ಪಗ ,ತಿಳುವಳಿಕೆ ಬಂದ ಮೇಲೆ ಅಕ್ಕಿ ಮುಡಿ ಕಟ್ಟುವ ಒಂದಡಿಯಷ್ಟು ಉದ್ದದ ಮರದ ಸಲಕರಣೆಗೆ ಕೊದಂಟಿ ಹೇಳ್ತವು ತುಳುವಿಲಿ ಹೇಳ್ತವು ಹೇಳಿ ಗೊಂತಾತು !.ಕೊದಂಟಿ ಹೇಳ್ರೆ ಅದೇ ಹೇಳಿ ಭಾವಿಸಿತ್ತಿದೆ ಆನು .ಅಂಬಗಳೂ ಅದೆಂತಕೆ ಬೈಗಳಿನ ಪದ ಆತಪ್ಪಾ?! ಹೇಳಿ ಗ್ರೇಶಿಗೊಂಡು ಇತ್ತಿದೆ.

ಮೊನ್ನೆ ಗಿಳಿ ಬಾಗಿಲಿಂಗೆ ಎಂತರ ಬರವದೂ ಹೇಳಿ ಯೋಚನೆ ಮಾಡಿ ಗೊಂಡು ಇಪ್ಪಗ “ಮಹಾ ಕೊದಂಟಿ” ಹೇಳುವ ನಮ್ಮ ಭಾಷೆಯ ನುಡಿಗಟ್ಟು ನೆಂಪು ಆತು .ಆದರೆ ಅದರ ಅರ್ಥ ,ಪದದ ಮೂಲ ಯಾವುದೂ ಗೊಂತಾತಿಲ್ಲೆ !ಮತ್ತೆ ತಲೆ ಬುಡ ಗೊಂತಾಗದ್ದೆ ಅಮ್ಮನ ಹತ್ತರೆ ಫೋನ್ ಮಾಡಿ ಕೇಳಿದೆ.ಅಂಬಗ ಅಮ್ಮ “ಕೊದಂಟಿ ಹೇಳ್ರೆ ಮರದ ಗೆಂಟು ಅದು ಎಂತಕ್ಕೂ ಪ್ರಯೋಜನಕ್ಕೆ ಆವುತ್ತಿಲ್ಲೆ”ಹೇಳಿ ಹೇಳಿದ .ಅಂಬಗ ಎನಗೂ ಆದಿಕ್ಕು ಹೇಳಿ ಅನ್ಸಿತ್ತು .ಆದರೂ ರಜ್ಜ ಸಂಶಯ.”ಅದು ಒಲೆಗೆ ಕಿಚ್ಚು ಹಾಕುಲೆ ಅವುತ್ತಿಲ್ಲೆಯ ?”ಹೇಳಿ ಕೇಳಿದೆ .””ಅದರ ಅಡಿಗೆ ಒಲೆಗೆ ಹಾಕುಲೆ ಅವುತ್ತಿಲ್ಲೆ.ಅದು ಗೆಂಟು ಆದ ಕಾರಣ ಸಪೂರಕ್ಕೆ ತುಂಡು ಮಾಡುಲೆ ಎಡಿತ್ತಿಲ್ಲೆ .ಸರಿಯಾಗಿ ಹೊತ್ತುತ್ತೂ ಇಲ್ಲೇ ಸುಮ್ಮನೆ ಹೊಗೆ ಸುತ್ತುತ್ತು ಅಷ್ಟೇ !ಬೆಶ್ರೋಟ್ಟೆಲಿ ಒಲೆಗೆ ದೊಡ್ಡ ಕಿಚ್ಚು ಹಾಕುತ್ತರೆ ಬೇರೆ ಸೌದಿ ಒತ್ತಿಂಗೆ ಹಾಕಿದರೆ ಹೊತ್ತುತ್ತು ಅದು ಬಿಟ್ರೆ ಅದರಂದ ಎಂತ ಉಪಕಾರ ಇಲ್ಲೆ” ಹೇಳಿ ಅಮ್ಮ ಹೇಳಿದ.
ಎನಗುದೆ ಸರಿ ಇಪ್ಪಲೂ ಸಾಕು ಹೇಳಿ ಅನ್ಸಿತ್ತು .ಕೋಲು ಗಂಟು >ಕೊದಂಟಿ ಆದಿಪ್ಪ ಸಾಧ್ಯತೆ ಇದ್ದು.ಅದೊಂದು ಉಪಕಾರಕ್ಕೆ ಸಿಕ್ಕದ್ದ ವಸ್ತು ಆದ ಕಾರಣ ಕೆಲಸ ಮಾಡದ್ದೋರ /ಉಪಕಾರಕ್ಕೆ ಸಿಕ್ಕದ್ದೋರ ಬಗ್ಗೆ ಹೇಳುವಗ ಬಳಕೆ ಆದ ಬೈಗಳಿನ ಪದ ಇದು ಆದಿಕ್ಕು ಅಲ್ಲದ ?ನಿಂಗ ಎಲ್ಲ ಎಂತ ಹೇಳ್ತಿ ?ನಿಂಗಳ ಅಭಿಪ್ರಾಯ ತಿಳಿಸಿ.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಕೆ.ನರಸಿಂಹ ಭಟ್ ಏತಡ್ಕ

