ಗಿಳಿಬಾಗಿಲಿಂದ -ಎಂಗಳಲ್ಲಿ ಅಮ್ಮಂಗೆ ಗೌರವ ವಚನ

October 2, 2013 ರ 6:00 amಗೆ ನಮ್ಮ ಬರದ್ದು, ಇದುವರೆಗೆ 11 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಎಂಗಳಲ್ಲಿ ಅಮ್ಮಂಗೆ ಅಬ್ಬೆ ಹೇಳಿ ಹೇಳುದು .ಇತ್ತೀಚಿಗಂಗೆ ೩೦ -೩೫ ವರ್ಷಂಗಳಲ್ಲಿ ಅಬ್ಬೆಯ ಬದಲು ಅಮ್ಮ ಹೇಳುವ ಪದ ರೂಡಿ ಗೆ ಬೈಂದು .ಎನ್ನ ಅಪ್ಪ, ಅಮ್ಮ ಎಲ್ಲ ಅವರ ಅಮ್ಮನ ಹೇಳಿರೆ ಎನ್ನ ಅಜ್ಜ್ಯಕ್ಕಳ ಅಬ್ಬೆ ಹೇಳಿಯೇ ದೆನಿಗೇಳುದು.ಬಹುಷಃ ಕನ್ನಡ ಭಾಷೆಯ ಪ್ರಭಾವಂದಾಗಿ ಅಬ್ಬೆ ಅಮ್ಮ ಆದ್ದು ಆದಿಕ್ಕು. ಈಗ ಇಂಗ್ಲೀಷಿನ ಪ್ರಭಾವಂದಾಗಿ ಅಮ್ಮ ಮಮ್ಮಿ ಆದ ಹಾಂಗೆ ! ಅದು ಏನೇ ಇರಲಿ ,ಎಂಗಳ ಕೋಳ್ಯೂರು ಸೀಮೆಲಿ ಅಮ್ಮಂಗೆ ಏಕವಚನ ಇಲ್ಲೆ .ಹಾಂಗೇಳಿ ಬಹುವಚನವೂ ಇಲ್ಲೆ.ಏಕವಚನ ಬಹುವಚನಂಗಳ ನಡುವಿಲಿ ಒಂದು ವಿಶಿಷ್ಟ ವಚನ ಇದ್ದು .ಆನು ಅದರ ಗೌರವ ವಚನ ಹೇಳಿ ದೆನಿಗೇಳಿದ್ದೆ .ವಿದ್ವಾಂಸರುಗ ಇದಕ್ಕೆ ಎಂತ ಹೇಳಿ ಹೇಳ್ತವು?ಇದು ಅವರ ಗಮನಕ್ಕೆ ಬೈಂದ ? ಹೇಳಿ ಎನಗೆ ಗೊಂತಿಲ್ಲೆ .

ಎಂಗಳ ಸೀಮೆಲಿ ಪುರುಷರಿಂಗೆ ಅವರವರ ಸ್ಥಾನಕ್ಕೆ ಅನುಗುಣವಾಗಿ ಏಕವಚನ ಬಹುವಚನ ಇದ್ದು .ಸಾಮಾನ್ಯವಾಗಿ ಅಪ್ಪ ಅಜ್ಜಂಗೆ , ಮಾವುಗಳಿಂಗೆ, ಮಾವನೋರಿಂಗೆ ಮತ್ತೆ ಗುರುಗೊಕ್ಕೆ ಬಹುವಚನ .ಮತ್ತೆ ಒಳುದೋರಿಂಗೆಲ್ಲ ಏಕವಚನವೆ ಇಪ್ಪದು .ಉದಾಹರಣಗೆ –ಅಪ್ಪ ಬಂದವು .ಅಜ್ಜ ಬೈ೦ದವು ಇತ್ಯಾದಿ. ಅಪ್ಪಂಗೆ ಕೂಡ ಕೆಲವು ಕಡೆ ಏಕವಚನ ಇದ್ದು . ಅಣ್ಣ, ಮಾವ, ಅಪ್ಪಚ್ಚಿ ,ತಮ್ಮ ಎಲ್ಲೊರಿಂಗು ಏಕವಚನ .ಉದಾ-ಅಣ್ಣ ಬಂದ°, ಮಾವ° ಬಕ್ಕು ಇತ್ಯಾದಿ .

