ಗಿಳಿಬಾಗಿಲಿಂದ-ಅದು ಒಂದು ಮೋಡೆ

November 13, 2013 ರ 6:00 amಗೆ ನಮ್ಮ ಬರದ್ದು, ಇದುವರೆಗೆ 11 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಎಂಗಳ ಮನೆಲಿ ಒಂದು ಗೋಣ ಇತ್ತು.ಸಾಮಾನ್ಯವಾಗಿ ಗೋಣಂಗೊಕ್ಕೆ ಕಾಳ ಬೊಳ್ಳ ಹೇಳಿ ಹೆಸರು ಮಡುಗುದು. ಆದರೆ ಎಂಗಳ ಈ ಗೋಣಂಗೆ ಮೋಡೆ ಹೇಳಿ ಹೆಸರಿತ್ತು. ಎನಗೆ ಸಣ್ಣಾದಿಪ್ಪಗಂದಲೇ ನಮ್ಮ ಗೋಣಂಗೆ ಮೋಡೆ ಹೇಳಿ ಎಂತಕೆ ಹೆಸರು ?ಅದು ಕಪ್ಪು ಇತ್ತು ಕಾಳ ಹೇಳಿ ಮಡುಗದ್ದದು ಎಂತಕೆ ? ಹೇಳಿ ಅನ್ಸಿಗೊಂಡು ಇತ್ತು .ಅಲ್ಲದ್ದೆ ಇನ್ನೊಂದು ಗೋಣಂಗೆ ಬೊಳ್ಳ ಹೇಳಿ ಹೆಸರಿದ್ದದು. ಕಾಳ ಬೊಳ್ಳ ಹೇಳಿ ಇದ್ದರೆ ಚೆಂದ ಇರ್ತಿತ್ತು ಹೇಳಿ ಆನು ಮನಾಸಿಲಿ ಜ್ಹಾನ್ಸಿಗೊಂಡು ಇತ್ತಿದೆ. ಮೋಡೆ ರಜ್ಜ ವಿಕ್ಷಿಪ್ತ ಗುಣದ ಗೋಣ.ಪಾಪದ ಗೋಣನ ಹಾಂಗೆ ಇರ್ತು .ಇದ್ದಕ್ಕಿದ್ದ ಹಾಂಗೆ ತಿರುಗಿ ನಿಂದು ತಾಡಿಗೊಂಡು ಇತ್ತು .ಎಲ್ಲರನ್ನು ಅಟ್ಟಿಸಿಕೊಂಡು ಹೋಯಿಕ್ಕೊಂಡು ಇತ್ತು .ಬಹುಶ ಅದರ ಸ್ವಭಾವಂದಾಗಿಯೇ ಅದಕ್ಕೆ ಮೋಡೆ ಹೇಳಿ ಹೆಸರು ಬಂದಿಕ್ಕು ಹೇಳಿ ಆನು ಭಾವಿಸಿತ್ತಿದ್ದೆ. ಆದರೆ ಆ ಗೋಣಂಗೆ ಅದರ ಸ್ವಭಾವಂದಾಗಿ ಹೆಸರು ಬಂದದು ಅಲ್ಲ ಹೇಳಿ ಅಮ್ಮ ಹೇಳಿದ. ಹಿಂದೆ ಹೋಗಿ ಮುಂದಂಗೆ ರಜ್ಜ ತಿರುಗಿದ ರೀತಿಯ ಕೊಂಬು ಇಪ್ಪ ಗೋಣಂಗೊಕ್ಕೆ ಮೋಡೆ ಹೇಳಿ ಹೆಸರು ಮಡುಗಿಕೊಂಡು ಇತ್ತಿದವಡ. ಎಂಗಳ ಆ ಗೋಣನ ಕೊಂಬುದೆ ಹಾಂಗೆ ಬಗ್ಗಿ ಕೊಂಡು ಇತ್ತು .ಹಾಂಗಾಗಿ ಅದಕ್ಕೆ ಮೋಡೆ ಹೇಳಿ ಹೆಸರು ಇದ್ದದಡ.

