Oppanna.com

ಗಿಳಿ ಬಾಗಿಲಿಂದ -ಪರವೂರಿನ ಮಾವಿನ ಕಾಯಿಂದ ನಮ್ಮ ಊರಿನ ಅಂಬಟೆಕಾಯಿ ಅಕ್ಕು

ಬರದೋರು :   ಲಕ್ಷ್ಮಿ ಜಿ.ಪ್ರಸಾದ    on   11/06/2014    9 ಒಪ್ಪಂಗೊ

ಕಳುದ ಸರ್ತಿ ಊರಿಂಗೆ ಅಪ್ಪನ ಮನೆ ವಾರಣಾಸಿಗೆ ಹೋದಿಪ್ಪಗ ಅಲ್ಲಿ ಅಮ್ಮಂದೆ ತಮ್ಮನುದೆ ಏನೋ ಬೆಶ್ರೊಟ್ಟಗೆ ಗೋಡೆ ಅಡಿ ರಜ್ಜ ಜಗ್ಗಿದ್ದು .ಮಳೆ ಬರಕ್ಕಾದರೆ ಅದರ ಸರಿಯಾಗಿ ಕಟ್ಟಕ್ಕು ಹೇಳಿ ಮಾತಾಡಿಗೊಂಡು ಇತ್ತಿದವು .ಎಂಗಳ ಊರಿಲಿಯೇ ಒಂದು ಮೇಸ್ತ್ರಿ ಇದ್ದು .ಕಂಡಾಬಟ್ಟೆ ಬ್ಯುಸಿ ಆಗಿರೆಕ್ಕು .ಅದರ ಬಪ್ಪಲೆ ಹೇಳಿದೆ ಬೈನ್ಡಿತ್ತಿಲ್ಲೆ ಅಡ.ಅಂಬಗ ಮಾತಿನ ನಡುವೆ ಅಮ್ಮ ಹೇಳಿದ “ವಾಣಿಯ (ಎನ್ನ ಅಕ್ಕನ )ಮನೆ ಹತ್ತರೆ ಒಂದು ಒಳ್ಳೆ ಮೇಸ್ತ್ರಿ ಇದ್ದಡ ,ಅದರ ಹೇಳುವ” ಹೇಳಿ .ಅಂಬಗ ತಮ್ಮ “ಬೇರೆ ಊರಿನೋರ ಸಂಗತಿ ಆಗ ಅಮ್ಮ .ಪರ ಊರಿನ ಮಾವಿನ ಕಾಯಿಂದ ನಮ್ಮ ಊರಿನ ಅಂಬಟೆ ಅಕ್ಕು ಹೇಳಿ ಮಾತೇ ಇಲ್ಲೆಯ “ಹೇಳಿ ಹೇಳಿದ .
ಅಷ್ಟರ ತನಕ ಅವರ ಮಾತು ಕಥೆಲಿ ಎನಗೆನೂ ಅಷ್ಟು ಆಸಕ್ತಿ ಇತ್ತಿಲ್ಲೆ.ಅಲ್ಲೇ ಕೂದಿತ್ತಿದೆ.ಹಾಂಗೆ ಕೆಮಿಗೆ ಬಿದ್ದತ್ತು ಅಷ್ಟೇ .ಆದರೆ ಈ ನುಡಿಗಟ್ಟು ಕೇಳಿದ ತಕ್ಷಣ ಎನ್ನ ಕೆಮಿ ಕುತ್ತ ಆತು !
ಅಪ್ಪು !ಬೇರೆ ಊರಿನೋರು ಒಂದರಿಯಂಗೆ ಬಂದು ಕೆಲಸ ಮಾಡಿ ಕೊಟ್ಟಿಕ್ಕಿ ಹೋಕು.ಆದರೆ ಮತ್ತೆ ಏನಾರು ಅದರಲ್ಲಿ ಸಣ್ಣ ಪುಟ್ಟ ಸಮಸ್ಯೆಗ ಬಂದರೆ ,ಅಥವಾ ಇನ್ನೇನೋ ಸಣ್ಣ ಪುಟ್ಟ ಕೆಲಸ ಹೇಳುಲೆ ಅವು ಇರ್ತವ ?ಮತ್ತೆ ಬಂದು ಸರಿ ಮಾಡಿ ಕೊಡುತ್ತವ ?,ಮತ್ತೆ ಅದಕ್ಕೆ ನಾವು ನಮ್ಮ ಊರಿನ ಮೇಸ್ತ್ರಿಯನ್ನೇ ಹಿಡಿಯಕ್ಕು .ಇಲ್ಲದ್ದರೆ ಬೇರೆಯೋರು ಮಾಡಿದ ಕೆಲಸವ ಅವು ಸರಿ ಮಾಡುಲೆ ಸುಲಭಕ್ಕೆ ಒಪ್ಪುತ್ತವ ?ಅದೆಲ್ಲ ದೊಡ್ಡ ರಗಳೆ ಸಂಗತಿ .
