ಗಿಳಿ ಬಾಗಿಲಿಂದ -ಉಡುಗಿ ಇಡ್ಕಿದ ಕುಂಟು ಹಿಡಿಸೂಡಿದೆ ಕೆಲವು ಸರ್ತಿ ಬೇಕಾಗಿ ಬತ್ತು

June 25, 2014 ರ 6:00 amಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸಿಮೆಂಟ್ ಹಾಕಿದರೆ ನೀರು ಇಂಗುತ್ತಿಲ್ಲೆ ,ಸೆಸಿಗ ಬೆಳೆತ್ತಿಲ್ಲೆ ಹೇಳಿ ಎಂಗ ಜಾಲಿಂಗೆ ಸಿಮೆಂಟ್ ಹಾಕಿದ್ದಿಲ್ಲೆ,ಮನೆ ಮುಂದೆ 30x 25 ಅಡಿ ಯಷ್ಟು ಜಾಗೆಲಿ ರಜ್ಜ ಹೂಗಿನ ಸೆಸಿ ,ಒಂದೆರಡು ಬದನೆ ಸೆಸಿ ,ಬಸಳೆ ಬಳ್ಳಿ ಒಟ್ಟಿಂಗೆ ಒಂದು ಪಾರಿಜಾತ ,ಎರಡು ಮೂರು ಮೀಸೆ ಹೂಗಿನ ಎತ್ತರದ ಸೆಸಿಗ,ಒಂದು ಬೇನ್ಸೊಪ್ಪಿನ ಸಣ್ಣ ಮರ ಇದ್ದು . ,ಹಕ್ಕಿಗ ಕುಂಡೆಚ್ಚಂಗ ಗಮ್ಮತ್ತು ಮಾಡಿಕೊಂಡು ಇರಲಿ ಹೇಳಿ ಸೆಸಿಗಳ ಹಾಂಗೆ ಬಿಟ್ಟಿದೆಯ° .ನಡುಗೆ ಒಂದು ಬೋರ್ ವೆಲ್,ಅದಕ್ಕೆ ಟೆರೇಸಿನ ನೀರು ಮತ್ತು ಜಾಲಿಂಗೆ ಬಿದ್ದ ನೀರಿನ ಇಂಗುವ ಹಾಂಗೆ ಮಾಡಿದ್ದೆಯ° .ನಡಕ್ಕೊಂದು ಹೋಪ ದಾರಿಗೆ ಮಾತ್ರ ಕಲ್ಲು ಹಾಸಿದ್ದೆಯ° .ಹಾಂಗಾಗಿಯ ಏನ ,ಎಂಗಳ ಮನೆ ಸುತ್ತ ಮುತ್ತ 900 ಅಡಿ ಕೊರದರೂ ನೀರು ಸಿಕ್ಕುತ್ತಾ ಇಲ್ಲೆ ,ಆದರೆ ದೇವರ ದಯೆಂದ ಎಂಗಳ ಕೊಳವೆ ಬಾವಿಲಿ ಈಗಲೂ 120 ಅಡಿಲಿ ನೀರು ಇದ್ದು!

ಅದು ಇರಲಿ ,ಆನು ಹೇಳುಲೆ ಹೆರಟದು ಬೇರೆ ವಿಚಾರ!

ಎರಡು ದಿನಂದ ಮಳೆಯೂ ಬತ್ತಾ ಇದ್ದು .ಒಟ್ಟಿಂಗೆ ಹೆಗ್ಳಂಗಳುದೆ ಮಣ್ಣು ಎಳದು ಹಾಕಿದ್ದವು .ಹಾಂಗೆ ಮಣ್ಣು ಎದ್ದು ಹೋಪ ದಾರಿಗೆ ಬಿದ್ದು ಕಾಲಿನ್ಗೆ ಹಿಡ್ಕೊಂಡು ಇತ್ತು .ಮನೆ ಒಳಂಗೆ ಮಣ್ಣು ಬತ್ತು ಹೇಳಿ ದಾರಿಯ ಉಡುಗುವ ಹೇಳಿ ಹೆರಟೆ.ಅದು ಈ ಮೆದು ಕಡ್ಡಿಯ ಆಧುನಿಕ ಹಿಡಿಸೂಡಿಲಿ ಹೊವುತ್ತಾ?