“ಅದು ಒಂದು ಮೋಡೆ/ಆವ ಒಂದು ಮೋಡೆ ಜಾತಿ , ಎಲ್ಲೋರ ಹಾಂಗೆ ಅಲ್ಲ” !ಈ ಮಾತು ನಮ್ಮ ಭಾಷೆಲಿ ಮಾತಿನ ನಡುವೆ ಬಳಕೆ ಆವುತ್ತು. ಮೋಡೆ ಹೇಳುವ ಪದವ ಕೇಳಿದ ತಕ್ಷಣವೆ ನವಗೆ ವ್ಯಕ್ತಿಯ ಚಿತ್ರಣ ಕಣ್ಣಿಂಗೆ ಕಟ್ಟುತ್ತು.ಮನಸ್ಸಿದ್ದರೆ ಮಾತಾಡುಗು ಇಲ್ಲದ್ದರೆ ಕೋಣೆಲೇ ಇಕ್ಕು ಹೆರವೇ ಬಾರ ಹೇಳಿ ಅಂದಾಜು ಆವುತ್ತು .ರಜ ವಿಕ್ಷಿಪ್ತ ಹೇಳುದರ ನಮ್ಮಲ್ಲಿ ಮೋಡೆ ಹೇಳಿ ಹೇಳ್ತವು .ಆದರೆ ಕನ್ನಡಲ್ಲಿ ಈ ಪದ ಅಷ್ಟಾಗಿ ಬಳಕೆಲಿ ಇಲ್ಲೆ.ತುಳುವಿಲಿ “ಅವು ಒಂಜಿ ಮೋಡೆ ಏರೆಡಲ ಪಾತೆರಾಂದು “ಅದು ಒಂದು ಮೋಡೆ ಆರ ಹತ್ತರದೆ ಮಾತಾಡ” ಹೇಳುವ ಮಾತು ಬಳಕೆಲಿ ಇದ್ದು .ಹೆಚ್ಚಾಗಿ ನಮ್ಮಲ್ಲಿ ಇದರ ಹೆಮ್ಮಕ್ಕಳ ಸ್ವಭಾವವ ಹೇಳುವಾಗ ಇದರ ಬಳಕೆ ಮಾಡುತ್ತು.ಅಪರೂಪಕ್ಕೆ ಗೆಂಡುಮಕ್ಕೊಗು ಮೋಡೆ ಹೇಳುವ ಪದದ ಬಳಕೆ ಕೋಳ್ಯೂರು ಸೀಮೆಲಿ ಪ್ರಚಲಿತ ಇದ್ದು.”ಅವು ಒಂದು ಮೋಡೆ ಜಾತಿಗ ಆರೊಬ್ಬ ಮನುಷ್ಯನ ಒರು ಇಲ್ಲೆ” ಹೇಳಿ ಇಡೀ ಒಂದು ಮನೆಯ ಸದಸ್ಯರ ಒಟ್ಟಾಗಿ ಹೇಳುದೂ ಇದ್ದು.ಬೇರೆ ಕಡೆ ಇದ್ದ ಇಲ್ಲೆಯ ಹೇಳುದು ಎನ್ನ ಗಮನಕ್ಕೆ ಬೈ೦ದಿಲ್ಲೆ.

