ಗಿಳಿಬಾಗಿಲಿಂದ-ಕಡುದ ಕೈಗೆ ಉಪ್ಪು ಹಾಕದ್ದೋವು

October 23, 2013 ರ 6:00 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

“ಕಡುದ ಕೈಗೆ ಉಪ್ಪು ಹಾಕದ್ದೋವು”ಹೇಳುವ ಮಾತಿನ ಆನು ಇತ್ತೀಚೆಗಂಗೆ ಒಂದಿನ ಬಸ್ಸಿಲಿ ಹೊವುತ್ತಾ ಇಪ್ಪಗ ಕೇಳಿದೆ .ಬಸ್ಸಿಲಿ ಫೋನಿಲಿ ನಮ್ಮೋರು ಆರೋ ಮಾತಾಡುತ್ತಾ ಆರ ಬಗ್ಗೋ “ಅವು ಭಯಂಕರ ಕುರೆಗ ,ಕಡುದ ಕೈಗೆ ಉಪ್ಪು ಹಾಕದ್ದೋವು ಅವು “ಹೇಳಿ ಹೇಳುವಗ ಕೇಳಿಸಿಗೊಂಡೆ.ಅಂಬಗ ಎಂಗಳ ಮನೆಲಿಯೂ ಆರ ಬಗ್ಗೆಯೋ ಈ ಮಾತು ಬಳಕೆ ಆದ್ದು ನೆನಪಾತು ಎನಗೆ.ಆನು ಎಂಗಳ ಮನೆಲಿ ಬಳಕೆ ಆದ ಮಾತು ತಪ್ಪಾಗಿ ಬಳಕೆ ಆದ್ದು ಆದಿಕ್ಕು ಹೇಳಿ ಭಾವಿಸಿತ್ತಿದ್ದೆ.ಕಡುದ ಕೈಗೆ ಉಪ್ಪು ಹಾಕುವೋವು ಹೇಳುದು ಹಾಕದ್ದೋವು ಹೇಳಿ ಆದ್ದಾದಿಕ್ಕು ಹೇಳಿ ಭಾವಿಸಿತ್ತಿದೆ .ಆದರೆ ಬಸ್ಸಿಲಿ ಇದ್ದ ನಮ್ಮೋರುದೆ ಕಡುದ ಕೈಗೆ ಉಪ್ಪು ಹಾಕದ್ದೋವು ಹೇಳಿಯೇ ಹೇಳಿದ್ದು ಕೇಳಿ ಅಪ್ಪಗ “ಅದು ಸರಿ ಆದ ಪ್ರಯೋಗ ಆದಿಕ್ಕು ಅಂಬಗ” ಹೇಳಿ ಅನ್ಸಿತ್ತು ಎನಗೆ.

“ಕಡುದ ಕೈಗೆ ಉಪ್ಪು ಹಾಕದ್ದೋವು” ಹೇಳುದು ತಿರಸ್ಕಾರವ ಹೆರ ಹಾಕುವ ಮಾತು .ಮನುಷ್ಯರು ಎಲ್ಲೊರು ಒಂದೇ ರೀತಿಯ ಗುಣ ಸ್ವಭಾವದೋರು ಆಗಿ ಇರ್ತವಿಲ್ಲೆ .ಕೆಲವು ಜನಂಗ ಕೋಪಿಷ್ಟಂಗ ,ಕೆಲವು ಜನಂಗ ಸಮಾಧಾನಿಗ ,ಕೆಲವು ಜನಂಗ ಧಾರಾಳಿಗ ,ಕೆಲವು ಜನಂಗ ಕುರೆಗ ,ಪಿಟ್ಟಾಸಿಗ ಇರ್ತವು .ಎಂಗಳ ಕೋಳ್ಯೂರು ಕಡೆ ಆರಿ೦ಗೊಬ್ಬಂಗೂ ಏನೊಂದೂ ಕೊಡದ್ದ ಜಿಪುಣ೦ಗಳ ಕುರೆಗ ,ಪಿಟ್ಟಾಸಿಗ ಹೇಳಿ ಹೇಳ್ತವು .ಕುರೆ ಬುದ್ಧಿಯ ಅತಿರೇಕವ ಹೇಳುವ ಮಾತು “ಕಡುದ ಕೈಗೆ ಉಪ್ಪು ಹಾಕದ್ದೋವು ಅವು” ಹೇಳುದು.ಆದರೆ ಈ ಮಾತಿನ ಒಳಾರ್ಥ ಎಂತ ಹೇಳಿ ಎನಗೆ ಗೊಂತಾಯಿದಿಲ್ಲೆ .ಹಾಂಗೆ ಅಮ್ಮಂಗೆ ಫೋನ್ ಮಾಡಿ ಕೇಳಿದೆ.ಕಡುದ ಕೈಗೆ ಉಪ್ಪು ಎಂತಕೆ ಹಾಕುದು ?ಇದಕ್ಕೂ ಕುರೆಗೂ ಎಂತ ಸಂಬಂಧ ಹೇಳಿ.