ಇನ್ನು ಹೆಮ್ಮಕ್ಕೊಗೆ ಪ್ರಾಣಿಗೊಕ್ಕೆ ಏಕವಚನ ಇಪ್ಪದು. ಉದಾಹರಣಗೆ-ಅದು (ಅವಳು )ಬಂತು, ಅಕ್ಕ ಬಂತು ,ನಾಯಿ ಹೋತು .ಇಲ್ಲಿ ಸ್ತ್ರೀಲಿ೦ಗ ಮತ್ತೆ ನಪುಂಸಕ ಲಿಂಗಂಗೊಕ್ಕೆ ಯಾವುದೇ ವ್ಯತ್ಯಾಸ ಇಲ್ಲೆ. ಎರಡಕ್ಕೂ ಒಂದೇ ರೀತಿ ಏಕವಚನ .

ಹೆಮ್ಮಕ್ಕಳಲ್ಲಿದೆ  ಅತ್ತಿಯೋರು (ಗೆಂಡನ ಅಬ್ಬೆ ),ಅತ್ತೆಗಳು (ಹೆಂಡತಿಯ ಅಬ್ಬೆ ) ಇವಕ್ಕೆ ಬಹುವಚನ ಇದ್ದು . ಉದಾಹರಣಗೆ –ಅತ್ತೆ ಬೈ೦ದವು ,ಹೋದವು ಇತ್ಯಾದಿ .ಒಳುದ ಹೆಮ್ಮಕ್ಕೊಗೆ ಏಕವಚನ ಉದಾಹರಣಗೆ –ಚಿಕ್ಕಮ್ಮ ಬೈಂದು ,ಹೋಯಿದು ಇತ್ಯಾದಿ .

ಇದರ ನಡುಗೆ ಅಮ್ಮಂಗೆ ಅತ್ತಿಗೆಗೆ (ಅಣ್ಣನ ಹೆಂಡತಿ ) ಎಂಗಳ ಕೋಳ್ಯೂರು ಕಡೆಲಿ ವಿಶಿಷ್ಟ ವಚನದ ಬಳಕೆ ಇದ್ದು .ಉದಾ-ಅಮ್ಮ ಬೈಂದ ,ಅಮ್ಮ ದೋಸೆ ತಿಂದಿದ ,ಅಮ್ಮ ಹೋಯಿದ .

ಎಂಗಳ ಸೀಮೆಲಿ ಏಕವಚನ ಹೇಳುವಾಗ ಆ ಪದದ ಕಡೆಂಗೆ ಅನುನಾಸಿಕ ಇರ್ತು .ಉದಾಹರಣಗೆ-ಆವ° ಹೋಯಿದ° ಹೇಳಿ ಹೇಳುವಾಗ ಕಡೆಯ ‘ದ’ ದೊತ್ತಿನ್ಗೆ ಅನುನಾಸಿಕ ಇರ್ತು .ಆದರೆ ಅಮ್ಮ ಹೋಯಿದ ಹೇಳುವಗ ಕಡೆಂಗೆ ಅನುನಾಸಿಕ ಇಲ್ಲೆ .ಅದೇ ರೀತಿ ಪ್ರಶ್ನಾರ್ಥಕ ವಾಗಿದ್ದರೆ ಅಲ್ಲಿದೆ ಅಮ್ಮಂಗೆ ಸಂಬಂಧಿಸಿ ಕೇಳುವಗ ರಜ್ಜ ವ್ಯತ್ಯಾಸ ಇದ್ದು.

ಉದಾಹರಣೆಗೆ –ಅಮ್ಮ ಬೈ೦ದಳಾ ?ಅಮ್ಮ ಉಂಡಳಾ ?ಅಮ್ಮ ಒರಗಿದಳಾ ?.

