Oppanna.com

ಗಿಳಿ ಬಾಗಿಲಿಂದ -ಕಣ್ಣು ನೆತ್ತಿಗೆ ಹಾರುದು

ಬರದೋರು :   ಲಕ್ಷ್ಮಿ ಜಿ.ಪ್ರಸಾದ    on   20/08/2014    6 ಒಪ್ಪಂಗೊ

ಕಣ್ಣು ನೆತ್ತಿಗೆ ಹಾರಿದ್ದು ಹೇಳುವ ಮಾತಿನ ಆನು ಸುಮಾರು ಸರ್ತಿ ಅವು ಇವು ಹೇಳುದರ ಕೇಳಿತ್ತಿದೆ.ಆದರೆ ನಿಜಕ್ಕೂ ಕಣ್ಣು ನೆತ್ತಿಗೆ ಹಾರುದು ಹೇಳಿರೆ ಎಂತ ಹೇಳಿ ಎನಗೆ ನೋಡಿ ಗೊಂತಿತ್ತಿಲ್ಲೆ.

ಇತ್ತೀಚೆಗೆ ಒಂದು ವಿದ್ಯಾ ಸಂಸ್ಥೆಗೆ ವಿಶೇಷ ಉಪನ್ಯಾಸ ಕೊಡುಲೆ ಹೋಗಿತ್ತಿದೆ. ಕಾರ್ಯಕ್ರಮಕ್ಕೆ ಮೊದಲು ಬಂದ ಅತಿಥಿಗೊಕ್ಕೆ ಸಣ್ಣ ಉಪಹಾರ ವ್ಯವಸ್ಥೆ ಮಾಡಿತ್ತಿದವು .ಅಲ್ಲಿ ಒಬ್ಬ ಊಟೋಪಚಾರ ವ್ಯವಸ್ಥೆಯ ವಹಿಸಿಕೊಂಡಿದ್ದ ವ್ಯಕ್ತಿಯ ನೋಡುವಾಗ ಅವಂಗೆ ಏನೋ ಗೊಂದಲ ಇದ್ದ ಹಾಂಗೆ ಅನಿಸಿಕೊಂಡು ಇತ್ತು .ಅವನ ಎಲ್ಲಿಯೋ ನೋಡಿದ್ದೆ ಹೇಳಿ ಅನುಸ್ತಾ ಇತ್ತು ಎನಗೆ.ಅವ ಹತ್ತರೆ ಬಂದು ಮುಖ್ಯಸ್ಥರಿಂಗೆ ನಮಸ್ಕಾರ ಮಾಡಿದ.

ಅಷ್ಟಪ್ಪಗ ಎನ್ನ “ಇವರು ಡಾ.ಲಕ್ಷ್ಮೀ ಜಿ ಪ್ರಸಾದ್ ಗೊತ್ತಲ್ವ ಬರಹಗಾರಾರು ,ಸಂಶೋಧಕರು.ಇವತ್ತಿನ ಅಥಿತಿಗಳು ಹೇಳಿ ಪರಿಚಯಿಸಿಕ್ಕಿ ಅವನ ಆ ಕಾಲೇಜ್ ಲಿ ಅವ ಎಲೆಕ್ಟ್ರಾನಿಕ್ಸ್ ಲೆಕ್ಚರರ್ ಆಗಿದ್ದ ಹೇಳಿ ಪರಿಚಯ ಮಾಡಿ ಕೊಟ್ಟವು ಅಲ್ಲಿ .ನಂತರ ಆನು ಕಾರ್ಯಕ್ರಮ ಆಗಿ ಹೆರಡುವಾಗ ಅವ ಬಂದು ಎನ್ನತ್ತರೆ ಬಂದು ನೀವು ದಕ್ಷಿಣ ಕನ್ನಡದವರ ? ಹವ್ಯಕರ ?ಹೇಳಿ ಕೇಳಿದ.ಅಪ್ಪ್ಪು ಹೇಳಿ ಹೇಳಿದೆ .ನಿಂಗಳ ಎಲ್ಲಿಯೋ ನೋಡಿದ್ದೆ ಹೇಳಿ ಅನ್ಸುತ್ತು ಹೇಳಿದ.ಮತ್ತೆ ನಿಂಗಳ ಸ್ವಂತ ಊರು ಯಾವುದು ಕೇಳಿದ .ಹೇಳಿದೆ ಆನು .ಅಷ್ಟಪ್ಪಗ  ಆನು ಆರು ಹೇಳಿ ಅವಂಗೆ ಗೊಂತಾತು.ಅವ ಆರು ಹೇಳಿ ಪರಿಚಯ ಹೇಳಿದ, ಎನಗೂ ಅವನ ಈ ಹಿಂದೆ ಎಲ್ಲಿ ನೋಡಿದ್ದು ಹೇಳಿ ನೆನಪಾತು.