ಈ ಪದ ಇಂಗ್ಲಿಷ್ ನ ಮೂಡಿ ಹೇಳುವ ಪದದ ಪ್ರಭಾವಂದ ಬಂದಿಕ್ಕ?ಎನಗೂ ಗೊಂತಿಲ್ಲೆ,ಮೂಡಿ,ಮೂಡ್ ಪದಂದ ಮೋಡೆ ಪದ ಬಳಕೆಗೆ ಬಂದಿಪ್ಪ ಸಾಧ್ಯತೆ ಇದ್ದು .ನಮ್ಮ ಭಾಷೆಲಿ ಆರಾದರೂ ರಜ್ಜ ಕೋಪಲ್ಲಿ ಇದ್ದರೆ “ಇಂದು ಮೋಡ ಹಾಕಿದ್ದು ,ಮೋಡ ಹಾಕಿಕೊಂಡು ಇದ್ದು,ಜಾಗ್ರತೆ “ಹೇಳಿ ಹೇಳುವ ಕ್ರಮ ಇದ್ದು.ಮೋಡ ಹಾಕಿದರೆ ಮುಂದೆ ಗುಡುಗು ಸೆಡ್ಲು ಮಳೆ ಬಪ್ಪ ಸಾಧ್ಯತೆ ಇರುತ್ತು .ಹಾಂಗೆ ಮೋಡ ಹಾಕಿದ್ದು ಹೇಳ್ರೆ “ಯಾವಾಗ ಬೇಕಾದರೂ ಗುಡುಗು ಸೆಡ್ಲಿನ ಹಾಂಗೆ ಬೈಗಳು ಪೆಟ್ಟು ಬೀಳುಗು ಅಥವಾ ಮಳೆ ಹಾಂಗೆ ಕೂಗುಗು,ಕಣ್ಣೀರು ಬಕ್ಕು ಯಾವಾಗ ಎಂತ ಹೇಂಗೆ ಅಕ್ಕು ಹೇಳಿ ಹೇಳುಲೆಡಿಯ” ಹೇಳುವ ಭಾವ ಇಲ್ಲಿ ಕಾಣುತ್ತು .ಹಾಂಗಾಗಿ ಮೋಡಂದ ಮೋಡೆ ಪದ ಬಂದಿಪ್ಪ ಸಾಧ್ಯತೆ ಇದ್ದು.

ಮೋಡಂದ ಮೋಡೆ ಪದ ಬಂತಾ ಅಥವಾ ಮೂಡ್/ಮೂಡಿ ಪದಂದ ಮೋಡೆ ಬಂತಾ ,ಅಥವಾ ಮೋಡೆ ಪದಕ್ಕೆ ಇನ್ನೇನಾದರು ಮೂಲ ಇದ್ದ ?ಇದು ತುಳುವಿಲಿ ಕೂಡಾ ಬಳಕೆಲಿ ಇದ್ದು .ತುಳುವಿನ ಪ್ರಭಾವಂದಾಗಿ ನಮ್ಮ ಭಾಷೆಲಿ ಮೋಡೆ ಪದ ಬಳಕೆಗೆ ಬಂತಾ ಅಥವಾ ನಮ್ಮ ಭಾಷೆಂದ ತುಳುವಿಂಗೆ ಹೋತಾ ?ನಿಂಗೊಗೆ ಎಂತ ಅನ್ಸುತ್ತು ?ನಿಂಗಳ ಅಭಿಪ್ರಾಯವ ತಿಳುಸಿ.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 11 ಒಪ್ಪಂಗೊ

 1. ಕೆ.ನರಸಿಂಹ ಭಟ್ ಏತಡ್ಕ

  ಮೋಡೆ ಪದಕ್ಕೆ ತುಳು ನಿಘಂಟಿಲ್ಲಿ ಬಾಗಿದ ಕೊಂಬುಗಳಿರುವ ಎತ್ತು ಅಥವಾ ಕೋಣ ಹೇಳುವ ಅರ್ಥ ಕೊಟ್ಟಿದವು.ಅದುವೇ ಅರ್ಥಾಂತರ ಹೊಂದಿ ನಮ್ಮ ಭಾಷೆಲಿ ಬಳಕೆಗೆ ಬಂದದಾಯಿಕ್ಕು.’ಹವಿಗನ್ನಡ ಭಾಷಾ ರೂಪ’ ಹೇಳುವ ಲೇಖನಲ್ಲಿ ಡಾ।ಪಿ.ಶ್ರೀಕೃಷ್ಣ ಭಟ್ ಹೀಂಗೆ ಹೇಳುತ್ತವು-ಹವಿಗನ್ನಡದಲ್ಲಿ ತುಳು ಭಾಷೆಯಿಂದ ಸ್ವೀಕರಿಸಿದ ಪದಗಳು ಗಣನೀಯ ಪ್ರಮಾಣದಲ್ಲಿವೆ.ಅಮೆ,ದೊಂಡೆ,ಕುಂಡೆಚ,ಕುರುಳೆ,ಗರ್ಪು,ಕೊಬಳು,ದೂಜಿ,ಬೇರ,ಪಿಜುಂಟು,ಪರಂಚು,ಪೊಜಕ್ಕು,ಪುೞಿ ಇತ್ಯಾದಿ ಸಾಕಷ್ಟು ಸ್ವೀಕರಣಗಳನ್ನು ಕಾಣಬಹುದಾಗಿದೆ.

