ಗಿಳಿ ಬಾಗಿಲಿಂದ -ಅಲ್ಪ ಒಳುದು ಹಾಳು ಹಲಾಕು ಆಯಿದು

December 11, 2013 ರ 6:30 amಗೆ ನಮ್ಮ ಬರದ್ದು, ಇದುವರೆಗೆ 11 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

“ಅಡಿಗ್ಗೆಯೋವು ಅಲ್ಪ ಮಾಡಿ ಹಾಕಿದ್ದವು . ಅಲ್ಪ ಒಳುದು ಹಾಳು ಹಲಾಕು ಆಯಿದು ಹೇಳುವ ಮಾತಿನ ನಮ್ಮ ಭಾಷೆಲಿ ಸಾಮನ್ಯಾವಾಗಿ ಉಪಯೋಗಿಸುತ್ತವು.ಅನುಪತ್ಯ ಮಾಡಿ ಅಪ್ಪಗ ಕೆಲವು ಸರ್ತಿ ಅಡಿಗೆಯೋರ (ಇದು ಸತ್ಯಣ್ಣನ ಬಗ್ಗೆ ಅಲ್ಲ.ಸತ್ಯಣ್ಣನ ಅಡಿಗೆ ಮೂರನೇ ಹಂತಿಗೆ ಅಲ್ಲಿಂದಲ್ಲಿಗೆ ಹರ ಹರಾ ಆವುತ್ತಡ!!)!ಅಂದಾಜು ತಪ್ಪಿ ಅಶನ, ಕೊದಿಲು,ಮೇಲಾರಂಗ ತುಂಬಾ ಒಳುದು ಹಾಳಪ್ಪದು ಇದ್ದು .ಕೆಲವು ಸರ್ತಿ ಗ್ರೇಶಿದಷ್ಟು ಜನಂಗ ಬಾರದ್ದೆ ಒಳಿವದು ಇದ್ದು .ಇಂಥ ಸಂದರ್ಭಲ್ಲಿ ತುಂಬ ಒಳುದು ಹಾಳಾಯಿದು ಹೇಳುದರ ಅಲ್ಪ /ಅಲ್ಪ ಒಳುದು ಹಾಳಾಯಿದು ಹೇಳಿ ಹೇಳ್ತವು.

ಕನ್ನಡದ ಪ್ರಾದೇಶಿಕ ಉಪ ಭಾಷೆ ಹೇಳಿಯೇ ಗುರುತಿಸಲ್ಪಡುವ ನಮ್ಮ ಭಾಷೆಲಿ ಬಳಕೆಲಿ ಇಪ್ಪ ಕೆಲವು ಕನ್ನಡ ಪದಂಗೊಕ್ಕೆ ನಮ್ಮ ಭಾಷೆಲಿ ವಿರುದ್ಧವಾದ ಅರ್ಥ ಬಳಕೆಲಿ ಇದ್ದು .ಇಂತಾದ್ದೆ ಒಂದು ಪದ ಅಲ್ಪ ಹೇಳುದು .ಕನ್ನಡಲ್ಲಿ ಅಲ್ಪ ಹೇಳ್ರೆ ಕಮ್ಮಿ ಹೇಳಿ ಅರ್ಥ .ಆದರೆ ನಮ್ಮ ಭಾಷೆಲಿ ತುಂಬ ಹೇಳುವ ಅರ್ಥಲ್ಲಿ ಇದು ಬಳಕೆ ಆವುತ್ತು .”ಅವೆಂತ ಒಂದೆರಡು ಜನಂಗಳ?ಅವು ಅಪ್ಪಚ್ಚಿ ದೊಡ್ಡಪ್ಪ ಮಾವ ಅತ್ತೆ ಮಕ್ಕ ಮರಿಗ ಹೇಳಿ ಅಲ್ಪ ಇದ್ದವು” ಹೇಳಿ ದೊಡ್ಡ ಕುಟುಂಬದ ಬಗ್ಗೆ ಹೇಳುದು ಇದ್ದು .

ಸುತ್ತ ಮುತ್ತ ಎಲ್ಲಿ ನೋಡ್ರೂ ಬ್ಯಾರಿಗಳೇ ಕಾಣ್ತಾ ಇಪ್ಪ ಕನ್ಯಾನ ಉಪ್ಪಳದ ನಡುವೆ ಮನೆ ಇಪ್ಪ ಎಂಗಳ ಬೇತದ ಅಜ್ಜ , ”ಅಲ್ಪ ಸಂಖ್ಯಾತರು ಹೇಳಿ ಇವರ ದೆನಿಗೇಳುದು ಸರಿ.ಆದರೆ ಅದು ನಮ್ಮ ಭಾಷೆಯ ಅಲ್ಪ ಕನ್ನಡದ ಅಲ್ಪ ಅಲ್ಲ” ಹೇಳಿ ಎರಡು ಕೈ ಆಕಡೆ ಈ ಕಡೆ ಬಿಡುಸಿ ಅಗಾಲ್ಸಿ ತೋರ್ಸಿ ನೆಗೆ ಮಾಡಿಗೊಂಡು ಇತ್ತಿದವು!

