Oppanna.com

ಗಿಳಿ ಬಾಗಿಲಿಂದ -ತಲೆ ತುಂಬ ಸಂಸಾರ

ಬರದೋರು :   ಲಕ್ಷ್ಮಿ ಜಿ.ಪ್ರಸಾದ    on   09/04/2014    8 ಒಪ್ಪಂಗೊ

ಎಂತಕೆ ಹೇಳಿ ಗೊಂತಿಲ್ಲೆ , ಎನಗೆ ಸಣ್ಣಾದಿಪ್ಪಗಳೇ ಎನ್ನ ಕೆಮಿಗೆ ಬಿದ್ದ ಮಾತುಗಳ ಹಾಂಗೆ ಹೇಳ್ರೆ ಎಂತ ? ಹೀಂಗೆ ಹೇಳ್ರೆ ಎಂತ ಹೇಳಿ ಆಲೋಚನೆ ಮಾಡುವ ಸ್ವಭಾವ ಇತ್ತು !
ಮಾತಿನ ನಡುವೆ ಯಾವುದಾದರು ಪದ ಗೊಂತಾಗದ್ದರೆ ಹಾಂಗೆ ಹೇಳ್ರೆ ಎಂತ ಹೇಳಿ ಕೇಳುವ ಸ್ವಭಾವಂದಾಗಿ “ನಿನಗೆ ಅದು ಇದು ಅಜಕ್ಕೆ ಎಂತಕೆ? ಸುಮ್ಮನೆ ಇಪ್ಪಲೆ ಆವುತ್ತಿಲ್ಲೆಯ ಹೇಳಿ ಆನು ಸುಮಾರು ಸರ್ತಿ ಮನೆಲಿ ಶಾಲೆಲಿದೆ ಮಂಗಳಾರತಿ ಮಾಡ್ಸಿಕೊಂಡಿದೆ !
ಆದರೂ ಆ ಸ್ವಭಾವ ದೊಡ್ಡ ಅಪ್ಪಗಲೂ ಎನಗೆ ಬಿಟ್ಟು ಹೋಯಿದಿಲ್ಲೆ! ಸಣ್ಣಾದಿಪ್ಪಗ ಸಮಯ ಸಂದರ್ಭ ನೋಡದ್ದೆ ಮಾತಿನ ನಡುವೆ ಬಾಯಿ ಹಾಕಿ ಬೈಗಳು ತಿಂತಿತ್ತಿದೆ!
ದೊಡ್ಡ ಆದ ಹಾಂಗೆ ಕೇಳುವ ಅಭ್ಯಾಸ ಬಿಟ್ಟು ಹೋತು, ಆದರೆ ಗ್ರಹಿಸುವ ಅಭ್ಯಾಸ ಒಳುದ್ದು! ಹಾಂಗಾಗಿಯೇ ಬಹುಶ ಅವು ಇವು ಮಾತಾಡುವಾಗ ಬಳಕೆ ಅಪ್ಪ ವಿಶಿಷ್ಟ ಬಳಕೆ ಬಗ್ಗೆ ಎನ್ನ ಗಮನ ಹೋ ವುತ್ತು ಹೇಳಿ ಕಾಣೆಕ್ಕು!
ಆನು ಇದರ ಎಂತಕೆ ಹೇಳಿದ್ದು ಹೇಳಿರೆ ಮೊನ್ನೆ ದ್ವಾದಶಿ ಸಮಾರಾಧನೆಗೆ ಎಂಗಳ ಕೋಳ್ಯೂರು ದೇವಸ್ಥಾನಕ್ಕೆ ಹೋಗಿತ್ತಿದೆ, ಅಲ್ಲಿ ಊಟಕ್ಕೆ ಮೊದಲು ಇಬ್ರು ರಜ್ಜ ಪ್ರಾಯದ ಹೆಮ್ಮಕ್ಕ ಸುಖ ದುಃಖ ಮಾತಾಡಿಗೊಂಡು ಇತ್ತಿದವು. ಮಾತಿನ ನಡುವೆ “ಅವಂಗೆ ಭಾರೀ ಬಂಙ , ತಲೆ ತುಂಬ ಸಂಸಾರ ಪಾಪ!, ಎಲ್ಲವನ್ನು ನೋಡಿಗೊಂಡು ಹೋಯೆಕ್ಕು” ಹೇಳಿ ಆರ ಬಗ್ಗೆಯೋ ಹೇಳಿದ್ದು ಎನ್ನ ಗಮನಕ್ಕೆ ಬಂತು !
ತನ್ನಷ್ಟಕ್ಕೆ ಎನ್ನ ಕೈ ತಲೆ ಹತ್ತರಂಗೆ ಹೋತು! ಎನ್ನ ಅಪ್ಪಚ್ಚಿಯಕ್ಕ ತುಂಬಾ ಕುಶಾಲಿನೋರು, ಅವು “ಅವಂಗೆ ತಲೆ ತುಂಬಾ ಸಂಸಾರ” ಡಿಡಿಟಿ ಸಾಕಾ? ಅಥವಾ ಬಿ ಎಚ್ ಸಿ ತರಕ್ಕಾವುತ್ತಾ ಹೇಳಿ ತಲೆ ತೊರ್ಸಿ ಹೇನು ಕುಟ್ಟುವ ಅಭಿನಯ ಮಾಡುತ್ತಾ ಇದ್ದದು ನೆನಪಾಗಿ ನೆಗೆ ಬಂತು ಕೂಡಾ!
ತಲೆ ತುಂಬ ಸಂಸಾರ ಹೇಳುವ ನುಡಿಗಟ್ಟು ತುಂಬಾ ಜನ ಅಕ್ಕ ತಂಗೆಕ್ಕ, ಅಣ್ಣ ತಮ್ಮಂದಿರು, ಅಪ್ಪಚ್ಚಿ ಚಿಕ್ಕಮ್ಮಂದಿರು ಸೋದರತ್ತೆಕ್ಕ, ಮೊದಲಾದ ತುಂಬಾ ಜನ ಬಂಧು ಬಳಗ ಇಪ್ಪ ದೊಡ್ಡ ಸಂಸಾರ /ಕುಟುಂಬ ಹೇಳುವ ಅರ್ಥವ ಅಭಿವ್ಯಕ್ತಿಸುತ್ತು .
ತುಂಬಾ ಜನ ಅಕ್ಕ ತಂಗೆಕ್ಕ ತಮ್ಮಂದಿರು ಸೋದರತ್ತೆಕ್ಕ ಮೊದಲಾದೋರ ಸಲಹುವ ಜವಾಬ್ದಾರಿ ಸ್ಥಾನಲ್ಲಿ ಇಪ್ಪ ವ್ಯಕ್ತಿಯ ಬಗ್ಗೆ “ಅವಂಗೆ ತಲೆ ತುಂಬಾ ಸಂಸಾರ” ಹೇಳುವ ಮಾತಿನ ಬಳಕೆ ಮಾಡುತ್ತವು.
ಈಗ ನಮ್ಮ ಭಾಷೆ ಕೂಡಾ ಆಧುನಿಕತೆಗೆ ಒಳಗಾಗಿ ಇಂಥ ಅಪರೂಪದ ಮಾತುಗ ಕೇಳುಲೆ ಸಿಕ್ಕುದೇ ಅಪರೂಪ ಆಯಿದು ಅಲ್ಲದ? ಇಂಥ ಪದಂಗಳ ಬಳಸಿ ಉಳಿಸಕ್ಕು ಹೇಳಿ ಎನ್ನ ಗಮನಕ್ಕೆ ಬಂದದರ ಬರದು ಮಡುಗುತ್ತಾ ಇದ್ದೆ .