  [Reply]

  VA:F [1.9.22_1171]
  Rating: +1 (from 1 vote)
 2. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ಮೋಡಾ ಹೇಳಿರೆ ಬಗ್ಗಿದ್ದು ಹೇಳಿ ಅರ್ಥ. ಅದುವೇ ತುಳುವಿಲಿ ಮೋಡೆ ಹೇಳಿ ಬಳಕೆಗೆ ಬಂದದು, ಬಗ್ಗಿದ್ದು ಹೇಳುವ ಅರ್ಥಲ್ಲಿ. ಕಾಳ = ಕಪ್ಪು ಇಪ್ಪ ಹಾಂಗೆಯೇ ಅದು ಮರಾಠಿ/ ಪ್ರಾಕೃತ ಮೂಲಂದ ಬಂದದು.
  ಬಗ್ಗಿದ ಸ್ವಭಾವ ಇಪ್ಪವನ, ಅವ° ಮೋಡೆ ಹೇಳಿ ಹೇಳುಗು.
  ಹಿಂದಿಲಿ ಮೋಡಾ ಹುವಾ = ಬಗ್ಗಿದ್ದು

  [Reply]

  VN:F [1.9.22_1171]
  Rating: +2 (from 2 votes)
 3. ಚೆನ್ನೈ ಬಾವ°

  ಮೋಡೆಗೋಣನ ಬಗ್ಗೆ ಗೊಂತಾತು. ಆದರೆ ಕೆಲವರ ‘ಗೋಣಸಂಬಯ°’ ಹೇದು ಹೇಳ್ಸಂತಕೆ ಹೇಳ್ಸು ಈಗ ಅಡಿಗೆ ಸತ್ಯಣ್ಣನ ಚೋದ್ಯ!

  [Reply]

  VN:F [1.9.22_1171]
  Rating: +1 (from 1 vote)
 4. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ಚೆನ್ನೈ ಭಾವಾ,
  ನಿಂಗೊ ಕೇಳಿದ ಚೋದ್ಯ ಯಾವ ಭಾಷೆದು ಹೇದು ಬೇಕಿದಾ. ಮಲೆಯಾಳದ ಚೋದ್ಯಕ್ಕಾರೆ ಉತ್ತರ ಬೇಕಕ್ಕು. ಕನ್ನಡದ ಚೋದ್ಯ ಬೇಕಾರೆ ಆಶ್ಚರ್ಯ ಅಕ್ಕು. ಆದರೆ ನಿಂಗಳ ‘ಚೋದ್ಯಕ್ಕೆ’ ಎನ್ನತ್ರೆ ಉತ್ತರ ಇಲ್ಲೆ.
  കൃഷ്ണഭാവ°.

  [Reply]

  VN:F [1.9.22_1171]
  Rating: +2 (from 2 votes)
 5. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಏತಡ್ಕ ಮಾವನ ಅಭಿಪ್ರಾಯ ಹೆಚ್ಚು ಸಮಂಜಸ ಹೇಳಿ ಎನ್ನ ಅನಿಸಿಕೆ.

  [Reply]

  VN:F [1.9.22_1171]
  Rating: +1 (from 1 vote)
 6. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ತೆಕ್ಕುಂಜ ಕುಮಾರ ಮಾವಾ,
  ಏತಡ್ಕ ಮಾವನ ಅಭಿಪ್ರಾಯದ ಹಾಂಗೆ ಅದು ತುಳುವಿಂದ ಬಂದ ಶಬ್ದ ಆಗಿಕ್ಕು. ಆದರೆ ತುಳುವಿಂಗೆ ಎಲ್ಲಿಂದ ಬಂತು? ತುಳುವಿಲಿ ಅಲ್ಲದ್ದರೂ ಮರಾಠಿ ಶಬ್ದಂಗೊ ಬೇಕಾಷ್ಟು ಇದ್ದು.

