ಗಿಳಿ ಬಾಗಿಲಿಂದ – ತೆಗಲೆ ಕಂಠ

November 20, 2013 ರ 6:30 amಗೆ ನಮ್ಮ ಬರದ್ದು, ಇದುವರೆಗೆ 25 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

“ಅವ °ಎಂತಕ್ಕೂ ಆಗ° ,ಮಹಾ ತೆಗಲೆ ಕಂಠ° ಈ ಮಾತಿನ ಎಂಗಳ ಕಡೆ ತುಂಬಾ ಸರ್ತಿ ಕೇಳಿತ್ತಿದ್ದೆ .ಎಂತ ಕೆಲಸವನ್ನೂ ಸಸೂತ್ರ ಮಾಡದ್ದೋರ ಬಗ್ಗೆ ಮಾತಾಡುವಗ, ಬೈಯ್ವಗ ಈ ಮಾತಿನ
ಬಳಕೆ ಮಾಡ್ತವು ಎಂಗಳ ಕಡೆಯ ನಮ್ಮ ಭಾಷೆಲಿ .ಸಾಮಾನ್ಯವಾಗಿ ತುಂಬಾ ಉದಾಸೀನ ಪ್ರವೃತ್ತಿಯ ಸೋಮಾರಿಗಳ ಸ್ವಭಾವವ ಈ ಮಾತು ಸೂಚಿಸುತ್ತು.ಇದು ತುಳುವಿಲಿ ಕೂಡ ಚಾಲ್ತಿಲಿ ಇದ್ದು . ತುಳುವಿಲಿ “ಆಯೆ ಬಜಿ ತಿಗಲೆ ಕಂಟೆ” ಹೇಳಿ ಉದಾಸೀನದ ಮುದ್ದೆಗಳ ಬೈತ್ತವು .ಈ ನುಡಿಗಟ್ಟಿನ ಆನು ಸಣ್ಣಾದಿಪ್ಪಗಂದಲೇ ಕೇಳುತ್ತಾ ಬಂದಿದ್ದರೂ ಇದರ ಅರ್ಥ ಎಂತ ಹೇಳಿ ಎನಗೆ ನಿಜವಾಗಿಯೂ ತಲೆಗೆ ಹೋಗಿತ್ತಿಲ್ಲೆ .ಆ ಬಗ್ಗೆ ಒಂದೆರಡು ಸರ್ತಿ ಇದರ ಅರ್ಥ ಎಂಥಪ್ಪಾ ಹೇಳಿ ನೆನಪಪ್ಪಗ ಒಂದೆರಡು ಸರ್ತಿ ಯೋಚಿಸಿತ್ತಿದೆ .ಇದರ ಅರ್ಥ ಎಂತ ಹೇಳಿ ಏನ ತಲೆಗೆ ಹೋಗಿತ್ತಿಲ್ಲೆ. ಮತ್ತೆ ಹೆಚ್ಚು ಇದರ ಬಗ್ಗೆ ತಲೆ ಕೆಡುಸುಲೆ ಹೋಗಿಯೂ ಇತ್ತಿಲ್ಲೆ ಹೇಳುದು ಬೇರೆ ವಿಚಾರ .