ಎನ್ನ ಅಮ್ಮನ್ಗೂ ಇದರ ಅರ್ಥ ಗೊಂತಿತ್ತಿಲ್ಲೆಡ .ಸುಮಾರು ೪೦ ವರ್ಷ ಮೊದಲು ಅಮ್ಮ ಮದುವೆ ಆಗಿ ಬಂದ ಹೊಸತರಲ್ಲಿ ಅಜ್ಜಿ ಆರ ಬಗ್ಗೋ ಮಾತಾಡುವಗ ಈ ಮಾತಿನ ಹೇಳಿದವಡ ,ಅಂಬಗ ಅಮ್ಮ ಅಜ್ಜಿ ಹತ್ತರೆ “ಹಾಂಗೆ ಹೇಳ್ರೆ ಎಂತದು” ಹೇಳಿ ಕೇಳಿತ್ತಿದ ಅಡ.ಅಂಬಗ ಅಜ್ಜಿ ಅಮ್ಮಂಗೆ ಹೇಳಿದ್ದರ ಅಮ್ಮ ಎನಗೆ ಹೇಳಿದ , ಅದರ ಆನಿಲ್ಲಿ ಈಗ ಹೇಳುತ್ತೆ .ಆರತ್ತರಾದರು ನಮಗೆ ಕೋಪ, ದ್ವೇಷ ಇದ್ದರೆ ಅವು ಹಾಳಾಯಕ್ಕು ಹೇಳಿ ಏನಾರೂ ಮಾಡುವಗ “ಏನಾರು ರಜ್ಜ ನಷ್ಟ” ಆದರೆ ಅದರ ಬಗ್ಗೆ ಚಿಂತೆ ಮಾಡ್ತವಿಲ್ಲೆ ಆರುದೆ.”ನವಗೆ ನಷ್ಟ ಆದರೂ ಸಮ ಆವ ಹಾಳಾಯಕ್ಕು ಹೇಳಿ” ಭಾವಿಸಿ ಹೊಣೆತ್ತವು ಎಲ್ಲೋರು.ಆದರೆ ಜಾತಿಕುರೆಗ (ಅತಿ ಜಿಪುಣರು)ಮಾತ್ರ ಯಾವ ಕಾರಣಕ್ಕೂ ನಷ್ಟ ಮಾಡಿಗೊಳ್ಳುತ್ತವಿಲ್ಲೆ .ಅವರ ಪರಮ ಶತ್ರುವಿನ ಕೈಯ ಆರೋ ಕಡುದ್ದವು.ಕಡುದ ಕೈಗೆ ಉಪ್ಪು ಹಾಕುಲಾಗ ,ಉಪ್ಪು ಹಾಕಿರೆ ನೆತ್ತರು ಕಟ್ಟುತ್ತಿಲ್ಲೆ ,ಅಲ್ಲದ್ದೆ ಭಯಂಕರ ಉರಿತ್ತು ಕೂಡಾ .ಆದರೆ ಪರಮ ಶತ್ರುವಿನ ಕೈಯ ಆರಾದರೂ ಕಡುದರೆ ಅವರ ಮೇಲೆ ದ್ವೇಷ ಇಪ್ಪೋರು ಆ ಕೈಗೆ ಉಪ್ಪು ಹಾಕಿ ಅವಕ್ಕೆ ಉರಿ ಅಪ್ಪ ಹಾಂಗೆ ,ನೆತ್ತರು ಕಟ್ದದ್ದ ಹಾಂಗೆ ಮಾಡಿ ಅವರ ಹಗೆಯ ತೀರಿಸಿಗೊಂಗು! .ಆದರೆ ಜಾತಿ ಕುರೆಗ ಅದನ್ನೂ ಮಾಡವು .ಹಿಂದಣ ಕಾಲಲ್ಲಿ ಉಪ್ಪು ಧರ್ಮಕ್ಕೆ ಸಿಕ್ಕಿಗೊಂಡು ಇದ್ದ ಸಾಮಾನು .ಆದರೆ ಅದರ ಕೂಡ ಹಗೆಗಳ ಕಡುದ ಕೈಗೆ ಹಾಕಿ  ಹಗೆ ತೀರಿಸಿ ಕೊಳ್ಳದ್ದಷ್ಟು ಕುರೆಗ;ಅವು ಹಗೆ ಸಾಧನೆ ಮಾಡುದಕ್ಕಾಗಿ ಕೂಡಾ ಧರ್ಮಕ್ಕೆ ಸಿಕ್ಕುವ ವಸ್ತು ಆಗಿಪ್ಪ ಉಪ್ಪ್ಪಿನ ಇಡುಕ್ಕವು, ಅಷ್ಟೂ ಕುರೆಗ ಹೇಳ್ರೆ ಜಿಪುಣತನದ ಪರಮಾವಧಿ ಇಪ್ಪೋರ ಬಗ್ಗೆ,ಅತಿ ಕುರೆಗಳ ಸ್ವಭಾವದ ಬಗ್ಗೆ ಈ ಆಡು ಮಾತು ತಿಳುಸುತ್ತು.

