ಗಿಳಿ ಬಾಗಿಲಿಂದ -ಪೊಟ್ಟು ಕಡಮ್ಮೆ

April 30, 2014 ರ 6:00 amಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮೊನ್ನೆ ಒಂದಿನ ಬೆಂಗಳೂರಿಂಗೆ ರೈಲಿಲಿ ಬಪ್ಪಗ ಒಬ್ಬ ಹೆಮ್ಮಕ್ಕಳ ನೋಡಿದೆ .ಅವು ಟೀಚರ್ ಆಗಿರೆಕ್ಕು ,ಒಂದು ವಿದ್ಯಾರ್ಥಿನಿಯೂ ಇತ್ತು ,ಅದರ ಯಾವುದೊ ಕಾರ್ಯಕ್ರಮಕ್ಕೆ ಬಹುಶ ಸ್ಕೌಟ್ /ಗೈಡ್ ತರಬೇತಿಗೆ ಕರಕೊಂಡು ಹೋಪದು ಆಗಿರೆಕ್ಕು .ಆ ಕೂಸಿನ್ಗೆ ಒರಕ್ಕು ತೂಗಿ ಕಣ್ಣು ಮುಚ್ಚಿ ಮುಚ್ಚಿ ಹೋಗಿಕೊಂಡು ಇತ್ತು .ಇರುಳು ಹನ್ನೊಂದು ಗಂಟೆ ಕಳುದರೂ ಈ ಟೀಚರ್ ಅದರತ್ತರೆ ಅದರ ಹಿಂದಿನ ಕಾರ್ಯನ್ಗಳ ಬಗ್ಗೆ ,ವಿದ್ಯಾರ್ಥಿಗಳ ಹಿಡಿತಲ್ಲಿ ಮಡುಗುಲೆ ಎಷ್ಟು ಕಷ್ಟ ಇದ್ದು ಹೇಳುದರ ಬಗ್ಗೆ ..ಹೀಂಗೆ ಕೊಚ್ಚಿ ಕೊಳ್ಳುತ್ತಾನೇ ಇತ್ತು .ಅಲ್ಲಿ ಇದ್ದ ಬೇರೆಯೋರಿಂಗೂ ಒರಕ್ಕು ಇಲ್ಲೆ ಇವರ ದೆಸೆಲಿ !
ಅವರ ನೋಡಿ ಅಪ್ಪಗ ಎನಗೆ ಇದರ ಪೊಟ್ಟು ಕಡುಮ್ಮೆ ಹೇಳಿ ಹೇಳುದು ಎಂತರ ಹೇಳಿ ತಲೆಗೆ ಹೋತು .ತೀರಾ ಪ್ರದರ್ಶನ ಮಾಡಿಕೊಂಬ ,ತೀರಾ ಅಹಂಕಾರಿಗಳ ಬಗ್ಗೆ ಕೋಳ್ಯೂರು ಕಡೆ
“ಅದರ ಕೆಲಸದ ಪೊಟ್ಟು ಕಡಮ್ಮೆಗಿಷ್ಟು ಉಪ್ಪು ಹಾಕಲಿ,ಅವನ ಪೈಸೆಯ ಪೊಟ್ಟು ಕಡುಮ್ಮೆಗಿಷ್ಟು ಮಣ್ಣು “ಹೇಳುವ ಮಾತು ಬಳಕೆಲಿ ಇದ್ದು ..
ಸಣ್ಣ ಪುಟ್ಟ ಹುದ್ದೆ ಕೆಲಸಂಗಳಲ್ಲಿ ಇಪ್ಪೋರು ತಾನು ಮಹಾ ಹೇಳುವ ಹಾಂಗೆ ತೋರ್ಸಿಗೊಂಡು ತುಂಬಾ ಏಕರೆ ,ಹಾಂಕಾರ ತೋರ್ಸಿದರೆ ಅವಕ್ಕೆ ಹಿಂದಂದ ಪ್ರಯೋಗ ಅಪ್ಪ ತಿರಸ್ಕಾರದ ಮಾತು ಇದು .