ಓ ಮೊನ್ನೆ ಸ್ವಾತಂತ್ರ್ಯೋತ್ಸವದ ದಿನ ಉದಿಯಪ್ಪಗ ಬೇಗ 8 ಗಂಟೆಗೆ ಎತ್ತಕ್ಕಾದ ಕಾರಣ ಬೇಗ 5 ಗಂಟೆಗೆ ಎದ್ದು ಗಡಿ ಬಿಡಿ ಮಾಡಿಕೊಂಡು ಹೆರಟು ೬ ಗಂಟೆಗೆ ಬಸ್ಸು ಹತ್ತಿದೆ .ಎನ್ನ ಹಾಂಗೆ ದೂರಂದ ಶಾಲೆ ಕಾಲೇಜಿ೦ಗೆ ಹೋಗಿ ಬಪ್ಪ ಸುಮಾರು ಜನಂಗ ಮಾಸ್ತ್ರಕ್ಕ ಟೀಚರುಗ ಆ ಬಸ್ಸಿಲಿ ಇತ್ತಿದವು .ಎಲ್ಲರೂ ಎನ್ನ ಹಾಂಗೆ ಉದಿಯಪ್ಪಗ ೪-೫ ಗಂಟೆಗೆ ಎದ್ದು ತಯಾರಾಗಿ ೬ ಗಂಟೆಗೆ ಬಸ್ಸು ಹತ್ತಿದೋರು .
ಬೆಂಗಳೂರಿಂದ ದೊಡ್ಡ ಬಳ್ಳಾಪುರ ಹೋಪಲೆ ಸುಮಾರು ಒಂದು ಒ೦ದೂವರೆ ಗಂಟೆ ಬೇಕಾವುತ್ತು .ಆ ಬಸ್ಸಿಲಿದ್ದೊರು ಹೆಚ್ಚಿನೋರು ದೊಡ್ಡ ಬಳ್ಳಾಪುರಕ್ಕೆ ಹೊಪೋರು . ಉದಿಯಪ್ಪಗಣ ಹೊತ್ತು ಆದ ಕಾರಣ ಎಲ್ಲೊರಿಂಗು ಸೀಟ್ ಸಿಕ್ಕಿತ್ತು .ಬಸ್ಸು ಹೆರಟು ೫-೧೦ ನಿಮಿಷಕ್ಕೆ ಎಲ್ಲರೂ ಚಂದಕ್ಕೆ ಕೂದಲ್ಲಿಯೇ ಬಸ್ಸಿಲಿಯೇ ಒರಗಿದವು !ಎನಗೆ ಬಸ್ಸಿಲಿ ಜಪ್ಪಯ್ಯ ಹೇಳ್ರೂ ಒರಕ್ಕು ಬತ್ತಿಲ್ಲೆ .

ಹಾಂಗೆ ಅಲ್ಲಿ ಇಲ್ಲಿ ಗೆಬ್ಬಾಯಿಸಿಕೊಂಡು ಇತ್ತಿದೆ.ಹಾಂಗೆ ಎಲ್ಲ ಕಡೆ ನೋಡುವಗ ಅಕ್ಕ ಪಕ್ಕ ಸುತ್ತ ಮುತ್ತ ಇಪ್ಪೋರೆಲ್ಲ ಒರಗಿದ್ದವು ! ಎಲ್ಲರ ಮೋರೆ ಬಗ್ಗಿಸಿ ಒರಗಿಕೊಂಡು ಇತ್ತಿದವು .ಎಲ್ಲರ ಗಡ್ಡ ಎದೆಗೆ ತಾಗಿಕೊಂಡು ಇದ್ದು !!!

ಕೂಡ್ಲೆ ಜ್ಞಾನೋದಯ ಆತು ಎನಗೆ ,ತೆಗಲೆ ಕಂಠ ಹೇಳಿರೆ ಎಂತ ಹೇಳಿ ತಲೆಗೆ ಹೋತು !

