ಹವಿಕ ಭಾಷೆ ಬಗ್ಗೆ ಕೆಲವು ವಿಷಯಂಗೊ

February 13, 2010 ರ 10:00 amಗೆ ನಮ್ಮ ಬರದ್ದು, ಇದುವರೆಗೆ 15 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅಜಕ್ಕಳ ಮಾಷ್ಟ್ರಣ್ಣನ ಗೊಂತಿಲ್ಲದ್ದೆ ಇಪ್ಪಲೆ ಸಾಧ್ಯವೇ ಇಲ್ಲೆ!
ಬೆಂಗುಳೂರಿನ ವಾದಿರಾಜಣ್ಣನ ಹಿಡುದು, ಕೊಡೆಯಾಲದ ಸಿಬಂತಿಅಣ್ಣನ ಒರೆಂಗೆ ಎಲ್ಲೊರಿಂಗೂ ಗುರ್ತ ಇದ್ದು ಅವರ!
ವಿಟ್ಳಸೀಮೆಯ ಅಜಕ್ಕಳಲ್ಲಿ ಮೂಲ ಆದರೂ, ಸದ್ಯ ಮಾಷ್ಟ್ರಣ್ಣ ಕೆಲಸದ ನಿಮಿತ್ತ ಬೀಸ್ರೋಡು ಹೊಡೆಂಗೆ ಬಂದು ಕೂಯಿದವು.
ಹೆಚ್ಚಿನ ಪರಿಚಯ ಅವ್ವೇ ಹೇಳುಗು, ಇನ್ನೊಂದರಿ – ಪುರುಸೋತಿಲಿ!
ಹವ್ಯಕ ಭಾಷೆಯ ಬಗೆಗೆ ವಿಶೇಷ ಅಧ್ಯಯನ ಮಾಡಿದ್ದವು. ಹಾಂಗಾಗಿ ಇವುದೇ ಡಾಗುಟ್ರು ಆಯಿದವು, (ಆದರೆ ಕೆದೂರು ಡಾಗುಟ್ರುಬಾವನ ಹಾಂಗೆ ಮದ್ದು ಕೊಡ್ಳೆ ಬತ್ತಿಲ್ಲೆ!) – ಇವು ಬರವ ಡಾಗುಟ್ರು!
ಕಾರ್ಯಕ್ಷೇತ್ರ ತುಂಬ ದೊಡ್ಡದು, ಬಾಶಣ ಮಾಡ್ಳೆ ಹಂಪಿಗೋ, ತೀರ್ಥಹಳ್ಳಿಗೋ – ಎಲ್ಲ ಹೋಯ್ಕೊಂಡೇ ಇಕ್ಕು! ಆ ದಿನ ಶಾಲೆಮಕ್ಕೊಗೆ ಹಬ್ಬ!
ಇವು ಒಂದು ಬ್ಲೋಗು ಬರೆತ್ತವಡ – ಚಿಂತನ ಬಯಲು ಹೇಳಿಗೊಂಡು ( http://ajakkalagirisha.wordpress.com), ಒಪ್ಪಣ್ಣನ ಬೈಲಿನ ಹಾಂಗೆಯೋ, ಉಮ್ಮಪ್ಪ!
ನಮ್ಮ ಭಾಷೆ, ಜನಜೀವನ, ನುಡಿ, ಇತ್ಯಾದಿ ವಿಷಯಂಗಳ ಮನನ ಮಾಡಿದ ಕಾರಣ, ಇವೆಲ್ಲದರ ಬಗ್ಗೆ ಒಂದಷ್ಟು ಶುದ್ದಿಗಳ ನವಗೆಲ್ಲ ಹೇಳ್ತವು, ಕೇಳುವೊº..!
ನಮ್ಮದೇ ಹಳೇ ವಿಚಾರಂಗಳ ನವಗೇ ತಿಳುಶಿಕೊಡ್ತ ಶುದ್ದಿಗೊಕ್ಕೆ ಒಪ್ಪ ಕೊಡುವೊº,
ಆತೋ?
~
ಒಪ್ಪಣ್ಣ

ಹವಿಕ ಭಾಷೆ ಬಗ್ಗೆ ಕೆಲವು ವಿಷಯಂಗೊ:

ಭಾಷೆ ಬಗ್ಗೆ ವಿವೇಚನೆ ಮಾಡುವಗ ಬೇರೆ ಬೇರೆ ದೃಷ್ಟಿಕೋನಂಗಳಲ್ಲಿ ನೋಡುವ ಕ್ರಮ ಇದ್ದು.