8 thoughts on “ಗಿಳಿ ಬಾಗಿಲಿಂದ -ತಲೆ ತುಂಬ ಸಂಸಾರ

  1. [ಇಂಥ ಪದಂಗಳ ಬಳಸಿ ಉಳಿಸಕ್ಕು ಹೇಳಿ ಎನ್ನ ಗಮನಕ್ಕೆ ಬಂದದರ ಬರದು ಮಡುಗುತ್ತಾ ಇದ್ದೆ ] – ಅಪ್ಪಪ್ಪು. ಆನೂದೆ ಇಂಗ್ಲೀಶು ಕಾಪಿ ಮಾಡಿ ಮಡಿಕ್ಕೊಂಡೆ.
    ಗಿಳಿಬಾಗಿಲೆಡಕ್ಕಿಂದ ಒಂದೊಂದೇ ಹೆರಟು ಇಲ್ಲಿಗೆ ಬಪ್ಪದು ಲಾಯಕ ಇದ್ದು.

  2. ಸಂಸಾರ ತಾಪತ್ರಯಲ್ಲಿ ಮುಳುಗಿ ತಲೆ ಹಣ್ಣಾದವ ಗಿಳಿಬಾಗಿಲಿಲ್ಲಿ ತಲೆ ಹೆರ ಹಾಕಿದ್ದು ಲಾಯಕಿತ್ತು. ಲಕ್ಷ್ಮಿಯಕ್ಕನ ವಿಚಾರ ಧಾರೆ ಬೈಲಿಲ್ಲಿ ಹರಿತ್ತಾ ಇರಳಿ.