ಬೇರೆ ಹೆಮ್ಮಕ್ಕೊಗೆ ಹೇಳುವಗ ತಂಗೆ ಬೈಂದಾ ?ಅದು ಉಂಡತ್ತಾ ? ಹೇಳಿ ಇರ್ತು . ಇಲ್ಲಿ ಎನ್ನ ಗಮನಕ್ಕೆ ಬಂದ ವಿಚಾರವ ನಿಂಗಳ ಮುಂದೆ ಮಡುಗಿದ್ದೆ .ನಿಂಗಳ ಅಭಿಪ್ರಾಯವ ತಿಳಿಸಿದರೆ ಸಂತೋಷ .

ಗಿಳಿಬಾಗಿಲಿಂದ -ಎಂಗಳಲ್ಲಿ ಅಮ್ಮಂಗೆ ಗೌರವ ವಚನ, 10.0 out of 10 based on 1 rating
ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 11 ಒಪ್ಪಂಗೊ

 1. ಯಮ್.ಕೆ.

  ಒ೦ದು ಸರ್ತಿ ಆನು ಪಾವಗಡದವರ ವಾಕ್ ಪ್ರವಾಹ ,ನೋಡುವಾಗ,ಇದೇ ಧಾಟಿಲಿ ಒ೦ದು ? ಬ೦ತು.

  ಅವು ಹೀ೦ಗೆ ಹೇಳಿದ ನೆ೦ಪು.
  ದೇವರಿ೦ಗೂ ,ಅಮ್ಮ೦ಗೂ(ತಾಯಿಗೂ) ಸಾಮ್ಯತೆ ಗಮನಿಸಿ.
  ಇಬ್ಬರಿ೦ಗೂ ಒ೦ದೇ ಎತ್ತರ ಅಲ್ಲದೋ.
  ನಮ್ಮ ಪ್ರತ್ಯಕ್ಷ ಅನುಭವಕ್ಕೆ ಬಪ್ಪ ದೇವರು ಆರು?.
  ನಾವು ದೇವರ ಜೊತೆ ಯಾವ ಪ್ರಕಾರ ವಚನ/ಸ೦ವಾದ ಬಳುಸುತ್ತು ನೋಡಿ.

  ಹಾ೦ಗಾದ ಕಾರಣ ,ಏಕವಚನ ಪ್ರಯೋಗಲ್ಲಿ ಇದ್ದು
  ನಾವು ತಾಯಿಗೆ ಮಾತ್ರ ಈ ಜಾಗ ಕೊಟ್ಟದು.
  ”””’ಬೇರಾರಿ೦ಗೂ ಇಲ್ಲೆ””””’, ಅಲ್ಲದೋ ಹೇಳಿದವು.

  ನಾವಗೆ ಮತ್ತೆ ಪ೦ಜ ಸೀಮೆಯೋ ಅಲ್ಲ,
  ಕೋಳ್ಯೂರು ಸೀಮೆಯೋ
  ಹೇಳುವ ಚಿ೦ತನೆಯ ಅಗತ್ಯ ಈ ಬಗ್ಗೆ ಬಿಟ್ಟತ್ತು.

  [Reply]

  VA:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ°

  ಶಿಷ್ಟ ವಿಶಿಷ್ಟ ಬಳಕೆ ಒಪ್ಪುವಂತಾದ್ದೆ. ಉತ್ತರಕ್ಕೆ ಹೋದರೆ ಅಪ್ಪ° ಬೈಂಜ° ಕೂಡ ಆವ್ತು. ಅಂದರೂ ಇಲ್ಲ್ಯೆಲ್ಲ ಭಾವನಾತ್ಮಕ ಗೌರವ ಇಪ್ಪದು ಎದ್ದುಕಾಣುತ್ತು, ಇಲ್ಲೆ ಹೇಳುವಾಂಗೆ ಇಲ್ಲೆ.
  ತುಲನಾತ್ಮಕ ಚಿಂತನೆಗೆ ಅಭಿನಂದನೆಗೊ.
  ಅಂದರೆ ಗೆಂಡನ ಅವ, ಇವ, ಬಾರೋ° ಹೋಗೋ°, ನೀನು.. ಹೇದು ಇತ್ತೀಚೆಗೆ ಕಾಂಬಲೆ ಸುರುವಾದ್ದು ನಾಗರಿಕತೆಯ ಬೆಳವಣಿಗೆ ಆಯ್ಕಪ್ಪೋ :(
  ಬಹುಶಃ ಅದರ ಲೆಕ್ಕಕ್ಕೆ ತೆಕ್ಕೊಳ್ಳದ್ದೆ ಶುದ್ದಿಯ ವ್ಯಾಪ್ತಿಯೊಳ ನಾವು ಚಿಂತನೆ ಮಾಡ್ತದೇ ಸಮ