ಅಂಬಗ ಎನಗೆ ಊರಿನ ಮನೆ ಒಳ ಉಡುಗಿ ಕುಂಟು ಆದ ಹಿಡಿ ಸೂಡಿಯ ಇಡುಕ್ಕದ್ದೆ ಜಾಲು ಉಡುಗುಲೆ ಬೇಕಾವುತ್ತು ಹೇಳಿ ತೆಗದು ಒಂದು ಕಡೆ ಕೊಟ್ಟಗೆ ಮೂಲೆಲಿ ಮಡಿಕ್ಕೊಂಡು ಇದ್ದದು ನೆನಪಾತು .ಒಟ್ಟಿಂಗೆ “ಉಡುಗಿ ಇಡ್ಕಿದ ಕುಂಟು ಹಿಡಿಸೂಡಿದೆ ಕೆಲವು ಸರ್ತಿ ಬೇಕಾಗಿ ಬತ್ತು “ ಹೇಳುವ ನುಡಿಗಟ್ಟುದೆ ನೆಂಪಾತು.

ಯಾವ ವಸ್ತು,ಯಾವ ವ್ಯಕ್ತಿ ಕೂಡಾ ನಿಷ್ಪ್ರಯೋಜಕ ಅಲ್ಲ .ಒಂದಲ್ಲ ಒಂದು ಪ್ರಯೋಜನ ಇದ್ದೆ ಇರುತ್ತು,ಹಾಂಗಾಗಿ ಆರ ಬಗ್ಗೆದೆ ತಾತ್ಸಾರ ಭಾವನೆ ಇಪ್ಪಲಾಗ ಹೇಳುವ ಅರ್ಥವ ಇದು ತಿಳಿಸುತ್ತು .

ಯಶಸ್ಸು ಹೇಳುದು ಯಾವಾಗಲೂ ಒಬ್ಬನ ಯತ್ನಂದ ಮಾತ್ರ ಸಿಕ್ಕುತ್ತಿಲ್ಲೆ.ಅದಕ್ಕೆ ತುಂಬಾ ಜನಂಗ ಪ್ರತ್ಯಕ್ಷವಾಗಿ ಅಪ್ರತ್ಯಕ್ಷವಾಗಿ ಸಹ ಕರಿಸಿರುತ್ತವು .ಆದರೆ ಯಾವಾಗಲು ಯಶಸ್ಸು ಮುಂಚೂಣಿಲಿ ಇದ್ದ ಅಥವಾ ಆ ಕಾರ್ಯವ ಸುರುಮಾಡಿದ ,ಕೊನೆ ಎತ್ತಿಸಿದ ಒಬ್ಬನ ಹೆಸರಿಲಿ ದಾಖಲಾವುತ್ತು.ಅಂತ ಸಂದರ್ಭಗಳಲ್ಲಿ ತನ್ನ ಕಾರ್ಯದ ಯಶಸ್ಸಿಂಗೆ ಸಹಕರಿಸಿದ ಎಲ್ಲರನ್ನೂ ಮರತ್ತು ಬಿಡುವ ಪ್ರವೃತ್ತಿಯ ಅನೇಕ ಜೆನಂಗಳಲ್ಲಿ ನಾವು ಕಾಣುತ್ತು.