ಎಂಗಳ ಮನೆ (ಪ್ರಸಾದ್ ನ ಮನೆ) ಹತ್ರ ಅವನ ಮನೆ ಇತ್ತು .ಮದುವೆ ಆದ ಹೊಸತರಲ್ಲಿ ಎಂಗಳ ಒಂದು ಊಟಕ್ಕೆ/ ಸಮ್ಮಾನಕ್ಕೆ ದೆನಿಗೇಳಿತ್ತಿದವು ಇವನ ಅಬ್ಬೆ ಅಪ್ಪ .ಹಾಂಗೆ ಅಲ್ಲಿಗೆ ಆನು ಹೊದಿಪ್ಪಗ ಇವನತ್ರೆ ಮಾತಾಡಿದ್ದೆ .ಆ ಸಮಯಲ್ಲಿ ಆನು ಮದುವೆಯ ನಂತರ ಕಲಿತ್ತಾ ಇಪ್ಪದು  ಊರಿಂಗೆ ಒಂದು ಮಾತನಾಡಿಕೊಂಬ ಸುದ್ದಿ ಆಗಿತ್ತು .ಅಂಬಗ ಇವ ಜಸ್ಟ್ ಇಂಜಿನೀರಿಂಗ್ ಗೆ ಸೇರಿದ್ದಷ್ಟೇ .ಇನ್ನು ಕ್ಲಾಸ್ ಸುರು ಆಗಿತ್ತಿಲ್ಲೆ .ಎನ್ನ ಡಿಗ್ರಿ ಮುಗುದು ಆನು ಸಂಸ್ಕೃತ ಎಂ. ಎ ಗೆ ಸೇರುವ ಅಂದಾಜಿಲಿ ಇತ್ತಿದೆ.(ಆನು ಬಿಎಸ್ಸಿ ಮಾಡಿದ್ದು ಆದರೆ ಎನಗೆ ಲ್ಯಾಬ್ ಅಲರ್ಜಿ ಸಮಸ್ಯೆ ಕಾಣಿಸಿಕೊಂಡ ಕಾರಣ ಎನಗೆ ಕೆಮಿಸ್ಟ್ರಿ ಎಂ.ಎಸ್ಸಿ ಮಾಡುಲೆ ಸಾಧ್ಯ ಇತ್ತಿಲ್ಲೆ.ಫಿಸಿಕ್ಸ್ ಮತ್ತೆ ಮಾಥ್ಸ್ ಎನಗೆ ಇಂಟರೆಸ್ಟ್ ಇತ್ತಿಲ್ಲೆ.ಸಂಸ್ಕೃತಲ್ಲಿ ಆಸಕ್ತಿ ಇತ್ತು .ಹಾಂಗಾಗಿ ಆನು ಸಂಸ್ಕೃತ ಎಂ.ಎ ಮಾಡಿದ್ದು )
ಆ ಸಮಯಲ್ಲಿ ಇವನ ಅಬ್ಬೆ ಎನ್ನತ್ರೆ ಮುಂದೆ ಓದುಲೆ ಇದ್ದ ಕೇಳಿದವು .ಇದ್ದು ಹೇಳಿದೆ ಅಂಬಗ ಎಂತರ ಓದುದು ಹೇಳಿ ಅಲ್ಲಿ ಕೇಳಿದವು .ಆನು ಕಟೀಲಿಲಿ ಸಂಸ್ಕೃತ ಎಂ ಎ ಗೆ ಸೇರುದು ಹೇಳಿದೆ.

ಅಂಬಗ ಅಲ್ಲಿಯೇ ಇದ್ದ ಇವ ಎನ್ನತ್ರೆ ಕೇಳಿತ್ತಿದ.ಒಂದು ಡೆಡ್ ಲ್ಯಾಂಗ್ವೇಜ್ ನ ಓದಿ ಎಂಥ ಪ್ರಯೋಜನ ಹೇಳಿ .ಅಷ್ಟಪ್ಪಗ ಆನು ನೀನು ಇಂಜಿನೀರಿಂಗ್ ಓದಿರೆ ಎಂತ ಪ್ರಯೋಜನ ಕೇಳಿದೆ .ಅಂಬಗ ಅವ ಒಳ್ಳೆ ಕೆಲಸ ಸಿಕ್ಕುತ್ತು ಹೇಳಿದ ,ಆನು ಹೇಳಿದೆ ಅಂಬಗ ಪರಿಶ್ರಮ, ಪ್ರತಿಭೆ, ಪ್ರಾಮಾಣಿಕತೆ ಇದ್ದರೆ ಎಂತ ಓದಿದರೂ ಕೆಲಸ ಸಿಕ್ಕುತ್ತು ಹೇಳಿ .ಎಂ ಎ ಓದಿದೋರು ನಾಯಿ ಸಂತೆ ಇದ್ದವು ಹೇಳುವ ಮಾತಿನ ಎನಗೆ ಸುಮಾರು ಜನಂಗ ಹೇಳಿತ್ತಿದವು.ದೊಡ್ಡೋರ ಇಂಥ ಮಾತಿನ ಕೇಳಿ ಎನ್ನತ್ತರೆ ಇವಂದೆ ಎನಗೆ ಹೇಳಿತ್ತಿದ .ಈ ಬಗ್ಗೆ ಎಂಗೊಗೆ ತುಂಬಾ ಚರ್ಚೆ ಆಗಿತ್ತು ಕೂಡಾ!
ಆದರೆ ಎನಗೆ ಅವನ ಗುರ್ತ ಸಿಕ್ಕಿತ್ತಿಲ್ಲೆ ಸುರುವಿಂಗೆ.