ತೆಗಲೆ=ಎದೆ ,ಕಂಠ =ಕೊರಳು ,ಕೊರಳು ಎದೆಗೆ ಬಗ್ಗಿ ಒರಗಿಕೊಂಡು ಇಪ್ಪದಕ್ಕೆ ತೆಗಲೆ ಕಂಠ ಹೇಳುದು! ಅಥವಾ ತೆಗಲೆಗೆ /ಎದೆಗೆ ಕೊರಳಿನ ಕಂತು ಹಾಕಿಕೊಂಡು /ನೇತು ಹಾಕಿಕೊಂಡು ಇಪ್ಪದು ಹೇಳುದೆ ತೆಗಲೆ ಕಂತೆ>ತೆಗಲೆ ಕಂಟೆ>ತೆಗಲೆ ಕಂಠ ಆಡಿಪ್ಪ ಸಾಧ್ಯತೆದೆ ಇದ್ದು! ಯಾವ ಕೆಲಸವೂ ಮಾಡದ್ದೆ ಉದಾಸೀನಂದ ಒರಕ್ಕು ತೂಗಿಕೊಂಡು ಇಪ್ಪೋರಿನ್ಗೆ ಒಪ್ಪುವ ಮಾತಿದು ,ಉದಾಸೀನದ ಮುದ್ದೆಗಳ ಬಗ್ಗೆ ಹೇಳುಲೆ ಇದಕ್ಕಿಂತ ಚಂದದ ಪದ ಬೇರೆಲ್ಲ್ಲಿಯೂ ಸಿಕ್ಕ .ನಮ್ಮ ಭಾಷೆಯ ಈ ಒಂದು ನುಡಿಗಟ್ಟಿನ ಸೊಗಸಿಂಗೆ ಆನು ನಿಜವಾಗಿಯೂ ಮಾರು ಹೋದೆ,ನಿಂಗೊಗೆ ಎಂತ ಅನ್ಸುತ್ತು ?ಈ ತೆಗಲೆಕಂಠ ಹೇಳುವ ನುಡಿಗಟ್ಟು ನಿಂಗಳ ಕಡೆ ನಮ್ಮ ಭಾಷೆಲಿ ಇದ್ದ ?ಅಥವಾ ಇದೆ ಅರ್ಥ ಕೊಡುವ ನುಡಿಗಟ್ಟು ಬೇರೆ ಯಾವುದಾದರು ಬಳಕೆಲಿ ಇದ್ದಾ ?ತೆಗಲೆ ಕಂಠ ಹೇಳ್ರೆ ಇದೇ ಅರ್ಥ ಆದಿಕ್ಕು ಅಲ್ಲದ ?ತಿಳುದೋರು ನಿಂಗ ಎಲ್ಲ ಎಂತ ಹೇಳ್ತೀರಿ ?ನಿಂಗಳ ಅಭಿಪ್ರಾಯ ತಿಳುಸಿ