ಇಂಥ ಸಂದರ್ಭಲ್ಲಿದೆ “ಈಗ ಅವಂಗೆ ಉಪಕಾರ ಮಾಡಿದೋರ ನೆನಪಿಲ್ಲೆ,ಉಡುಗಿ ಇಡ್ಕಿದ ಕುಂಟು ಹಿಡಿಸೂಡಿದೆ ಕೆಲವು ಸರ್ತಿ ಬೇಕಾವುತ್ತು ,ಒಂದಿನ ನಮ್ಮ ಸಹಾಯ ಬೇಕಕ್ಕು,ಅಂಬಗ ನೆನಪಕ್ಕು, ನೋಡುವ° ಹೇಳಿ ಕೋಳ್ಯೂರು ಕಡೆಲಿ ನಮ್ಮ ಭಾಷೆಲಿ ಈ ಮಾತಿನ ಬಳಕೆ ಮಾಡುತ್ತವು,

ಬೇರೆ ಕಡೆಲಿದೆ ಈ ರೀತಿಯ ಪಡೆನುಡಿ ಬಳಕೆಲಿ ಇಕ್ಕು .ಇದಕ್ಕೆ ಸಮಾನಾಂತರವಾದ ಮಾತುಗಳೂ ಇಕ್ಕು ,ಗೊಂತಿಪ್ಪೋರು ತಿಳುಸಿ .

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಯಮ್.ಕೆ.

  ಆದರೆ ನಾವಗೆ ಮದಾಲು ಬ೦ದ ಯೋಚನೆ , ಬಾಗಿಲ ತೆಗೆಯದ್ದೆ ಗಿಳಿಬಾಗಿಲಿ೦ದ ಇಡುಕ್ಕುದು ಏವಾ ಕ್ರಮ ಹೇದು?.
  ಅ೦ತು ಬೈಲ ಜಾಲಿ೦ಗೆಯೂ ಉಪಯೋಗ ಇಲ್ಲದವಕ್ಕೆ ಒ೦ದು ಭರಪೂರ ವರಸೆ ಕೊಟ್ಟದ್ದು ,ಚಲೋ ಆತು . ಎಲ್ಲ ಆದ್ಮಿಗಳಿಗೆ ಕು೦ಟು ಮಾಯಿಪ್ಪು ಬೇಕಾವುತ್ತು ಅಲ್ಲದಾ?.

  [Reply]

  VA:F [1.9.22_1171]
  Rating: 0 (from 0 votes)
 2. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಅರ್ಥ ವಿವರಣೆ ಲಾಯಿಕಾಯಿದು.

  [Reply]

  VN:F [1.9.22_1171]
  Rating: 0 (from 0 votes)
 3. ಗೋಪಾಲಣ್ಣ
  GOPALANNA

  ಮಂತ್ರ ಅಲ್ಲದ್ದ ಅಕ್ಷರ ಇಲ್ಲೇ ;ಔಷಧ ಅಲ್ಲದ್ದ ಬೇರು ಇಲ್ಲೇ;ಅಯೋಗ್ಯನಾದ ಮನುಷ್ಯ ಇಲ್ಲೇ ;ಯೋಜಕ-ಸೇರಿಸಿಕೊಂಡು ಹೋಪ ಜನ-ಸಿಕ್ಕುದು ಕಷ್ಟ [ಆಮಂತ್ರಮಕ್ಷರಂ ನಾಸ್ತಿ ನಾಸ್ತಿ ಮೂಲಮನೌಷಧಂ| ಅಯೋಗ್ಯಃ ಪುರುಷೋ ನಾಸ್ತಿ ಯೋಜಕಸ್ತತ್ರ ದುರ್ಲಭಃ ||]

  [Reply]