  [Reply]

  VA:F [1.9.22_1171]
  Rating: +2 (from 2 votes)
 3. ಶರಾವತಿ ಅಕ್ಕ

  ಅಪ್ಪು ಅತ್ತೆ. ಆನುದೇ ಇದರ ಬಗ್ಗೆ ಸುಮಾರು ಸರ್ತಿ ಯೋಚನೆ ಮಾಡಿದ್ದೆ, ನಮ್ಮ ಸೀಮೆಯ ಭಾಷೆಯ ಬಗ್ಗೆ ಭಾರೀ ಹೆಮ್ಮೆ ಆವ್ತು ಅಲ್ಲದಾ?

  [Reply]

  VN:F [1.9.22_1171]
  Rating: +1 (from 1 vote)
 4. ಲಕ್ಷ್ಮಿ ಜಿ.ಪ್ರಸಾದ

  ಅಪಿ ಸ್ವರ್ಣ ಮಯೀ ಲಂಕಾ ನಮೇ ಲಕ್ಷ್ಮಣ ರೋಚತೇ |
  ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸೀ ||

  ಇದು ಶ್ರೀರಾಮ ದೇವರು ಜಗತ್ತಿನ್ಗೆ ನೀಡಿದ ಸಂದೇಶ ,ಮೂರೂ ಕಾಲಕ್ಕೂ ಸತ್ಯವಾದ್ದು .ರಾಮ ರಾವಣರ ಯುದ್ಧದ ಕೊನೆಗೆ ರಾವಣನ ರಾಮ ರಾವಣನ ಸಂಹಾರ ಮಾಡುತ್ತ ,ನಂತರ ವಿಭೀಷಣಗೆ ಪಟ್ಟ ಕಟ್ಟಿಕ್ಕಿ ಅಯೋಧ್ಯೆಗೆ ಹೆರಡುತ್ತ .ಅಂಬಗ ವಿಭೀಷಣ ರಾಮಂಗೆ ಕೈ ಮುಗುದು ಈ ಲಂಕೆ ತುಂಬಾ ಚೆಂದ ಇದ್ದು ಸುವರ್ನಮಯವಾದ ಈ ಲಂಕೆಲಿ ತುಸು ಕಾಲ ವಿಹರಿಸುತ್ತಾ ಎನ್ನ ಆತಿಥ್ಯ ಸ್ವೀಕರಿಸಿಕೊಂಡು ಇರಿ ಹೇಳಿ ಪ್ರಾರ್ಥನೆ ಮಾಡುತ್ತ.ಅಮ್ಬಗ ಲಕ್ಷ್ಮಣ ಈ ಚಿನ್ನದ ಲೆಪನಂದ ಹೊಲವ ಲಂಕೆಯ ನೋಡಿಕ್ಕಿ ಹೋಪ ಹೇಳಿ ರಾಮನತ್ತರೆ ಹೇಳುತ್ತ. ಅಮ್ಬಗ ರಾಮ “ಈ ಲಂಕೆ ಸ್ವರ್ನಮಯವಾದರೂ ಎನಗೆ ರುಚಿಸುತ್ತಿಲ್ಲೆ,ಅಬ್ಬೆ ಮತ್ತೆ ಹುಟ್ಟಿದ ಊರು ಸ್ವರ್ಗಂದ ಹೆಚ್ಚು”ಹೇಳಿ ಲಕ್ಷ್ಮಣನ್ಗೆ ಮಾತ್ರ ಅಲ್ಲ ಇಡೀ ಜಗತ್ತಿನ್ಗೆ ಒಂದು ಸಂದೇಶವ ನೀಡಿದ.
