ಪತ್ತನಾಜೆ ಕಳ್ತು

May 28, 2011 ರ 8:50 amಗೆ ನಮ್ಮ ಬರದ್ದು, ಇದುವರೆಗೆ 12 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಪತ್ತನಾಜೆ ಕಳುದುಬಪ್ಪ ಮಳೆಗಾಲವ ಸ್ವಾಗತಿಸುವ ಹುಂಡುಪದ್ಯ

ಪತ್ತನಾಜೆಯು ಕಳ್ತು ಮಳೆಗಾಲ ಬಂತು
ಮುತ್ತಿತ್ತು ಮುಗಿಲೆಲ್ಲ ಮಬ್ಬು ಕವಿದತ್ತು || 1 ||

ಮೂಲೆ ಮೂಲೆಲಿ ಬಿದ್ದ ಕೊಡೆ ಎಲ್ಲಿ ಹೋತು?|
ಮುಟ್ಟಾಳೆ,ಟೊಪ್ಪಿಗಳ ಉದ್ದಿಡೆಕ್ಕಿತ್ತು || 2 ||

ಶಾಲೆ ಚೀಲವ ತನ್ನಿ ಪುಸ್ತಕವ ತುಂಬಿ
ಸಮವಸ್ತ್ರ,ಮಳೆಯಂಗಿ ಎಲ್ಲವನು ತುಂಬಿ || 3||

ಒಣಗಿದ್ದ ಹಪ್ಪಳವ ಒಳ ಮಡುಗಿ ಬೇಗ
ಅಡಕೆ,ತೆಂಗಿನಕಾಯಿ ಅಟ್ಟಕೇರ್ಸೀಗ || 4 ||

ಸೌದಿ ಮಡ್ಲುಗಳೆಲ್ಲ ಹಾಕು ಕೊಟ್ಟಗೆಗೆ
ನೀರಕಣಿಗಳ ಮಣ್ಣು ಬಿಡಿಸು ಅತ್ಲಾಗೆ || 5 ||

ಓಡಿನೆಡಕ್ಕಿಲಿ ನೀರು ಸೋರದ್ದ ಹಾಂಗೆ
ಹಾಳೆ ತುಂಡಿನ ಮಡುಗು ಮನೆಯ ಮಾಡಿಂಗೆ || 6 ||

ಹಶುಗೊಕ್ಕೆ ತಿಮ್ಮಪ್ಪ  ಬೈಹುಲ್ಲು ತರಲಿ
ಹಟ್ಟಿ ಅಟ್ಟದಿ  ತುಂಬ ಒತ್ತಿ ತುಂಬಿಸಲಿ || 7 ||

ಹೀಂಗಿಕ್ಕು ಹಳ್ಳಿ,ಮಳೆಗಾಲದಟ್ಟಣೆಲಿ
ಮಳೆರಾಯ ಬಂದ ಇದ!ಈಗಲೇ ಇಲ್ಲಿ || 8 ||

~*~*~*~

ಪತ್ತನಾಜೆ ಕಳ್ತು, 5.0 out of 10 based on 2 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 12 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಲಾಯಕ ಆಯ್ದು ಗೋಪಾಲಣ್ಣ. ದೃಶ್ಯ ಪದ್ಯ ರೂಪಲ್ಲಿ ಕಂಡ ಹಾಂಗೆ ಆತು. ಒಪ್ಪ.

  ತಪ್ಪಲೆ ಬಾಲ್ದಿ ಮಡುಗಲೆ ಇಲ್ಯೋ . ಹಾಳೆಲಿ ನಿವೃತ್ತಿ ಆವ್ತೋ !. ಫೋನ್ ರಿಸೀವರ್ ತೆಗದು ಮಡುಗು, ಮೊಬೈಲ್ ಸ್ವಿಚ್ ಆಫ ಮಾಡಿ ಬಿಡು, ಕಡ್ಪ ಕತ್ತಿ ಜಾಲಿಂಗೆ ಇಡುಕ್ಕು , ಕುರ್ವೆ ಹಿಡ್ಕೊಂಡು ಓಡು ಮಾವಿನ ಹಣ್ಣು ಹೆರ್ಕಲೆ ಬೇಗ ಹೇಳಿ ಗುಡುಗು ಸೆಡ್ಳು ಗಾಳಿ ಬೀಸಲೆ ಸುರುವಪ್ಪಗ ಹೇಳ್ವೋ ಅಪ್ಪೋ.