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 25 ಒಪ್ಪಂಗೊ

 1. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  {ಇದು ಕೇವಲ ಉಹೆ ಅಲ್ಲ ,ವಿಶ್ಲೇಷಣೆ ಕೂಡ } -> ಲಕ್ಷ್ಮಿ ಅಕ್ಕನ ಮಾತಿಂಗೆ ಎನ್ನ ಸಹಮತ ಇದ್ದು. ಅದಕ್ಕೆ ಪೂರಕವಾಗಿ ಕೊಟ್ಟ ಮಾತುಗೊ ತರ್ಕಬದ್ಧವಾಗಿದ್ದು ಹೇಳಿ ಎನ್ನ ಅನಿಸಿಕೆ. ಈ ನುಡಿಗಟ್ಟಿಂಗೆ ಎನ್ನ ವಿಶ್ಲೇಷಣೆ ಕೆಲ ಕೊಟ್ಟಿದೆ.
  ಯಾವ ಕೆಲಸವೂ ಮಾಡದ್ದೆ ಉದಾಸೀನಂದ ಒರಕ್ಕು ತೂಗಿಕೊಂಡು ಇಪ್ಪದು ಸೋಮಾರಿತನದ ಲಕ್ಷಣ ಹೇಳುದು ಸಾರ್ವತ್ರಿಕವಾಗಿ ಅನ್ವಯಿಸುಲೆ ಸಾಧ್ಯ ಇಲ್ಲೆ. ದೈಹಿಕವಾಗಿ ಅತಿಯಾದ ಬಚ್ಚೆಲು ಆಗಿಪ್ಪಗ,ಅಥವಾ ಇರುಳು ಒರಕ್ಕು ಕೆಟ್ಟಿಪ್ಪಗ ಮರದಿನ ಕೂದಲ್ಲಿಯೇ ಒರಕ್ಕು ತೂಗುಗು. ಅದು ಸೋಮಾರಿಯ ಲಕ್ಷಣ ಅಲ್ಲನ್ನೆ. ನಮ್ಮಲ್ಲಿ ಚುರುಕು ಕಮ್ಮಿ ಇಪ್ಪವಕ್ಕೆ”ಅವಂಗೆ ಬೊಜ್ಜು ಬೆಳದ್ದು” ಹೇಳ್ತ ಕ್ರಮವೂ ಇದ್ದನ್ನೆ.ಬೊಜ್ಜು ಅತಿಯಾಗಿ ತೆಗಲೆಯೂ ಕಂಠವೂ ಒಂದೇ ಆದ ನಮುನೆ ಕಾಂಬಷ್ಟು ದೇಹ ಬೆಳದಪ್ಪಗ,ಹೇಳಿರೆ ತೆಗಲೆಯೂ ಉಬ್ಬಿ, ಗಲ್ಲವೂ ಕೆಳಾಣ ಭಾಗಲ್ಲಿ ತುಂಬಿ ತೆಗಲೆಗೆ ಮುಟ್ಟುವ ಹಾಂಗೆ ಬೊಜ್ಜು ಬೆಳದಪ್ಪಗ, ತೆಗಲೆಯೂ ಕಂಠವೂ ಒಂದೇ ಆದ ಹಾಂಗೆ ಕಾಣುತ್ತು,ಅಥವಾ ತೆಗಲೆಯೇ ಕಂಠ ಆದ್ದದೋ ಹೇಳ್ತ ಭ್ರಮೆ ಬತ್ತು(ಕಂಠ ಕಾಣೆಕ್ಕಾರೆ ತಲೆ ನೆಗ್ಗೆಕ್ಕು).ಆ ಸ್ಥಿತಿಲಿಪ್ಪ ವೆಗ್ತಿಯ ಕಾಂಬಗಳೆ ಸೋಮಾರಿತನ ಸಹಜವಾಗಿಯೇ ಎದ್ದು ಕಾಂಗು.ಹಾಂಗಾಗಿ ಅತಿಯಾಗಿ ಬೊಜ್ಜು ಬೆಳದವನ ಸೊಮಾರಿತನವ ಕಂಡೇ ಈ ‘ತೆಗಲೆ ಕಂಠ’ನುಡಿಗಟ್ಟು ಉತ್ಪತ್ತಿಯಾದ್ದದು ಆಗಿಕ್ಕು.

  [Reply]

  ಲಕ್ಷ್ಮಿ ಜಿ.ಪ್ರಸಾದ

  Dr laxmi prasad Reply:

  ಅಪ್ಪು ತೆಕ್ಕುಂಜ ಕುಮಾರ ಮಾವ° ತೆಗಲೆಯೇ ಕಂಠ ಅರ್ಥಾತ್ ಎರಡು ಒಂದೇ ಆಗಿಪ್ಪೋರಿನ್ಗೆ ಹೀಂಗೆ ಈ ಪದ ಬಳಕೆ ಅನ್ವಯ ಆವುತ್ತು .

  ಒಂದು ಒಳ್ಳೆ ಪಾಯಿಂಟ್ ಇದು,ಒಳ್ಳೆ ವಿಶ್ಲೇಷಣೆ, ಎನಗೆ ತಲೆಗೆ ಹೋಗಿತಿಲ್ಲೆ,

  [Reply]