  ಅದು ದೊಡ್ಡ ಕೊದಂಟಿಯ ಹಾಂಗೆ ಇದ್ದು ಹೇಳಿಯೂ ಹೇಳ್ತವು.ಕೊದಂಟಿಯ ಬಡಿವಲೆ ಉಪಯೋಗುಸುವ ಮರದ ತುಂಡು ಹೇಳುವ ಅರ್ಥಲ್ಲಿಯೂ ಬಳಕೆ ಮಾಡ್ತವು.ಅವನಲ್ಲಿಗೆ ಹೋದರೆ ಅಕ್ರದ ಕಡ್ಡಿ(ಸಣ್ಣ ತುಂಡು ಕಡ್ಡಿ)ಯೂ ಸಿಕ್ಕ.ಈ ರೀತಿಯ ಪ್ರಯೋಗ ಇದ್ದು.ಅಕ್ರದ ಕಡ್ಡಿ(ತುಳುವಿಲ್ಲಿ-ಅಕ್ಕರ್ದ ಕಡ್ಡಿ,ಅಕ್ರಂತ ಕಡ್ಡಿ) ಹೇಳಿದರೆ ಕ್ಷುಲ್ಲಕ ವಸ್ತು,ಉಪಯೋಗಶೂನ್ಯ ವಸ್ತು ಅರ್ಥಲ್ಲಿ ಪ್ರಯೋಗ ಆವ್ತು.

  [Reply]

  VA:F [1.9.22_1171]
  Rating: +3 (from 3 votes)
 2. ಕೆ. ವೆಂಕಟರಮಣ ಭಟ್ಟ

  ಅಕ್ರದ ಕಡ್ಡಿ ಹೇಳಿದರೆ ನಾಲಗೆಯ ಅಗ್ರವ ತೆಗವ ತೆಂಗಿನ ಗರಿಂದ ಮಾಡಿದ ಕಡ್ಡಿಯಾಗಿಕ್ಕು. ಹರೇ ರಾಮ.

  [Reply]

  VA:F [1.9.22_1171]
  Rating: +1 (from 1 vote)
 3. ಚೆನ್ನೈ ಬಾವ°

  ಉಮ್ಮ ., ಕೊದಂಟಿ ಎಂಗಳಲ್ಲಿಯೂ ಇದ್ದಪ್ಪ 😀

  [ಎನಗೂ ಅಕ್ಕಂಗೂ ಒಂದೆರಡು ಸರ್ತಿ…] – ಕೊದಂಟಿ ಅಂಬಗ ಸ್ತ್ರೀಲಿಂಗ, ಕೊದಂಟ ಪುಲ್ಲಿಂಗ – ಹೇದ° ಅಡಿಗೆ ಸತ್ಯಣ್ಣ°.

  ಕೊದಂಟಿ, ಅಕ್ರದ ಕಡ್ಡಿಗಳ ನಿಂಗ ಈಗ ಬಲುಗಿ ಹಾಕಿ ಅದು ಆರಿಂದ ಸುರುವಾತು ಹೇದು ಹೇಳ್ಸರ ಅರಡಿಯೆಕ್ಕಾಯ್ದನ್ನೆ ಎನಗುದೇ ಏ°

  ಶುದ್ದಿ ಲಾಯ್ಕ ಆಯ್ದು ಹೇಳಿತ್ತು – ‘ಚೆನ್ನೈವಾಣಿ’

  [Reply]

  VN:F [1.9.22_1171]
  Rating: +2 (from 2 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸರ್ಪಮಲೆ ಮಾವ°ವಿನಯ ಶಂಕರ, ಚೆಕ್ಕೆಮನೆಶುದ್ದಿಕ್ಕಾರ°ಮಾಷ್ಟ್ರುಮಾವ°ಅನಿತಾ ನರೇಶ್, ಮಂಚಿಬಟ್ಟಮಾವ°ಪೆಂಗಣ್ಣ°ವೇಣಿಯಕ್ಕ°ಸುವರ್ಣಿನೀ ಕೊಣಲೆಕೊಳಚ್ಚಿಪ್ಪು ಬಾವಗಣೇಶ ಮಾವ°vreddhiಜಯಶ್ರೀ ನೀರಮೂಲೆಶೀಲಾಲಕ್ಷ್ಮೀ ಕಾಸರಗೋಡುಬಂಡಾಡಿ ಅಜ್ಜಿಪವನಜಮಾವಶ್ರೀಅಕ್ಕ°ಕೆದೂರು ಡಾಕ್ಟ್ರುಬಾವ°ಶರ್ಮಪ್ಪಚ್ಚಿವೆಂಕಟ್ ಕೋಟೂರುಯೇನಂಕೂಡ್ಳು ಅಣ್ಣಬೋಸ ಬಾವಅನು ಉಡುಪುಮೂಲೆದೊಡ್ಡಭಾವಮಾಲಕ್ಕ°ಪೆರ್ಲದಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