ಭಾಷೆಯ ಚರಿತ್ರೆಯ ಕಡೆಂಗೆ ಹೆಚ್ಚು ಒತ್ತು ಕೊಟ್ಟು, ಹೇಂಗೆ ಹೇಂಗೆ ಭಾಷೆ ಬದಲಿಗೊಂಡು ಬಂತು – ಹೇಳಿ ಅಧ್ಯಯನ ಮಾಡುದರ ಚಾರಿತ್ರಿಕ ಭಾಷಾವಿಜ್ಞಾನ ಹೇಳಿ ಹೇಳ್ತವು.
ಹಾಂಗೇ ಸಾಮಾಜಿಕ ಭಾ.ವಿ. ಹೇಳಿರೆ ಸಮಾಜಲ್ಲಿ ಬೇರೆ ಬೇರೆ ಜಾತಿ ವರ್ಗಕ್ಕೆ ಅನುಗುಣವಾಗಿ ಭಾಷೆ ಹೇಂಗೆ ಬದಲಾವುತ್ತು ಹೇಳ್ತ ಬಗ್ಗೆ ಹೆಚ್ಚು ಒತ್ತು ಕೊಡುದು.
ಈ ಎಲ್ಲ ಶಾಖೆಗೊ ಪೂರ್ತಿ ಬೇರೆ ಹೇಳಿ ಅಲ್ಲ. ಸಾಮಾನ್ಯ ಭಾ.ವಿ. ಹೇಳಿರೆ ಈ ಎಲ್ಲ ಅಂಶಂಗಳುದೆ ಇರ್ತು.

ನಮ್ಮ ದಕ್ಷಿಣ ಕನ್ನಡದ ಹವ್ಯಕ ಭಾಷೆಯ ನೋಡಿರೆ ಅದು ತುಳುನಾಡಿನ ನಡುಕೆ ಇಪ್ಪದು
ಹಾಂಗಾಗಿ ಇಲ್ಯಾಣ ಹವಿಕ ಭಾಷೆ ಮತ್ತೆ ತುಳು ಈ ಎರಡು ಭಾಷೆಗಳ ಮಧ್ಯೆ ವ್ಯಾಕರಣ ವಿಚಾರಲ್ಲಿ ಸುಮಾರು ಸಾಮ್ಯತೆಗೊ ಇದ್ದು.
ಇದೆರಡೂ ಭಾಷೆಗೊ ಹಿಂದಾಣ ಕಾಲಲ್ಲಿ ಬರಹಕ್ಕೆ ಅಷ್ಟಾಗಿ ಬಳಕೆ ಆಗದ್ದೆ ಇದ್ದ ಕಾರಣ ಹಳೇ ದ್ರಾವಿಡ ಭಾಷೆಗಳ ಲಕ್ಷಣಂಗಳ ಈ ಭಾಷೆಗೊ ರಜ ಹೆಚ್ಚು ಒಳಿಶಿಗೊಂಡಿಕ್ಕು.

ಹವ್ಯಕ ಭಾಷೆಗೆ ನಮ್ಮ ದರ್ಭೆ ಶಂಕರ ಭಟ್ರು ೧೯೭೧ರಲ್ಲಿಯೇ ಒಂದು ಗ್ರಾಮ್ಮರ್ ಪುಸ್ತಕ ಬರದ್ದೊವು.
ತುಳುವಿನ ಬಗ್ಗೆ ಕೂಡ ಬೇರೆ ಬೇರೆ ಇಂಥ ಪುಸ್ತಕಂಗೊ ಬೈಂದು.

ಸರ್ವನಾಮಂಗೊ:
ಸರ್ವನಾಮಂಗಳ ಸಾಮಾನ್ಯವಾಗಿ ಉತ್ತಮ ಪುರುಷ, ಮಧ್ಯಮ ಪುರುಷ ಮತ್ತೆ ಪ್ರಥಮ ಪುರುಷ ಹೇಳಿ ಕನ್ನಡಲ್ಲಿ ವಿಭಾಗ ಮಾಡುವ ಕ್ರಮ ಇದ್ದು.