ಪೊಟ್ಟು ಕಡಮ್ಮೆ ಯ ,ಪೊಟ್ಟು ಕಡುಮ್ಮೆ ,ಪೊಟ್ಟು ಕಡುಮೆ ಹೇಳಿಯೂ ಬಳಕೆ ಮಾಡುತ್ತವು.
ಇದು ತುಳುವಿಲಿಯೂ ಬಳಕೆಲಿ ಇದ್ದು ಆಯಿನ ಪೊಟ್ಟು ಕಡುಮ್ಮೆಗೀತು ಉಪ್ಪು ಪಾಡಡು ಹೇಳಿ ಅಲ್ಲಿ ಬಳಕೆ ಅವುತ್ತು .
ತನ್ನ ಬಿಟ್ರೆ ಆರೂ ಇಲ್ಲೆ ಹೇಳಿ ಟೆಂಕಾರಲ್ಲಿ ಮೆರವೋರ ಬಗ್ಗೆ ಬಳಕೆ ಅಪ್ಪ ಸೂಕ್ತವಾದ ಮಾತು ಇದು
ಪೊಟ್ಟು ಹೇಳಿರೆ ಹೊಟ್ಟು,ಸಾರ ಇಲ್ಲದ್ದು ಹೇಳುವ ಅರ್ಥ .ಕಡಮ್ಮೆ/ಕಡುಮ್ಮೆ/ಕಡಮೆ ಹೇಳಿದರೆ ಎಂತದು ?
ಗರಿಮೆ ಹೇಳುದೆ ಕಡುಮೆ ಹೇಳಿ ಬದಲಾದಿಕಪ್ಪ ಸಾಧ್ಯತೆ ಇದ್ದು .ಅಥವಾ ಅಹಂ /ಅಹಮಿಕೆ ಹೇಳುದು ಕಡುಮೆ ಹೇಳಿ ಆಡಿಪ್ಪ ಸಾಧ್ಯತೆ ಇದ್ದು .ಆದರೂ ಪೊಟ್ಟು ಗರಿಮೆ ಹೇಳ್ರೆ ವ್ಯರ್ಥ>ಹೊಟ್ಟು ಗರಿಮೆ ಪದ ಬಳಕೆಯಿಂದ ಬಂದಿಪ್ಪ ಸಾಧ್ಯೆತೆ ಹೆಚ್ಚು ಹೇಳಿ ಎನಗೆ ಅನ್ಸುತ್ತು ,ನಿಂಗ ಎಲ್ಲ ಎಂತ ಹೇಳ್ತಿ ?ಈ ರೀತಿಯ ಬಳಕೆ ನಮ್ಮ ಭಾಷೆ ಬೇರೆ ಕಡೆಲಿಯೂ ಇದ್ದ ?

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಪೊಟ್ಟುಕಡಮ್ಮೆ ಹೇಳ್ಸರ ಕೇಟಿದೆ. ಅದು ಎಂತರ ಹೇಳ್ಸು ಈಗ ಗೊಂತಾತಟ್ಟೆ.

  [Reply]

  VA:F [1.9.22_1171]
  Rating: 0 (from 0 votes)
 2. ಯಮ್.ಕೆ

  ನಾವು ಪ್ರತಿ ಸರ್ತಿ ಎಲ್ಲರ ಪೊಟ್ಟುಕಡಮ್ಮೆ ಕೇಟಿಕ್ಕಿ ವೋಟಾಹಾಕುದ್.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶೇಡಿಗುಮ್ಮೆ ಪುಳ್ಳಿಡಾಗುಟ್ರಕ್ಕ°ಪಟಿಕಲ್ಲಪ್ಪಚ್ಚಿವಿಜಯತ್ತೆಶಾಂತತ್ತೆಶೀಲಾಲಕ್ಷ್ಮೀ ಕಾಸರಗೋಡುಬೊಳುಂಬು ಮಾವ°ಪುಣಚ ಡಾಕ್ಟ್ರುಅಡ್ಕತ್ತಿಮಾರುಮಾವ°vreddhiದೊಡ್ಮನೆ ಭಾವಜಯಶ್ರೀ ನೀರಮೂಲೆಸರ್ಪಮಲೆ ಮಾವ°ಪವನಜಮಾವಹಳೆಮನೆ ಅಣ್ಣಶುದ್ದಿಕ್ಕಾರ°ಕಾವಿನಮೂಲೆ ಮಾಣಿಕೇಜಿಮಾವ°ಕಳಾಯಿ ಗೀತತ್ತೆನೆಗೆಗಾರ°ತೆಕ್ಕುಂಜ ಕುಮಾರ ಮಾವ°ಅಕ್ಷರ°ನೀರ್ಕಜೆ ಮಹೇಶದೊಡ್ಡಭಾವಶರ್ಮಪ್ಪಚ್ಚಿಚುಬ್ಬಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