Oppanna.com

ಗಿಳಿ ಬಾಗಿಲಿಂದ -ಆನೆ ಹೋಪಲ್ಲಿ ಬಿಟ್ಟು ಸೂಜಿ ಹೋಪಲ್ಲಿ ಅಡೆಪ್ಪುದು

ಬರದೋರು :   ಲಕ್ಷ್ಮಿ ಜಿ.ಪ್ರಸಾದ    on   28/05/2014    4 ಒಪ್ಪಂಗೊ

“ಲೋಕೋ ಭಿನ್ನ ರುಚಿಃ “ಮನುಷ್ಯರ ಸ್ವಭಾವವೇ ವಿಚಿತ್ರ ಒಬ್ಬೊಬ್ಬಂಗೆ ಒಂದೊಂದು ಅಭಿರುಚಿ !ಒಬ್ಬ ಇನ್ನೊಬ್ಬನ ಹಾಂಗೆ ಇರ್ತವಿಲ್ಲೆ.
.ಕೆಲವು ಜನಂಗ ತುಂಬಾ ಉದಾರಿಗ .ಕೆಲವು ಜನಂಗ ಎಂಜೆಲು ಕೈಲಿ ಕಾಕೆ ಓಡ್ಸದ್ದಷ್ಟು ಪಿಟ್ಟಾಸಿಗ,ಕೆಲವು ಜನಂಗ ತುಂಬಾ ಸರಳವಾಗಿಪ್ಪಲೆ ಬಯಸುವೋರು ,ಕೆಲವು ಜನಂಗ ತುಂಬಾ ಧಂ ಧೂಮ್ ಆಗಿ ಖರ್ಚು ಮಾಡುವೋರು .ಮನೆಲಿ ಇದ್ದ ಇಲ್ಲೆಯ ಹೇಳಿ ಕೂಡಾ ನೋಡದ್ದೆ ಖರ್ಚು ಮಾಡುವೋರು,ಮನೇಲಿ ಕೊಳವಷ್ಟು ಇದ್ದರೂ ಬೇರೆಯೋರಿಂಗೆ ಒಂದು ತುಂಡು ಕೊಡದ್ದೋರು ,ಹೆಸರಿನ್ಗಾಗಿಯಾ ಅಥವಾ ಇನ್ನೇನಾದರೂ ಕಾರಣಕ್ಕೋ ಸಂಘ ಸಂಸ್ಥೆಗೊಕ್ಕೆ ಧಾರಾಳ ಕೊಡುವೋರು ,ಮನೆ ಬಾಗಿಲಿಂಗೆ ಬಂದ ಬಡವಂಗೆ ಅಶನ ಹಾಕುಲೂ ಕುರೆ ಮಾಡುವೋರು,ದೇವಸ್ಥಾನಕ್ಕೆ ,ಮಠ-ಮಂದಿರಂಗೊಕ್ಕೆ ಧಾರಾಳ ಕೊಡುವೋರುದೆ ಪಕ್ಕದ ಮನೆಯ ಬಡ ಮಾಣಿಗೆ ಕಿಡ್ನಿ ಜೋಡಣೆಗೆ ಪೈಸೆ ಕೊಡುಲೆ ಮನಸ್ಸು ಮಾಡದ್ದೆ ಇಪ್ಪೋರು ..ಹೀಂಗೆ ಪ್ರತಿಯೊಬ್ಬರಿಂಗು ಅವರದೇ ಆದ ಸ್ವಭಾವ ರೀತಿ ನೀತಿಗ ಇರ್ತು.
ಆದರೂ ಸಮಾಜಲ್ಲಿ ಸಾಮಾನ್ಯವಾಗಿಪ್ಪ ರೀತಿ ನೀತಿಗೊಕ್ಕೆ ತೀರಾ ಭಿನ್ನವಾಗಿಪ್ಪೋರ ಬಗ್ಗೆ ಜನಂಗ ಮಾತಾಡಿಗೊಂಬದುದೆ ಸಾಮಾನ್ಯವಾದ ವಿಚಾರ. ಮನುಷ್ಯರ ಇಂಥ ಕೆಲವು ವಿಶಿಷ್ಟ ಸ್ವಭಾವಂಗಳ ಬಗ್ಗೆ ಹೇಳುವಾಗ ಹೆಚ್ಚಾಗಿ ನುಡಿಗಟ್ಟುಗಳ ಬಳಕೆ ಇರುತ್ತು .