ಹವ್ಯಕಲ್ಲಿ:
ಉತ್ತಮ ಪುರುಷ – ಆನು+ನಾವು, ಎಂಗೊ.

ತುಳುವಿಲಿ:
ಉತ್ತಮ ಪುರುಷ – ಏನ್, ಯಾನ್+ ನಮೊ,ಎಂಕುಲು.

ಕನ್ನಡಲ್ಲಿ ಇಂದು ನೋಡಿರೆ ಉತ್ತಮ ಪುರುಷಲ್ಲಿ – ನಾನು+ನಾವು. ಇಲ್ಲಿ ಬಹುವಚನಲ್ಲಿ “ನಾವು” ಮಾಂತ್ರ ಇಪ್ಪದು.
ನಮ್ಮ ಭಾಷೆಲಿ ಪ್ರಥಮ ಪುರುಷ ಬಹುವಚನಲ್ಲಿ ಸಮಾವೇಶಕ ಮತ್ತೆ ಅಸಮಾವೇಶಕ ಹೇಳಿ ಎರಡು ನಮುನೆ ಇದ್ದು. ತುಳುವಿಲಿವುದೆ ಹಾಂಗೇ.

“ಎಂಗೊ” ಹೇಳಿ ಹೇಳುವಗ ಅಲ್ಲಿ ಎದುರೆ ಇಪ್ಪೋರು ಸೇರ್ತವಿಲ್ಲೆ .

“ಎಂಗೊ ಸಿನೆಮಕ್ಕೆ ಹೋವ್ತೆಯೊ.” – ಅಸಮಾವೇಶಕ.
ಆದರೆ “ನಾವು ಸಿನಮಕ್ಕೆ ಹೋಪೊ” ಹೇಳಿದರೆ ಸಮಾವೇಶಕ ಆತು.

ಮಧ್ಯಮ ಪುರುಷ: ನೀನು+ನಿಂಗೊ ಬತ್ತು.
(ನೆಂಪು ಮಡಿಕ್ಕೊಳ್ಳಿ-ಆನು ಯಾವಾಗಳು ಉತ್ತಮವೇ; ನೀನು ಅಥವಾ ನಿಂಗೊ ಉತ್ತಮ ಅಪ್ಪಲೆ ಸಾಧ್ಯ ಇಲ್ಲೆ ನಮ್ಮ ವ್ಯಾಕರಣಕಾರರ ಪ್ರಕಾರ!!!)

ಪ್ರಥಮ ಪುರುಷ-ಅವ,ಅದು+ಅವು.
(ಎನಗೆ ಅಹ್ಷರದ ಮೇಲೆ ಬಲದ ಹೋಡೆಲಿ ಒಪ್ಪಣ್ಣನ ಹಾಂಗೆ ಸಣ್ಣ ಸೊನ್ನೆ ಬರವಲೆ ಎಂತ ಒತ್ತೆಕ್ಕು ಹೇಳಿ ಗೊಂತಿಲ್ಲೆ ಕ್ಷಮಿಸೆಕ್ಕು. ಬೇಗ ಕಲಿತ್ತೆ ಆತಾ)

ನಮ್ಮ ಭಾಷೆಲಿ ಸ್ತ್ರೀಲಿಂಗ, ನಪುಂಸಕ ಹೇಳಿ ಬೇರೆ ಬೇರೆ ಇಲ್ಲೆ ಹೇಳ್ಳಕ್ಕು. ಆದರೆ ಪುಲ್ಲಿಂಗಲ್ಲಿ ಅದು, ಅವ ಹೇಳುವಗ ಜಾತಿಯೇ ಮಾನದಂಡ ಆವುತ್ತು.
ಈಗೀಗ ಅದು ಹೇಳಿ ಜಾತಿ ಆಧಾರಲ್ಲಿ ಹೇಳುದು ಕಮ್ಮಿ ಆವುತ್ತಾ ಇದ್ದು.
(ಹೀಂಗೆ ಜಾತಿ ಬಗ್ಗೆ ವಿಚಾರ ಮಾಡಿದರೆ ಅದು ಸಾಮಾಜಿಕ ಭಾ.ವಿ. ಆವುತ್ತಿದ.)

