ಗಿಳಿ ಬಾಗಿಲಿಂದ – ಗುಡ್ದೆಂದ ಗುಡ್ಡೆ ಅಡ್ಡ ಸಾವಿರ ಇದ್ದು

ಆನು ಹೈ ಸ್ಕೂಲ್ ಓದುವ ಕಾಲಕ್ಕೆ ಎಂಗಳ ಊರಿಲಿ ಎಸ್ ಎಸ್ ಎಲ್ ಸಿ ಲಿ ಫಸ್ಟ್ ಕ್ಲಾಸ್ ಪಾಸ್ ಅಪ್ಪದು ಒಂದು ದೊಡ್ಡ ವಿಷಯ ಆಗಿತ್ತು.ಆನು ಫಸ್ಟ್ ಕ್ಲಾಸ್ ತೆಗೆದೆ.ಶಾಲೆಗೆ ಸೆಕೆಂಡ್ ಬಂದೆ. ಭಾರಿ ಕೊಷಿ ಆತು ಎನಗೆ !ಅಪ್ಪ- ಅಮ್ಮ ಅಜ್ಜಿ ಅಜ್ಜ ಎಲ್ಲೊರಿಂಗುದೆ. ಹಠ ಮಾಡಿ ಪಿಯುಸಿ ಗೆ ಸೇರಿದೆದೆ..
ಭಾರೀ ಹೆಮ್ಮೆಲಿ ಪಿಯುಸಿ ಕ್ಲಾಸ್ ಗೆ ಹೋದೆ .ಸುರುವಣ ದಿನ ಎಲ್ಲರ ಪರಿಚಯ ಹೇಳುಲೇ ಇತ್ತು .ಅಂಬಗ ಗೊಂತಾತು ಎನಗೆ ಎನ್ನ ಫಸ್ಟ್ ಕ್ಲಾಸ್ ಮಾರ್ಕು ಒಂದು ದೊಡ್ಡ ಮಾರ್ಕೆ ಅಲ್ಲ .ಅಲ್ಲಿ 80-85 % ಮಾರ್ಕು ತೆಗದ ಮಕ್ಕ ಇತ್ತಿದವು .

ಕಾಲೇಜಿಂಗೆ ಸೇರುವಾಗ ಎನಗೆ ಡಿಗ್ರಿ ಮಾಡುದು ದೊಡ್ಡ ವಿಷಯ ಹೇಳಿ ಅನ್ಸಿತ್ತು .ಡಿಗ್ರಿ ಮಾಡ್ರೆ ಒಳ್ಳೆ ಸಂಬಳದ ಗೌರವದ ಕೆಲಸ ಸಿಕ್ಕುತ್ತು ಹೇಳಿ ಆರೋ ಹೇಳುದರ ಕೇಳಿತ್ತಿದೆ.ಆದರೆ ಬಿಎಸ್ಸಿ ಡಿಗ್ರಿ ಮಾಡಿ ಅಪ್ಪಗ ಗೊಂತಾತು ಡಿಗ್ರಿ ಲೆಕ್ಕಕ್ಕೇ ಇಲ್ಲೆ ,ಎಂ. ಎ ಮಾಡದ್ರೆ ಎಂತದೂ ಪ್ರಯೋಜನ ಇಲ್ಲೆ ಹೇಳಿ .
ಡಿಗ್ರಿ ಓದುವಾಗಲೇ ಮದುವೆ ಬೇರೆ ಆಗಿತ್ತು !ಇಪ್ಪತ್ತೊಂದು ವರ್ಷ ಹಿಂದೆ ಮದುವೆ ಆದ ಮೇಲೆ ಓದುದು ಹೇಳುವ ವಿಚಾರ ದೊಡ್ಡ ಕ್ರಾಂತಿಯೇ ಸರಿ !ಆದರೂ ಮನೆ ಮಂದಿ ಎಲ್ಲರ ಎದುರು ಹಾಕಿಕೊಂಡು ಎಂ .ಎ (ಸಂಸ್ಕೃತ )ಓದಿದೆ .ಮೊದಲ ರಾಂಕ್ ದೆ ತೆಗದೆ.ರಜ್ಜ ಸಮಯ ಭಾರಿ ಸಂತೋಷಲ್ಲಿ ಇತ್ತಿದೆ (,ಎನ್ನ ಬಿಟ್ರೆ ಆರಿಲ್ಲೆ ಹೇಳುವ ಹಾಂಗೆ ಹೆಮ್ಮೆಲಿ ಬೀಗಿಕೊಂಡು!)