  VA:F [1.9.22_1171]
  Rating: 0 (from 2 votes)
 2. ಬೊಳುಂಬು ಮಾವ°
  ಬೊಳುಂಬು ಗೋಪಾಲ್

  ತೆಗಲೆ ಕಂಠ ಎನಗೆ ಹೊಸ ಶಬ್ದವೇ. ಲಕ್ಷ್ಮಿ ಅಕ್ಕನ ಸಂಶೋಧನೆಗೆ ಕುಮಾರ ಮಾವನ ಪೂರಕ ಮಾತುಗೊ ಸರಿಯಾಯಿದು. ಹಾಂಗೆ
  ಅವು ಹೇಳಿದ ಅದೇ ಅರ್ಥ ಆಯಿಕ್ಕು ಹೇಳಿ ಅನಿಸುತ್ತು. ಬೇರೆಯವರ ತೆಗಳುತ್ತ, ಆನೇ ದೊಡ್ಡ ಜೆನ ಹೇಳುವ ಕಂಠದವ (ತೆಗಳುಕಂಠ) ಹೇಳಿ ಅರ್ಥ ಮಾಡ್ಳೆಡಿಗೊ. ತಿಗಲೆ ಹೇಳುವ ತುಳು ಶಬ್ದಕ್ಕೆ, ಕಂಠ ಹೇಳುವ ಸಂಸ್ಕೃತ ಶಬ್ದ ಸೇರುಸಿದ್ದದು ಸರಿ ಬತ್ತೋ ಹೇಳಿ ಎನಗೆ ಗೊಂತಿಲ್ಲೆ. ತಿಗಲೆ ಕೊರಳ ಹೇಳಿದರೆ ಸರಿ ಅಕ್ಕಷ್ಟೆ, ಎಂತ ಹೇಳ್ತಿ ?

  [Reply]

  ಲಕ್ಷ್ಮಿ ಜಿ.ಪ್ರಸಾದ

  Dr laxmi prasad Reply:

  ಕನ್ನಡಲ್ಲಿ ಸಂಸ್ಕೃತ ಕನ್ನಡ ಪದ ಸೇರಿ ಅರಿ ಸಮಾಸ ಆಗಿಪ್ಪ ಅನೇಕ ಪದಂಗ ಇದ್ದು ಇದು ಕನ್ನಡದ ವಿಶಿಷ್ಟ ಲಕ್ಷ್ನಣ ಗಳಲ್ಲಿ ಒಂದು.ಹಾಂಗೆ ತುಳು ಸಂಸ್ಕೃತ ಸೇರಿ ಸಮಾಸ ಆಡಿಪ್ಪ ಸಾಧ್ಯತೆ ಇದ್ದು

  ಇಲ್ಲಿ ಇನ್ನೊಂದು ಸಾಧ್ಯತೆಯೂ ಇದ್ದು ತಿಗಲೆ ಕಂತೆ (ಕಂತೆ ಹೇಳಿರೆ ನೇತು ಹಾಕು ಹೇಳುವ ಅರ್ಥ ಇತ್ತು) ಹೇಳುದು ಸಂಸ್ಕ್ರುತೀಕರಣಗೊಂಡು ತೆಗಲೆ ಕಂಠ ಆಡಿಪ್ಪ ಸಾಧ್ಯತೆ ಇದ್ದು

  ನಿಂಗಳ ಅಭಿಪ್ರಾಯ ತಿಳುಸಿದ್ದಕ್ಕೆ ಧನ್ಯವಾದಂಗ ಬೊಳುಂಬು ಮಾವ

  [Reply]

  VA:F [1.9.22_1171]
  Rating: 0 (from 0 votes)
 3. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ತೆಗಲೆ ಕಂಡು-ಹಿಂದೆ ಸರಿವ ಹೇಡಿ,ಎದೆಕೊಡದ ಕಳ್ಳ ಅಂದರೆ ಕೆಲಸದ ಜವಾಬ್ದಾರಿ ತೆಕ್ಕೊಳದ್ದವ-ಆಗಿಕ್ಕು.ಅದರಿಂದಲೇ ತೆಗಲೆ ಕಂಠ ಬಂದದಾದಿಕ್ಕು.
  ನಮ್ಮ ಭಾಷೆಲಿ ತುಳು ಶಬ್ದ ತುಂಬಾ ಇದ್ದು.’ಏನೇ ಕಷ್ಟ ಬಂದರೂ ಆನು ತೆಗಲೆ ಕೊಡುವೆ’ ,-ಇಲ್ಲಿ ಗಮನಿಸಿ,ತೆಗಲೆ ಕೊಡುದು ಹೇಳಿರೆ ಭಾರ ಹೊರುವ ,ಜವಾಬ್ದಾರಿ ತೆಕ್ಕೊಂಬ ಧೈರ್ಯ ತೋರುಸುದು.ಹೀಂಗೆ ಮಾಡದ್ದವ ಕಳ್ಳ /ಕಂಡು.
  ಮತ್ತೆ ಕನ್ನಡಲ್ಲೂ ಕೆಲಸಗಳ್ಳ-ಹೇಳುವ ಶಬ್ದ ಗಮನಿಸಿ.
  ಹೀಂಗೆ ತೀರ್ಮಾನಕ್ಕೆ ಬಪ್ಪಲಕ್ಕೋ ಹೇಳಿ ತೋರುತ್ತು. ಆನು ಶಬ್ದವ್ಯುತ್ಪತ್ತಿ ತಿಳುದವ ಅಲ್ಲ.ವಿಚಾರ ಮಾಡುವಾಗ ಹೀಂಗೆ ಕಾಣುತ್ತು.