ಆನು ಆರು ಹೇಳಿ ಗೊಂತಾಗಿ ಅಪ್ಪಗಲೇ ಅವನ ಮೋರೆಲಿ ತುಂಬಾ ಆಶ್ಚರ್ಯ ಕಂಡತ್ತು.ಮತ್ತೆ ಪುನಃ ಕೇಳಿದ ಅಂಬಗ,ಪತ್ರಿಕೆಗಳಲ್ಲಿ ಲೇಖನ ಬರವ ಲಕ್ಷ್ಮೀ ಜಿ ಪ್ರಸಾದ ನಿಂಗಳೆಯಾ? ಹೇಳಿ ಕೇಳಿದ.ಅಪ್ಪು ಹೇಳಿ ಹೇಳಿದೆ.ಅಂಬಗ ಅಪ್ಪ ?! ಹೇಳಿ ಆಶ್ಚರ್ಯಲ್ಲಿ ಕೇಳಿದ “ಎಂ ಎ ಓದಿದೋರು ನಾಯಿ ಸಂತೆ ಇದ್ದು ಹೇಳಿದೋನು ಕೆಲಸ ಮಾಡುವ ಕಾಲೇಜಿಂಗೆ ಇದ್ದಕಿದ್ದ ಹಾಂಗೆ ಅತಿಥಿಯಾಗಿ ಆಹ್ವಾನಿಸಲ್ಪಟ್ಟು ಸಂಸ್ಥೆ ಯ ಹಿರಿಯ ಅಧಿಕಾರಿಗಳಿಂದ ಪರಿಚಯಿಸಲ್ಪಟ್ಟರೆ ನಂಬುಲೆ ಅಸಾಧ್ಯವಾಗಿ ಆಶ್ಚರ್ಯ ಅಪ್ಪದು ಸಹಜ ಕೂಡ !.ಅವನ ಕಣ್ಣು ಅರಳಿ ದೊಡ್ಡ ಆಗಿಹೆರ ಬಪ್ಪ ಹಾಂಗೆ ಆತು .ಅಂಬಗ ಎನಗೆ ಕಣ್ಣುಗೆ ಹಾರುದು ಹೇಳುದು ಎಂತರ ಹೇಳಿ ಎನಗೆ ಗೊಂತಾತು.
ನಂತರ ಅವ “ಲಕ್ಷ್ಮ್ಯಕ್ಕ sorry ಅಂದು ಎನಗೆ ಅಷ್ಟು ತಿಳುವಳಿಕೆ ಇತ್ತಿಲ್ಲೇ .ಎಲ್ಲರು ದೊಡ್ಡೋರು ಹಾಂಗೆ ಮಾತಾಡಿಗೊಂಡು ಇತ್ತಿದವು ನಿಂಗ ಮದುವೆ ಆದ ಮೇಲೆ ಕಲಿವ ಬಗ್ಗೆ ಹಾಂಗೆ ಆನುದೇ ಬುದ್ದಿ ಇಲ್ಲದ್ದೆ ಮಾತಾಡಿದ್ದೆ ಎಂಗಳ ಮನೆಗೆ ಸಮ್ಮಾನಕ್ಕೆ ದೆನಿಗಗೇಳಿಕ್ಕಿ ಹಾಂಗೆ ಮಾತಾಡಿದ್ದು ತಪ್ಪು ಕ್ಷಮಿಸಿ” ಹೇಳಿದ.ಅದು ಅವನ ದೊಡ್ಡ ತನ. ಅದು ಇರಲಿ,ಎನಗೆ ಮಾತ್ರ ಅಂಬಗ ಕಣ್ಣು ನೆತ್ತಿಗೆ ಹಾರಿದ್ದು /ಹೊಯಿದು ಹೇಳುವ ನುಡಿಗಟ್ಟು ನೆನಪಾಗಿ ಅದರ ಅರ್ಥ ಕೂಡಾ ಸರಿಯಾಗಿ ತಲೆಗೆ ಹೋತು .
ಆರಿಂಗಾದರೂ ನಂಬುಲೆ ಅಸಾಧ್ಯವಾದರೂ ವಾಸ್ತವ ಸತ್ಯ ಎದುರಾಗಿ ಅಪ್ಪಗ ಅಪ್ಪ ಆಶ್ಚರ್ಯವ ವಿವರ್ಸುವ ಸಂದರ್ಭಲ್ಲಿ ಅವನ /ಅದರ ಕಣ್ಣು ನೆತ್ತಿಗೆ ಹಾರಿದ್ದು ಹೇಳುವ ಮಾತಿನ ಬಳಕೆ ಮಾಡುತ್ತವು.