ಆದರೆ ವಾಸ್ತವ ಅರ್ಥ ಅಪ್ಪಲೆ ಹೆಚ್ಚು ದಿನ ಬೇಕಾಯಿದಿಲ್ಲೆ. ಎಂ.ಎ, ರಾಂಕ್ ಇದೆಲ್ಲ ದೊಡ್ಡ ವಿಷಯವೇ ಅಲ್ಲ ,ಎಂ ಫಿಲ್ , ಪಿಎಚ್. ಡಿ ಮಾಡಿದೋರು ತುಂಬಾ ಜನಂಗ ಇದ್ದವು ಹೇಳಿ ಗೊಂತಾತು .

ಸರಿ ! ಕಲಿವಲೆ ತುಂಬಾ ಆಸಕ್ತಿ ಇದ್ದ ಆನು ಎಂ.ಫಿಲ್,ಪಿಎಚ್.ಡಿ ಯೂ ಮಾಡಿದೆ !ಅಷ್ಟಪ್ಪಗ ಎನಗೆ ಗೊಂತಾತು ಎನ್ನ ಕಲಿಕೆ ಏನೇನೂ ಅಲ್ಲ !ಡಬಲ್ ಪಿಎಚ್.ಡಿ ಮಾಡಿದೋರು ಇದ್ದವು ತುಂಬಾ ಜೆನಂಗ ,ಪೋಸ್ಟ್ ಡಾಕ್ಟೊರಲ್ ಸ್ಟಡಿ ಮಾಡಿದ ವಿದ್ವಾಂಸರು ತುಂಬಾ ಜನಂಗ ಇದ್ದವು .
ಪಿಎಚ್.ಡಿ ಹೇಳುದು ಸಂಶೋಧನೆಯ ಕೊನೆ ಅಲ್ಲ ಸುರು ಹೇಳುದೂ ಗೊಂತಾತು !ಇನ್ನು ಮಾಡಕ್ಕಾದ ಕೆಲಸ ತುಂಬಾ ಇದ್ದು ,ಮಾಡಿದ್ದು ಏನೇನೂ ಅಲ್ಲ ಹೇಳುದು ಮನವರಿಕೆ ಆತು
.“ಗುಡ್ದೆಂದ ಗುಡ್ಡೆ ಅಡ್ಡ ಸಾವಿರ ಇದ್ದು” ಹೇಳುವ ನುಡಿಗಟ್ಟು ಎನಗೆ ಅಂಬಗ ಅರ್ಥ ಆತು .

ಒಂದೊಂದೇ ಹಂತ ಏರಿದ ಹಾಂಗೆ ಅದರಂದ ಮೇಲೆ ಎಷ್ಟೋ ಜನಂಗ ಇದ್ದವು ಹೇಳಿ ನಮಗೆ ಗೊಂತಾವುತ್ತಾ ಹೋವುತ್ತು.
ಇಂಥ ವಿಚಾರ ಹೇಳುವಾಗ “ಗುಡ್ದೆಂದ ಗುಡ್ಡೆ ಅಡ್ಡ ಸಾವಿರ ಇದ್ದು” ಹೇಳುವ ನುಡಿ ಗಟ್ಟಿನ ನಮ್ಮಲ್ಲಿ ಬಳಕೆ ಮಾಡುತ್ತು .

