ಗಿಳಿ ಬಾಗಿಲಿಂದ -ಉಪ್ಪಿದ್ದ ಉಪ್ಪಿನ ಕಲ್ಲಿದ್ದ ಹೇಳಿ ಕೇಳಿದ್ದಿಲ್ಲೆ

June 4, 2014 ರ 11:14 amಗೆ ನಮ್ಮ ಬರದ್ದು, ಇದುವರೆಗೆ 17 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕೊದಿಲಿಂಗೆ ರಜ್ಜ ಉಪ್ಪು ಕಮ್ಮಿ ಆಗಿತ್ತು .ಮಗ ಉಂಬಗ   ”ಉಪ್ಪಿದ್ದ ?”ಹೇಳಿ ಕೇಳಿದ .ಅಷ್ಟಪ್ಪಗ ಅವನ ಬಾಯಿಗೆ ಕೋಲು ಹಾಕುಲೆ ಆನು ಸುಮ್ಮನೆ ಉಪ್ಪು ತಂದು ಬಳುಸದ್ದೆ ಮನೆ ಹೇಳಿ ಆದ ಮೇಲೆ ಮನೇಲಿ ಉಪ್ಪು ಇರದ್ದೆ ಒಳಿತ್ತ ಮಾರಾಯ ?ಹೇಳಿ ಕೇಳಿದೆ .ಅವಂದೆ ಬಿಡದ್ದೆ “ಅಪ್ಪು ಉಪ್ಪೇ ಇರಕ್ಕು ಹೇಳಿ ಎಂತ ಇದ್ದು ?ಉಪ್ಪಿನ ಕಲ್ಲುದೆ ಇರ್ತಿಲ್ಲೆಯ” ಹೇಳಿ ಕೇಳಿದ .ಅಷ್ಟಪ್ಪಗ ಉಪ್ಪುದೆ ಉಪ್ಪಿನ ಕಲ್ಲುದೆ ಬೇರೆಯ ಹೇಳಿ ಚರ್ಚೆ ಬಂತು .ಅಷ್ಟಪ್ಪಗ ಎನಗೆ “ಉಪ್ಪಿದ್ದ ಉಪ್ಪಿನ ಕಲ್ಲಿದ್ದ ಹೇಳಿ ಕೇಳಿದ್ದಿಲ್ಲೆ ” ಹೇಳುವ ಒಂದು ಆಡು ಮಾತು ನೆಂಪು ಆತು .

ಅನು ಸಣ್ಣಾದಿಪ್ಪಗ ಈ ನುಡಿಗಟ್ಟಿನ ಕೇಳಿದ್ದೆ.ಆದರೆ ಅದರ ಅರ್ಥ ಎಂತ ಹೇಳಿ ಎನಗೆ ಗೊಂತಿತ್ತಿಲ್ಲೆ.

ಮನುಷ್ಯ ಸಮಾಜ ಜೀವಿ .ತನ್ನ ಸುತ್ತ ಮುತ್ತಲಿನ ಜನರತ್ತರೆ ನೆಂಟ್ರು ಗಳ ಅ0ಬಗಂಬಗ ಕಾಣಕ್ಕಾವುತ್ತು.ಅವರ ಮನೆಗೆ ಹೊಯಕ್ಕಾವುತ್ತು .ಎಲ್ಲೋರು ಒಂದೇ ರೀತಿ ಇರ್ತವಿಲ್ಲೆ .ನಮಗೆ ಕೆಲವು ಜನಂಗಳ ಹತ್ರೆ ಹೆಚ್ಚು ಆತ್ಮೀಯತೆ ಇರುತ್ತು .ಕೆಲವು ಜನಂಗಳ ಹತ್ತರೆ ಅಷ್ಟಕ್ಕಷ್ಟೇ ಇರುತ್ತು .

ನಮಗೆ ಹೆಚ್ಚು ಆತ್ಮೀಯರಾಗಿಪ್ಪೋರ ಮನೆಗೆ ಹೋದರೆ ಅಥವಾ ಅವರ ಎಲ್ಲಿಯಾದರೂ ಕಂಡರೆ ನಾವು ಅವರತ್ರೆ ಅವರ ಕೆಲಸ ಕಾರ್ಯ ದ ಬಗ್ಗೆ ಮಕ್ಕಳು ಮರಿಗಳ ಬಗ್ಗೆ ವಿಚಾರ್ಸುತ್ತು.