ಇಂತ ತುಂಬಾ ವಿಶಿಷ್ಟ ಆಡು ಮಾತುಗ ಗಾದೆಗ ನಮ್ಮ ಭಾಷೆಲಿ ಇದ್ದು ,ಇದರ ಒಟ್ಟು ಮಾಡಿ ಮಾಡಿ ಒಂದು ಕಡೆ ಬರದು ಮಡುಗಿದರೆ ಒಳ್ಳೆದು ಅಲ್ಲದ ?ನಿಂಗೆಲ್ಲ ಎಂತ ಹೇಳ್ತಿ ?
ನಿಂಗಳ ಅಭಿಪ್ರಾಯವ ತಿಳುಸಿ .

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಕೆ. ವೆಂಕಟರಮಣ ಭಟ್ಟ

  “ಎಂಜಲು ಕೈಲಿ ಕಾಗೆ ಓಡುಸ” , “ಹೊಲಸಿಲ್ಲಿ ಪೈಸೆ ಹಾಕಿರೆ ನಾಲಗೆಲಿ ಹೆರ್ಕುಗು” ಹೀಗೂ ಕೆಲವು ಗಾದೆಗೊ ಗಿಪುಣಂಗಳ ಬಗ್ಗೆ ಇದ್ದು.

  [Reply]

  VA:F [1.9.22_1171]
  Rating: +3 (from 3 votes)
 2. ಕೊಳಚ್ಚಿಪ್ಪು ಬಾವ
  ಕೊಳಚಿಪ್ಪು ಭಾವ

  ಲಕ್ಷ್ಮಿಅಕ್ಕ,

  ನಮ್ಮ ಭಾಷೆಯ ಸುಮಾರು ಆಡು ಮಾತುಗೋ,ಶಬ್ಡಂಗೊ ಎಲ್ಲಾ ಬಳಕೆ ಮಾಡದ್ದೇ ನವಗೆ ಮರತ್ತಾ ಇದ್ದು.
  ಅದರ ಜಾಗಕ್ಕೆ ಇಂಗ್ಲೀಷ್ ಶಬ್ದಂಗೊ ಬಳಕೆ ಆಗಿಯೊಂಡು ಇದ್ದು.
  ಬೇಕಾರೆ ,ನೋಡಿ ನಮ್ಮ ಅಪ್ಪ-ಅಮ್ಮ ಮಾತಾಡುವ ಭಾಷೆಗು, ನಾವು ಮಾತಾಡುವ ಶಬ್ದ/ನುಡಿಗಟ್ಟುಗೊಕ್ಕೊ ಎಷ್ಟು ವ್ಯತ್ಯಾಸ ಇದ್ದು.
  ಹವ್ಯಕ ಮಾಂತ್ರ ಅಲ್ಲ, ಎಲ್ಲಾ ಭಾರತೀಯ ಭಾಷೆಗಳ ಪರಿಸ್ಥಿತಿ ಇದುವೆ.

  [Reply]

  VA:F [1.9.22_1171]
  Rating: +2 (from 2 votes)
 3. ಶ್ಯಾಮಣ್ಣ
  ಶ್ಯಾಮಣ್ಣ

  “ಉಗುರು ಕಡುದು ನೀರಿಂಗೆ ಹಾಕವು” ಹೇಳಿರೆ ಎಂತ?

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಕ್ಷರದಣ್ಣಜಯಶ್ರೀ ನೀರಮೂಲೆಕೆದೂರು ಡಾಕ್ಟ್ರುಬಾವ°ನೀರ್ಕಜೆ ಮಹೇಶvreddhiಬಂಡಾಡಿ ಅಜ್ಜಿದೊಡ್ಮನೆ ಭಾವಕಳಾಯಿ ಗೀತತ್ತೆವೇಣಿಯಕ್ಕ°ಶ್ಯಾಮಣ್ಣಪುತ್ತೂರುಬಾವಚುಬ್ಬಣ್ಣಕೊಳಚ್ಚಿಪ್ಪು ಬಾವನೆಗೆಗಾರ°ಪುತ್ತೂರಿನ ಪುಟ್ಟಕ್ಕಅಕ್ಷರ°ವಿನಯ ಶಂಕರ, ಚೆಕ್ಕೆಮನೆಪುಟ್ಟಬಾವ°ಉಡುಪುಮೂಲೆ ಅಪ್ಪಚ್ಚಿಸರ್ಪಮಲೆ ಮಾವ°ಸುಭಗಪೆರ್ಲದಣ್ಣಡಾಗುಟ್ರಕ್ಕ°ದೀಪಿಕಾಚೆನ್ನೈ ಬಾವ°ಮಂಗ್ಳೂರ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