Oppanna.com

ಪಂಜಸೀಮೆ ಹವಿಗನ್ನಡಲ್ಲಿ ಬಳಕೆಲಿ ಇಪ್ಪ ಪದಗಳ ಸಂಗ್ರಹ -3

ಬರದೋರು :   ಜಯಗೌರಿ ಅಕ್ಕ°    on   05/04/2013    18 ಒಪ್ಪಂಗೊ

ಜಯಗೌರಿ ಅಕ್ಕ°

ಈ ವಾರ ‘ಕ’ ಕಾರಂದ ಸುರು ಅಪ್ಪ ಪದಗಳ ಬಗ್ಗೆ ಚೂರು ತಿಳ್ಕೊಂಬ.ಈ ವಾರವೂ ನಿಂಗೊಗೆ ಗೊತ್ತಿಪ್ಪ ಪದಗಳ ಸೇರ್ಸುಲೆ ಮರಿಯೆಡಿ .

  • ಕೆರುಶಿ/ತಡ್ಪೆ – ಗೆರಸೆ/ಗೆರಶಿ

ಪ್ರಯೋಗ : ಈ ನಮೂನೆ ಅಕ್ಕಿಯ  ಕೆರುಶಿ ತೆಕ್ಕೊಂಡು ಕೇರೆಕ್ಕಷ್ಟೇ.  ಕೆರುಶಿ ಆಯಾತಾಕಾರಲ್ಲಿ ಇರ್ತು ಮತ್ತು ಪ್ರತೀ ಮೂಲೆಯು ಉರುಟಾಗಿರ್ತು.ಇದರ ಅಕ್ಕಿ,ಗೋಧಿ ಮುಂತಾದ್ದರ ಕೇರುಲೆ ಉಪಯೋಗುಸುತ್ತವು.ಈಗ ಪೇಟೆಲಿ ಶುಚಿ ಮಾಡಿದ ಅಕ್ಕಿ ಸಿಕ್ಕುವ  ಕಾರಣಂದ ಇದರ ಉಪಯೋಗ ಹೋಳಿಗೆ ಓಯ್ಸುಲೆ ಕಾಣ್ತಷ್ಟೆ.

  • ಕೊದಿಲು – ಬೆಂದಿ

ಪ್ರಯೋಗ : ಇಂದು ಎಂತ ಕೊದಿಲು ನಿಂಗಳಲ್ಲಿ? ಇದು ಕನ್ನಡದ ‘ಸಾಂಬಾರು/ಹುಳಿ’. ಬೇರೆ ಸೀಮೆಗಳಲ್ಲಿ ಮೇಲಾರ/ಬೆಂದಿ ಹೇಳಿರೆ ‘ಪದಾರ್ಥ/ಅಡಿಗೆ’ ಹೇಳುವ ಅರ್ಥವೂ ಇದ್ದು. ಉದಾ: ಮೇಲಾರಕ್ಕೆ/ಬೆಂದಿಗೆ ಕೊರವಲೆ ಹೋಪದು..ನಾವು ಜೀರಿಗೆ ಅಥವಾ ಸಾಸಮೆ ಹಾಕಿ ಮಾಡಿದ ಪದಾರ್ಥಕ್ಕೂ ಜೀರಿಗೆ ಬೆಂದಿ, ಬಸಳೆ ಬೆಂದಿ ಹೇಳುದು ಇದ್ದು.ಕೆಲವೂ ಸರ್ತಿ ಬೋಳು ಸೊಳೆ ಬೆಂದಿ ಹೇಳುವ ಪ್ರಯೋಗವೂ ಇದ್ದು.ಆಯಾಯ ಸಂದರ್ಭಗೊಕ್ಕೆ ತಕ್ಕ ಹಾಂಗೆ ಪ್ರಯೋಗ ಬದಲುತ್ತು.

  • ಕೊಡು(ಇಲ್ಲಿ ತಾ) – ಕೊಂಡ 

ಪ್ರಯೋಗ : ಎಲೆ ಪೆಟ್ಟಿಗೆಯ ತಾ ಇಲ್ಲಿ ಹೇಳಿ ಪುಳ್ಳಿಯಕ್ಕೊಗೆ ಅಜ್ಜಂದ್ರು ಹೇಳ್ತವು.