  [Reply]

  ಶ್ಯಾಮಣ್ಣ

  ಶ್ಯಾಮಣ್ಣ Reply:

  ಎಸ್.ಕೆ.ಗೋಪಾಲಕೃಷ್ಣ ಭಾವ ಹೇಳಿದ್ದಕ್ಕೆ ಎನ್ನ ವೋಟು…

  [Reply]

  VA:F [1.9.22_1171]
  Rating: 0 (from 0 votes)
  ಲಕ್ಷ್ಮಿ ಜಿ.ಪ್ರಸಾದ

  Dr laxmi prasad Reply:

  ಅಪ್ಪು ತೆಗಲೆ ಕಂಡು >ತೆಗಲೆ ಕಂಡೆ >ಕಂಟೆ >ಕಂಠ ಆಡಿಪ್ಪ ಸಾಧ್ಯತೆದೆ ಇದ್ದು .

  ತೆಗಲೆ ಕಂಡು ಹೇಳುದೂ ಬಳಕೆಲಿ ಇದ್ದು ಎನಗೆ ಇದರ ಬರವಗ ನೆನಪಿತ್ತಿಲ್ಲೆ .ಇಲ್ಲಿ ನಿಂಗ ಬರದ್ದರ ಓದಿ ಅಪ್ಪಗ ಅಂಥ ಬಳಕೆ ಇಪ್ಪದು ನೆನಪಾತು ಎನಗೆ.

  ಈ ಬಗ್ಗೆ ಚರ್ಚಿಸಿ ಮಾಹಿತಿ ,ಮಾರ್ಗ ದರ್ಶನ ಮಾಡಿದ ಎಲ್ಲೋರಿಂಗು ಧನ್ಯವಾದಂಗ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೆದೂರು ಡಾಕ್ಟ್ರುಬಾವ°ಶುದ್ದಿಕ್ಕಾರ°ಪುತ್ತೂರುಬಾವಕೊಳಚ್ಚಿಪ್ಪು ಬಾವಡಾಗುಟ್ರಕ್ಕ°ಶೇಡಿಗುಮ್ಮೆ ಪುಳ್ಳಿಬೋಸ ಬಾವಶಾ...ರೀಕಜೆವಸಂತ°ತೆಕ್ಕುಂಜ ಕುಮಾರ ಮಾವ°ಕೇಜಿಮಾವ°ದೊಡ್ಮನೆ ಭಾವಬೊಳುಂಬು ಮಾವ°ರಾಜಣ್ಣಸುವರ್ಣಿನೀ ಕೊಣಲೆಸರ್ಪಮಲೆ ಮಾವ°ಕಳಾಯಿ ಗೀತತ್ತೆವೇಣೂರಣ್ಣವಿನಯ ಶಂಕರ, ಚೆಕ್ಕೆಮನೆಮಾಲಕ್ಕ°ಅನಿತಾ ನರೇಶ್, ಮಂಚಿಅನುಶ್ರೀ ಬಂಡಾಡಿಯೇನಂಕೂಡ್ಳು ಅಣ್ಣಪುಟ್ಟಬಾವ°ಪೆರ್ಲದಣ್ಣನೆಗೆಗಾರ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