  ಅಬ್ಬೆಯ ಅಮ್ಮ ಹೇಳಿರೂ ಏಕ ವಚನಲ್ಲಿ ದೆನಿಗೇಳಿರೂ ,ಬಹುವಚನಲ್ಲಿ ದೆನಿಗೇಳಿರೂ ಗೌರವ ಮಾತ್ರ ಒಂದೇ ರೀತಿ ಇರುತ್ತು .ಅದರಲ್ಲಿ ಯಾವುದೇ ಸಂಶಯ ಇಲ್ಲೆ.
  ಎನ್ನ ಇಲ್ಲ್ಯಣ ಬರಹಂಗಳ ಉದ್ದೇಶ ಎಂಗಳ ಹವ್ಯಕ ಸೀಮೆಲಿ ಇಪ್ಪ ವಿಶಿಷ್ಟ ಹೇಳಿ ಎನಗನಿಸಿದ ವಿಚಾರಂಗಳ ಎಲ್ಲರಿಂಗು ತಿಳಿಸುದು ,ನಮ್ಮ ಭಾಷೆಯ ವೈಶಿಷ್ಟ್ಯಂಗಳ ಬಗ್ಗೆ ರಜ್ಜ ಎಲ್ಲೋರೊಟ್ಟಿನ್ಗೆ ಚರ್ಚಿಸುದು ,ಒಂದೆಡೆ ಕಲೆ ಹಾಕುದು ,ಮುಂದಣ ತಲೆಮಾರಿಂಗೂ ಸಿಕ್ಕುವ ಹಾಂಗೆ ಮಾಡುದು ಅಷ್ಟೇ .
  ಎಂಗಳ ಕಡೆ ಅಮ್ಮಂಗೆ ವಿಶಿಷ್ಟ ಗೌರವ ಇದ್ದು ಹೇಳುವ ಬಗ್ಗೆ ಅದೇ ಹೆಮ್ಮೆಯಾಗಲಿ ಇತರೆಡೆ ಇಲ್ಲೇ ಹೇಳುವ ಬಗ್ಗೆ ತಿರಸ್ಕಾರವಾಗಲಿ ಎನಗಿಲ್ಲೆ .ಒಟ್ಟಾರೆಯಾಗಿ ನಮ್ಮ ಭಾಷೆ ಹಲವಾರು ಪ್ರಾದೇಶಿಕ ವಿಶಿಷ್ಟತೆಗಳ ಒಳಗೊಂಡ ಒಂದು ಚೆಂದದ ಭಾಷೆ ನಮ್ಮದು ಹೇಳುವ ಅಭಿಮಾನ ಎನಗಿದ್ದು .ಬೇರೆ ಬೇರೆ ಪ್ರದೆಶಲ್ಲಿಪ್ಪ ನಮ್ಮ ಭಾಷೆಯ ವಿಶಿಷ್ಟತೆಗಳ ಬಗ್ಗೆ ಬರದು ಚರ್ಚಿಸುದರಂದ ನಮ್ಮ ಭಾಷೆ ಇನ್ನಷ್ಟು ಪುಷ್ಟಿಗೊಳ್ಳುಗು ಎಂಬ ಆಶಯ ಎನ್ನದು
  ಗಿಳಿಬಾಗಿಲಿಂಗೆ ನಿಂಗ ಎಲ್ಲೊರು ಕೊಡುತ್ತಿಪ್ಪ ಪ್ರೋತ್ಸಾಹಕ್ಕೆ ಆನು ಋಣಿ ಆಗಿದ್ದೆ ,ಮುಂದೆ ಕೂಡ ನಿನ್ಗಳೆಲ್ಲರ ಬೆಂಬಲವ ಆಶಿಸುತ್ತೆ
  ಧನ್ಯವಾದಂಗ

  [Reply]