ಆರಾದರೂ ನಮಗೆ ಅಷ್ಟು ಹಿತ ಇಲ್ಲದ್ದೋರ ಮನೆಗೆ ಹೋದರೆ ಅವರ ಖಾಸಾ ವಿಷಯಲ್ಲಿ ಎಂತದುದೆ ಮಾತಾಡುತ್ತವಿಲ್ಲೆ .ಹೋದ ಕೆಲಸ ಎಂತದು ಅದರ ಮಾತ್ರ ಮುಗಿಸಿಕ್ಕಿ ಅವು ಕೊಟ್ಟ ಕಾಪಿಯ ಚಾಯವಾ ಕುಡುದಿಕ್ಕಿ ಬತ್ತು !

ಇಂಥ ಸಂದರ್ಭಲ್ಲಿ ಆನು ಅವರತ್ತರೆ ” ಉಪ್ಪಿದ್ದ ಉಪ್ಪಿನ ಕಲ್ಲಿದ್ದ ?”ಹೇಳಿ ಕೇಳಿದ್ದಿಲ್ಲೆ .ಎನ್ನಷ್ಟಕ್ಕೆ ಕೆಲಸ ಮುಗಿಸಿಕ್ಕಿ ಬೈಂದೆ” ಹೇಳಿ ಹೇಳುತ್ತವು .

ಅವರ ಒಳಗಿನ ವ್ಯವಹಾರ ನಮಗೆ ಇಷ್ಟ ಇಲ್ಲೇ ಅವರತ್ತರೆ ಎಷ್ಟು ಬೇಕೋ ಅಷ್ಟು ಇದ್ದರೆ ಸಾಕು ಹೇಳುವ ಅರ್ಥವ ಉಪ್ಪಿದ್ದ ಉಪ್ಪಿನ ಕಲ್ಲಿದ್ದ ?ಹೇಳಿ ಕೇಳಿದ್ದಿಲ್ಲೆ” ಹೇಳುವ ನುಡಿಗಟ್ಟು ತಿಳುಸುತ್ತು .

ಇದು ಕೋಳ್ಯೂರು ಸೀಮೆ ಕನ್ನಡಲ್ಲಿ ಕೂಡಾ “ಉಪ್ಪುಂಟ ಉಪ್ಪಿನ ಕಲ್ಲುಂಟ ?”ಹೇಳಿ ಬಳಕೆಲಿ ಇದ್ದು .ಈ ಪರಿಸರಲ್ಲಿ ಇದು ತುಳುವಿಲಿ ರಜ್ಜ ಬೇರೆ ರೀತಿಲಿ ಬಳಕೆ ಇದ್ದು .ತುಳುವಿಲಿ “ನೀರುಂಡ ಅರ್ಕಂಜಿ ಉಂಡಾದ್ ಕೇನುದುಜ್ಜಿ” ಹೇಳುವ ಮಾತುಪ್ರಚಲಿತ ಇದ್ದು .

ಬಹುಶ ಬೇರೆ ಕಡೆಲಿದೆ ನಮ್ಮ ಹವ್ಯಕ ಭಾಷೆಲಿ ಈ ರೀತಿಯ ನುಡಿಗಟ್ಟಿನ ಬಳಕೆ ಇಕ್ಕು ಹೇಳಿ ಎನ್ನ ಅಂದಾಜು .ಅಥವಾ ಇದಕ್ಕೆ ಸಮಾನಾಂತರವಾದ ಬೇರೆ ಮಾತುಗಳ ಬಳಕೆ ಇಪ್ಪಲೂ ಸಾಕು .ಈ ಬಗ್ಗೆ ಗೊಂತಿಪ್ಪೋರು ತಿಳುಸಿ ಆತಾ .