  •  ಕೂರುದು -ಕೂಪದು

ಪ್ರಯೋಗ :ಈಗ ಜಗಿಲಿಲಿ ಕೂರುಲೆ  ಪುರುಸೊತ್ತಿಲ್ಲೆ.

  • ಕಲುಸು – ಬೆರಸು 

ಪ್ರಯೋಗ : ಇಂದು ಅವಲಕ್ಕಿ ಕಲಸಿದರೆ ಅಕ್ಕಾ?

  • ಕಪ್ಪೆ – ಕೆಪ್ಪೆ

ಪ್ರಯೋಗ : ಕಪ್ಪೆಯಾಂಗೆ ವಟ ವಟ ಹೇಳೆಡ.

  • ಕರು – ಕಂಜಿ

ಪ್ರಯೋಗ : ಕರುಗ ಅತ್ತ ಇತ್ತ ಓಡುದರ ನೋಡುದೇ ಚೆಂದ.

  • ಕನ್ನಡಿ – ಕನ್ನಾಟಿ

ಪ್ರಯೋಗ : ಕನ್ನಡಿ ಯಾವಗಲೂ ಲೊಟ್ಟೆ ಹೇಳ್ತಿಲ್ಲೆಡ.

  • ಕಡುಕೋಲು – ಕಡವ ಕಲ್ಲು,ಕಡಗಲ್ಲು, ಕಡೆತ್ತ ಕಲ್ಲು  

ಪ್ರಯೋಗ : ಆ ಕಡುಕೋಲಿನ ಹತ್ರ ಕತ್ತಿ ಇದ್ದು ತಾ. ಕಡುಕೋಲಿಲಿ ಬೀಸಿ  ಮಾಡಿದ ದೋಸೆ,ಅರಪ್ಪಿಗೆ ಬೇರೆ ರೀತಿಯ ರುಚಿ ಇರ್ತು.ಈಗಳೂ ಕೆಲವು ಮನೆಲಿ ಕಡ್ಕೋಲಿನ ಕರೆಂಟು ಹೋಗಿಪ್ಪಗ ಉಪಯೋಗುಸುಲೆ ಹೇಳಿ ಇರ್ಸಿಕೊಂಡಿದ್ದವು.  

  • ಕುತ್ತಿಗೆ – ಕೊರಳು 

ಪ್ರಯೋಗ : ಗುಟ್ಟು ಮಾತಾಡುವಾಗ ನೋಡುವವರ ಕುತ್ತಿಗೆ ಉದ್ದ ಅಪ್ಪದು ಸಹಜ.

  •  ಕರಿ – ದಿನುಗೊಳು 

ಪ್ರಯೋಗ : ಎಷ್ಟು ಸರ್ತಿ ಕರುದ್ರೂ ಕರೆಗಂಟೆ ಮಾಡದ್ದೆ ಕೆಳ್ತಿಲ್ಲೆ.

  • ಕರು ಬಿಡುದು –   ಹಾಲು ಕರವದು 

ಪ್ರಯೋಗ : ಕರು ಬಿಡಲೆ ಬೆಳಗಪ್ಪಗಳೇ ಹೋಯೆಕ್ಕು.

  • ಸೆರೆ -ಎಡಕ್ಕು 

ಪ್ರಯೋಗ : ಅಂಚೆಯಣ್ಣ ಕಾಗದವ ಬಾಗಿಲ ಸೆರೆಲಿ ಹಾಕುದು ಕಡಿಮೆ ಆಯ್ದು.    

  • ಕಳಸಿಗೆ  – ಅಟ್ಟಿನಳಗೆ 

ಪ್ರಯೋಗ : ಕಳಸಿಗೆಯ ಕಡುಬು,ಇಡ್ಲಿ ಇತ್ಯಾದಿಗಳ ಬೇಸುಲೆ ಉಪಯೋಗುಸುತ್ತವು.