  [Reply]

  VA:F [1.9.22_1171]
  Rating: 0 (from 0 votes)
 2. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ

  ಕತೆಗಾರ ಗೋಪಲಣ್ಣನ ನೋಡಿ ತಿಳ್ಕೊಂಡಾಯಿದು, ಈಗ ಕವಿ ಗೋಪಾಲಣ್ಣನ ಪರಿಚಯ ಆತು.
  ನಾವೆಲ್ಲೊರೂ ನೋಡಿ ಅನುಭವಿಸಿದ ವಿಚಾರಂಗಳ ಅತ್ಯಂತ ಸುಂದರವಾಗಿ ಕವನ ಬರದ ಗೋಪಾಲಣ್ಣಂಗೆ ಅಭಿನಂದನೆಗೊ. ಈ ಕವನ ಓದಿ ತುಂಬ ಖುಶಿ ಆತು.

  [Reply]

  ಗೋಪಾಲಣ್ಣ

  Gopalakrishna BHAT S.K. Reply:

  ಸಂತೋಷ.ಆನು ಕವಿ ಹೇಳುವಷ್ಟು ದೊಡ್ಡ ಕಾವ್ಯ ಬರೆದ್ದಿಲ್ಲೆ.ಎನ್ನ ಎರಡು ಕವನ ಸಂಕಲನ ಕಳೆದ ವರ್ಷ ಪ್ರಕಟ ಆಯಿದು. ಅದರ ಕೆಲವು ಪದ್ಯ ಸಂಪದ.ಕಾಮ್ ಲಿ ಹಾಕಿದ್ದೆ. ಬಾಕಿ ಸಮಯ ಇಪ್ಪಾಗ ಹಾಕುತ್ತೆ.
  ನಿಂಗಳ ಪ್ರೀತಿಗೆ ಋಣಿ.

  [Reply]

  VA:F [1.9.22_1171]
  Rating: 0 (from 0 votes)
 3. ಬೊಳುಂಬು ಮಾವ°
  ಬೊಳುಂಬು ಮಾವ

  ಪ್ರಾಸ ತಾಳಂಗಳೊಟ್ಟಿಂಗೆ ಹಳ್ಳಿಯ ಜೀವನದ ಚಿತ್ರಣ ಲಾಯಕು ಬಯಿಂದು. ಹಳತ್ತೆಲ್ಲವನ್ನು ನೆಂಪು ಮಾಡಿತ್ತು. ಇಂತ ಪದ್ಯಂಗೊ ಗೋಪಾಲಣ್ಣನ ಕೀಮಣೆಂದ ಅಂಬಗಂಬಗ ಹೆರ ಬತ್ತಾ ಇರಳಿ.

  [Reply]

  VA:F [1.9.22_1171]
  Rating: 0 (from 0 votes)
 4. ಗಣೇಶ ಪೆರ್ವ
  ಗಣೇಶ

  ಭಾರೀ ಲಾಯಿಕಾಯಿದು ಗೋಪಾಲಣ್ಣಾ..
  ಸಕಾಲಿಕ, ಮನೋಹರ. ಎ೦ಗೊ ಸಣ್ಣಾದಿಪ್ಪಗ ಜಾಲ ನೀರು ಹೋವ್ತ ದಾರಿ ಬಿಡುಸಿಕೊಟ್ಟ೦ಡಿತ್ತಿದ್ದು, ಮಳೆಗಾಲಕ್ಕಿಪ್ಪ ಸೌದಿ ಎಲ್ಲ ರೆಡಿ ಮಾಡಿ ಮಡುಗುವದು, ಮಾಡು ರಿಪೇರಿ ಮಾಡುವದು, ಎಲ್ಲ ನೆ೦ಪಾತು.