6 thoughts on “ಗಿಳಿ ಬಾಗಿಲಿಂದ -ಕಣ್ಣು ನೆತ್ತಿಗೆ ಹಾರುದು

  1. ವಿವರಣೆ ಲಾಯಕ ಆಯಿದು .
    ಕಣ್ಣು ನೆತ್ತಿಲಿದ್ದು ಹೇಳಿರೆ ಕೆಳ ನೆಲ ಕಾಣುತ್ತಿಲ್ಲೆ ; ಅಷ್ಟು ಗರ್ವ ಹೇಳುವ ಅರ್ಥಲ್ಲೂ ಉಪಯೋಗಿಸುತ್ತವಲ್ಲದ ಲಕ್ಷ್ಮಿ ಅಕ್ಕ?

    1. ಅಪ್ಪು ಕಣ್ಣು ನೆತ್ತಿಗೇರಿದ್ದು ಹೇಳುವ ಮಾತಿನ ನೆನಪು ಮೂರು ದಿನ ಮೊದಲು ಆತು ಎನಗುದೆ .ನಿಜಕ್ಕೂ ಅವು ಅಹಂಕಾರಲ್ಲಿ ಕಣ್ಣಿನ ಅರೆ ತೆರದು ಕಣ್ಣಿನ ಮೇಲ್ಭಾಗಕ್ಕೆ ತೆಕ್ಕೊಂಡು ಹೋಗಿ ನಿಕೃಷ್ಟವಾಗಿ ನೋಡುವ ದೃಷ್ಟಿಲಿ ಕಣ್ಣು ನೆತ್ತಿಯ ಅಡಿ ಭಾಗಕ್ಕೆ ಹೋದ ಹಾಂಗೆ ಕಾಣುತ್ತು ಈ ರೀತಿ ಕಣ್ಣು ನೆತ್ತಿಲಿಪ್ಪೋನ ಒಬ್ಬನ ಆನು ಮೊನ್ನೆ ಒಂದು ದಿನ ನೋಡಿದ್ದೆ,ಅವನ ನೋಡಿ ಅಪ್ಪಗ ಎನಗೆ ಕಣ್ಣು ನೆತ್ತಿಲಿದ್ದು ಹೇಳಿರೆ ಎಂಥ ಹೇಳುದು ಸ್ಪಷ್ಟವಾಗಿ ತಿಳುತ್ತು .ಈ ಪಡೆ ನುಡಿ ಬಗ್ಗೆ ಅರ್ಧ ಬರದು ಮಡುಗಿದ್ದೆ ,ಮುಂಡೆ ಪೂರ್ತಿ ಮಾಡಿ ಅದನ್ನೂ ಹಾಕುತ್ತೆ ,ನಿಂಗಳ ಪ್ರೋತ್ಸಾಹಕ್ಕೆ ಧನ್ಯವಾದಂಗ ಗೋಪಾಲಣ್ಣ

  2. ಸಂದರ್ಭ ಸಹಿತ ವಿವರ್ಸಿದ್ದದು ಲಾಯಕ ಆಯಿದು ಲಕ್ಷ್ಮಿ ಅಕ್ಕ.

  3. ಗಿಳಿಬಾಗಿಲಿಂದ ನುಡಿಗಟ್ಟುಗಳ ಪರಿಚಯ ವಿವರಣೆ ಸೊಗಸಾಗಿ ಮೂಡಿಬತ್ತಾ ಇದ್ದು. ಆರಾರು ಹಾಂಗೇದರೆ ಎಂತರ ಹೇದು ಕೇಟ್ರೆ ಲಕ್ಷ್ಮೀ ಅಕ್ಕ ಹೇದ್ದು ಹೇದು ಧೈರ್ಯಲ್ಲಿ ಹೇತಿಕ್ಕಲ್ಲಕ್ಕು.

    ಲಕ್ಷ್ಮೀಯಕ್ಕನ ಲೇಖನಮಾಲೆಗೊ ಬೈಲಿಲಿ ಹೀಂಗೇ ಬಂದುಗೊಂಡಿರಳಿ. ಹರೇ ರಾಮ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×