ಗಿಳಿ ಬಾಗಿಲಿಂದ -ಗೆಲ್ಲು ಇಲ್ಲದ್ದರೆ ಎಲೆ ಆದರೂ ಇರಲಿ

July 30, 2014 ರ 6:00 amಗೆ ನಮ್ಮ ಬರದ್ದು, ಇದುವರೆಗೆ 8 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮೊನ್ನೆ ಎನ್ನ ಫ್ರೆಂಡ್ ಹತ್ರೆ ಮಾತನಾಡುವಾಗ ಅವರ ಪಕ್ಕದ ಮನೆಯೋರ ಬಗ್ಗೆ ಏನೋ ಹೇಳುವಾಗ “ಅವು ಗೆಲ್ಲು ಇಲ್ಲದ್ದರೆ ಎಲೆ ಆದರೂ ಇರಲಿ ಹೇಳಿ ಮಡಿಕ್ಕೊಂಬದು ಅಷ್ಟೇ ,ಮನಸರ್ಥ ಏನೂ ಅಲ್ಲ “ಹೇಳುವ ಮಾತಿನ ಬಳಕೆ ಮಾಡಿದ್ದರ ಗಮನಿಸಿದೆ .ಎಂಗಳ ಕೋಳ್ಯೂರು ಕಡೆಲಿಯೂ ಇದರ ಗೆಲ್ಲಿನ ಆಸರೆ ತಪ್ಪಿರೆ ಎಲೆ ಆದರೂ ಇರಲಿ ಹೇಳಿ ಹಿಡ್ಕೊಂಬದು ಹೇಳುವ ಮಾತು ಬಳಕೆ ಇದ್ದು .

ನಮ್ಮ ಸುತ್ತ ಮುತ್ತ ನೆರೆ ಕರೆಲಿ ಸುಮಾರು ಮನೆಗ ಜನಂಗ ಇರ್ತವು .ಆದರೆ ಎಲ್ಲೋರು ಒಂದೇ ರೀತಿಯಾಗಿ ಇರ್ತವಿಲ್ಲೆ.ಕೆಲವು ಜನಂಗೊಕ್ಕೆ ನಮ್ಮ ಸಂಪತ್ತು ಸ್ಟೇಟಸ್ ಸಾಕವುತ್ತಿಲ್ಲೆ,ಕೆಲವು ಜನಂಗೊಕ್ಕೆ ಅವರ ಜಾತಿ ಭಾಷೆಯ ಜನಂಗಳೇ ಹೆಚ್ಚು ಹತ್ರೆ ಆವುತ್ತು .ಸಾಮಾನ್ಯವಾಗಿ ಬೇಕಾದ ಸಹಾಯ ,ಕೊಡು ಕೊಳ್ಳುವಿಕೆ ಎಲ್ಲ ಅವರ ನಡುವೆಯೇ ನಡೆತ್ತಾ ಇರುತ್ತು .ಸಾಮಾನ್ಯವಾಗಿ ಪೇಟೆಲಿ ಅಕ್ಕ ಪಕ್ಕದೋರೊಟ್ತಿಂಗೆ ಒಳ್ಳೆ ಸ್ನೇಹ ಸಂಬಂಧ ನಮಗೆ ಬೇಕಾವುತ್ತು .ನಾವು ಹೆರ ಹೋದಿಪ್ಪಗ ಗ್ಯಾಸ್ ಸಿಲಿಂಡರ್ ತೆಗದು ಮಡುಗುಲೇ ,ಕೋರಿಯೆರ್ ಸ್ಪೀಡ್ ಪೋಸ್ಟ್ ಏನಾರು ಬಂದರೆ ತೆಗದು ಮಡುಗುಲೇ ಇತ್ಯಾದಿ ಉಪಕಾರ ಆವುತ್ತು .

