ಗಿಳಿ ಬಾಗಿಲಿಂದ -ಉಗುರು ನೀರಿಂಗೆ ಹಾಕುತ್ತಿಲ್ಲೆ

“ಅದು ಜಮ ಉದಾಸನದ ಮುದ್ದೆ ,ಒಂದು ಅಕ್ರದ ಕಡ್ಡಿ ಕೆಲಸ ಮಾಡುವ ಕ್ರಮ ಇಲ್ಲೆ ,ಉಗುರು ನೀರಿಂಗೆ ಹಾಕುತ್ತಿಲ್ಲೆ ಅದು”
ಹೇಳುವ ಬೈಗಳಿನ ಮಾತು ನಮ್ಮ ಭಾಷೆಲಿ ಸಾಮಾನ್ಯವಾಗಿ ಬಳಕೆ ಆವುತ್ತು .
ತುಂಬಾ ಸೋಮಾರಿಗಳ ಬಗ್ಗೆ ಬೈವಗ /ದೂರುವಗ ಈ ಮಾತಿನ ಬಳಕೆ ಮಾಡುತ್ತು .ಎನ್ನ ಮೇಲೂ ಇದರ ಪ್ರಯೋಗ ಪ್ರಯೋಗ ಆಯಿದು ಸಣ್ಣಾದಿಪ್ಪಗ !ಅಜ್ಜನ ಮನೆಲಿ ಕೆಲಸಕ್ಕೆ ಕಂಡು ಕಟ್ಟುವ ಎಂಗೊಗೆ ಈ ಬೈಗಳು ಅಜ್ಜಿ ಕೈಂದ ಸಿಕ್ಕಿಕೊಂಡು ಇತ್ತು .
ಅಂಬಗ ಇದರ ಅರ್ಥ ಗೊಂತಿತ್ತಿಲ್ಲೆ .ಹಾಂಗಾಗಿ ಇದು ಭಯಂಕರ ಬೈಗಳು ಹೇಳಿ ಎಂಗ ಭಾವಿಸಿತ್ತಿದೆಯ° !ಹಾಂಗಾಗಿ ಎಂಗೊಗೆ ಭಾರೀ ಮರ್ಯಾದಿ ಹೋಗಿ ಕೂಗುಲೇ ಬಂದುಗೊಂಡು ಇತ್ತು .

ಇದಕ್ಕೆ ಆನು ಸಣ್ಣ ಇಪ್ಪಗ ಒಂದು ಉಪಾಯ ಮಾಡಿತ್ತಿದೆ! ಒಂದು ದಿನ ತೋಟಕ್ಕೆ ಹೋಗಿ ಕೆರೆ ಹತ್ರೆ ನಿಂದು ಬ್ಲೇಡಿಲಿ ಉಗುರು ತೆಗದು ಕೆರೆ ನೀರಿಂಗೆ ಹಾಕಿಕ್ಕಿ ಬಂದು ಅಜ್ಜಿಗೆ ಹೇಳಿದೆ “ಅಜ್ಜಿ ಆನು ಇಂದು ಉಗುರು ತೆಗದು ಕೆರೆ ನೀರಿಂಗೆ ಹಾಕಿದ್ದೆ ಎನ್ನ ಇನ್ನು ಉಗುರು ನೀರಿಂಗೆ ಹಾಕುತ್ತಿಲ್ಲೆ ಹೇಳಿ ಬೈವಲಾಗ !!” ಮುಂದಣ ಸಂಗತಿ ಎಂತ ಹೇಳಿ ಆನು ಹೇಳಕ್ಕೂ ಹೇಳಿ ಇಲ್ಲೆ ಅನ್ನೇ !!!