ಇಂಥ ಒಂದು ವಿಶಿಷ್ಟ ನುಡಿಗಟ್ಟು “ಆನೆ ಹೋಪಲ್ಲಿ ಬಿಟ್ಟು ಸೂಜಿ ಹೋಪಲ್ಲಿ ಅಡೆಪ್ಪುದು “ಹೇಳುದು .ಒಂದು ಕಡೆ ಬೇಜವಾಬ್ದಾರಿ ಉದಾಸೀನ ಅವ್ಯವಸ್ಥೆಯ ಕಾರಣಂದಾಗಿ ಸಾವಿರ ಗಟ್ಲೆ ನಷ್ಟ ಆವುತ್ತಾ ಇರುತ್ತು .ಅದರ ಸರಿ ಪಡಿಸುಲೆ ಹೋಗದ್ದೆ ಸಣ್ಣ ಪುಟ್ಟ ವಿಚಾರಗಳ ಬಗ್ಗೆ ಹೆಚ್ಚು ಗಮನ ಕೊಟ್ಟು ಸರಿ ಪಡಿಸುಲೆ ಹೋಪ ಜನಂಗಳನ್ನು ನಾವು ಸುತ್ತ ಮುತ್ತ ನೋಡುತ್ತು .
ಉದಾ ಹರಣೆಗೆ ಹೇಳುತ್ತರೆ ತೋಟಕ್ಕೆ ವಾರಕ್ಕೆ ಒಂದರಿದೆ ಕಾಲು ಮಡುಗದ್ದೆ ಅಡಕೆ ತೆಂಗು ಕದ್ದು ಹೊವುತ್ತಾ ಇರ್ತು .ದನಗ ಬಂದು ಬೆಳೆ ಸಪ್ಪಾಯಿ ಆಗಿರ್ತು .ಅದರ ಬಗ್ಗೆ ಕಾಳಜಿ ಮಾಡದ್ದೆ ಮನೆ ಹತ್ರಣ ಮಾವಿನ ಮರಂದ ಬಿದ್ದ ನಾಲ್ಕು ಮಾವಿನ ಹಣ್ಣಿನ ಆರೋ ಹೆರ್ಕಿಕೊಂಡು ಹೋಪಗ ಅದರ ಬಗ್ಗೆ ಭಾರೀ ಜಾಗ್ರತೆ ಮಾಡುದು !
ತೋಟಂದ ಹಾಡು ಹಗಲೇ ಕದ್ದು ಹೋಪ ಬಗ್ಗೆ ಜಾಗ್ರತೆ ಮಾಡುಲೆ ಇಲ್ಲೇ .ಬದಲಿಂಗೆ ಮನೆ ಕೆಲಸದೋವಕ್ಕೆ ಬಳುಸುವಗ ಕೈ ಕುಂಟು ಮಾಡುದು ,ಅವಕ್ಕೆ ಬರೀ ಕಳಪೆ ಊಟ ತಿಂಡಿ ಕೊಡುದು ಇತ್ಯಾದಿ ಮಾಡುವ ಅನೇಕ ಜನರ ನಾವು ಕಾಣುತ್ತಾ ಇರುತ್ತು .
ಇಂಥೋರ ಬಗ್ಗೆ ಹೇಳುವಾಗ ಬಳಕೆ ಅಪ್ಪ ನುಡಿಗಟ್ಟು ಇದು.
ಆನೆ ಹೋಪಲ್ಲಿ ಬಿಟ್ಟು ಸೂಜಿ ಹೋಪಲ್ಲಿ ಅಡೆಪ್ಪುದು ಹೇಳಿರೆ ಆನೆ ಹೊಪಷ್ಟು ದೊಡ್ಡ ಮಾರ್ಗಲ್ಲಿ ದೊಡ್ಡ ಮಟ್ಟಲ್ಲಿ ನಷ್ಟ ಅಪ್ಪದರ ತಡೆಯದ್ದೆ ಅದರ ಹಾಂಗೆ ಬಿಟ್ಟು ಸೂಜಿ ಹೊಪಷ್ಟು ಸಣ್ಣ ಮಾರ್ಗಲ್ಲಿ ಅಪ್ಪ ಸಣ್ಣ ಪುಟ್ಟ ನಷ್ಟವ ತಡವ ನಿರರ್ಥಕ ಯತ್ನ ಹೇಳಿ ಅರ್ಥ .
ಸೂಜಿ ಹೊಪಷ್ಟು ಸಣ್ಣಕ್ಕೆ ನಷ್ಟ ಆದರೆ ಎಷ್ಟು ಅಕ್ಕು ?ಉಂಬಲೆ ತಿಂಬಲೆ ಕೊಡುದರಲ್ಲಿ ಸಣ್ಣ ಮಾಡಿ ಎಷ್ಟು ಒಳಿಸುಲೆ ಎಡಿಗು ?
ದೊಡ್ಡ ದೊಡ್ಡ ವಿಚಾರಂಗಳಲ್ಲಿ ಅಪ್ಪ ನಷ್ಟವ ತಡೆಯದ್ದೆ ಸಣ್ಣ ಪುಟ್ಟ ನಷ್ಟಗಳ ತಡವ ಪ್ರಯತ್ನ ನಿರರ್ಥಕ ಹೇಳಿ ಈ ನುಡಿಗಟ್ಟು ತಿಳಿಸುತ್ತು.