ಅದರ ಬದಲು ನಮ್ಮ ಊರಿನ ಮೇಸ್ತ್ರಿಹತ್ತರೆ ಕೆಲಸ ಮಾಡ್ಸಿರೆ ಮುಂದೆ ಕೂಡಾ ಏನಾರು ಬೇಕಾರೆಅದು ಊರಿಲಿಯೆ ಇರ್ತನ್ನೇ .
ದೂರದ ಊರಿಲಿ ಅಪ್ಪ ಅಪ್ಪೆಮಿಡಿಯಂಥ ಮಾವಿನ ಕಾಯಿ ಉಪ್ಪಿನಕಾಯಿ ಹಾಕುಲೆ ,ಗೊಜ್ಜಿ ಮಾಡುಲೆ ತುಂಬಾ ಒಳ್ಳೆಯ ರುಚಿಯ ವಸ್ತು .ಅಂಬಟೆ ಕಾಯಿ ಮಾವಿನಕಾಯಿಯಷ್ಟು ರುಚಿಯಲ್ಲ .ಆದರೆ ಅಂಬಟೆ ಕಾಯಿ ನಮ್ಮ ಜಾಲಿನ ಹತ್ರಣಮರಲ್ಲಿಯೇ ಆವುತ್ತು ,ಕೊಕ್ಕೆ ತೆಕ್ಕೊಂಡು ಹೋಗಿ ಯಾವಾಗ ಬೇಕಾರು ಕೊಯ್ದು ತಪ್ಪಲಕ್ಕು.ಆರತ್ರೂ ಕೆಳಕ್ಕೂ ಹೇಳಿ ಇಲ್ಲೇ. ಎಂತಕೆ ಹೇಳ್ರೆ ಅದು ನಮ್ಮದೇ ಅನ್ನೇ .ಅದಕ್ಕೆ ಹೇಳುದು ಪರ ಊರಿನ ಮಾವಿನ ಕಾಯಿಂದ ನಮ್ಮ ಊರಿನ ಅಂಬಟೆ ಕಾಯಿ ವಾಸಿ ಹೇಳಿ .
ಆದರೆ ಇದು ನಮ್ಮ ಭಾಷೆಲಿ ನುಡಿಗಟ್ಟು ಆಗಿ ಬಳಕೆ ಆವುತ್ತು .
ನಮಗೆ ದೂರಲ್ಲಿ ತುಂಬಾ ಜನ ಆತ್ಮೀಯರು ಹತ್ತರಣ ಸಂಬಂಧಿಕರು ಇಕ್ಕು.ಆದರೆ ನಮಗೆ ಏನಾರು ಸಮಸ್ಯೆಗ ಬಂದರೆ ತಕ್ಷಣ ಸಹಾಯಕ್ಕೆ ಬಪ್ಪದು ,ಸಿಕ್ಕುದು ನೆರೆ ಕರೆಯ ಜನಂಗ ಅಲ್ಲದ ?ಅವು ನಮಗೆ ಸಂಬಂಧಿಕರು ಅಲ್ಲದ್ದೇ ಇಕ್ಕು .ಆದರೆ ಅವರತ್ರೆ ನಾವು ಒಳ್ಳೆದು ಮಾಡಿಕ್ಕೊಳ್ಳಕ್ಕು ಹೇಳುವ ಲೋಕ ಜ್ಞಾನದ ತಿಳುವಳಿಕೆಯ ಮಾಡ್ಸುತ್ತು “ಪರವೂರಿನ ಮಾವಿನ ಕಾಯಿಂದ ನಮ್ಮ ಊರಿನ ಅಂಬಟೆ ಕಾಯಿ ಅಕ್ಕು”ಹೇಳುವ ಹವ್ಯಕ ನುಡಿಗಟ್ಟು .
ಕೋಳ್ಯೂರು ಸೀಮೆಯ ಹವ್ಯಕ ಭಾಷೆಲಿ ಇದರ ಬಳಕೆ ಇದ್ದು ,ಬೇರೆ ಕಡೆದೆ ಇಕ್ಕು ಅಲ್ಲದ ?

