Oppanna.com

ಗಿಳಿಬಾಗಿಲಿಂದ -ಅವ° ಹುಳಿ ಬಂದು ಮೊಗಚ್ಚಿದ್ದ°

ಬರದೋರು :   ಲಕ್ಷ್ಮಿ ಜಿ.ಪ್ರಸಾದ    on   16/10/2013    6 ಒಪ್ಪಂಗೊ


ಎನ್ನ ಅಮ್ಮ ಎನಗೆ ಅಮ್ಮ ಮಾತ್ರ ಅಲ್ಲ ಒಳ್ಳೆಯಫ್ರೆಂಡ್ ಕೂಡಾ !
ಫ್ರೆಂಡ್ ಗಳ ಹತ್ತರೆ ಗಂಟೆ ಗಟ್ಲೆ ಪಟ್ಟಾಂಗ ಹೊಡವ ಹಾಂಗೆ. ಎಂಗ ಹೇಳಿರೆ ಆನುದೇ ಅಮ್ಮಂದೆ ಪಟ್ಟಾಂಗ ಹೊಡೆತ್ತೆಯ°.ಎಂಗಳ ಮಾತು ಕತೇಲಿ ಆನು ಓದಿದ ಕಥೆ-ಲೇಖನದ ಬಗ್ಗೆ ಚರ್ಚೆ ,ಆನು ಬರದ ಲೇಖನದ ಬಗ್ಗೆ ಆರು ಎಂತ ಹೇಳಿದವು ಹೇಳುವ ವಿಚಾರ, ಹಾಂಗೆಅಮ್ಮಂಗೆ ಊರಿಲಿ ಸಿಕ್ಕ ವಿಚಾರ, ಆರಿಂಗೋ ಮದುವೆ ನಿಘಂಟು ಆದ್ದು ,ಆರೋ ಅಪರೂಪಲ್ಲಿಹೆತ್ತದು -ಹೀಂಗೆ ಸುಮಾರು ವಿಚಾರಂಗ ಇರ್ತು .
ಹೀಂಗೆ ಮೊನ್ನೆ ಒಂದಿನ ಅಮ್ಮ0ದೆ ಆನುದೆಮಾತಾಡ್ತಾ ಇಪ್ಪಗ ಆರೋ ಒಬ್ಬನ ಬಗ್ಗೆ ವಿಚಾರ ಬಂತು.ಆವ° ತುಂಬಾ ಒಳ್ಳೆಯ ಕೆಲಸಲ್ಲಿಇಪ್ಪೋನು .ಉಪಕಾರಿ ,ಸಹೃದಯಿ ಕೂಡಾ .ಆದರೆ ರಜ್ಜ ತೋರ್ಸಿಗೊಂಬ ಸ್ವಭಾವ .ತಾನು ಮಹಾಬ್ಯುಸಿ ,ಬುದ್ದಿವಂತ ಹೇಳುವ ಹಾಂಗೆ ,ಎನಗೆ ಮಾತಾಡಲೇ ಪುರುಸೊತ್ತು ಇಲ್ಲೆ, ಎ೦ಗೊಗೆ ಸಮಯ ಭಾರಿ ಮುಖ್ಯ ಹೇಳಿಗೊಂಡು ಅಮ್ಮನತ್ರೆ ಆವ° ಗಂಟೆ ಗಟ್ಲೆ ಮಾತಾಡಿದ° ಅಡ !!ಈ  ಬಗ್ಗೆ ಅಮ್ಮ ಹೇಳುವಗ “ಅವ° ಹುಳಿ ಬಂದು ಮೊಗಚ್ಚಿದ್ದ ° ಹೇಳಿ ಹೇಳಿದ !
ಎಷ್ಟು ಚೆಂದದ ಭಾಷಾ ಪ್ರಯೋಗ ಅಲ್ಲದ ?
ಉದ್ದಿನ ದೋಸೆಗೆ ಅಕ್ಕಿ ಕಡದು ಮಡುಗಿದ್ದು ಮರದಿನಕ್ಕೆ  ಹುಳಿಬರಕ್ಕು.ಇಲ್ಲದ್ದರೆ ದೋಸೆ ಮೆಸ್ತಂಗೆ ಆವುತ್ತಿಲ್ಲೆ .ಅದು ಗಟ್ಟಿಯಾಗಿ ಬಲ್ಚಟ್ಟಿ ನ ಹಾಂಗೆ ಆವುತ್ತು .ಹಾಂಗಾಗಿ ಲಾಯ್ಕಕ್ಕೆ ಹುಳಿ ಬರಕ್ಕು ಹೇಳಿ ಬೆಚ್ಚಂಗೆ ಒಲೆಕಟ್ಟೆಲಿ ಮಡುಗುದು ಕ್ರಮ . ಕೆಲವು ಸರ್ತಿ ಜಾಸ್ತಿ ಹುಳಿ ಬತ್ತು . ತುಂಬಾ ಜಾಸ್ತಿ ಹುಳಿ ಬಂದರೆ ಹಿಟ್ಟು ಉಬ್ಬಿ ಮೇಲೆ ಬಂದು ಪಾತ್ರಕ್ಕೆ ಮುಚ್ಚಿದ ಮುಚ್ಚೆಲಿನ ನೂಕಿ ಹಿಟ್ಟೆಲ್ಲ ಹೆರಬಂದು ಚೆಲ್ಲುತ್ತು !ಇದಕ್ಕೆ ಹುಳಿ ಬಂದು ಮೊಗಚ್ಚುದು ಹೇಳಿ ಹೇಳುದು ! ಇದರ ಮನುಷ್ಯರ ಸ್ವಭಾವದ ಬಗ್ಗೆ ಹೇಳುವಗ  ನಮ್ಮ ಭಾಷೆಲಿ  ನುಡಿಗಟ್ಟು  ಆಗಿ ಬತ್ತು .ಎಷ್ಟು ಸಹಜವಾದಉಪಮೆ ,ಪ್ರತಿಮೆ ಅಲ್ಲದ ?!
ಇಂತ  ಚೆಂದದ ಪದಂಗ ನಮ್ಮ  ಭಾಷೆಲಿ ತುಂಬಾ  ಇದ್ದು .ನೆನೆಪ್ಪಾದಪ್ಪಗ ,ಪುರುಸೊತ್ತು ಸಿಕ್ಕಿಯಪ್ಪಗ ಬರೆತ್ತೆ ,ಓದಿ ನಿಂಗ ಅಭಿಪ್ರಾಯ ತಿಳಿಸಿ.
 