  [Reply]

  VN:F [1.9.22_1171]
  Rating: +1 (from 1 vote)
 7. ಯಮ್.ಕೆ.

  ಮೋಡೆಗಳ ಸುಯಿ೦ಪಾಟವೇ ಗಮ್ಮತ್ತು.
  ಅದು ಸಾಮಾನ್ಯವಾಗಿ ಮು೦ಡುಹಾಕ.
  ತ೦ಗೀಸ್ನ ಮೂಗಿಲಿ ಸುರಿದು ಇದ್ದರೆ
  ಅದರ ಸಾಮಾನ್ಯ ಮಾತಾಡುಲೆ ಅಕ್ಕು.

  ಮಣ್ಣಗೋಡೇಯ ಎಲ್ಲಾ ಹಣೆಜಜ್ಜಿಯೇ ಒ೦ದು ನಮೂನೆ ಮಾಡುತ್ತು.

  ಅದರ ಸಾಮಾನ್ಯವಾಗಿ ಅಲ್ಲಿಗೆ ಮರದ ಕ೦ಬನೆಟ್ಟು ತಡೆಯಕ್ಕಾಗಿ ಬತ್ತು.

  ಕಲ್ಲ ಕ೦ಬ ಆದರೆ ಅವಕ್ಕೆ ಬೇನೇ ಆವುತ್ತನ್ನೆ.

  ಮಾದಿ೦ಗೆ ಬಾರದ್ದೆ ಅಲ್ಲಿಗೆ ನಿ೦ಬ ಮೋಡೆಗಳ ತಾಕತ್ತೇ ಬೇರೆ.

  ಕುಡು ಕೊಟ್ಟು ಮೋಡೆಗಳ ಸಾ೦ಕಾಣವೇ ಒ೦ದು ರೋಚ-ಕತೆಯೆ.

  ಇನ್ನು ಎರಡೇಕಾಲಿಲಿ ಚಲಿಸುವ ಮೋಡೆಗಳ ಬಗ್ಗೆ ಅಡಿಗೆಸತ್ಯಣ್ಣ೦ಗೆ ಹೆಚ್ಹೇ ಮಾಹಿತಿ ಇಕ್ಕು.

  [Reply]

  ಲಕ್ಷ್ಮಿ ಜಿ.ಪ್ರಸಾದ

  Dr laxmi prasad Reply:

  ಒಹೋ !ಮೋಡೆಗ ಅಂಬಗ ಸ್ವಭಾವತ ಜೋರಿನ ಗೋಣಂಗಳ ಅಂಬಗ !ಆನು ಎಂಗಳ ಮನೆಲಿದ್ದ ಮೋಡೆ ಮಾತ್ರ ಹಾಂಗೆ ಹೇಳಿ ಭಾವಿಸಿತ್ತಿದೆ.ಎಂಗಳ ಮೋಡೆ ಬಳ್ಳಿ ಬಿಡುಸಿಗೊಂಡು ಹೆರ ಬಂದರೆ ಕಟ್ಟುಲೇ ಅಮ್ಮಂಗೆ ಮಾತ್ರ ಕೇಳಿಗೊಂಡು ಇತ್ತು .ಒಳುದೋರೆಲ್ಲರ ಸುಯಿಮ್ಪಿ ತಾಡುಲೆ ಹೊಯಿಕ್ಕೊಂದು ಇದ್ದ ಅದು ಎನ್ನ ಅಮ್ಮ ಬಂದು “ಮೋಡೆ ಬಾ ಇದ ಹಿಂಡಿ ಕೊಡ್ತೆ ಬಾ “ಹೇಳ್ರೆ ಪಾಪದ ಕಂಜಿ ಹಾಂಗೆ ಒಡ್ಡಿ ಗೊಂಡು ಇತ್ತು .

  ಎಂಗಳಲ್ಲಿದ್ದ ಮೋಡೆ ಎಂಗೊಗೆ ಪಾಲಿಲಿ ಸಿಕ್ಕಿದ ಗೋಣ.ತುಂಬಾ ಸಾಮರ್ಥ್ಯವಂಥ ಗೋಣ ಅದು.ಅದು ಹೊಟ್ಟೆ ತುಂಬಾ ಕುಡು ಕೊಟ್ರೂ ಕೊದದ್ರೂ (ಧಾರಾಳ ಕೊಡುವಷ್ಟು ಮನೆಲಿ ಇತ್ತಿಲ್ಲೆ !)ಮಧ್ಯಾಹ್ನ ಮೂರುಗಂಟೆ ವರೆ ಹೂಡಿರೂ ಒಂದು ದಿನ ಕೂಡಾ ಮನುಗಿ ಅಸಹಾಕಾರ ತೋರಿದ್ದಿಲ್ಲೆ.ಮೋಡೆದೆ ಬೊಳ್ಳ ನುದೆ ದುಡುದು ಎಂಗಳ ಪಾಲನೆ ಮಾಡಿದ್ದರ ಮರವಲೇ ಸಾಧ್ಯ ಇಲ್ಲೆ!ಋಣ ತೀರಿಸುಲೆ ಎಡಿಯ.

  [Reply]

  VA:F [1.9.22_1171]
  Rating: +1 (from 1 vote)
 8. anusha thekkunja

  mode shabda maudya emba samskrutamoola helli enna ajja heligonditidavada

  [Reply]

  VA:F [1.9.22_1171]
  Rating: 0 (from 0 votes)
 9. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಮೋಡಿ-ಹೇಳುವ ಶಬ್ದಕ್ಕೂ ಇದಕ್ಕೂ ಸಂಬಂಧ ಇದ್ದೊ?

  [Reply]

  VA:F [1.9.22_1171]
  Rating: 0 (from 0 votes)
 10. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ಇಲ್ಲಿ मोडना ಅರ್ಥ ನೋಡಿ.
  http://dict.hinkhoj.com/words/meaning-of-%E0%A4%AE%E0%A5%8B%E0%A4%A1-in-english.html

  ಗೋಪಾಲಣ್ಣ,
  ಮೋಡಿ ಲಿಪಿ ಮೊದಲು ಬಂದದು ಮರಾಠಿಲಿಯೇ. ಹೇಮಾದ್ರಿ ಪಂಡಿತನ ಕೊಡುಗೆ ಮೋಡಿ ಲಿಪಿ. ಕನ್ನಡಲ್ಲಿ ಬೇರೆಯೇ ಮೋಡಿ ಲಿಪಿ ಇಪ್ಪದು. ಅಲ್ಲಿ ಮೋಡಿ ಹೇಳ್ತ ಶಬ್ದದ ಅರ್ಥ ಗಮನಿಸೆಕ್ಕು.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪವನಜಮಾವಕಜೆವಸಂತ°ಶಾಂತತ್ತೆಗಣೇಶ ಮಾವ°ಹಳೆಮನೆ ಅಣ್ಣಪಟಿಕಲ್ಲಪ್ಪಚ್ಚಿಕೇಜಿಮಾವ°ಚೆನ್ನಬೆಟ್ಟಣ್ಣವಾಣಿ ಚಿಕ್ಕಮ್ಮಮುಳಿಯ ಭಾವದೊಡ್ಡಮಾವ°ಅಜ್ಜಕಾನ ಭಾವಉಡುಪುಮೂಲೆ ಅಪ್ಪಚ್ಚಿರಾಜಣ್ಣವಸಂತರಾಜ್ ಹಳೆಮನೆಅನು ಉಡುಪುಮೂಲೆವೇಣೂರಣ್ಣಶೀಲಾಲಕ್ಷ್ಮೀ ಕಾಸರಗೋಡುಡಾಮಹೇಶಣ್ಣಒಪ್ಪಕ್ಕವಿಜಯತ್ತೆಪುತ್ತೂರಿನ ಪುಟ್ಟಕ್ಕಚೆನ್ನೈ ಬಾವ°ಅನುಶ್ರೀ ಬಂಡಾಡಿಬಂಡಾಡಿ ಅಜ್ಜಿಕಾವಿನಮೂಲೆ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