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 17 ಒಪ್ಪಂಗೊ

 1. ಲಕ್ಷ್ಮಿ ಜಿ.ಪ್ರಸಾದ
  ಲಕ್ಷ್ಮಿ ಜಿ.ಪ್ರಸಾದ್

  ಅಂತೂ ಇಂತೂ ನಿಂಗಳ ಎಲ್ಲರ ಪ್ರೋತ್ಸಾಹಂದಾಗಿ ಗಿಳಿ ಬಾಗಿಲಿಂದ ಇಪ್ಪತ್ತೈದು ಹವ್ಯಕ ನುಡಿಗಟ್ಟುಗಳ ಇಣುಕಿ ನೋಡಿದೆ .ಎನ್ನ ಗಿಳಿ ಬಾಗಿಲು (ಹವ್ಯಕ ಬ್ಲಾಗ್ ) ತೆರವಗ ಕಮ್ಮಿ ಹೇಳ್ರೆ ತಿ೦ಗಳಿಂಗೆ ಒಂದು ಪಡೆನುಡಿ ಬಗ್ಗೆ ಆದರೂ ಬರೆಯಕ್ಕು ಹೇಳಿ ಗ್ರೇಶಿತ್ತಿದೆ .ಆನು ಗಿಳಿ ಬಾಗಿಲು ಹವ್ಯಕ ಬ್ಲಾಗ್ ಲಿ ಬರವಲೆ ಸುರು ಮಾಡಿದ ರಜ್ಜ ಸಮಯಲ್ಲಿ ಎನ್ನ ಬ್ಲಾಗ್ ನ ಹವ್ಯಕ ಬರಹಂಗಳ ನೋಡಿದ ಪದ್ಯಾಣ ರಾಮಚಂದ್ರಣ್ಣ ಎನ್ನತ್ರೆ ಒಪ್ಪಣ್ಣನ ಒಪ್ಪಂಗೋಳಿ ಹವ್ಯಕ ಭಾಷೆಯ ಬೆಳವಣಿಗೆ ,ಬರವಣಿಗೆಗೆ ತುಂಬಾ ಪ್ರೋತ್ಸಾಹ ಇದ್ದು .ಅಲ್ಲಿ ಹವ್ಯಕ ಓದುಗರ ಬರಹಗಾರರ ಬಳಗವೇ ಇದ್ದು ,ಹಾಂಗೆ ನೀನುದೆ ಅಲ್ಲಿ ಸೇರಿಗ ಅಲ್ಲಿ ಬರೆ ಹೇಳಿ ಸೂಚಿಸಿದವು .ಅದರಂದ ಮೊದಲೇ ಆನು ಒಪ್ಪಣ್ಣ ಒಪ್ಪಂಗೋ ಲಿ ಬಪ್ಪ ಬರಹಗಳ ಓದಿಕೊಂಡು ಇತ್ತಿದೆ.ಅಡಿಗೆ ಸತ್ಯಣ್ಣನ ಫ್ಯಾನ್ ಆಗಿತ್ತಿದೆ ! ಸರಿ ,ಇಲ್ಲಿ ನಾವುದೆ ಸೇರಿಗೊಂಬ ಹೇಳಿ ಭಾವಿಸಿ ಎನ್ನ ಸ್ನೇಹಿತೆ ಅನುಪಮ ಪ್ರಸಾದ (ಯುವ ಸಾಹಿತಿ )ಮೂಲಕ ಫೋನ್ ನಂಬರ್ ತೆಕ್ಕೊಂಡು ದೊಡ್ಡ ಮಾಣಿ (ರವಿ ಶಂಕರ ) ಅವರ ಸಂಪರ್ಕಿಸಿದೆ ,ನಂತರ ಇಲ್ಲಿದೆ ವಾರ ವಾರ ಬರವಲೆ ಸುರು ಮಾಡಿದೆ .ಇದರಂದಾಗಿ ಎನ್ನ ಬರವಣಿಗೆಗೆ ಒಂದು ವೇಗ ಮತ್ತು ಶಿಸ್ತು ಸಿಕ್ಕಿತ್ತು .ಇಲ್ಲಿ ವಿಜಯತ್ತೆ,ತೆಕ್ಕುಂಜ ಕುಮಾರ ಮಾವ°ಶರ್ಮಪ್ಪಚ್ಚಿ .ಎಂ ಕೆ ,ನರಸಿಂಹ ಭಟ್ ,ಚೆನ್ನೈ ಭಾವ ,ಇಂದಿರತ್ತೆ ರಘುಮುಳಿಯ,ಗೋಪಾಲ ಬೊಳುಂಬು. ಕೆ. ವೆಂಕಟರಮಣ ಭಟ್ಟ.ಎಸ್.ಕೆ.ಗೋಪಾಲಕೃಷ್ಣ ಭಟ್ಟ,ಬೊಳುಂಬು ಕೃಷ್ಣಭಾವ°,ಪ್ರದೀಪ್ ಮುಣ್ಚಿಕಾನ,ಉಡುಪುಮೂಲೆ ಅಪ್ಪಚ್ಚಿ,ಶೈಲಜಾ ಕೇಕಣಾಜೆ,ಆಶಾ ,ಸುರೇಖಾ ಚಿಕ್ಕಮ್ಮ ಭಾಗ್ಯಲಕ್ಷ್ಮಿ:,ಶ್ಯಾಮಣ್ಣ,ಜಯಶ್ರೀ ನೀರಮೂಲೆ,ಭಾರತಿ ಮಹಾಲಿಂಗೇಶ್ವರ ,ಗಣೇಶ್ ಭಟ್,ವೆಂಕಟೇಶ ,ಒಪ್ಪಣ್ಣ:..ಹೀಂಗೆ ಇನ್ನೂ ತುಂಬಾ ಜೆನಂಗ ಹಿತೈಷಿಗ ಎನ್ನ ಬರವಣಿಗೆಗೆ ಸಲಹೆ ಸೂಚನೆಗಳ ಕೊಡುತ್ತಾ ಬೆಂಬಲಿಸಿದವು ,ಓದಿದ ಪ್ರೋತ್ಸಾಹಿಸಿದ ಎಲ್ಲೋರಿಂಗೂ ಆನು ಆಭಾರಿಯಾಗಿದ್ದೆ,ಮುಂದೆಯೂ ನಿಂಗಳ ಎಲ್ಲರ ಪ್ರೋತ್ಸಾಹ ಸದಾ ಹೀಂಗೆ ಇರಲಿ ಹೇಳಿ ಆಶಿಸುತ್ತೆ,ಧನ್ಯವಾದಂಗ