  • ಕಾಳು ಮೆಣಸು/ಒಳ್ಳೆ ಮೆಣಸು – ಗೆನ ಮೆಣಸು 

ಪ್ರಯೋಗ : ಕಾಳು ಮೆಣಸು ಆರೋಗ್ಯಕ್ಕೆ ಒಳ್ಳೆದಡ.

  • ಕಿಟಿಕಿ – ದಳಿ, ಗಿಣಿ ಬಾಗಿಲು 

ಪ್ರಯೋಗ : ಆ ಕಿಟಿಕಿ ಹತ್ರ ಚಿಮಣಿ ದೀಪ ಇದ್ದು.

  • ಕೆಮ್ಡೆ ಕಾಯಿ – ಚೀನಿ ಕಾಯಿ 

ಪ್ರಯೋಗ : ಕೆಮ್ಡೆಕಾಯಿ ಕಡುಬು ದೀಪಾವಳಿಗೆ ವಿಶೇಷ.

  • ಕಡುಬು – ಕೊಟ್ಟಿಗೆ

ಪ್ರಯೋಗ : ಸೌತೆಕಾಯಿ,ಕೆಮ್ದೆಕಾಯಿ,ಹಲಸಿನ ಕಾಯಿ ಕಡುಬಿನ ಹಬೆಲಿ ಬೇಸಿ ಮಾಡುದು.ಪಂಜ ಸೀಮೆಲಿ ಕೊಟ್ಟಿಗೆ ಹೇಳಿರೆ ದನದ ಕೊಟ್ಟಿಗೆ ಅಥವಾ ಹಟ್ಟಿ.

  • ಕುರುವೆ -ಕುರುವೆಗಳ ಆಕಾರ ಮತ್ತು ಅದರ ಉಪಯೋಗಕ್ಕೆ ತಕ್ಕ ಹಾಂಗೆ ಬೇರೆ ಬೇರೆ ರೀತಿಯ ಹೆಸರುಗ ಇದ್ದು.ಅಡಿಕೆ ಹೆರುಕ್ಕುಲೆ ಕಾಳಂಕುರುವೆ, ಕಾಳುಮೆಣಸು ಕೊಯ್ವಲೆ ಪಂಚ ಕುರುವೆ,ಅಕ್ಕಿ ತೊಳಿಲೆ ಬೆಂಡು ಕುರುವೆ ..ಹೀಂಗೆ.ಕುರುವೆಯ ಬೆತ್ತ ಅಥವಾ ಮಾದೇರಿ ಬಳ್ಳಿಂದ ಮಾಡ್ತವಡ. 

18 thoughts on “ಪಂಜಸೀಮೆ ಹವಿಗನ್ನಡಲ್ಲಿ ಬಳಕೆಲಿ ಇಪ್ಪ ಪದಗಳ ಸಂಗ್ರಹ -3

  1. ಅಕ್ಕಿ/ ಭತ್ತ ಇದರ ಅಳವ ಮಾಪು = ಕಳಸೆ/ಕಳಸಿಗೆ. ಇದಕ್ಕೆ ಪ೦ಜ ಸೀಮೆಲಿ ಉಪಯೊಗಿಸುವ ಪದ ಯಾವುದು?