ಈ ಬದಲಾವಣೆಂದ ನಮ್ಮ ಭಾಷೆಯ ಸೊಗಡು ಅಥವಾ ವಿಶಿಷ್ಟತೆ ಕಮ್ಮಿ ಆವುತ್ತು ಹೇಳಿ ನಾವು ಬೇಜಾರ ಮಾಡೆಕ್ಕು ಹೇಳಿ ಎಂತ ಇಲ್ಲೆ.
ಇಂಥ ಸಣ್ಣ ಪುಟ್ಟ ಬದಲಾವಣೆ ಭಾಷೆಲಿ ಕಾಲಕ್ಕೆ ತಕ್ಕ ಹಾಂಗೆ ಅಪ್ಪದು ತುಂಬ ಸರ್ವೇ ಸಾಮಾನ್ಯ.

ನಮ್ಮ ಭಾಷೆಯ ಇನ್ನೊಂದು ವಿಶೇಷ ಹೇಳಿರೆ ಅಮ್ಮನ ಅಥವಾ ಹಿರಿ ಹೆಮ್ಮಕ್ಕಳ ಏಕವಚನಲ್ಲಿ ನೀನು ಹೋಗು ಹೇಳಿ ಎಲ್ಲ ಹೇಳಿರೂ “ಅಬ್ಬೆ ಹೇಳಿದ”, “ಅಬ್ಬೆ ಹೋದ” (ಇಲ್ಲಿ ಮೇಲೆ ಹಾಕುವ ಸಣ್ಣ ಸೊನ್ನೆಯ ಉಚ್ಚಾರ ಇಲ್ಲೆ) ಹೇಳಿ ಹೇಳುವ ಕ್ರಮ ಇತ್ತು ಹೊರತು ಹೋತು ಬಂತು ಹೇಳುವ ಕ್ರಮ ಇತ್ತಿಲ್ಲೆ. ಈಗಾಣ ಜವ್ವನಿಗರಿಂಗೆ ಅದು ಗೊಂತಿಲ್ಲದ್ದೆ ಇಪ್ಪಲೂ ಸಾಕು.

ಇನ್ನೊಂದರಿ ಕಾಂಬೊ ಆಗದ?
~

ಅಜಕ್ಕಳ ಗಿರೀಶ
http://ajakkalagirisha.wordpress.com

ಹವಿಕ ಭಾಷೆ ಬಗ್ಗೆ ಕೆಲವು ವಿಷಯಂಗೊ, 3.6 out of 10 based on 20 ratings
ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 15 ಒಪ್ಪಂಗೊ

 1. ಒಹ್ಹೋ.
  ಅಜಕ್ಕಳಣ್ಣ. ಇದರ ತಿಳಿಶಿಕೊಡ್ಲೆ ಏವುದಾರೂ ಪುಸ್ತಕ ಇದ್ದರೆ ಹೇಳ್ತಿರಾ? ರೆಫರೆನ್ಸ್ ಇಪ್ಪಂತದ್ದು. ಓದುಲೆ.

  [Reply]

  ajakkala girisha Reply:

  ಹವ್ಯಕ ಭಾಷೆ ವ್ಯಾಕರಣದ ಬಗ್ಗೆ ತುಂಬ ತಾಂತ್ರಿಕ ವಿವರ ಬೇಕಾರೆ ಡಿ. ಎನ್. ಶಂಕರ ಭಟ್ ಬರದ ಏನ್ ಔಟ್ ಲೈನ್ ಗ್ರಾಮರ್ ಅಫ್ ಹವ್ಯಕ ಹೇಳುವ ಪುಸ್ಯಕ ಇದ್ದು ಈಗ ಪ್ರಿಂಟ್ ಇದ್ದ ಹೇಳಿ ಗೊಂತಿಲ್ಲೆ. ಪುಣೆ ಡೆಕ್ಕನ್ ಕಾಲೇಜಿನೋರು ಪಬ್ಲಿಶ್ ಮಾಡಿದ್ದವು ೧೯೭೧ ರಲ್ಲಿ. ಜನರಲ್ ಆದ ಮಾಹಿತಿ ಬೇರೆ ಬೇರೆ ದಿಕ್ಕೆ ರಜರಜ ಸಿಕ್ಕುಗು. ಒಂದೆರಡು ದಿನಲ್ಲಿ ಹುಡ್ಕಿ ಹೇಳ್ತೆ. ಇತಿ ಗಿರೀಶ.

  [Reply]

  VA:F [1.9.22_1171]
  Rating: 0 (from 0 votes)
 2. ಅಲ್ಲ ಹವ್ಯಕ ಭಾಷೆಯ ಬಗ್ಗೆ ಅದೇ ಭಾಷೇಲಿ ಯಾವದಾರೂ ಪುಸ್ತಕ ಇಲ್ಲೆಯಾ ? ಎನಗೂ ಇದೊಂದು ಕುತೂಹಲ ಸುಮಾರು ದಿನಂದ ಇದ್ದು…

  [Reply]

  ಒಪ್ಪಣ್ಣ

  ಒಪ್ಪಣ್ಣ Reply:

  ಶಮಕ್ಕಾ,
  ರಜ್ಜ ನಿಲ್ಲಿ,
  ನಮ್ಮ ಅಜಕ್ಕಳ ಮಾಷ್ಟ್ರಣ್ಣನೇ ಬರೆತ್ತವು ಒಂದು ಪುಸ್ತಕ.
  ನಮ್ಮ ಮಕ್ಕಳ ಕಾಲಕ್ಕೆ ಓದುಲಕ್ಕು, ಬುಡಂದ… :-)

  ಒಪ್ಪಣ್ಣನ ಬೈಲಿಂಗೆ ಬಂದದು ಕೊಶೀ ಆತು!
  ಬತ್ತಾ ಇರಿ, ಶುದ್ದಿಗೊಕ್ಕೆ ಒಪ್ಪ ಕೊಟ್ಟೋಂಡಿರಿ. :)
  ಆತಾ?

  [Reply]

  VA:F [1.9.22_1171]
  Rating: 0 (from 0 votes)
 3. ಅನುಶ್ರೀ ಬಂಡಾಡಿ

  ಒಳ್ಳೆ ಮಾಹಿತಿ. ಬೈಲಿಲಿ ನಮ್ಮ ಭಾಷೆಯ ವ್ಯಾಕರಣದ ಬಗ್ಗೆದೇ ಹೇಳ್ತಾ ಇಪ್ಪದು ಕುಶಿ ಆತು. ನವಗೇ ಗೊಂತಿಲ್ಲದ್ದ ನಮ್ಮ ಭಾಷಾವೈಶಿಷ್ಟ್ಯಂಗಳ ತಿಳಿಶಿಕೊಡ್ತಾ ಇದ್ದಿ. ಧನ್ಯವಾದಂಗೊ.

  [Reply]

  VA:F [1.9.22_1171]
  Rating: 0 (from 0 votes)
 4. guttu sadaashiva'

  ಎನಗುದೆ ಒಪ್ಪಣ್ಣನ ಗುಟ್ಟು – ಸಂಣ ಸೊನ್ನೆಯ ಬರವ ಜಾಣ್ಮೆ – ತಿಳಿಯೆಕ್ಕು ಹೇಳಿ ತುಂಬಾ ಆಶೆ ಆತು, ಅವಂಗೆ ಎರಡೆರದು ಸರ್ತಿ ಬರದು ನೋಡಿದೆ ಮಾರಾಯ’ ಕಲಿಶುತ್ತನೋ ಹೇಳಿ! ಅವಂಗೆ ಫೀಸ್ ಕೊಟ್ಟ್ರೆ ಮಾತ್ರ ಹೇಳಿಕೊಡುಗಡ! ಎಂತ ಮಾಡ್ಲಕ್ಕು ಹೇಳುವ ಯೋಚನೆಲೇ ಇದ್ದೆ!

  [Reply]

  ಗುರಿಕ್ಕಾರ°

  ಗುರಿಕ್ಕಾರ° Reply:

  ಇದಾ ಸದಾಶಿವ ಮಾವ°, ಒಪ್ಪಣ್ಣಂಗೆ ಅದೆಲ್ಲ ಅರಡಿಯ.
  ಅವಂಗೆ ದನಕ್ಕೆ ಹುಲ್ಲು ಹಾಕಲೆ ಗೊಂತಕ್ಕು, ಆದರೆ ಕಂಪ್ಯೂಟರಿಲಿ ಗುರುಟುದು ಗೊಂತಾಗ ಇದಾ..!
  ಹೋಗಿ ಹೋಗಿ ಅವನತ್ರೆ ಕೇಳಿರೆ ಅಕ್ಕೋ!!

  ಇದಾ, ಆನು ಹೇಳಿಕೊಡ್ತೆ.
  ನಿಂಗಳ ಕೀಬೋರ್ಡಿಲಿ ALT ಸುಚ್ಚು ಒತ್ತಿಗೋಂಡು, ಬಲತ್ತಿಂಗೆ ಇಪ್ಪ NumberPad ಲಿ 248 ಒತ್ತೆಕ್ಕು.
  (Make sure Num lock is ON)
  ಅಲ್ಲದ್ರೆ ಇದರ Copy ಮಾಡಿ, ಬೇಕಾದಲ್ಲಿಂಗೆಲ್ಲ Paste ಮಾಡಿಗೊಳ್ಳಿ: °

  [Reply]

  VN:F [1.9.22_1171]
  Rating: +2 (from 2 votes)
 5. ಗುತ್ತಿನ ಸದಾಶಿವ°

  ಒಪ್ಪಣ್ಣ ಗುರಿಕ್ಕಾರನ ಅವತಾರವೇಯೋ ಅಥವಾ ಗುರಿಕ್ಕಾರ° ಒಪ್ಪಣ್ಣನ ಅವತಾರವೇಯೊ ಅಥವಾ ಇಬ್ರುದೇ ಆ ಸರ್ವಾಂತರ್ಯಾಮಿಯ ಅವತಾರವೇಯೋ ಹೇಳಿ ಗುತ್ತಿನ ಸದಾಶಿವಂಗೆ ಗೊಂತಾವುತ್ತಿಲ್ಲೆನ್ನೆ! ಆರೇ ಆಗ್ಲಿ ಅವಕ್ಕೆ ಎನ್ನ ಧನ್ಯವಾದ, ಎದೆಯ ಒಳಾಂದ

  [Reply]

  VA:F [1.9.22_1171]
  Rating: 0 (from 0 votes)
 6. ಶ್ರೀಹರ್ಷ ನೆಟ್ಟಾರು

  ಟೈಂ ಇಪ್ಪಗ ಇದರ ಓದಿ…: http://dspace.vidyanidhi.org.in:8080/dspace/handle/2009/2219

  [Reply]

  ಕೇಜಿಮಾವ°

  ಡಾ.ಕೆ.ಜಿ.ಭಟ್. Reply:

  ಆ ಪೇಪರಿನ ಓದಲೆ ಸಾಧ್ಯ ಇಲ್ಲೆ ಅಣ್ಣ°.ಯಾವಾಗಳೋ ಟೈಪ್ ಮಾಡಿದ್ದಾರ ಕೋಪಿ ಮಾಡಿ ಹಾಕಿದ್ದವು.ಒತ್ತಾಯಕ್ಕೆ ಶಂಭಟ್ಟ° ರುಜು ಹಾಕಿದ ಹಾಂಗೆ.

  [Reply]

  VA:F [1.9.22_1171]
  Rating: 0 (from 0 votes)
 7. ನಿರಂಜನ ಭಾವ

  ನಾವು ಮಾತಾಡುವಗ ಅವ’ ಇವ ಹೇಳಿ ಹೇಳುವಗ ಕೆಲವು effects ಕೊಡ್ತು ಅದರ ಬರಡು ರೆಪ್ರೆಸೆನ್ಟ್ ಮಾಡುದು ಹೇಂಗೆ?

  [Reply]

  ಗುರಿಕ್ಕಾರ°

  ಗುರಿಕ್ಕಾರ° Reply:

  ಯೇ ನಿರಂಜನ ಬಾವ! ನಿಂಗೊ ಎಂತ ಹೀಂಗೆ ಕೇಳ್ತಿ!!