ಕೆಲವು ಜನಂಗೊಕ್ಕೆ ನಮ್ಮತ್ರೆ ಆತ್ಮೀಯತೆ ಇರ್ತಿಲ್ಲೆ ಅವಕ್ಕೆ ಅವರ ಜಾತಿ ಭಾಷೆಯ ನೆರೆಕರೆಯೋರೆ ಹೆಚ್ಚು ಹತ್ತರೆ .ಆದರೆ ಕೆಲವು ಅನಿವಾರ್ಯ ಸಂದರ್ಭಲ್ಲಿ ನಮ್ಮ ಸಹಾಯವೂ ಬೇಕಾವುತ್ತು .ಉದಾಹರಣೆಗೆ ಹೇಳುತ್ತರೆ ಎಂಗಳ ಅಕ್ಕ ಪಕ್ಕ ಮತ್ತೆ ಹಿಂದಣ ಮೂರು ಮನೆಗಳಲ್ಲಿ ಒಬ್ಬ ಭಾರೀ ಶ್ರೀಮಂತರು ,ಅವು ಸಾಮಾನ್ಯವಾಗಿ ಅವರ ನೆರೆ ಕರೆಲಿ ಇಪ್ಪ ಒಬ್ಬ ಸಂಬಂಧಿಕ ಬಿಟ್ರೆ ಬೇರೆ ಯಾವ ನೆರೆ ಕರೆ ಹತ್ರೂ ಬೆರೆತ್ತವಿಲ್ಲೆ.ಅವರಲ್ಲಿ ಏನಾರು ಕಾರ್ಯ ಕ್ರಮ ಆದರೆ ಅವರ ಬಂಧು ಬಳಗೊಕ್ಕೆ ಹೇಳುತ್ತವೇ ಹೊರತು ನೆರೆ ಕರೆಯೋರಿಂಗೆ ಹೇಳುತ್ತವಿಲ್ಲೆ.
ಅವರ ಎರಡು ಕೂಸುಗ ಶಾಲೆಗೆ ಹೋಗಿ ಬತ್ತವು .ಇವು ಅಬ್ಬೆ ಅಪ್ಪ ಇಬ್ರೂ ಕೆಲಸಕ್ಕೆ ಹೋವುತ್ತವು. ಅಬ್ಬೆ ಅಪ್ಪ ಬಪ್ಪಲ್ಲಿಯರೆಗೆ ಹೊತ್ತೊಪ್ಪಗ ಶಾಲೆಂದ ಬಂದ ಮಕ್ಕ ಮಾತ್ರ ಮನೆಲಿ ಇರ್ತವು.ಇತ್ತೀಚೆಗೆ ಹೆಚ್ಚಾವುತ್ತಾ ಇಪ್ಪ ಮಕ್ಕಳ ಮೇಲಣ ಲೈಂಗಿಕ ದೌರ್ಜನ್ಯ ಪ್ರಕರಣಗಳ ಕಾರಣವೋ ಏನೋ ಅವಕ್ಕೆ ಅವರ ಕೂಸುಗಳ ಬಗ್ಗೆ ಚಿಂತೆ ಸುರು ಆಯಿದು .ಅವರ ಸಂಬಂಧಿಕ ಆಗಿಪ್ಪ ನೆರೆ ಕರೆಯೋರೆ ಅವಕ್ಕೆ ಹತ್ತರೆ ಆಗಿದ್ದರೂ ಇತ್ತೀಚೆಗೆ ಅವರ ಸುತ್ತ ಮುತ್ತ ಇಪ್ಪ ಎಲ್ಲ ನೆರೆ ಕರೆಯೋರತ್ರೆ ಮಾತಾಡುಲೆ ಸುರು ಮಾಡಿದ್ದವು .

ಅವರ ಮೊರೆಲಿ ಬಲವಂತದ ನೆಗೆ ಕಾಣುತ್ತು ಆತ್ಮೀಯತೆ ಇಲ್ಲೆ ಹೇಳುದು ಗೊಂತಾವುತ್ತು ನಮಗೆ.ಆದರೂ ಮನಸರ್ಥ ಅಲ್ಲದ್ದರೂ ಅವು ಸ್ನೇಹ ಸಂಬಂಧ ಮಡಿಕ್ಕೊಮ್ಬಲೆ ಪ್ರಯತ್ನ ಮಾಡುತ್ತಾ ಇದ್ದವು .ಮೊನ್ನೆ ಒಂದಿನ ಮಾತಾಡುತ್ತಾ ಸಂಜೆ ಹೊತ್ತು ಸ್ವಲ್ಪ ನಮ್ಮ ಮನೆ ಕಡೆ ಗಮನ ಇಡಿ ಆಯ್ತಾ ,ನಮ್ಮಕ್ಕಳು ಮಾತ್ರ ಇರುತ್ತಾರೆ “ಹೇಳಿ ಹೇಳಿದವು .