ಅಲ್ಪ ಹೇಳುವ ಪದಕ್ಕೆ ನುಡಿಗಟ್ಟಾಗಿ ಬಳಕೆ ಮಾಡುವಗ ತುಂಬಾ /ಹೆಚ್ಚು ಹೇಳುವ ಅರ್ಥ ಇದ್ದರೂ ಕಮ್ಮಿ ಹೇಳುವ ಸರ್ತ ಅರ್ಥಲ್ಲಿಯೂ ಬಳಕೆ ಆವುತ್ತು ಕೆಲವು ಸರ್ತಿ. “ಅವು ಬರಿ ಅಲ್ಪಂಗ ಅವರ ವ್ಯವಹಾರ ಆಗ ” ಹೇಳುವ ಮಾತು ನಮ್ಮ ಭಾಷೆಲಿ ಬಳಕೆಲಿ ಇದ್ದು.ಇಲ್ಲಿ ಆ ಅಲ್ಪಂಗ ಹೇಳ್ರೆ ಅವು ರಜ್ಜ ಬುದ್ಧಿ ಇಲ್ಲದ್ದೋರು,ನೀತಿ ನಿಯತ್ತು ಇಲ್ಲದ್ದೋರು, ಸಣ್ಣ ಮನಸ್ಸಿನೋರು ಹೇಳುವ ಅರ್ಥ ಇದ್ದು.
ಕೋಳ್ಯೂರು ಸೀಮೆಲಿ ” ಅಲ್ಪ ”ಪದಕ್ಕೆ ಹೀಂಗೆ ಇಪ್ಪ ಅರ್ಥ ಪ್ರಚಲಿತ ಇದ್ದು .ಹವ್ಯಕಲ್ಲಿ ಎಲ್ಲ ಕಡೆಲಿಯೂ ಇಕ್ಕು ಅಲ್ಲದ ?ತಿಳುಸಿ.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 11 ಒಪ್ಪಂಗೊ

 1. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಅಲ್ಪ ಹೇಳಿದರೆ ಜಾಸ್ತಿ ಹೇಳಿಯೇ ಎಂಗಳಲ್ಲೂ ಉಪಯೋಗ ಇದ್ದು. ಲಂಚಕ್ಕೆ ಮಾಮೂಲು ಹೇಳಿ ಹೆಸರಿದ್ದು ;ಸುಮಾರು ಹೇಳುವ ಶಬ್ದಕ್ಕೆ ಅಂದಾಜು ಬದಲು ಬಹಳ ಹೇಳಿಯೇ ಅರ್ಥ ನಮ್ಮ ಭಾಷೆಲಿ.
  ಹೀಂಗೆ ಅಲ್ಪ ಇದ್ದು ಉದಾಹರಣೆ!
  ಒಂದು ಶಬ್ದದ ಅರ್ಥ ಪಲ್ಲಟ ಅಪ್ಪದು ಭಾಷೆಯ ಒಂದು ಸೊಗಸು.ಇಂಗ್ಲಿಶಿಲೂ ಬೇಕಾಷ್ಟು ಇದ್ದು ಹೀಂಗೆ .ಸುಂಕ ಕೊಡುದು ಪದ್ಧತಿ ‘=ಕಸ್ಟಂ ‘ ಆದ್ದರಿಂದ ಸುಂಕ ಇಲಾಖೆಗೆ ಕಸ್ಟಮ್ಸ ಹೇಳಿಯೇ ಹೆಸರು ಬಂತು!

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚೂರಿಬೈಲು ದೀಪಕ್ಕಬಂಡಾಡಿ ಅಜ್ಜಿದೀಪಿಕಾರಾಜಣ್ಣಶಾ...ರೀಅನು ಉಡುಪುಮೂಲೆಗಣೇಶ ಮಾವ°ಪೆಂಗಣ್ಣ°ಕಳಾಯಿ ಗೀತತ್ತೆಸಂಪಾದಕ°ವಾಣಿ ಚಿಕ್ಕಮ್ಮಹಳೆಮನೆ ಅಣ್ಣಗೋಪಾಲಣ್ಣಶ್ರೀಅಕ್ಕ°ಶಾಂತತ್ತೆದೊಡ್ಡಭಾವಸುಭಗವಿನಯ ಶಂಕರ, ಚೆಕ್ಕೆಮನೆಅಜ್ಜಕಾನ ಭಾವಬೊಳುಂಬು ಮಾವ°ಮಂಗ್ಳೂರ ಮಾಣಿvreddhiವಿಜಯತ್ತೆಚುಬ್ಬಣ್ಣದೊಡ್ಮನೆ ಭಾವಕಾವಿನಮೂಲೆ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