ನಾವು ತಲೆ ಎತ್ತಿ ನೋಡುವಾಗ ಒಂದು ಎತ್ತರದ ಗುಡ್ಡೆ ಕಾಣುತ್ತು.ಅದರ ಹತ್ತಿ ತಲೆ ಎತ್ತಿ ನೋಡುವಾಗ ಅದರಂದ ಎತ್ತರದ ಇನ್ನೊಂದು ಗುಡ್ಡೆ ಕಾಣುತ್ತು ,ಅದನ್ನೂ ಹತ್ತಿ ನೋಡ್ರೆ ಮತ್ತೊಂದು ಕಾಣುತ್ತು .
ಹಾಂಗೆ ನಮ್ಮಂದ ಪೈಸೆಲಿ,ವಿದ್ಯೆಲಿ ,ಸ್ಥಾನಲ್ಲಿ,ತಿಳುವಳಿಕೆಲಿ ,ಬುದ್ಧಿವಂತಿಕೆಲಿ ಹೆಚ್ಚಿನೋರು ತುಂಬಾ ಜನಂಗ ಇದ್ದವು .ಹಾಂಗಾಗಿ ನಮ್ಮ ಬಿಟ್ರೆ ಆರಿಲ್ಲೆ ಹೇಳುವ ಹಾಂಗೆ ಹಾಂಕಾರ ತೋರ್ಸುಲೆ ಆಗ ಹೇಳುವ ತಿಳುವಳಿಕೆಯ ಈ ನುಡಿಗಟ್ಟು ತಿಳಿಸುತ್ತು.

ಲಕ್ಷ್ಮಿ ಜಿ.ಪ್ರಸಾದ

   

You may also like...

7 Responses

 1. Bharathi Mahalingesh. says:

  ಲಕ್ಷ್ಮಿ ಅಕ್ಕ, ನಿ೦ಗಳ ಮಾತು ನಿಜ.! ಭಾಷೆ ಯಾವುದೇ ಆಗಿರಲಿ,ಅದರದ್ದೇ ಆದ ಪದ೦ಗೊ ಎಷ್ಟು ಚೆ೦ದ!!! ಮನುಷ್ಯ ದುರಹ೦ಕಾರ ತೋರ್ಸುಲಾಗ ಹೇಳುವ ,ನಮ್ಮ ಭಾಷೆಯ ಈ ನುಡಿಗಟ್ಟುಪದವ ಅನುದೇ ಕೇಳಿದ್ದೆ.ಎಷ್ಟು ಸೂಕ್ಷ್ಮಲ್ಲಿ ಬುದ್ಧಿವಾದ ಹೇಳ್ತು ಈ ಪದ..ವಾವ್ 🙂

 2. ಯಮ್.ಕೆ. says:

  ಪಿಎಚ್.ಡಿ ಹೇಳುದು ಸಂಶೋಧನೆಯ ಕೊನೆ ಅಲ್ಲ ಸುರು ಹೇಳುದೂ ಗೊಂತಾತು
  –ಇದೆಲ್ಲ ವಾಸ್ತವ ನೆಲೆಲಿ ನೋಡಿಪ್ಪಗ ,ನಾವಗೆ ಸತ್ಯಣ್ಣನ ಪಚ್ಚಡಿಯೇ ಸ೦ಶೋಧನೆಗೆ ಸಾಕು ಹೇಳಿ ತಿರುಗಿ ,ತಳಿಯದ್ದೆ ಕೂದತ್ತು!

  • ಸತ್ಯವಾದ ಮಾತು. ತುಂಬ ಜನಂಗೊ ಗ್ರೇಹಿಸದ್ದವು, ಪಿಎಚ್‌ಡಿ ಮಾಡಿದ್ರೆ ಎಲ್ಲ ಮುಗ್ತೂಳಿ. ನಿಜವಾದ ಸಂಶೋಧನೆ, ಕಲಿವ ಕೆಲಸ ಸಾಯುವವರೆಗೂ ನಡೆತ್ತು

   • Anant Vaidya says:

    ‘ಗುಡ್ಡೆ ಯಿಂದ ಗುಡ್ಡೆ ಅಡ್ಡ ಸಾವಿರ ಇದ್ದು’ ಎಂತಹ ಸೊಗಸಾದ ಲೇಖನ. ಜೀವನದ ವಾಸ್ತವಿಕೆಯೊಂದಿಗೆ. ಸುಮ್ನೆ ಹೇಳತ್ವಾ ಇಂಗು-ತೆಂಗು ಎರಡಿದ್ದರೆ… ಮಂಗನಾದರೂ ಅಡಿಗೆ ಮಾಡ್ತು. ಶಬ್ದಕೋಶ ಸಾವಿರ ಇದ್ದು! ಆದರೆ ಅಭಿವ್ಯಕ್ತಿ? ಮಾತೋಶ್ರೀ… ಸಾವಿರ ಕಾರಣದಿಂದ ನೊಂದವರಿಗೆ ನಿಮ್ಮ ಲೇಖನ ಬೆಳಕಾಗಲಿ.