ಇರಲಿ, ಎನಗೆ ನಿಜವಾಗಿಯೂ ಅಂಬಗ ಉಗುರು ನೀರಿಂಗೆ ಹಾಕುದು ಹೇಳಿರೆ ಎಂತ ಹೇಳಿ ಗೊಂತಿತ್ತಿಲ್ಲೆ !ಮನೆಯೋರೆಲ್ಲ ಇದರ ಹೇಳಿ ಹೇಳಿ ನೆಗೆ ಮಾಡಿಗೊಂಡು ಇಪ್ಪಗ ಆನು ಅವರ ಮೋರೆ ನೋಡಿಗೊಂಡು ಇತ್ತಿದೆ !ಇದರಲ್ಲಿ ನೆಗೆ ಮಾಡುಲೆ ಎಂತ ಹೇಳಿ ಕೋಪವೂ ಬಂದಿತ್ತು !
ಇದು ಸಾಮಾನ್ಯವಾಗಿ ಕೂಸುಗಳ ಬೈವಗ ಬಳಕೆ ಮಾಡುತ್ತಿದ್ದ ನುಡಿಗಟ್ಟು! ಹೆಚ್ಚಿನ ಕೂಸುಗ ಸಣ್ಣಾದಿಪ್ಪಗಳೇ ಪಾತ್ರ ತೊಳವದು ,ವಸ್ತ್ರ ಒಗವದು ಮೊದಲಾದ ಕೆಲಸವ ಮಾಡುತ್ತವು .ಇಂಥ ಕೆಲಸ ಮಾಡುವಾಗ ಕೈ ಚೆಂಡಿ ಆವುತ್ತನ್ನೇ ,
ಒಟ್ಟಿ೦ಗೆ ಉಗುರುದೆ ನೀರಿಂಗೆ ಮುಟ್ಟುತ್ತು !
ಉಗುರು ನೀರಿಂಗೆ ಹಾಕುತ್ತಿಲ್ಲೆ ಹೇಳಿರೆ ಏನೊಂದೂ ತೊಳವ ,ಒಗವ ,ಉದ್ದುವ ಕೆಲಸ ಮಾದುತ್ತಿಲ್ಲೆ ಹೇಳಿ ಅರ್ಥ .

ಇದರ ಕುಂಬ್ಳೆ ಕಡೆಲಿ ಉಗುರು ಮುರುದು ನೀರಿಂಗೆ ಹಾಕುತ್ತಿಲ್ಲೆ ಹೇಳಿ ಬಳಕೆ ಮಾಡುತ್ತವು ಹೇಳಿ ಭಾರತಿ ಅಕ್ಕ° ತಿಳಿಸಿದ್ದವು .ನಿಂಗಳ ಕಡೆಲಿ ಹೇಂಗೆ ಇದ್ದು ?ಹೇಳಿ ಆತಾ .

ಲಕ್ಷ್ಮಿ ಜಿ.ಪ್ರಸಾದ

   

You may also like...

4 Responses

 1. ಚೆನ್ನೈ ಭಾವ° says:

  ಓಹೋ!! ಹಾಂಗೋ ಕತೆ!!!

 2. ಕೆ.ನರಸಿಂಹ ಭಟ್ ಏತಡ್ಕ says:

  ‘ಉಗುರು ನೀರ್ ಡ್ ಪಾಡಯೆ’ಹೇಳುವ ಪ್ರಯೋಗ ತುಳುವಿಲ್ಲಿಯೂ ಇದ್ದು.

 3. ಯಮ್.ಕೆ. says:

  ಸಣ್ಣಾದಿಪ್ಪಗ ಕೈಕಾ,ಉಗುರು ಮುರಿಯದ್ದರೂ ಮ೦ಥರೆಗೆ ಬೇಜಾರು ಆಗಿಕ್ಕಾ?
  ಮ೦ಥರೆಯ ಸ್ವಗತಲ್ಲೇ ಕಾಣಕ್ಕಶ್ಟೇ.
  ಅಪ್ಸರೆದು೦ಧುಭಿ ,ಮ೦ಥರೆಯ ಅವತಾರ ಎತ್ತಿ ಬ೦ದಿಕ್ಕಿ,

  ಕೈಕೇ ಮೋರೆಲಿ ನೆಗೆಬರ್ಸಿಯಪ್ಪಗ,
  ಮ೦ಥರೆಯ ಕೆನ್ನೆಲಿಯೂ ”ಗುಳಿ” ಬೀಳುತ್ತಿತ್ತಡ……….
  ಹಾ೦ಗಿಪ್ಪ” ಲಹರಿ” ಕ೦ಡಪ್ಪಗ ನೆ೦ಪಾತನ್ನೆ.

 4. Dhvani vihar says:

  ಲಕ್ಷ್ಮಿಯಕ್ಕ ಚೆಂದಕ್ಕೆ ಬರಕ್ಕೊಂಡು ಇತ್ತಿದಿ,ಎಲ್ಲೋರಿಂಗೆ ಮೆಚ್ಚುಗೆ ಇತ್ತು .ಆದರೂ ಇದ್ದಕೀದ್ದ ಹಾಂಗೆ ನಿಲ್ಸಿದ್ದು ಎಂಥಕೆ ?ಮುಂದುವರ್ಸಿ ,ಹವ್ಯಕ ಭಾಷೆ ಬೆಳೆಯಲಿ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *