Oppanna.com

ಗಿಳಿಬಾಗಿಲಿಂದ-ಎಮ್ಮೆ ಕಂಜಿ ಹಾಂಗೆ

ಬರದೋರು :   ಲಕ್ಷ್ಮಿ ಜಿ.ಪ್ರಸಾದ    on   09/10/2013    12 ಒಪ್ಪಂಗೊ

“ಅದು ಮಾಡುದು ನೋಡು ,ನಿದಾನಕ್ಕೆ ಎಮ್ಮೆ ಕಂಜಿ ಹಾಂಗೆ ”

ಹೇಳುವ ಬೈಗಳು ನಿದಾನ ಪ್ರವೃತ್ತಿಯೋರಿ೦ಗೆ ಬಳಕೆ ಮಾಡುತ್ತವು .ಈ ಬೈಗಳಿನ  ಅರ್ಥ ಎಂತದು ಹೇಳಿ ಗೊಂತಾಯಕ್ಕಾದರೆ ಎಮ್ಮೆ ಕಂಜಿಯನ್ನೇ ನೋಡಿರಕ್ಕು .ಅದು ಬಿಟ್ಟು ಬೇರೆ ದಾರಿ ಇಲ್ಲೆ .ಎಂಗ ಸಣ್ಣಾ ದಿಪ್ಪಗ ಅಜ್ಜನ ಮನೇಲಿ ಸುಮಾರು ಎಮ್ಮೆಗಳ, ದನಗಳ ಸಾಂಕಿಗೊಂಡು ಇತ್ತಿದವು .ಅಂಬಗ ಎಮ್ಮೆಗಳ ಕಂಜಿ ಹಾಕುವ ಸಮಯ ಬಂದರೆ ಗುಡ್ಡೆಗೆ ಬಿಟ್ಟುಗೊಂಡು ಇತ್ತಿದವಿಲ್ಲೆ.ದನಗಳ ಕಂಜಿ ಹಾಕುಲೆ ಹತ್ತರೆ ಆದರೂ ಗುಡ್ಡೆಗೆ ಬಿಟ್ಟುಕೊಂಡು ಇತ್ತಿದವು .ಎಷ್ಟೋ ಸರ್ತಿ ದನಗ ಗುಡ್ಡೆಲಿಯೇ ಕಂಜಿ ಹಾಕಿ ಕಂಜಿಗಳ ನಿದಾನಕ್ಕೆ ನಡೆಸಿಗೊಂಡು ಹೊತ್ತಪ್ಪಗ ಮನೆಗೆ ಬತ್ತ ಇತ್ತಿದವು .
ಕೆಲವು ಸರ್ತಿ ಮನೆಯೋರು ಹುಡುಕ್ಕಿ ಗೊಂಡು  ಹೋಗಿ ಕಂಜಿಯನ್ನು ಅದರ ಅಬ್ಬೆಯನ್ನೂ ಎಬ್ಬಿ ಕೊಂಡು  ಬತ್ತಾ ಇತ್ತಿದೆಯ° .ಆದರೆ ಎಮ್ಮೆ ಬಗ್ಗೆ ಹೆಚ್ಚಿನ ಕಾಳಜಿ ಬೇಕಾಗಿತ್ತು .ಅದು ಮನೆಲಿಯೇ ಕಂಜಿ ಹಾಕಿದರೂ ಕೂಡಾ ಕಂಜಿಯ ನೆಗ್ಗಿ ಎಮ್ಮೆಯ ಕೆಚ್ಚಲಿನ ಮೂಸಿಸಿ ಕೆಲವು ಸರ್ತಿ ಅದರ ಬಾಯಿಗೆ ಹಾಲು ಹಿಂಡಿ ರುಚಿ ಹಿಡಿಸಕ್ಕಾಗಿತ್ತು .