  [Reply]

  VN:F [1.9.22_1171]
  Rating: 0 (from 0 votes)
 2. ಶೈಲಜಾ ಕೇಕಣಾಜೆ

  ಲಕ್ಷ್ಮೀ ಅಕ್ಕಾ ನಿಂಗಳ ಸಾಧನೆ ಅಭಿನಂದನೀಯ.. ನಿಂಗಳ ವಿಚಾರ ಶೀಲ ಬರವಣಿಗೆ ನಿರಂತರವಾಗಿ ಎಂಗೊಗೆ ಹೀಂಗೆ ಬತ್ತಾ ಇರಳಿ..

  [Reply]

  ಲಕ್ಷ್ಮಿ ಜಿ.ಪ್ರಸಾದ

  ಲಕ್ಷ್ಮಿ ಜಿ.ಪ್ರಸಾದ್ Reply:

  ಧನ್ಯವಾದಂಗ ಶೈಲಜಾ ಕೇಕಣಾಜೆ

  [Reply]

  VN:F [1.9.22_1171]
  Rating: 0 (from 0 votes)
 3. ಶಾರದಾಗೌರೀ

  ಲಕ್ಷ್ಮೀ ಅಕ್ಕ, ಇಪ್ಪತ್ತೈದು ಚೆಂದದ ನುಡಿಕಟ್ಟುಗಳ ಎಂಗೊಗೆ ಪರಿಚಯ ಮಾಡಿದ್ದಕ್ಕೆ ಧನ್ಯವಾದಂಗೊ.
  ವಿವರವಾಗಿ ಬರದು ತಿಳಿಶಿ ಕೊಟ್ಟದೂ ಲಾಯ್ಕಾಯಿದು.

  [Reply]

  ಲಕ್ಷ್ಮಿ ಜಿ.ಪ್ರಸಾದ

  ಲಕ್ಷ್ಮೀ ಜಿ ಪ್ರಸಾದ Reply:

  ಧನ್ಯವಾದಂಗ ಅಕ್ಕ ಶಾರದಾಗೌರೀ

  [Reply]

  VA:F [1.9.22_1171]
  Rating: 0 (from 0 votes)
 4. Bharathi Mahalingesh.