  VA:F [1.9.22_1171]
  Rating: 0 (from 0 votes)
 4. ಗೋಪಾಲಣ್ಣ
  GOPALANNA

  ಮೇಲೆ ಬರೆದ ಸುಭಾಷಿತ ನೆನಪಾತು. ಆನು ಇತ್ತೀಚಿಗೆ ಕಚೇರಿ ಆಡಳಿತದ ಬಗ್ಗೆ ಭಾಷಣ ಮಾಡುವಾಗ ಈ ಸುಭಾಷಿತವ ಹೇಳಿ ಅರ್ಥ ವಿವರಿಸಿದೆ.ಹತ್ತು ಹಲವು ವಿಚಾರದ,ವಿವಿಧ ಮಟ್ಟದ ಬುದ್ಧಿಮತ್ತೆ ಇಪ್ಪವರ ತೆಕ್ಕೊಂಡು ಕೆಲಸ ಮಾಡಿಸುದು ಆಡಳಿತಕಾರಂಗೆ ಸವಾಲು. ಆದರೆ ಎಲ್ಲಾ ತರದವೂ ಒಂದಲ್ಲ ಒಂದು ಕೆಲಸಕ್ಕೆ ಬೇಕು. ಆರೂ ನಿರರ್ಥಕ ವ್ಯಕ್ತಿಗೋ ಅಲ್ಲ.ಕುಂಟು ಹಿಡಿಯ ಉದಾಹರಣೆ ಅದಕ್ಕೆ ಹೊಂದುತ್ತು. ಇಷ್ಟು ಒಳ್ಳೆ ನುಡಿಗಟ್ಟು ನಮ್ಮ ಭಾಷೆಲಿ ಇಪ್ಪದು ನಮ್ಮ ಸೌಭಾಗ್ಯ.

  [Reply]

  VA:F [1.9.22_1171]
  Rating: 0 (from 0 votes)
 5. ವಿಜಯತ್ತೆ

  ಹರೇರಾಮ, ’ಏಳುಸರ್ತಿ ಉಡುಗಿಡಿಕ್ಕಿದ ಕುಂಟು ಹಿಡಿಯೂ ಉಪಕಾರಕ್ಕೆ ಬೇಕಾವುತ್ತು’ ಹೇಳುಗೆನ್ನಬ್ಬೆ, ಹೇಳಿರೆ, ಆರನ್ನೂ ಸಸಾರ ಮಾಡ್ಳಾಗ ಎಲ್ಲೋರೂ ನವಗೆ ಒಂದಲ್ಲ ಒಂದು ಸಮಯಲ್ಲಿ ಬೇಕಾವುತ್ತು . ಒಳ್ಳೆ ಚಿಂತನ ಶೀಲ ಮಾತು ಲಕ್ಷ್ಮಿ.

  [Reply]

  VN:F [1.9.22_1171]
  Rating: 0 (from 0 votes)
 6. ಲಕ್ಷ್ಮಿ ಜಿ.ಪ್ರಸಾದ
  ಲಕ್ಷ್ಮೀ ಜಿ ಪ್ರಸಾದ

  ಓದಿದ , ಅಭಿಪ್ರಾಯಿಸಿದ,ಪ್ರೋತ್ಸಾಹಿದ ಎಲ್ಲೊರಿಂಗೂ ಧನ್ಯವಾದಂಗ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣನೀರ್ಕಜೆ ಮಹೇಶಪೆಂಗಣ್ಣ°ಚೆನ್ನೈ ಬಾವ°ಯೇನಂಕೂಡ್ಳು ಅಣ್ಣಒಪ್ಪಕ್ಕಕೊಳಚ್ಚಿಪ್ಪು ಬಾವಅನು ಉಡುಪುಮೂಲೆವಸಂತರಾಜ್ ಹಳೆಮನೆದೊಡ್ಮನೆ ಭಾವಮುಳಿಯ ಭಾವಸಂಪಾದಕ°ದೊಡ್ಡಮಾವ°ಉಡುಪುಮೂಲೆ ಅಪ್ಪಚ್ಚಿಡಾಗುಟ್ರಕ್ಕ°ಅಕ್ಷರ°ಪ್ರಕಾಶಪ್ಪಚ್ಚಿಕಳಾಯಿ ಗೀತತ್ತೆಜಯಶ್ರೀ ನೀರಮೂಲೆಅನುಶ್ರೀ ಬಂಡಾಡಿಕೆದೂರು ಡಾಕ್ಟ್ರುಬಾವ°ಸುಭಗಎರುಂಬು ಅಪ್ಪಚ್ಚಿಮಾಷ್ಟ್ರುಮಾವ°ಹಳೆಮನೆ ಅಣ್ಣಶ್ರೀಅಕ್ಕ°ಅಕ್ಷರದಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