ದನದ ಕಂಜಿಗ ಅವರಷ್ಟಕ್ಕೆ ಎದ್ದು ನಿಂದುಕೊಂಡು ಇತ್ತಿದವು ( ಈ ಮಾತು ಊರ ದನಗೊಕ್ಕೆ ಮಾತ್ರ ಅನ್ವಯ !).ಅವರಷ್ಟಕ್ಕೆ ಕೆಚ್ಚೆಲುಹುಡುಕಿ ಹಾಲು ಕುಡುಕ್ಕೊಂಡು  ಇತ್ತಿದವು .
ಎಮ್ಮೆ ಕಾಂಜಿಗ ಅಷ್ಟು ಚುರುಕು ಇರ್ತವಿಲ್ಲೆ .ಎಮ್ಮೆ ಕಂಜಿಗ ಅವರಷ್ಟಕ್ಕೆ ಎದ್ದು ನಿಂದು ಹಾಲು ಕುಡಿವಲೆ ಒಂದೆರಡು ಬೇಕಾಗಿ ಕೊಂಡು  ಇತ್ತು .ಅದರ೦ದಾಗಿಯೇ ನಿದಾನ ಪ್ರವೃತ್ತಿಯೋರಿ೦ಗೆ ಎಮ್ಮೆ ಕಂಜಿ ಹಾಂಗೆ ಹೇಳುವ ಮಾತು ಬಂದಿಕ್ಕು ಹೇಳಿ ಎನಗೆ ಅನ್ಸುತ್ತು .ಅದಲ್ಲದ್ದೆ ಚೊಕ್ಕವಾಗಿ ಕೆಲಸ ಮಾಡದ್ದೆ  ತಚಿ ಪಿಚಿ ಮಾಡುವೊರಿಂಗು ಎಮ್ಮೆ ಕಂಜಿ ಹಾಂಗೆ ಹೇಳುವ ಮಾತಿನ ಬಳಕೆ ಮಾಡ್ತವು .ಎಮ್ಮೆ ಕಂಜಿ ಅಲ್ಲಿ ಇಲ್ಲಿ ಬಿದ್ದು ಮನುಗುವ ಕಾರಣ ಈ ಮಾತು ಬಂದಿಕ್ಕು ಹೇಳಿ ಎನಗೆ ಅನ್ಸುತ್ತು .~ಜ್ಎಮ್ಮೆಗಳುದೆ ಪಳ್ಳದ ಕೆಸರು ನೀರಿಲಿ ಬಿದ್ದು ಕೊಂಡರೆ ಅಲ್ಲಿಂದ ಹೆರ ಹೆರಡುಸುದು ಬಾರೀ ಬ೦ಙದ ಕೆಲಸ .ಯಾವಾಗಲು ಮೈಲಿ ಕೆಸರು ಮೆತ್ತಿಗೊಂಡು ಇರ್ತವು .
ಹಾಂಗಾಗಿ ಈ ರೀತಿಯ ತಿರಸ್ಕಾರದ /ನಿಂದನೆಯ ಮಾತು ಬಳಕೆಗೆ ಬಂದಿಕ್ಕು ಹೇಳಿ ಎನಗೆ ಅನ್ಸುತ್ತು ,ನಿಂಗೊ ಎಲ್ಲೊರು ಎಂತ ಹೇಳುತ್ತಿ ?ನಿಂಗಳ ಅಭಿಪ್ರಾಯ ತಿಳಿಸಿ .

12 thoughts on “ಗಿಳಿಬಾಗಿಲಿಂದ-ಎಮ್ಮೆ ಕಂಜಿ ಹಾಂಗೆ

  1. ನಿಂಗಳ ಎಲ್ಲರ ಬೆಂಬಲ ಪ್ರೋತ್ಸಾಹ ಎನಗೆ ಮುಂದುವರಿವ ಧೈರ್ಯವ ತಂದು ಕೊಟ್ಟಿದು .ಉಡುಪುಮೂಲೆ ಅಪ್ಪಚ್ಚಿ,ಕೆ. ವೆಂಕಟರಮಣ ಭಟ್ಟ ಅಣ್ಣ ಗೋಪಾಲಣ್ಣ ಎಸ್.ಕೆ.ಗೋಪಾಲಕೃಷ್ಣ ಭಟ್ ಬೊಳುಂಬು ಗೋಪಾಲ ಮಾವ ಕೆ.ನರಸಿಂಹ ಭಟ್ ಏತಡ್ಕ ಪ್ರದೀಪ್ ಮುಣ್ಚಿಕಾನ ಇಂದಿರತ್ತೆ ಚೆನ್ನೈ ಭಾವ° ಮತ್ತು ಎಲ್ಲ ಬೈಲಿನ ನೆಂಟರು ,ನಿಂಗಳ ಎಲ್ಲರ ಆಶೀರ್ವಾದ ,ಶುಭ ಹಾರೈಕೆ ಶ್ರೀ ರಕ್ಷೆ ಎನಗೆ ಧನ್ಯವಾದಂಗ

    1. ಎಮ್ಮೆ ನಿಧಾನಿ ಅಪ್ಪು. ಅದರ ಹಾಲು ದಪ್ಪ ಅದೂದೆ ಅಪ್ಪು. ಆದರೆ ಅದರ ಹಾಲು ಕುಡುದೋವೆಲ್ಲ ಮಂದ ಬುದ್ಧಿಯೋವು ಹೇಳಿರೆ, ಎಂಗ ಸಣ್ಣಕ್ಕಿಪ್ಪಗ ಜಗಳಕ್ಕೆ ಹೋಗಿಕೊಂಡು ಇತ್ತಿದ್ದೆಯೊ. ಆನು ಹುಟ್ಟೆಕಾರೆ ಮನೇಲಿ ದನಗಳು ಇತ್ತಿದ್ದವು. ಅಂಬಗಿನ ನಮ್ಮ ಕನಿಷ್ಟ ಆರೈಕೆಲಿ ಅವು ಹೆಚ್ಚು ದಿನ ಹಾಲು ಕೊಟ್ಟುಗೊಂಡು ಇತ್ತಿದ್ದವಿಲ್ಲೆ. ಮತ್ತೆ ಮತ್ತೆ ದನ ಬಿಟ್ಟು ಎಮ್ಮೆ ಸಾಂಕಿದ್ದು. ಅವುಗಳ ಆರೋಗ್ಯ ಗಟ್ಟಿ. ಸ್ವಲ್ಪ ಸ್ವಲ್ಪ ಆದರೂ ತುಂಬ ದಿನ ಹಾಲು ಕೊಡ್ತಾ ಇತ್ತಿದ್ದವು. ಎಮ್ಮೆ ಕಾದದ್ದು, ಅವು ಕೆಸರು ಹೊಂಡಲಿ ಎಂಜೊಯ್ ಮಾಡಿದ್ದು, ಎಂಗ ಅವನ್ನು ಅಲ್ಲಿಂದ ಎಬ್ಬಿಸ್ಸುಲೆ ಪರದಾಡಿದ್ದು …. ಒಮ್ಮೆ ಬಾಲ್ಯ ನೆಂಪಾತು.

  2. ಕಾಸರಗೋಡು ಕಡೆ ಸಣ್ಣ ಮಾಣಿಯಂಗಳ ಪ್ರೀತಿಲಿ “ಗೋಣ ಸಂಬಯ್ಯ” ಹೇಳಿ ಮಾತಾಡ್ಸುತ್ತವು.

    1. ಎಮ್ಮೆ ಕ೦ಜಿ ಹಾಕಿದ ಕೂಡ್ಲೆ ಆ ಕ೦ಜಿ ಎದ್ದು ನಿಲ್ಲುತ್ತಿಲ್ಲೆ.ಅದರ ಅಬ್ಬೆ ಎಮ್ಮೆ ಎಷ್ಟೋ ಸರ್ತಿ ನೆಕ್ಕಿ, ನೆಕ್ಕಿ ಆದ ಮತ್ತೆ ಅದು ನಿದಾನಕ್ಕೆ ಎದ್ದು ನಿ೦ಬ ಪ್ರಯತ್ನ ಮಾಡುತ್ತು.ಕೆಲವು ಎಮ್ಮಗೊ ಅದರ ಕ೦ಜಿಗಳ ನೆಕ್ಕದಿಪ್ಪದು ಇದ್ದು. ಅ೦ಥ ಪ್ರಸ೦ಗಲ್ಲಿ ಅದರ ಮೆಯಿಗೆ ಅಕ್ಕಿಯ ಧೂಳು(ತೌಡು;ಬೂಸ)ಹಾಕಿ ನೆಕ್ಕುವ ಹಾ೦ಗೆ ಮಾಡ್ಸೆಕಪ್ಪದು ಇದ್ದು.ಸ೦ಣಾಗಿಪ್ಪಗ ಎ೦ಗಳ ಮನೆಲಿ ಸಾಕಷ್ಟು ಎಮ್ಮಗಳನ್ನು ದನಗಳನ್ನೂ ಸಾ೦ಕುತಿತವು.ಪುಣ್ಯಕ್ಕೆ ಈಗ ಒ೦ದೇ ಒ೦ದು ಜಾನುವಾರುದೇ ಎ೦ಗಳಲ್ಲಿ ಇಲ್ಲೆ!ಅಕ್ಕ ನಿ೦ಗಳ ಈ ನುಡಿಗಟ್ಟು ನೋಡಿಯಪ್ಪಗ ಇದಕ್ಕೆ ಸಮಾನವಾದ ಇನ್ನೊ೦ದು ನುಡಿಗಟ್ಟು ನೆ೦ಪಾತಿದ“ಹೆಜ್ಜೆಲಿ ಬಿದ್ದ ನಳವು.”ಇದು ಸಯಿತ ಅದೇ ಅರ್ಥಲ್ಲಿ ಬಳಸುತ್ತವಲ್ಲದಾ?ನಿ೦ಗಳ ಈ ಸತ್ಕಾರ್ಯಕ್ಕೆ ಕಯಿ ಮುಗುದು ಧನ್ಯವಾದ೦ಗ ಹೇಳ್ತಾ ಇದ್ದೆ.ಬಹಳ ಒಳ್ಳೆ ಕೆಲಸ ಮಾಡ್ತಾ ಇದ್ದಿ.ಈ ಕಾರ್ಯ ಮು೦ದುವರಿಯಲಿ.“ಶುಭ೦ ಭೂಯತ್”’

  3. “ಗೋಣ ಶಂಕರ” ಹೇಳುವ ಬಯ್ತ ಶಬ್ದ ಕೇಳಿದ್ದೆ. ಎಮ್ಮೆ ಹಾಲು ದಪ್ಪ ಹೇಳುವದು ಜನಜನಿತ. ಎಮ್ಮೆ ಹಾಲು ಕುಡುದವನ ಹಾಂಗೆ ಮಾಡೆಡ ಹೇಳುವದು ಕೇಳಿದ್ದೆ.
    ಈಗ ಊರಿಲ್ಲಿ ಎಮ್ಮೆಗಳ ಕಾಂಬಲೇ ಸಿಕ್ಕುತ್ತಿಲ್ಲೆ.
    ಲಕ್ಷ್ಮಿಅಕ್ಕನದ್ದು ಚಿಂತನೆಗೆ ಹಚ್ಚುವ ಲೇಖನ, ಲಾಯಕಿತ್ತು.

    1. ಯಕ್ಷಗಾನ ಸಭಾ ಲಕ್ಷಣಲ್ಲಿ ಒಂದು ಹಾಸ್ಯವೇಷ ಹೇಳುವ ಶಬ್ದ ಇದು-ಗೋಣ ಶಂಕರಾ…ಹೇಳಿ.

  4. ಎಮ್ಮೆ ಬುದ್ಧಿ ಮಂದ ಆದರೆಂತಾತು?ಹಾಲೂ ಮಂದ(ದಪ್ಪ)ಇದ್ದು.ಹೆಚ್ಚು ಕಾಫಿ,ಚಾ ಮಾಡ್ಳೆ ಆವುತ್ತನ್ನೆ?