ಈ ಸಂದರ್ಭಲ್ಲಿ ಅವರ ನಡತೆಗೆ ಗೆಲ್ಲು ಇಲ್ಲದ್ದರೆ ಎಲೆ ಆಸರೆ ಆದರೂ ಹಿಡ್ಕೊಂಬದು ಹೇಳುವ ಮಾತು ಸರಿ ಹೋವುತ್ತು.ಅವಕ್ಕೆ ಹತ್ರೆ ಇಪ್ಪದು ಅವರ ಬಂಧು ಬಳಗವೇ .ಅವರದೇ ಸಂಬಂಧಿಕರು ಆಗಿಪ್ಪ ನೆರೆ ಕರೆಯೋರೆ .ಆದರೂ ಒಳುದೋರ ಹತ್ರೆ ಮನಸರ್ಥ ಅಲ್ಲದ್ದರೂ ಕೃತಕವಾಗಿ ಆದರೂ ಸ್ನೇಹ ಮಡಿಕ್ಕೊಮ್ಬಲೆ ಪ್ರಯತ್ನ ಮಾಡುತ್ತಾ ಇದ್ದವು .ಅವರ ಸಂಬಂಧಿಕರು ಇಲ್ಲದ್ದ ದಿನ ಅವರ ಮಕ್ಕಳ ಸುರಕ್ಷತೆಗೆ ಬೇರೆಯೋರ ಸಹಾಯ ಬೇಕಾಗಿ ಬಕ್ಕು ಹೇಳು ದೂರಾಲೋಚನೆ ಅದು .

ಇದರ ಗೆಲ್ಲು ಇಲ್ಲದ್ದರೆ ಎಲೆ ಆಸರೆ ಆದರೂ ಇರಲಿ ಹೇಳಿ ಸಂಬಂಧ ಎಲ್ಲರತ್ರೂ ಮಡಿಕ್ಕೊಳ್ಳಕ್ಕು ಆರ ಸಹಾಯ ಆರಿನ್ಗೆ ಬೇಕಾವುತ್ತು ಹೇಳಿ ಹೇಳುಲೆಡಿಯ,ಕೆಲವು ಸರ್ತಿ ನಂಬಿದೋರು ಕೈ ಕೊಡುವ ಸಾಧ್ಯತೆದೆ ಇರುತ್ತು .ಹಾಂಗಾಗಿ ಎಲ್ಲೋರತ್ರೆ ಸ್ನೇಹ ಮಡಿಕ್ಕೊಳ್ಳಕ್ಕು ಹೇಳಿ ಬುದ್ಧಿ ಮಾತು ಹೇಳುವ ಸಂದರ್ಭಲ್ಲಿಯೂ ಇದರ ಬಳಕೆ ಮಾಡುತ್ತವು .

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 8 ಒಪ್ಪಂಗೊ

 1. ಯಮ್.ಕೆ.

  ಅಲ್ಲಿ ಚಿಲಕ ಬರಹ ನೋಡಿದರೆ ಇಲ್ಲಿ ನೆರೆಹೊರೆ!. ಎರಡೂ ಹ್ಯಾ೦ಡ್ ,ಪ್ರಾಕ್ಟೀಸ್ ?

  [Reply]

  ಲಕ್ಷ್ಮಿ ಜಿ.ಪ್ರಸಾದ

  ಲಕ್ಷ್ಮೀ ಜಿ ಪ್ರಸಾದ Reply:

  ಒಹ್ !ಎನಗೆ ಚಿಲಕ ಹೇಳಿರೆ ಎಂತದು ಹೇಳಿ ಪಕ್ಕನೆ ತಲೆಗೆ ಹೋತಿಲ್ಲೆ ಮತ್ತೆ ಎನ್ನ ಇಂದ್ರಣ ಕನ್ನಡ ಪ್ರಭಲ್ಲಿ ಬಂದ “ಭಾರತದ ಜನಪದರಲ್ಲಿ ಲೈಂಗಿಕ ಶಿಕ್ಷಣ ಇತ್ತೆ ?ಲೇಖನಲ್ಲಿ ಬಂದ ಚಿಲಕ್ (ಬಸ್ತರ್ ನ ಮುರಿಯ ಜನಾಂಗದ ಯುವಕ )ಹೇಳಿ ತಲೆಗೆ ಹೋತು .ಓದಿ ಪ್ರೋತ್ಸಹಿಸುತ್ತಿಪ್ಪ ನಿಂಗೊಗೆ ಧನ್ಯವಾದಂಗ ಯಂ ಕೆ ಅಣ್ಣ ,ನಿಂಗಳ ಎಲ್ಲರ ಪ್ರೋತ್ಸಾಹ ಎನ್ನ ಬರವ ಹುಮ್ಮಸ್ಸಿನ (ಗೀಳು ?ಮರ್ಲು ?) ಹೆಚ್ಚಿಸುತ್ತು ಧನ್ಯವಾದಂಗ

  [Reply]

  VA:F [1.9.22_1171]
  Rating: 0 (from 0 votes)
 2. K.Narasimha Bhat Yethadka

  ನೀರಿಲ್ಲಿ ಮುಂಗುವವಂಗೆ ಹುಲ್ಲು ಕಡ್ಡಿಯ ಆಸರೆಯಾದರೂ ಅಕ್ಕು ಹೇಳ್ತವಲ್ಲದೋ?