  3. ಇದರಲ್ಲೆ ಕ೦ಡಪ್ಪಗ ನಮ್ಮ ಸತ್ಯಣ್ಣ ಎವತ್ತೋ ಹೇಳಿದ್ದು ನೆ೦ಪಾತಿದ . ಅದುದೇ ಈಗಾಣ೦ಗೇ ಓಟಿನ ಒಯಿಪ್ಪಾಟಿನ ಸಮಯ. ಅ೦ಬಗ ಮಾರಾರ್ ವಾಗ್ಮಿಯ ಪ್ರವಾಹ ಕಾಲಡ.ಮಾರಾರ್ ವಿರಾಜಪೇಟಿ ,ಮಡಿಕೇರಿ ಹೊಡೆಲಿ ಭೀಷಣವಾಗಿ ಬಿಗಿದು ಮುತ್ತೂ ರು, ಸು ಳ್ಯ ಬಯಿಲಿ೦ಗೆ ಬ೦ದು ಎರು ಪದಲಿ ಬಿಗವಲೆ ಸುರುಮಾಡಿತ್ತಡ.ಜನ೦ಗ ಎಲ್ಲಾ ಒ೦ದರ ಮೇಲೋ೦ದು ವಟ್ಟಾರೆ ತಾಟಿ. ಮು೦ದುವರಿಸಿ ಹೇಳಿತ್ತಡ ಆನು ಈಗ ಮಡಿಕೇರಿ ,ವಿರಾಜಪೇಟೆಕಡೇ ಸ೦ಸಾರ ಮಾಡಿ,ಈಗ ನಿ೦ಗಳತ್ಲಾಗಿ ಸ೦ಸಾರ ಮಾಡಲ್ಲೆ ಬಯಿ೦ದೆ ,ಒಪ್ಪಿಗೆ ಅಲ್ಲದೋ ಕೇಳಿತ್ತಡ. …….. ಅದರ ಕೇಳಿಯಪ್ಪಗ ,ಅಲ್ಲಿದ್ದವು ಒ೦ದರಿ ,ಟೇ ಟ್ಟೇ ಆದವಡ.
    ಹಾ೦ಗೆ ಒಗ್ಗರಣೆ ಸೌಟು ಮೇಲೆ ತ೦ದು ಪೋಸುಕೊಟ್ಟೂ ಸತ್ಯಣ್ಣಾ ಅತ್ತ್ಲಾಗಿ ಹೋದವು.

  4. ಲಕ್ಷ್ಮಿ ಅಕ್ಕನ ಗಿಳಿಬಾಗಿಲಿಲಿ ಇಣ್ಕುವಗ ಮೊದಾಲು ಬ೦ದ ಆಲೋಚನೆ– ಲಕ್ಷ್ಮಿಯಕ್ಕ೦ಗೂ ”ತಲೆ ತು೦ಬಾ ಸ೦ಸಾರವೋ”? ಃ-)

    1. ಅದಪ್ಪು ಭಾಗ್ಯಕ್ಕ. ಲಕ್ಷ್ಮಿ ಅಕ್ಕನ ತಲೆಲಿಪ್ಪದು ಬಹುಶಃ ಮಲಯಾಳಂ ನ “ಸಂಸಾರ” . ಅದನ್ನೆ ಮತ್ತೆ “ಗಿಳಿಬಾಗಿಲಿಂದ” ಹೆರ ಹಾಕೊದು ಆಗಿಕ್ಕು.

      1. ಲಕ್ಷ್ಮಿಯಕ್ಕನ ”ಗಿಳಿಬಾಗಿಲು” ಅಂಕಣ ಒಂದರಿ ನಿ೦ದು , ಈಗ ಪುನಃ ಸುರುವಾತು ಅಲ್ಲದೋ ? ಲಕ್ಷ್ಮಿಯಕ್ಕಂಗೂ ಉದ್ಯೋಗ , ಮನೆಕೆಲಸ , ಬರವಣಿಗೆ , ಹವ್ಯಾಸ ಇತ್ಯಾದಿಯಾಗಿ ಹಲವಾರು ಕಾರ್ಯಕ್ರಮ೦ಗಳ ತಾಪತ್ರಯ ಇದ್ದತ್ತೋ ಏನೋ ಹೇಳುವ ಅರ್ಥಲ್ಲಿ ಬರದ್ದು . ಮತ್ತೆ ಕ೦ಡು ಕೊಶಿಯಾತು.
        ”ಸಂಸಾರ ” ಹೇಳುವ ಮಲಯಾಳಮ್ ಭಾಷೆಯ ಅರ್ಥ ಗೊಂತಿದ್ದು . ನಮ್ಮ ಭಾಷೆಲಿ ,ಕನ್ನಡಲ್ಲಿಯೂ ಗೊಂತಿದ್ದು . ಆದರೆ ನಿಂಗೊ ಬರದ್ದು ಮಾತ್ರ ಎನಗೆ ಅರ್ಥ ಆಯಿದಿಲ್ಲೆ ಮಾವ . ರಜ ವಿವರಣೆ ಕೊಡ್ತಿರೋ ?

  5. ಅಪ್ಪು, ಖಂಡಿತಾ ಒಳುಶೆಕ್ಕು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×