4 thoughts on “ಗಿಳಿ ಬಾಗಿಲಿಂದ -ಆನೆ ಹೋಪಲ್ಲಿ ಬಿಟ್ಟು ಸೂಜಿ ಹೋಪಲ್ಲಿ ಅಡೆಪ್ಪುದು

  1. ಲಾಯಕಲ್ಲಿ ವಿವರ್ಸಿದ್ದಿ ಲಕ್ಷ್ಮಿ ಅಕ್ಕ.

  2. ಲಕ್ಷ್ಮಿಅತ್ತೇ,
    ತುಂಬ ಶಕ್ತಿಶಾಲಿ ನಾಣ್ಣುಡಿಯ ಬಗ್ಗೆ ಬೈಲಿಂಗೆ ಶುದ್ದಿ ಹೇಳಿದ್ದಿ. ತುಂಬಾ ಕೊಶಿ ಆತು.
    ನಾವುದೇ, ನವಗೆ ಗೋಷ್ಠಿ ಇಲ್ಲದ್ದೆ ಹಲವು ದಿಕ್ಕೆ – ಸೂಜಿ ಹೋಪಲ್ಲಿ ಅಡೆಪ್ಪಿ – ನೊಣ ತಿಂದವ ಆಗಿ ಹೋವುತ್ತು. ಅಲ್ಲದೋ? 🙂
    ಚೆಂದದ ಬರವಣಿಗೆ ಶೈಲಿಲಿ ಲಾಯ್ಕದ ಶುದ್ದಿ. ಹರೇರಾಮ…

  3. ನುಡಿಗಟ್ಟು, ವಿವರಣೆ ಕೊಶೀ ಆತು.
    ಜೆನಂಗೊ ಮೋಲ್ ಗೊಕ್ಕೆ ಹೋಗಿ ಅವು ಹಾಕಿದ ರೇಟಿಂಗೆ ಚರ್ಚೆ ಮಾಡದ್ದೆ , ಬೇಕಾದ್ದೋ,ಬೇಡದ್ದೋ, ಒಟ್ಟು ತೆಕ್ಕೊಂಡು ಬತ್ತವು.
    ಅದೇ ಜೆನಂಗೊ ಮನೆ ಹತ್ರೆ ಮಾರಲೆ ತಂದ ತರಕಾರಿ ಮನುಷ್ಯನ ಹತ್ರೆ ಪೈಸೆಗೆ ಪೈಸೆ ಲೆಕ್ಕ ಹಾಕಿ ಚರ್ಚೆ ಮಾಡುತ್ತವು.

  4. ಇದರ ಓದಿ ಅಪ್ಪಗ ನಾವಗೆ ನೆ0ಪಾತಿದ.
    ಮೊನ್ನೆ ಒ0ದು ಕಡೇ ಸತ್ಯಣ್ಣನ ಚಾ”ಯ ಕುಡಿವಾಗ ಮಾಯವಾದ ಆನೆ ಬಗ್ಗೆ ಕೇಳಿತ್ತು. ಆನೆ ಒ0ದು ದೊಡ್ಡ ತಾವರೆಕೆರೆಗೆ ಇಳಿದು ,ದೋ0ದ ಮಾಡಿ, ಹೂಗು ಎಲ್ಲಾ ಹಾಳ್ ಮಾಡಲೆ ಶುರು ಮಾಡಿತ್ತಡ . ರಜಾ ಸಮಯ ಬಿಟ್ಟು ನೋಡುವಾಗ ಕೆಸರಿ0ಗೆ ಇಳಿದ ಆನೆ ಮ0ಗಮಾಯಡ. ಕೆರೆ ತು0ಬಾ ಹೂಗು ಕಾ0ಬಲೆ ಶುರುವಾತಡ. ಜನ0ಗ ಆನೆ0ದ ಅಪ್ಪ ಲಾಸ್ ಕಮ್ಮಿ ಮಾಡ್ಯೊ0ಡವಡ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×