  2. “ಪ್ರಯೋಗ : ಆ ಕಡುಕೋಲಿನ ಹತ್ರ ಕತ್ತಿ ಇದ್ದು ತಾ. ಕಡುಕೋಲಿಲಿ ಬೀಸಿ ಮಾಡಿದ ದೋಸೆ,ಅರಪ್ಪಿಗೆ ಬೇರೆ ರೀತಿಯ ರುಚಿ ಇರ್ತು.ಈಗಳೂ ಕೆಲವು ಮನೆಲಿ ಕಡ್ಕೋಲಿನ ಕರೆಂಟು ಹೋಗಿಪ್ಪಗ ಉಪಯೋಗುಸುಲೆ ಹೇಳಿ ಇರ್ಸಿಕೊಂಡಿದ್ದವು. ”
    ಇದೇ ವಾಕ್ಯವ ಎ೦ಗಳಲ್ಲಿ ಹೀ೦ಗೆ ಹೇಳುಗು – ” ಆ ಕಡಗಲ್ಲಿನ ಹತ್ತರೆ ಕತ್ತಿ ಇದ್ದು, ಕೊ೦ಡಾ… ಕಡಗಲ್ಲಿಲ್ಲಿ ಕಡದು ಮಾಡಿದ ದೋಸೆ, ಅರಪ್ಪಿ೦ಗೆ ಬೇರೆ ರೀತಿಯ ರುಚಿ ಇರ್ತು.. ಈಗಳೂ ಕೆಲವು ಮನೆಗಳಲ್ಲಿ ಕಡಗಲ್ಲಿನ ಕರೆ೦ಟು ಹೋಗಿಪ್ಪಗ ಉಪಯೋಗಿಸಲೆ ಹೇಳಿ ಮಡಿಗಿಯೊ೦ಡಿದವು.”

    1. ಕಡವ ಕಲ್ಲಿನ ‘ಕಡುಗಲ್ಲು’ ಹೇಳ್ತಿ ಅಲ್ಲದಾ ನಿಂಗ.. ಪಟ್ಟಿಗೆ ಸೇರ್ಸುತ್ತೆ..
      ಧನ್ಯವಾದ ಅಣ್ಣ.

      1. ಎನಗೆ ಮೊದಲಿಂದಲೂ ಅದರ ‘ಕಡವಕಲ್ಲು’ ಹೇಳಿಯೇ ಕೇಳಿ ನೆಂಪಿಪ್ಪದು..

        1. ಎನಗೆದೆ ಶ್ಯಾಮಣ್ಣ ಬರದ ಹಾಂಗೆ ‘ಕಡವ ಕಲ್ಲು’ ಹೇಳುದೆ ಕೇಳಿ ಗೊಂತು.

          1. ಕಡೆತ್ತ ಕಲ್ಲು; ಕಡವಕಲ್ಲು;ಕಡಗಲ್ಲು ಈ ಮೂರು ಪ್ರಯೋಗವನ್ನುದೆ ಆನು ಕೇಳಿದ ನೆ೦ಪಿದ್ದು. ಹಾ೦ಗಾಗಿ ಈ ಪದ೦ಗಳ ನಿ೦ಗ ಕೊಟ್ಟ ಕಡುಗೋಲಿನ ಪರ್ಯಾಯ ಪದಲ್ಲಿ ಸೇರ್ಸಿಗೊ೦ಬಲಕ್ಕು.

      2. ಕಡವ ಕಲ್ಲು ಹೇಳಿದೆ ಹೇಳ್ತವು, ಕಡಗಲ್ಲು ಹೇಳಿದೆ ಹೇಳ್ತವು. (ಕಡುಗಲ್ಲು ಅಲ್ಲ)

  3. ಒಳ್ಳೆ ಮಾಹಿತಿ,ಪ್ರಯತ್ನ.ಹವ್ಯಕ ಭಾಷೆಯ ಶಬ್ದಭ೦ಡಾರವ ತು೦ಬುಸುವ ಹೊಣೆ ನಮ್ಮ ಮೇಲಿದ್ದು.
    ಅಕ್ಕ೦ಗೆ ಅಭಿನ೦ದನೆಗೊ.

  4. ಎನ್ನ ಅಪ್ಪನ ಮನೆಲಿ “ಇಂದು ಎಂತರ ಬೆಂದಿ?” ಹೇಳಿರೆ “ಇಂದಿಂಗೆ ಎಂತರ ಅಡಿಗೆ?” ಹೇಳುವ ಅರ್ತ ಬತ್ತು.
    ಬೆಂದಿ = ತಾಳು, ಸಾರು, ಕೊದಿಲು, ಸಾಂಬಾರು, ಮೇಲಾರ ಯಾವುದೆ ಬಗೆ ಆದಿಕ್ಕು.
    ಜೆಂಬ್ರದ ಮುನ್ನಾಣ ದಿನ ‘ಬೆಂದಿಗೆ ಕೊರವಲೆ ಹೋಪದು” ಹೇಳಿಯೆ ಹೇಳುದು… ಕೆಲವು ಕಡೆ ‘ಮೇಲಾರಕ್ಕೆ ಕೊರವಲೆ ಹೋಪದು” ಹೇಳ್ತವಲ್ಲದಾ?