  5. ನಿಧಾನವೇ ಪ್ರಧಾನ ಆದವರ ಹೋಲುಸೆಕ್ಕಾದರೆ ಎಮ್ಮೆಕಂಜಿಗಳ ತಪ್ಪದಪ್ಪು. ಯಾವುದನ್ನುದೆ ಸೂಕ್ಷ್ಮವಾಗಿ ನೋಡದ್ದೆ ಗೋಷ್ಪಾರಿ ಮಾಡುವವರ ಎಮ್ಮೆಚರ್ಮದವು ಹೇಳಿ ಕೂಡ ಹೇಳುಗು. ಹದಾಕೆ ಬುದ್ಧಿವಂತಿಕೆ ಇದ್ದುಗೊಂಡು ಬೇಕೋಬೇಡದೋ ಹೇಳಿ ನಿಧಾನಕ್ಕಿಪ್ಪವರ ಎಮ್ಮೆಹಾಲು ಕುಡುದವು ಹೇಳಿ ಕೂಡಾ ಹೇಳ್ತವು. ಒಟ್ಟಾರೆ ಚುರುಕು ಕಮ್ಮಿ ಇಪ್ಪವಕ್ಕೆ ಈ ಎಮ್ಮೆ ಒಂದು ಸಂಕೇತವಾಗಿ ಬಯಿಂದು. ಎಮ್ಮೆಗಳ ಒರಟು ಚರ್ಮವೂ ಸ್ವಭಾವವೂ ಇದಕ್ಕೆ ಕಾರಣವಾದಿಕ್ಕು.
    ನಮ್ಮ ಭಾಷೆಲಿ ಬಪ್ಪ ಒಂದೊಂದು ನುಡಿಗಟ್ಟುಗಳಬಗ್ಗೆ ಚಿಂತನೆಗೆ ಹಚ್ಚಿದ ಈ ಶುದ್ದಿ ಲಾಯ್ಕಾಯಿದು ಲಕ್ಷ್ಮಿ ಅಕ್ಕ- ಅಭಿನಂದನೆಗೊ.

  6. ಮಕ್ಕಳ ಕೈ ಬರಹ (ಹ್ಯಾಂಡ್ ರೈಟಿಂಗ್) ಸರಿಯಾಗಿಲ್ಲದ್ರೆ ಮಾಷ್ಟ್ರಕ್ಕೊ” ಎತ್ತು ಉಚ್ಚುಹುಯ್ಯಿದ ಹಾಂಗೆ” ಬರದ್ದೆ ಹೇಳಿ ಬಯ್ಯುವ ಕ್ರಮ ಇತ್ತು.

  7. ಎಮ್ಮೆ, ಗೋಣಂಗಳ ಚರ್ಮ ದನದ ಚರ್ಮಂದ ದಪ್ಪ.ಸಣ್ಣಕ್ಕೆ ಬಡುದರೆ ಗೊಂತಾಗ. ಓದುವ ಮಕ್ಕೊಗೆ ಎಷ್ಟು ಬಡುದು ಬುದ್ದಿ ಹೇಳಿ ಓದುಸಿದರೂ ತಲಗೆ ಹತ್ತದ್ರೆ “ಎಮ್ಮೇ ಚರ್ಮದವ” ಹೇಳಿ ಬೈವ ಕ್ರಮ ಇದ್ದು.ಹರೇ ರಾಮ.

  8. ಅಕ್ಕ ಇಟ್ಟು ಹೇದ ಮತ್ತೆ ಹಾಂಗೇ ಆಗಿಕ್ಕೋ ಹೇದೇ ತೋರುತ್ತಪ್ಪ. ನೋಡ್ವೋ ಆರಾರು ಬೇರೆಂತಾರು ಹೇಳ್ತವೋದು.
    ಹಾಂಗೇ ಒಂದು – ‘ಎಮ್ಮೆ ಸಗಣ ಹಾಕಿದಾಂಗೆ’ ಹೇದು ಕೇಟಿದೆ . ಎಂತರಪ್ಪ ಅದು … ಉಮ್ಮ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×