  [Reply]

  ಲಕ್ಷ್ಮಿ ಜಿ.ಪ್ರಸಾದ

  ಲಕ್ಷ್ಮೀ ಜಿ ಪ್ರಸಾದ Reply:

  ಅಪ್ಪು ಸುಮಾರಾಗಿ ಇದೇ ಅರ್ಥಲ್ಲಿ ಬಳಕೆ ಆವುತ್ತು ,ಧನ್ಯವಾದಂಗ ನರಸಿಂಹಣ್ಣ

  [Reply]

  VA:F [1.9.22_1171]
  Rating: 0 (from 0 votes)
 3. ಗೋಪಾಲಣ್ಣ
  GOPALANNA

  ಲಕ್ಷ್ಮಿ ಅಕ್ಕ ಹಳೆ ಮಾತುಗಳ ನೆನಪು ಮಾಡುದು ಲಾಯಕ ಆವುತ್ತು. ಬಸ್ತರ್ ಲೇಖನವೂ ಓದಿದ್ದೆ. ಭಾರತಲ್ಲಿ ಕೆಲವು ಬುಡಕಟ್ಟುಗಳ ಆಚಾರ ವಿಚಿತ್ರ.

  [Reply]

  ಲಕ್ಷ್ಮಿ ಜಿ.ಪ್ರಸಾದ

  ಲಕ್ಷ್ಮೀ ಜಿ ಪ್ರಸಾದ Reply:

  ನಿಂಗ ಎಲ್ಲ ಎನ್ನ ಲೇಖನವ ಓದಿದ್ದಿ ಹೇಳಿ ತಿಳುದು ತುಂಬಾ ಕೊಶಿ ಆತು ಎನಗೆ ನಿಂಗಳ ಪ್ರೋತ್ಸಾಹಕ್ಕೆ ಆನು ಅಭಾರಿ ಗೋಪಾಲಣ್ಣ ,ಧನ್ಯವಾದಂಗ

  [Reply]

  VA:F [1.9.22_1171]
  Rating: 0 (from 0 votes)
 4. ವಿಜಯತ್ತೆ

  ‘ಹೂಗು ಇಲ್ಲದ್ದಲ್ಲಿ ಹೂಗಿನ ಎಸಳಾದರೂ ‘ ಹೇಳ್ವದು ನೆಂಪಾತು ಲಕ್ಷ್ಮೀ

  [Reply]

  ಲಕ್ಷ್ಮಿ ಜಿ.ಪ್ರಸಾದ

  ಲಕ್ಷ್ಮೀ ಜಿ ಪ್ರಸಾದ Reply:

  ಅಪ್ಪು ವಿಜಯಕ್ಕ ಅದು ಇದಕ್ಕೆ ಸಮಾನಾರ್ಥಕವಾಗಿ ಬಳಕೆ ಆವುತ್ತು

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಗಣೇಶ ಮಾವ°ಜಯಗೌರಿ ಅಕ್ಕ°ಬೊಳುಂಬು ಮಾವ°ಬಂಡಾಡಿ ಅಜ್ಜಿಅಕ್ಷರದಣ್ಣವಿನಯ ಶಂಕರ, ಚೆಕ್ಕೆಮನೆಪುಟ್ಟಬಾವ°ದೊಡ್ಮನೆ ಭಾವವಿದ್ವಾನಣ್ಣಕೆದೂರು ಡಾಕ್ಟ್ರುಬಾವ°ವೇಣಿಯಕ್ಕ°ಚೂರಿಬೈಲು ದೀಪಕ್ಕಡಾಮಹೇಶಣ್ಣವಿಜಯತ್ತೆವೆಂಕಟ್ ಕೋಟೂರುವಸಂತರಾಜ್ ಹಳೆಮನೆಎರುಂಬು ಅಪ್ಪಚ್ಚಿಗೋಪಾಲಣ್ಣಯೇನಂಕೂಡ್ಳು ಅಣ್ಣಬೋಸ ಬಾವಕೇಜಿಮಾವ°ಶೇಡಿಗುಮ್ಮೆ ಪುಳ್ಳಿಕಜೆವಸಂತ°ವಾಣಿ ಚಿಕ್ಕಮ್ಮಮಾಲಕ್ಕ°ಅಕ್ಷರ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