    ಹಾಂಗೆ ಜೀರಿಗೆ ಬೆಂದಿ ಹೇಳಿ ಇನ್ನೊಂದು ಪದ ಪ್ರಯೋಗ ಇದ್ದು, ಇಲ್ಲಿ ಉಪ್ಪು, ಮೆಣಸು ಹಾಕಿ ಬೇಶಿದ ತರಕಾರಿಗೆ ( ಸೊರೆಕಾಯಿ, ದಾರಳೆ, ಪಟಕಿಲ ಇತ್ಯಾದಿಲಿ ಮಾಡುದು) ಜೀರಿಗೆ+ತೆಂಗಿನ ಕಾಯಿ ಒಟ್ಟು ಕಡದ ಅರಪ್ಪು ಸೇರ್ಸಿ ಮಾಡಿದ ಒಂದು ಬಗೆ ಅಡಿಗೆ. ಹಾಂಗೆ ಇನ್ನೊಂದು ಅರ್ಥ ‘ಬೆಂದಿ’ ಗೆ……

    ಇದು ಎನಗೆ ತಿಳಿದ ಮಟ್ಟಿಂಗೆ ಆನು ಬರದ್ದು… ಬೇರೆ ನಮುನೆ, ರೀತಿಲಿ ಸರಿಯಾಗಿ ತಿಳಿದೋರು ವಿವರುಸುಗು.

    1. ಸುಮನಕ್ಕ,

      ನಿಂಗ ಕೊದಿಲು/ಸಂಬಾರಿಗೆ ಎಂತ ಹೇಳುದು?

      1. ಜಯಗೌರಿ ಅಕ್ಕಾ, ಕೊದಿಲು/ಸಾಂಬಾರಿಂಗೆ ಹಾಂಗೆ ಹೇಳುದು, ಕೊದಿಲು/ಸಾಂಬಾರು ಹೇಳಿಯೆ…

        1. ಹಾಂಗಾರೆ, ಮಜ್ಜಿಗೆ ಹಾಕಿ ಮಾಡಿದ ಪದಾರ್ಥ ಮೇಲಾರಾಳಿ ಹೇಳುದಾದರೂ, ಕೆಲವು ಪ್ರದೇಶಲ್ಲಿ ಎಲ್ಲವನ್ನೂ ಸೇರಿ ಮೇಲಾರ ಹೇಳುದು..ಹಾಂಗೆಯೆ ಜೀರಿಗೆ,ಸಾಸಮೆ+ಕಾಯಿ+ಮೆಣಸು ಹಾಕಿದ್ದು ಜೀರಿಗೆ ಬೆಂದಿ, ಬಸಳೆ ಬೆಂದಿಯಾದರೂ , ಯಾವುದೇ ಪದಾರ್ಥಕ್ಕೂ ಬೆಂದಿ ಹೇಳುಲಕ್ಕು ಅಲ್ಲದ..ಒೞೆ ಮಾಹಿತಿ..ಧನ್ಯವಾದ ಅಕ್ಕ.

          1. ನಿಂಗೊಗೆದೆ ಧನ್ಯವಾದಂಗೊ ಅಕ್ಕಾ…

  5. ಭಾಷೆ ತಿಳಿಕ್ಕೊಂಬಲೆ ಅನುಕೂಲ ಆತು.

    1. ಖಂಡಿತ..ನಿಂಗೊಗೆ ಯಾವುದಾದರೂ ಅಪರೂಪ ಅಥವಾ ವಿಶೇಷ ಪದಗಳ ಬಗ್ಗೆ ಮಾಹಿತಿ ಇದ್ದರೆ ಸೇರ್ಸುಲಕ್ಕು.ಎಲ್ಲವೂ ಹೊಸತ್ತು ಕಲಿವಾಂಗಾವ್ತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×