6 thoughts on “ಗಿಳಿಬಾಗಿಲಿಂದ -ಅವ° ಹುಳಿ ಬಂದು ಮೊಗಚ್ಚಿದ್ದ°

    1. ಮನುಷ್ಯ ಆದ ಮತ್ತೆ ರಜ್ಜ ರೈಸುವ ಆಸೆ ಇರೆಕ್ಕಪ್ಪ. ಅದು ಅತೀ ಅಪ್ಪಲಾಗ ಅಷ್ತೆ. ದೋಸೆ ಹಿಟ್ಟು ಹದಾಕೆ ಹುಳಿ ಬಂದರೇ ದೋಸೆ ಲಾಯ್ಕ್ ಅಪ್ಪದಲ್ಲದೊ. ‘ ಆರು ಗುರುತಿಸಿ ಎಂತಾಯೆಕಾದ್ದು ?’ ಹೇಳೊವನ್ನು ಕಂಡಪ್ಪಗ ‘ಎಂತ ಸಪ್ಪ ಮನುಷ್ಯರಪ್ಪ ಇವು’ ಹೇಳಿ ಅನುಸುತ್ತು. ಅತೀ ಆದರೆ ಅಮೃತವೂ ವಿಷ. ಅಲ್ಲದೊ ?

  1. ಎಂಗಳ ಊರಿಲ್ಲಿ ಇದಕ್ಕೆ “ರೈಸುವದು” ಹೇಳ್ತವು. ಬೆಂಗಳೂರಿಲ್ಲಿ ಇದಕ್ಕೆ “ಹೆಡ್ ವೈಟ್” ಹೇಳ್ತವು. ಹರೇ ರಾಮ.

  2. ಹವ್ಯಕ ಭಾಷೆಲಿಪ್ಪ ಸುಮಾರು ನುಡಿಗಟ್ಟು ಪದಂಗೋ
    ಹೇಳೆಕಾದ ಎಷ್ಟೋ ವಿಷಯಂಗಳ ಒಂದೆರಡು ಪದಂಗಳಲ್ಲಿ ಹೇಳ್ತು ..
    ಭಾಷೆಯ ಸೌಂದರ್ಯ ಆಸ್ವಾದನೆ ನಿಂಗಳ ‘ಹವ್ಯಕ ಪದ ಬುಟ್ಟಿ’ಯ
    ಮೂಲಕ ಆಗಲಿ ಹೇಳಿ ಹಾರೈಸುತ್ತೆ ,, ಲಕ್ಷ್ಮಿಅಕ್ಕ ….

  3. ಹುಳಿ ಹೇಳಿರೆ ಅಹಂಕಾರದ ಸಂಕೇತ ಆಗಿ ಹೇಳ್ತವು-ಲಾಯ್ಕ ಬರಹ.

  4. ಅವಂಗೆ ಹಾಂಕಾರಂದ ಕಣ್ಣೇ ಕಾಣ್ತಿಲ್ಲೆ ಹೇಳುವ ಪ್ರಯೋಗವೂ ಇದ್ದಲ್ಲದೋ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×