  [Reply]

  VA:F [1.9.22_1171]
  Rating: 0 (from 0 votes)
 5. ಶ್ರೀಅಕ್ಕ°

  ಗೋಪಾಲಣ್ಣಾ,

  ತುಂಬಾ ಚೆಂದದ ಹುಂಡುಪದ್ಯ!!! ಮಳೆಗಾಲಕ್ಕೆ ಸ್ವಾಗತ ಮಾಡಿದ ಹಾಂಗೆ ಆತು. ನಮ್ಮ ತಯಾರಿಗಳ ನೆಂಪು ಮಾಡಿದ ಹಾಂಗೆದೇ ಆತಿದಾ. ಒಪ್ಪಣ್ಣನ ಶುದ್ದಿಗೆ ಪೂರಕ ಆಗಿ ಬಂದದು ಇನ್ನೂ ಲಾಯ್ಕ ಆತು.

  ಬತ್ತಾ ಇರಲಿ ಹೀಂಗೆ ನಿಂಗಳ ಪದ್ಯಂಗೊ, ಕಥೆಗೊ.

  [Reply]

  VN:F [1.9.22_1171]
  Rating: +1 (from 1 vote)
 6. Ramesh Bhat B

  ಪದ್ಯ ಕುಶಿ ಆಯೆದು.ಮಳೆಗಾಲದ ಪೂರ ಚಿತ್ರನ ಫಸ್ತ್ ಕ್ಲಸ್ಸ್

  [Reply]

  VA:F [1.9.22_1171]
  Rating: 0 (from 0 votes)
 7. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ಮಳೆಗಾಲದ ಹಳ್ಳಿಯ ಜೀವನವ ಲಾಯ್ಕಲ್ಲಿ ಹೇಳಿದ್ದಿ ಗೋಪಾಲಣ್ಣಾ.

  [Reply]

  VN:F [1.9.22_1171]
  Rating: 0 (from 0 votes)
 8. ಮುಳಿಯ ಭಾವ
  ರಘು ಮುಳಿಯ

  ಆಹಾ, ಗೋಪಾಲಣ್ಣ,ಕೊಶಿ ಆತು.

  ಒಲಿಮಡಲ ಕೊಡೆ ಹಿಡುದ ಬಾಲ್ಯ ನೆ೦ಪಾತು
  ಗೆದ್ದೆ ಹೂಡುವ ಚೆ೦ದ ಕಣ್ಮು೦ದೆ ಬ೦ತು ||

  ಮಳೆಗೆ ಶಾಲೆಗೆ ರಜೆಯು ಸಿಕ್ಕಿಯಪ್ಪಗಳೆ
  ಕೆರೆಗಿಳಿದ ರಸಘಳಿಗೆ ಮತ್ತೆ ನೆ೦ಪಾತು ||

  [Reply]

  ಗೋಪಾಲಣ್ಣ

  Gopalakrishna BHAT S.K. Reply:

  ಸಂತೋಷ. ಎಲ್ಲರಿಂಗೂ ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೇವಸ್ಯ ಮಾಣಿಬಟ್ಟಮಾವ°ಚೂರಿಬೈಲು ದೀಪಕ್ಕಮಾಲಕ್ಕ°ಸರ್ಪಮಲೆ ಮಾವ°ಶುದ್ದಿಕ್ಕಾರ°ಸಂಪಾದಕ°ಪಟಿಕಲ್ಲಪ್ಪಚ್ಚಿಪ್ರಕಾಶಪ್ಪಚ್ಚಿಯೇನಂಕೂಡ್ಳು ಅಣ್ಣಡಾಮಹೇಶಣ್ಣಅನುಶ್ರೀ ಬಂಡಾಡಿಉಡುಪುಮೂಲೆ ಅಪ್ಪಚ್ಚಿವಾಣಿ ಚಿಕ್ಕಮ್ಮವಿನಯ ಶಂಕರ, ಚೆಕ್ಕೆಮನೆಅನು ಉಡುಪುಮೂಲೆರಾಜಣ್ಣಮಾಷ್ಟ್ರುಮಾವ°ವಿದ್ವಾನಣ್ಣಶರ್ಮಪ್ಪಚ್ಚಿಶಾಂತತ್ತೆಶೇಡಿಗುಮ್ಮೆ ಪುಳ್ಳಿಪುತ್ತೂರಿನ ಪುಟ್ಟಕ್ಕಅನಿತಾ ನರೇಶ್, ಮಂಚಿಪುಣಚ ಡಾಕ್ಟ್ರುದೊಡ್ಡಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