  VA:F [1.9.22_1171]
  Rating: +3 (from 3 votes)
 5. ಲಕ್ಷ್ಮಿ ಜಿ.ಪ್ರಸಾದ

  ಸ್ವರ್ಣ ಮಯ ಮತ್ತು ಚಿನ್ನದ ಲೇಪಂದ ಹೊಳವ ಹೇಳಿ ಸರಿ ಮಾಡಿಕೊಂಡು ಓದಿ ಆತಾ ದಯಮಾಡಿ

  [Reply]

  VA:F [1.9.22_1171]
  Rating: +1 (from 1 vote)
 6. ಎನ್ನ ಅಪ್ಪ ಕುಂಬ್ಳೆ ಸೀಮೆ,  ಅಮ್ಮ ವಿಟ್ಲ ಸೀಮೆ,  ಎನ್ನದು ಸೀಮಾತೀತವಾದ ಭಾಷೆ ಆಗಿಹೋಯಿದು.   ಅಪ್ಪ ಅಮ್ಮಂದಿರು ಅತೀ ಆತ್ಮೀಯರಾದ ಕಾರಣ ಕುಂಬ್ಳೆ ಸೀಮೆಲಿ ಅಪ್ಪಂಗೂ ಏಕವಚನ.  ಅಜ್ಜ ಅಜ್ಜಿಗೂ ಬಹುವಚನ ಇಲ್ಲೆ.

  [Reply]

  ಗೋಪಾಲಣ್ಣ

  ಎಸ್.ಕೆ.ಗೋಪಾಲಕೃಷ್ಣ ಭಟ್ಟ Reply:

  ಕುಂಬಳೆ ಸೀಮೆಲಿ ಅಜ್ಜ,ಅಜ್ಜಿ,ಅಪ್ಪಂಗೆ ಬಹುವಚನ ಉಪಯೋಗ ಇದ್ದು.ಹಿಂದೆಯೇ ಇತ್ತಿದ್ದು ಕೂಡ.

  [Reply]

  VA:F [1.9.22_1171]
  Rating: +1 (from 1 vote)
 7. ಪಾರ್ವತಿ ಮರಕಿಣಿ

  ಬೇರೆ ಬೇರೆ ಸೀಮೆಗಳ ಹವ್ಯಕ ಭಾಷೆಗಳಲ್ಲಿಪ್ಪ ವಿಶಿಷ್ಟ ಪದಗಳ ಪರಿಚಯ , ಅದರ ತುಲನಾತ್ಮಕ ಅಧ್ಯಯನ / ಚಿಂತನೆ ಭಾಷೆಯ ಬೆಳವಣಿಗೆಗೆ ಖಂಡಿತಾ ಸಹಾಯ ಅಕ್ಕು.
  ನಮ್ಮ ಬೈಲಿಲಿ ಉತ್ತರ ಕನ್ನಡದ ಹವ್ಯಕ ಭಾಷೆಲಿದೇ ಬರವೋರು ಬರಲಿ ಹೇಳಿ ಹಾರೈಸುತ್ತೆ.. ಏಕೆ ಆರೂ ಬರೆತ್ತವಿಲ್ಲೆ? ಎನಗೆ ಅತ್ಲಾಗಿಯಾಣ ಭಾಷೆ ಕಲಿವ ಉಮೇದು ಇದ್ದು..

  [Reply]

  VA:F [1.9.22_1171]
  Rating: +1 (from 1 vote)
 8. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ಅದರ ಗೌರವ ವಚನ ಹೇಳುಲೆ ಕಷ್ಟ. ರೂಢಿಲಿ ಬಂದ ಪ್ರಯೋಗ ಆಗಿಕ್ಕು. ಸಾಗರ ಸೀಮೆಯ ಹವ್ಯಕ ಭಾಷೆಲಿ ಅವ(ಳು) ಬಂದ(ಳು) ಹೇಳಿಯೇ ಹೇಳ್ತ ರೂಢಿ. ಅಲ್ಲಿ ಪುಲ್ಲಿಂಗಕ್ಕೂ ಸ್ತ್ರೀಲಿಂಗಕ್ಕೂ ಸೂಕ್ಷ್ಮವಾದ ವ್ಯತ್ಯಾಸ ಇದ್ದು. ಪ್ರಶ್ನಾರ್ಥಕವಾಗಿ ‘ಳ್’ ಒಳುದ್ದದು ಗಮನಿಸಿ.