9 thoughts on “ಗಿಳಿ ಬಾಗಿಲಿಂದ -ಪರವೂರಿನ ಮಾವಿನ ಕಾಯಿಂದ ನಮ್ಮ ಊರಿನ ಅಂಬಟೆಕಾಯಿ ಅಕ್ಕು

  1. ಉದಾಹರಣೆಯೊಟ್ಟಿ೦ಗೆ ಒಳ್ಳೆ ವಿಶ್ಲೇಷಣೆಆರ್ಥಪೂರ್ಣ ಮಾಹಿತಿಗೆ ಧನ್ಯವಾದ ಅಕ್ಕಾ.

  2. ಲಕ್ಷ್ಮೀ ಅಕ್ಕ, ತುಂಬಾ ಚೆಂದದ ವಾಕ್ಯಂಗೊ. ಭಾರೀ ಅರ್ಥಗರ್ಭಿತ ಆಗಿಪ್ಪ ಮಾತು ತಿಳಿಶಿ ಕೊಟ್ಟಿದಿ.
    ಎಷ್ಟೋ ಸರ್ತಿ ನಾವು ನಮ್ಮ ಹತ್ತರೆ ಇಪ್ಪೋರ ಬಿಟ್ಟು ದೂರಲ್ಲಿಪ್ಪೋರ ಹತ್ತರೆ ಮಾಡ್ಲೆ ನೋಡ್ತು. ದೂರಲ್ಲಿಪ್ಪೋರಿಂಗೆ ನಾವು ಯಾವಾಗಲೂ ದೂರದವ್ವೇ!! ಹತ್ತರೆ ಆವುತ್ತೇ ಇಲ್ಲೆ.
    ದೂರಲ್ಲಿ ಇಪ್ಪೋರ ಹತ್ತರೆ ಮಾಡುವ ದೆಸೆಲಿ ನಮ್ಮ ಸಮಯ ಸುಮಾರು ಕಳೆತ್ತು. ಅದರ ಅರಿವಪ್ಪದು ನವಗೆ ತಡವಾಗಿ.
    ಹತ್ತರೆ ಇಪ್ಪೋರು ನಮ್ಮ ದೂರ ಮಾಡ್ತವಿಲ್ಲೆ. ಆದರೆ ಹತ್ತರೆ ಇಪ್ಪೋರ ನಾವು ಹತ್ತರೆಯೇ ಮಡಿಕ್ಕೊಂಡರೆ ನಮ್ಮ ಜೀವನ ಚೆಂದಲ್ಲಿ ನೆಡಗು.
    ಒಳ್ಳೆ ಶುದ್ದಿ ಕೊಟ್ಟದಕ್ಕೆ ಧನ್ಯವಾದಂಗೊ.

    1. ಅಪ್ಪು ನುಡಿಗಟ್ಟುಗ ಹಿರಿಯೋರ ಅನುಭವದ ಮಾತುಗ ಅನ್ನೇ ,ಜೀವನ ಸತ್ಯವ ಮನವರಿಕೆ ಮಾಡಿ ಕೊಡುತ್ತು ,ಧನ್ಯವಾದಂಗ ಶಾರದಾಗೌರೀ ಅಕ್ಕ

  3. ಅ0ಬಗ ತೆ0ಕ ಹೊಡೆಲಿ ಬೆಳೆದ ಅ0ಬಟೆ ಮರವಾದರೂ ಕಡಿವಲಾಗಲ್ಲದೊ?

  4. ಲಾಯಕ ಆಯಿದು.
    ಕಾಶಿಗೆ ಹೋದರೆ ಕಾಸಿಂಗೆ ಕುದುರೆ ಸಿಕ್ಕುತ್ತು -ಹೇಳಿಯೂ ಒಂದು ಮಾತು ಇದ್ದು .

      1. ಕಾಶಿ ಹೇಳಿದರೆ ದೂರದ ಊರು. ಅಲ್ಲಿ ಹೋಗಿ ಬಪ್ಪ ಕರ್ಚಿ ಇದ್ದನ್ನೇ? ಕುದುರೆಯ ತಪ್ಪ ಕಷ್ಟ ಬೇರೆ .ಅಲ್ಲಿ ಒಂದು ಕಾಸಿಂಗೆ [ಕಮ್ಮಿ ಕ್ರಯಕ್ಕೆ]ಕುದುರೆ ಸಿಕ್ಕಿರೂ ಗುಣ ಇಲ್ಲೇ.ಹಾಂಗಾಗಿ ಹತ್ತರಾಣ ಊರಿನದ್ದೆ ಒಳ್ಳೇದು ಹೇಳಿ ಇದರ ಅರ್ಥ

        1. ಒಳ್ಳೆ ಅರ್ಥವತ್ತಾದ ಪಡೆನುಡಿ ಅರ್ಥ ತಿಳಿಸಿದ್ದಕ್ಕೆ ಧನ್ಯವಾದಂಗ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×