  ಇ೦ದ್ರಾಣ ದಿನ೦ಗಳಲ್ಲಿ ವಿದ್ಯಾವ೦ತರಾದ ನಾವು ಚ೦ದಕೆ ಮಾತಾಡ್ತು.ಆದರೆ ಆಡುನುಡಿಯ ಸೌ೦ದರ್ಯ ಹೆಚ್ಚಪ್ಪದು ಭಾಷೆಲಿ ಉಪಯೋಗಿಸುವ, ಹೊಸ ಅರ್ಥವನ್ನೇ ಕೊಡುವ ನುಡಿಗಟ್ಟು ಪದಗಳಿ೦ದ.ಅ೦ಥಾ ನುಡುಗಟ್ಟುಗಳ ಒಳಹೊಕ್ಕು, ಅದರ ಅರ್ಥ,ಬಳಕೆಯ ಸ೦ದರ್ಭಗಳ ಮನವರಿಕೆ ಮಾಡಿಕೊಟ್ಟ ಲಕ್ಷ್ಮಿ ಅಕ್ಕ೦ಗೆ ಧನ್ಯವಾದ೦ಗೊ.ಇನ್ನೂ ಹೆಚ್ಚಿನ ಸೃಜನಾತ್ಮಕ ಬರಹ೦ಗೊ ಅವರಿ೦ದ ಹರಿದು ಬರಲಿ ಹೇಳಿ ಆಶಿಸುತ್ತೆ. :)

  [Reply]

  ಲಕ್ಷ್ಮಿ ಜಿ.ಪ್ರಸಾದ

  ಲಕ್ಷ್ಮೀ ಜಿ ಪ್ರಸಾದ Reply:

  ನಿಂಗಳ ಎಲ್ಲರ ನಿರಂತರ ಬೆಂಬಲಕ್ಕೆ ಧನ್ಯವಾದಂಗ ಭಾರತಿ ಅಕ್ಕ Bharathi Mahalingesh.

  [Reply]

  VA:F [1.9.22_1171]
  Rating: 0 (from 0 votes)
 5. K.Narasimha Bhat Yethadka

  ಇಪ್ಪತ್ತೈದರ ಅಭಿನಂದನೆ.ಚಿಂತನೆಗೆ ಅವಕಾಶ ಕೊಟ್ಟದ್ದಕ್ಕೆ ಧನ್ಯವಾದ.

  [Reply]

  ಲಕ್ಷ್ಮಿ ಜಿ.ಪ್ರಸಾದ

  ಲಕ್ಷ್ಮೀ ಜಿ ಪ್ರಸಾದ Reply:

  ನಿಂಗಳ ಎಲ್ಲರ ನಿರಂತರ ಬೆಂಬಲಕ್ಕೆ ಧನ್ಯವಾದಂಗ K.Narasimha Bhat Yethadka

  [Reply]

  VA:F [1.9.22_1171]
  Rating: 0 (from 0 votes)
 6. ಯಮ್.ಕೆ.

  Iಈ ಅಯಿಪಿಲ್0ದಾಗಿ ನಿ0ಗ ಒ0ಟಿ ಓಟಲ್ಲೆ 25 ಬಾರಿಸಿದ್ದು ಅ0ದಾಜ್ ಆಯಿದಿಲ್ಲೆ.
  ಅ0ತು ಸತ್ಯಣ್ಣನ ” ಚಾ ಬ್ರೇಕಿನೊಳ” 25 ಅಭಿನ0ದನೀಯ.

  [Reply]

  ಲಕ್ಷ್ಮಿ ಜಿ.ಪ್ರಸಾದ

  ಲಕ್ಷ್ಮೀ ಜಿ ಪ್ರಸಾದ Reply:

  ನಿಂಗಳ ನಿರಂತರ ಬೆಂಬಲಕ್ಕೆ ಆನು ಆಭಾರಿ ಧನ್ಯವಾದಂಗ ಅಣ್ಣ ಯಮ್.ಕೆ.

  [Reply]

  VA:F [1.9.22_1171]
  Rating: 0 (from 0 votes)
 7. ಮುಳಿಯ ಭಾವ
  ರಘುಮುಳಿಯ

  ಎ೦ಗಳ ಮನೆ ಅಜ್ಜಿ ಮದಲು ಈ ಮಾತಿನ ಹೇಳಿಗೊಂಡಿದ್ದ ನೆಂಪು . ನಮ್ಮ ಹಿರಿಯರ ಜೀವನಾನುಭವವ ಸ್ವಾರಸ್ಯವಿಪ್ಪ ನುಡಿಗಳಲ್ಲಿ ಆಡುಮಾತಿಲಿ ಬಳಕೆ ಮಾಡಿದವು . ಈ ನುಡಿಗಳ ನೆಂಪು ಮಾಡಿ , ಹುಡುಕ್ಕಿ ಬೈಲಿಲಿ ಹ೦ಚುವ ಅಮೂಲ್ಯ ಕೆಲಸ ಮಾಡುತ್ತಾ ಇಪ್ಪ ಲಕ್ಷ್ಮಿ ಅಕ್ಕಂಗೆ ವಂದನೆ , ಅಭಿನಂದನೆ .