  [Reply]

  ಸುರೇಖಾ ಚಿಕ್ಕಮ್ಮ

  ಸುರೇಖಾ Reply:

  ಮದುವೆಯಾದ ಸುರುವಿಂಗೆ, ಹವ್ಯಕ ಅಲ್ಲದ್ದ ಎನಗೆ, ‘ಅದು’ ಪದಪ್ರಯೋಗ ರಜ್ಜ ಹಿಂಸೆ ಅಕ್ಕೊಂಡಿತ್ತು. ಮತ್ತೆ ಮತ್ತೆ ಅಭ್ಯಾಸ ಆತು. ಈಗೆಂತ ಅನುಸುತ್ತಿಲ್ಲೆ.

  [Reply]

  VA:F [1.9.22_1171]
  Rating: +2 (from 2 votes)
 9. ಮುಳಿಯ ಭಾವ
  ರಘುಮುಳಿಯ

  ಗಿಳಿಬಾಗಿಲಿ೦ದ ಲಕ್ಶ್ಮಿ ಅಕ್ಕ ಹೇಳುವ ಶುದ್ದಿಗೊ ನಮ್ಮ ಭಾಷೆಲಿಪ್ಪ ಅಪ್ರೂಪದ ನುಡಿಗಟ್ಟುಗಳ ಬಳಕೆ,ಬೆಳವಣಿಗೆಗೆ ಪೂರಕವಾಗಿ ಬತ್ತಾ ಇದ್ದು ಹೇಳ್ತದು ಸ೦ತೋಷದ ವಿಷಯ.
  ಎನ್ನ ಅಜ್ಜಿ ( ಅಪ್ಪನ ಅಬ್ಬೆ) – ಅಬ್ಬೆ ಬ೦ದ,ಅತ್ತೆ ಹೋದ – ಈ ಸ೦ಬೋಧನೆಗಳನ್ನೇ ಮಾಡಿಗೊ೦ಡಿತ್ತಿದ್ದವು. ಚಿಕ್ಕಮ್ಮ೦ಗೆ ಕಿರಿಯಬ್ಬೆ ಹೇಳಿ ಶಬ್ದ ಉಪಯೋಗಿಸಿಗೊ೦ಡಿತ್ತಿದ್ದವು.
  ಈಗ ಅಬ್ಬೆ ಹೇಳಿ ದೆನಿಗೇಳೊದೇ ಅಪ್ರೂಪ ಆಯಿದು !

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮುಳಿಯ ಭಾವಬಂಡಾಡಿ ಅಜ್ಜಿವಿದ್ವಾನಣ್ಣಪುತ್ತೂರುಬಾವಕೆದೂರು ಡಾಕ್ಟ್ರುಬಾವ°ನೆಗೆಗಾರ°ಬೊಳುಂಬು ಮಾವ°ದೊಡ್ಮನೆ ಭಾವಗೋಪಾಲಣ್ಣಸುಭಗಡಾಮಹೇಶಣ್ಣಪುತ್ತೂರಿನ ಪುಟ್ಟಕ್ಕಪುಟ್ಟಬಾವ°ದೊಡ್ಡಭಾವಗಣೇಶ ಮಾವ°ಅಜ್ಜಕಾನ ಭಾವಪೆರ್ಲದಣ್ಣಶ್ಯಾಮಣ್ಣಎರುಂಬು ಅಪ್ಪಚ್ಚಿಕೇಜಿಮಾವ°ಅಕ್ಷರ°ಶರ್ಮಪ್ಪಚ್ಚಿಸರ್ಪಮಲೆ ಮಾವ°ರಾಜಣ್ಣಮಂಗ್ಳೂರ ಮಾಣಿಶಾಂತತ್ತೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