  ಬೈಲಿಲಿ ಎಲ್ಲೊರುದೇ ಅರ್ಧನಾಸಿಕವ° ಬರದು ಮಾತಾಡ್ತವಿಲ್ಲೆಯೋ?
  ನಿಂಗೊ ಕಂಡಿಲ್ಲಿರೋ? ಏ°?
  ಇದಾ – ( ALT + 248 -> ° ) ಇದರ ಹಾಕಿರೆ ಆತು, ಶೆಬ್ದದ ಅಕೇರಿಗೆ.

  ಬಂದೋಂಡಿರಿ..
  ಕಾಂಬೊ°.

  [Reply]

  VA:F [1.9.22_1171]
  Rating: 0 (from 0 votes)
 8. ನಮ್ಮ ಭಾಷೆಯ ಬಗ್ಗೆ ಆಸಕ್ತರಿಂಗೆ ಹುಡುಕ್ಕಲೆ ಈ ಲಿಸ್ಟ್ ಸಹಾಯವಕ್ಕು,ಎನಗೆ ಇದರ ಬಗ್ಗೆ ಸಿಕ್ಕಿದರೆ ಬಯಲಿಂಗೆ ಓದಲೆ ಕೊಡುತ್ತೆ
  Further Readings:
  1.‘kannaDa BASeya kalpita caritre’ by D.N. Shankara Bhat, 1995, Kannada University, Hampi.
  2. ‘An outline grammar of Havyaka’ By Shankara Bhat D.N., 1971, Linguistic Survey of India series, Volume 5, published by Deccan College Postgraduate and research Institute, Poona.
  3.‘The Havyaka dialect of North Kanara’ by Krishna Ganesh Shastry, 1971, Karnatak University, Dharwar.
  4.‘Clause structure of northern Havyaka Kannada’ (Dravidian): Tangemic Analysis’ By Helen E. Ullrich, 1988, University of Michigan.
  5.‘The landscape of language: Issues in Kannada linguistics’ by K.V. Tirumalesh, 2000, Allied Publishers.
  6.‘Havyaka Kannada: Modality and negation’ by Johan Van Der Auwera, Indian Linguistics, Volume 17, 2000.
  7.‘Havyaka Dialect’, by M.Mariyappa Bhat, 1969, Annals of Oriental Research, Madras.
  8.“ A Descriptive Analysis of Havyaka Kannada’ (Puttur and Suliya region) by C.B. Bhat and H.M. Nayak

  [Reply]

  VA:F [1.9.22_1171]
  Rating: +2 (from 2 votes)
 9. prashanth

  havyaka bhasheya vyakaranada bagge innu hechina mahithi idda?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸುಭಗದೊಡ್ಮನೆ ಭಾವದೀಪಿಕಾದೊಡ್ಡಮಾವ°ತೆಕ್ಕುಂಜ ಕುಮಾರ ಮಾವ°ಮಂಗ್ಳೂರ ಮಾಣಿಅಕ್ಷರದಣ್ಣಡಾಗುಟ್ರಕ್ಕ°ಕಳಾಯಿ ಗೀತತ್ತೆವೆಂಕಟ್ ಕೋಟೂರುಡಾಮಹೇಶಣ್ಣಕಾವಿನಮೂಲೆ ಮಾಣಿಸರ್ಪಮಲೆ ಮಾವ°ಬೋಸ ಬಾವಅನು ಉಡುಪುಮೂಲೆಅನುಶ್ರೀ ಬಂಡಾಡಿವಾಣಿ ಚಿಕ್ಕಮ್ಮಕೆದೂರು ಡಾಕ್ಟ್ರುಬಾವ°ಕೊಳಚ್ಚಿಪ್ಪು ಬಾವಶ್ಯಾಮಣ್ಣವಸಂತರಾಜ್ ಹಳೆಮನೆದೇವಸ್ಯ ಮಾಣಿಪುತ್ತೂರಿನ ಪುಟ್ಟಕ್ಕಜಯಗೌರಿ ಅಕ್ಕ°ಸಂಪಾದಕ°ಪಟಿಕಲ್ಲಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