  [Reply]

  ಲಕ್ಷ್ಮಿ ಜಿ.ಪ್ರಸಾದ

  ಲಕ್ಷ್ಮೀ ಜಿ ಪ್ರಸಾದ Reply:

  ನಿಂಗಳ ನಿರಂತರ ಬೆಂಬಲ,ಪ್ರೋತ್ಸಾಹ ಕ್ಕೆ ಆನು ಆಭಾರಿ, ಧನ್ಯವಾದಂಗ ಮುಳಿಯ ರಘುವಣ್ಣ

  [Reply]

  VA:F [1.9.22_1171]
  Rating: 0 (from 0 votes)
 8. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಆನು ಈ ನುಡಿಗಟ್ಟಿನ ಇದುವರೆಗೆ ಕೇಳಿದ್ದಿಲೆ. ಲಕ್ಷ್ಮಿ ಅಕ್ಕಂಗೆ ಧನ್ಯವಾದ. ಆದಷ್ಟು ಬೇಗ ಸೆಂಚುರಿ ನಾಟೌಟ್ ಬಾರ್ಸಿ.

  [Reply]

  ಲಕ್ಷ್ಮಿ ಜಿ.ಪ್ರಸಾದ

  ಲಕ್ಷ್ಮೀ ಜಿ ಪ್ರಸಾದ Reply:

  ನೂರು ತಲುಪುಲೇ ಎಡಿಗ ಇಲ್ಲೆಯ ಗೊಂತಿಲ್ಲೇ ,ಆದರೆ ನಿಂಗ ಹೇಳಿದ ಹಾಂಗೆ ಆನು ನೂರು ತಲುಪುಲೇ ಪ್ರಯತ್ನ ಮಾಡುತ್ತೆ ,ತೆಕ್ಕುಂಜ ಕುಮಾರ ಮಾವ°ನಿಂಗಳ ಅಭಿಮಾನಕ್ಕೆ ನಿರಂತರ ಬೆಂಬಲಕ್ಕೆ ಆನು ಋಣಿ ,ಧನ್ಯವಾದಂಗ

  [Reply]

  VA:F [1.9.22_1171]
  Rating: 0 (from 0 votes)
 9. ಗೋಪಾಲಣ್ಣ
  ಗೋಪಾಲಣ್ಣ

  ಅಭಿನಂದನೆ ; ಹೀಂಗೆ ಬರೆತ್ತಾ ಇರಿ

  [Reply]

  ಲಕ್ಷ್ಮಿ ಜಿ.ಪ್ರಸಾದ

  ಲಕ್ಷ್ಮಿ ಜಿ.ಪ್ರಸಾದ್ Reply:

  ಧನ್ಯವಾದಂಗ ಗೋಪಾಲಣ್ಣ ನಿಂಗಳ ಎಲ್ಲರ ಪ್ರೋತ್ಸಾಹ ಸದಾ ಇರಲಿ

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೇಜಿಮಾವ°ಪವನಜಮಾವದೊಡ್ಡಮಾವ°ಅಕ್ಷರ°ಪುತ್ತೂರಿನ ಪುಟ್ಟಕ್ಕದೇವಸ್ಯ ಮಾಣಿಅನುಶ್ರೀ ಬಂಡಾಡಿಬಂಡಾಡಿ ಅಜ್ಜಿಅನು ಉಡುಪುಮೂಲೆಪಟಿಕಲ್ಲಪ್ಪಚ್ಚಿಮಾಲಕ್ಕ°ಜಯಗೌರಿ ಅಕ್ಕ°ಪುತ್ತೂರುಬಾವಪ್ರಕಾಶಪ್ಪಚ್ಚಿದೀಪಿಕಾವಿದ್ವಾನಣ್ಣನೀರ್ಕಜೆ ಮಹೇಶಪೆಂಗಣ್ಣ°ಬಟ್ಟಮಾವ°ವಾಣಿ ಚಿಕ್ಕಮ್ಮಡಾಮಹೇಶಣ್ಣವೇಣೂರಣ್ಣಶೀಲಾಲಕ್ಷ್ಮೀ ಕಾಸರಗೋಡುಸುವರ್ಣಿನೀ ಕೊಣಲೆಪುಟ್ಟಬಾವ°ಯೇನಂಕೂಡ್ಳು ಅಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