 3. K.Narasimha Bhat Yethadka says:

  ನಿಜ.ಕೂಪ ಮಂಡೂಕದ ಹಾಂಗಿಪ್ಪವಕ್ಕೆ ಹೆರ ಜಗತ್ತಿಲ್ಲಿ ಎಂತ ನೆಡೆತ್ತು ಹೇಳಿ ಗೊಂತಾವುತ್ತಿಲ್ಲೆ.ಅದರಿಂದ ಹೆರ ಬಂದು ನೋಡಿಯಪ್ಪಗಳೇ ಈ ಜಗತ್ತಿನ ವಿಶಾಲ ಸಾಧ್ಯತೆಗಳ ತಿಳಿವಲೆ ಎಡಿಗು.ಇನ್ನೊಂದು ವಿಷಯ.ಹೆಮ್ಮಕ್ಕೊ ಮದುವೆ ಆದ ಮತ್ತೆ ಕಲ್ತು
  ಬೇರೆಬೇರೆ ಕ್ಷೇತ್ರಲ್ಲಿ ಮುಂದೆ ಬಪ್ಪದು ತುಂಬಾ ಸಂತೋಷದ ಸಂಗತಿ.

 4. ಶಾರದಾಗೌರೀ says:

  ಲಾಯ್ಕದ ನುಡಿಗಟ್ಟು ಲಕ್ಷ್ಮೀ ಅಕ್ಕ.
  ನಾವೇ ಹೇಳುವ ಅಹಂ ಇಪ್ಪಲಾಗ ಹೇಳ್ತದಕ್ಕೆ ಈ ನುಡಿಗಟ್ಟಿನ ತಂದವಾಯಿಕ್ಕು ಹೆರಿಯೋರು.

  ನಾವು ಈ ಬದುಕ್ಕಿಲಿ ಕಲಿವದು ನಿತ್ಯ ಇರ್ತು. ಎಷ್ಟು ಕಲ್ತರೂ ಮುಗಿಯದ್ದದೇ ಈ ಜೀವನ. ಅದು ಪುಸ್ತಕದ ಕಲಿಯುವಿಕೆ ಮಾಂತ್ರ ಅಲ್ಲ, ಜೀವನದ ಕಲಿಯುವಿಕೆ ಕೂಡಾ..
  ಒಳ್ಳೆ ನುಡಿಕಟ್ಟಿಂಗೆ ಧನ್ಯವಾದಂಗೊ.

 5. ಹರೇ ರಾಮ, ಶಾರದಾಗೌರಿ ಹೇಳಿದ್ದು ಸರಿ.ನಮ್ಮ ’ಅಹಂ’ ನ ಮೆಟ್ಟಿಹಾಕುಲೆ ಇದರ ನೆಂಪುಮಾಡಿಗೊಂಬದು ಒಳ್ಳೆದು. ಲಕ್ಷ್ಮಿಯಲ್ಲಿ ಒಂದು ವಿಶೇಷತೆ ಕಾಂಬದೆನಗೆ…”ಎನಗೆ ಹೀಂಗಿದ್ದ ದುರ್ಬಲತೆ ಇದ್ದತ್ತು.ಅದರ ಆನು ಕಳಚಿಗೊಂಡು ಹೆರ ಬಂದೆ” ಹೇಳ್ತ ಸಂಗತಿಯನ್ನೂ ಓದುಗರ ಮುಂದೆ ಬಿಚ್ಚಿ ಮಡಗುವ ಸ್ವಚ್ಹ ಮನಸ್ಸು. ಇದರಿಂದಾಗಿ ತಿದ್ದಿಗೊಂಬವಕ್ಕೆ ಕೀಳರಿಮೆ ಇಲ್ಲೆಯಿದ. ಲಕ್ಷ್ಮೀ ನಿನಗೆ ಮನದಾಳದ ಅಭಿನಂದನೆ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *