ಗಿಳಿಬಾಗಿಲಿಂದ -ಎ೦ಗಳ ಭಾಷೆ ರಜ್ಜ ಬೇರೆ

September 25, 2013 ರ 6:00 amಗೆ ನಮ್ಮ ಬರದ್ದು, ಇದುವರೆಗೆ 18 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮ ಬೈಲಿನ ಶುದ್ದಿಗಳ ಓದಿ ಪ್ರೋತ್ಸಾಹ ಕೊಟ್ತುಗೊ೦ಡು ಇತ್ತಿದ್ದ ಲಕ್ಷ್ಮಿ ಅಕ್ಕ ಬೈಲಿನ ನೆ೦ಟ್ರಿ೦ಗೆ ಶುದ್ದಿಗಳ ಹ೦ಚುಲೆ ಬಯಿ೦ದವು.
ಭಾಷೆ, ಸ೦ಸ್ಕೃತಿ, ಜಾನಪದ ಇತ್ಯಾದಿ ವಿಷಯ೦ಗಳಲ್ಲಿ ವಿಶೇಷ ಆಸಕ್ತಿ ಇಪ್ಪ ಲಕ್ಷ್ಮಿ ಅಕ್ಕ°, ಸ೦ಸ್ಕೃತ, ಕನ್ನಡ, ಹಿ೦ದಿ ಭಾಷೆಗಳಲ್ಲಿ ಎ೦.ಎ. ಪದವೀಧರೆ. ಈಗ ಕನ್ನಡ ಭಾಷೆಯ ಉಪಾನ್ಯಾಸಕಿ ಆಗಿ ವೃತ್ತಿನಿರತರಾಗಿದ್ದವು.

ನಮ್ಮ ಭಾಷೆಲಿ ನಾಟಕವನ್ನೂ ಬರದ್ದವು.
ಇವರ ಹಲವಾರು ಕೃತಿಗೊ ಪುಸ್ತಕರೂಪಲ್ಲಿ ಪ್ರಕಟ ಆಯಿದು.
ಬನ್ನಿ, ಅಕ್ಕನ ಶುದ್ದಿಗಳ ಓದುವ°, ಪ್ರೋತ್ಸಾಹಿಸುವ°..
~
ಗುರಿಕ್ಕಾರ
°.

ಒಂದೆರಡು ತಿಂಗಳು ಹಿಂದೆ  ಮೋರೆಪುಟಲ್ಲಿ ಎನ್ನ ಸಣ್ಣಾದಿಪ್ಪಗಣ ಗೆಳೆಯ(ನೆಂಟ್ರು ) ಸೂರ್ಯನಾರಾಯಣ ತೆಂಕ ಬೈಲು (ಈಗ ಅವ° ದೇಲಂತ ಬೆಟ್ಟಿನ ದೊಡ್ಡ ಶಾಲೆ ಮಾಷ್ಟ್ರ°) ಹವ್ಯಕ ಭಾಷೆಲಿ ಬರೆ, ಓದುಲೆ ಕೊಶಿ ಆವುತ್ತು ಹೇಳಿ ಸಲಹೆ ಕೊಟ್ಟ°. ಸುಮಾರು ಸಮಯಂದ ಆನು ಹವ್ಯಕ ಭಾಷೆಲಿ ರಜ್ಜ ಏನಾರು ಎಂತಾದರು ಬರೆಯಕ್ಕು ಹೇಳಿ ಜಾನ್ಸಿಗೊಂಡು ಇತ್ತಿದೆ. ಅದಕ್ಕೆ ಸೂರ್ಯ ನಾರಾಯಣನ ಮಾತು ಬಲ ಕೊಟ್ಟತ್ತು. ಹಾಂಗಾಗಿ ಹವ್ಯಕ ಭಾಷೆಲಿ ಬರವಲೆ ಸುರು ಮಾಡಿದ್ದೆ. ನಾಲ್ಕು ವರ್ಷ ಮೊದಲು ಬೆಳ್ಳಾರೆ ಗವರ್ಮೆಂಟು ಕೋಲೇಜಿಲಿ ಕನ್ನಡ ಲೆಕ್ಚರು ಕೆಲಸಕ್ಕೆ ಸೇರಿದ ಒಂದೆರಡು ದಿನಂಗಳಲ್ಲಿಯೇ ಅಲ್ಯನೋ(ಣ) ರ ಹವ್ಯಕ ಭಾಷೆಗೂ ಎಂಗಳ ಹವ್ಯಕ ಭಾಷೆಗೂ ತುಂಬಾ ವ್ಯತ್ಯಾಸ ಇದ್ದು ಹೇಳಿ ಎನಗೆ ಗೊಂತಾತು. ಅಲ್ಯನೋರ ಹವ್ಯಕ ಭಾಷೇಲಿ ಕನ್ನಡದ ಪದಂಗ ಜಾಸ್ತಿ ಇದ್ದು. ಅದರ ಮೂಡ್ಲಾಗಿ (ಹವ್ಯಕ) ಭಾಷೆ ಹೇಳಿಹೇಳ್ತವು. ಅವು ಎನಗೆ ಹೇಳುದರ ಎನಿಗೆ ಹೇಳಿ ಹೇಳ್ತವು. ನಮ್ಮ ಉಂಡೆಯ ಅವು ಕಡುಬು ಹೇಳಿ ಹೇಳ್ತವು. ಹೀಂಗೆ ತುಂಬಾ ಕಡೆ ಅವರ ಭಾಷೆ ನಮ್ಮ ಭಾಷೆಂದ ಬೇರೆ ತರ ಇದ್ದು. ಪಡ್ಲಾಗಿ ಭಾಷೆಲಿದೆ ರಜ್ಜ ಬೇರೆ ತರ ಇಪ್ಪ ಹವ್ಯಕ ಭಾಷೆಯ ಒಂದು ವಿಧ ಅಲ್ಲಿನ ಕೆಲವು ಕುಟುಂಬಗಳಲ್ಲಿ ಅಲ್ಲಿ ಇದ್ದು. ಹೋವುಕೆ ಬರುಕೆ ಇತ್ಯಾದಿ ಪದಂಗ ಅದರಲ್ಲಿ ಇದ್ದು. ಅದು ರಜ್ಜ ಭೈರಂಗಳ ಕನ್ನಡ ಭಾಷೆಯ ಹಾಂಗೆ ಇದ್ದು. ಉತ್ತರ ಕನ್ನಡದೋರ ಹವ್ಯಕ ಭಾಷೆಗೂ ಎಂಗಳ ಭಾಷೆಗೂ ತುಂಬಾ ವ್ಯತ್ಯಾಸ ಇಪ್ಪದು ಎನಗೆ ಗೊಂತಿತ್ತು. ಬೆಳ್ಳಾರೆಗೆ ಹೋದ ಮೇಲೆ ಅಲ್ಯಣ ಮೂಡ್ಲಾಗಿ ಭಾಷೆ ಮತ್ತೆ ಅದರ ಇನ್ನೊಂದು ವಿಧ ಇಪ್ಪದು ಗೊಂತಾತು.

ಮತ್ತೆ ಕೊಡೆಯಾಲ ಕಾಸರಗೋಡು ವಿಟ್ಲ ಪುತ್ತೂರು ಮೊದಲಾದ ಜಾಗೆಗಳ ಹವ್ಯಕ ಭಾಷೆದೆ ಎಂಗಳ ಹವ್ಯಕ ಭಾಷೆ(ಕೋಳ್ಯೂರು ಸೀಮೆದು )ದೆ ಒಂದೇ ರೀತಿ ಇಕ್ಕು ಹೇಳಿ ಆನು ಗ್ರೇಶಿತ್ತಿದೆ. ಆದರೆ ಒಪ್ಪಣ್ಣನ ಒಪ್ಪಂಗೊ ಓದುತ್ತಾ ಇದ್ದಾಂಗೆ ಎಂಗಳ ಭಾಷೆಗೂ ಅಲ್ಲಿ ಇಪ್ಪ ಭಾಷೆಗೂ ತುಂಬ ವ್ಯತ್ಯಾಸ ಇಪ್ಪದರ ನೋಡಿ ಎಂಗಳ ಭಾಷೆ ರಜ್ಜ ಬೇರೆ ಹೇಳಿ ಗೊಂತಾತು ಎನಗೆ. ಅದರಲ್ಲಿ ಒ ಕಾರದ ಬಳಕೆ ಹೆಚ್ಚು ಇದ್ದು. ಅಭಿನಂದನೆಗೊ, ಒಪ್ಪಂಗೊ ಮಂತ್ರಂಗೊ, ಗಾದೆಗೊ ಇತ್ಯಾದಿ. ಎಂಗಳ ಭಾಷೆಲಿ ಇಂತ ಕಡೆ “ಒ” ಕಾರ ಇಲ್ಲೆ. ಅಭಿನಂದನೆಗ, ಗಾದೆಗ, ಮಂತ್ರಗ ಹೇಳಿ ಇರ್ತು. ಮತ್ತೆ ಎಂಗಳ ಭಾಷೆಲಿ ಹೇತು, ಹೇದು ಹೇದರೆ ಕೇಟವು ಇಂತ ಪದಂಗ ಇಲ್ಲೆ ಇದರ ಬದಲು.ಹೇಳಿತ್ತು, ಹೇಳಿ, ಹೇಳಿದರೆ ಕೇಳಿದವು ಹೇಳಿ ಇದ್ದು .

ಆನು ಭಾಷಾ ತಜ್ಞೆ ಅಲ್ಲ. ಎನ್ನ ತಲೆಗೆ ಬಂದ ಕೆಲವು ನುಡಿಗಟ್ಟುಗಳ ಬಗ್ಗೆ ಭಾಷೆಯ ಬಳಕೆಯ ವೈಶಿಷ್ಟ್ಯಂಗಳ ಬಗ್ಗೆ ಬರವ ಪ್ರಯತ್ನ ಮಾಡ್ತಾ ಇದ್ದೆ. ರಾಮಚಂದ್ರಣ್ಣ ಪದ್ಯಾಣರ ಪ್ರೋತ್ಸಾಹಂದಾಗಿ ಎನಗೆ  ಈ ಬಗ್ಗೆ ಬರವಲೆ ಹುರುಪು  ಹುಟ್ಟಿದ್ದು. ಎನ್ನ ತಲೆಗೆ ಬಂದದರ ಇಲ್ಲಿ ಬರದ್ದೆ. ಇದು ಗಿಳಿ ಬಾಗಿಲಿಂದ ನಿಲ್ಕಿ ನೋಡಿಯಪ್ಪಗ ಒಳಾಣದ್ದು ರಜ್ಜ ರಜ್ಜ ಕಾನ್ತಿಲ್ಲೆಯ? ಹಾಂಗೆ ಆನು ಗಮನಿಸಿದ ವಿಚಾರಂಗ ಅಷ್ಟೇ.

ಇನ್ನು ಮುಂದಣ ದಿನಂಗಳಲ್ಲಿದೆ ಎನಗೆ ಬರೆಯಕ್ಕು ಹೇಳಿ ಎನ್ಸಿದ್ದರ ಎಂಗಳ ಹವ್ಯಕ ಭಾಷೆಲಿ ಒಪ್ಪಣ್ಣನ ಬೈಲಿಲಿ ಬರೆತ್ತೆ. ನಿಂಗ ಎಲ್ಲ ತಿಳುದೋರು ಹಂಸ ಕ್ಷೀರ ನ್ಯಾಯದ ಹಾಂಗೆ (ನೀರು ಸೇರ್ಸಿದ ಹಾಲಿನ ಹಂಸದ ಎದುರು ಮಡುಗಿದರೆ ಅದು ಹಾಲಿನ ಮಾತ್ರ ಕುಡುದು ನೀರಿನ ಹಾಂಗೆ ಬಿಡ್ತಡ! ಇದೊಂದು ಕವಿ ಸಮಯ ) ಒಳ್ಳೆದರ ಮಾತ್ರ ತೆಕ್ಕೊಂಡು ಬೆನ್ನು ತಟ್ಟಕ್ಕು ಹೇಳಿ ಕೇಳಿಗೊಂಡಿದೆ.

ಇನ್ನೊಂದರಿ ಕಾಂಬ° ನಮಸ್ಕಾರ .

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 18 ಒಪ್ಪಂಗೊ

 1. ಅನುಪಮಾ ಪ್ರಸಾದ್

  ನಮಸ್ತೆ ವೆಂಕಟ್ರಮಣಣ್ಣಯ್ಯ.
  ಆರಾಮ್ ಇದ್ಯನ? ಹಿಂಗೊದು ಗುರ್ತ ಆಗಿದ್ದು ಚೊಲೊ ಆತು ನೋಡು. ಬೆಂಗ್ಳೂರಲ್ಲಿ ಎನ್ ತಮ್ಮ ಇದ್ದ. ಯಾವಾಗಾರು ಒಂದೊಂದ್ಸರ್ತಿ ಬತ್ತಾ ಇರ್ತಿ.
  ಆನು ಒಂದೊಂದರಿ ಒಪ್ಪಣ್ಣನ ಬಯಿಲಿಲ್ಲಿ ತಿರಿಗಿಯೊಂಡಿತ್ತಿದ್ದೆ. ಭಾಷೆ ಬಗ್ಗೆ ನಿಂಗಳ ಆಸಕ್ತಿ ನೋಡಿಯಪ್ಪಗ ಜಾಲಿಂಗೆ ಬಂದು ರಜ ಪಟ್ಟಂಗ ಹಾಕುವಾ ಹೇಳಿ ಕಂಡತ್ತು. ಮನೆಗೆ ನೆಂಟ್ರು ಬಂದಪ್ಪಗ ಅವಿಭಜಿತ ದಕ್ಷಿಣ ಕನ್ನಡದ ಹವ್ಯಕರ ಮನೆಗಳಲ್ಲಿ ಎಂತ ಹೇಳಿ ಮಾತಾಡ್ಸಿರೆ ಉ.ಕ.ಭಾಗಲ್ಲಿ ಮಾತಾಡ್ಸಿದಿ/ಆರಾಮ? ಹೇಳಿ ಮಾತಾಡ್ಸುತ್ತವು.
  ಯಂಗೊ ಉಜಿರೆಗೆ ಬಂದ ಸುರುವಾಣ ದಿನಂಗಳಲ್ಲಿ ಆರದ್ದಾರು ಮನೆಗೆ ಹೋಗಿಯಪ್ಪಗ ಅವು ಎಂತ? ಹೇಳಿ ಮಾತಾಡ್ಸಿರೆ ಎಂತ ಇಲ್ಲೆ ಹೇಳಿಯೊಂಡಿತ್ತಿದ್ದೆಯೊಂ. ಅಮ್ಮ ಅದು ಹಾಂಗಲ್ಲ ಹೀಂಗೆ ಹೇಳಿ ಹೇಳಿಯೊಂಡಿತ್ತಿದ್ದವು. ಅಂದ್ಹಾಂಗೆ ಎನ್ನ ಆಯಿಗೆ ಕುಂಬ್ಳೆ ಸೀಮೆ ಆತು. ಈಗ ಆನೂ ಕುಂಬ್ಳೆ ಸೀಮೆಲ್ಲೆ ಇದ್ನೊ ಅಣ್ಣಯ್ಯ.
  ಇನ್ನೊಂದಿನ ಸಿಗನ (ಇನ್ನೊಂದರಿ ಕಾಂಬ)
  ಎಲ್ಲರಿಗೂ ನಮಸ್ತೆ.
  ಅನುಪಮಾ

  [Reply]

  VA:F [1.9.22_1171]
  Rating: +2 (from 2 votes)
 2. ಶೈಲಜಾ ಕೇಕಣಾಜೆ

  ನಿಂಗಳ ಗಿಳಿಬ್ಲಾಗಿನ ಆನೂ ನೋಡಿದ್ದೆ…. ಲಾಯ್ಕ ಇದ್ದು…
  ಹೀಂಗೇ ಬರಕ್ಕೊಂಡಿರಿ….

  [Reply]

  VA:F [1.9.22_1171]
  Rating: 0 (from 0 votes)
 3. ಅಡ್ಕತ್ತಿಮಾರುಮಾವ°

  ಲಕ್ಶ್ಮಿಅಕ್ಕಂಗೆ ಸ್ವಾಗತ..ನಾವು ಮೊದಲೇ ದೂರದ ನೆಂಟ್ರು ಈಗ ಮತ್ತೂ ಹತ್ತರಾಣ ಸಂಬಂದಿಕರಾತಿದ…ಬೈಲಿಂಗೆ ಬತ್ತಾ ಇರೆಕ್ಕು ಆತಾ…

  [Reply]

  VN:F [1.9.22_1171]
  Rating: +1 (from 1 vote)
 4. ಪಾರ್ವತಿ ಮರಕಿಣಿ

  ನಿಂಗಳ ಬರಹ … ಅದರ ಮೇಲೆ ಬೈಲ ನೆಂಟ್ರ ಒಪ್ಪಂಗೊ ಭಾರೀ ಆಸಕ್ತಿಕರವಾಗಿದ್ದು. ..ಹೀಂಗೇ ಬರೆತ್ತಾ ಇರಿ..

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮಾಲಕ್ಕ°ವಸಂತರಾಜ್ ಹಳೆಮನೆಅಡ್ಕತ್ತಿಮಾರುಮಾವ°ಕಾವಿನಮೂಲೆ ಮಾಣಿದೀಪಿಕಾಕೆದೂರು ಡಾಕ್ಟ್ರುಬಾವ°ವೆಂಕಟ್ ಕೋಟೂರುಅನು ಉಡುಪುಮೂಲೆಬಂಡಾಡಿ ಅಜ್ಜಿಶ್ಯಾಮಣ್ಣಎರುಂಬು ಅಪ್ಪಚ್ಚಿಪೆಂಗಣ್ಣ°ಪುತ್ತೂರಿನ ಪುಟ್ಟಕ್ಕಸುಭಗಜಯಗೌರಿ ಅಕ್ಕ°ದೊಡ್ಮನೆ ಭಾವಶುದ್ದಿಕ್ಕಾರ°ವಿನಯ ಶಂಕರ, ಚೆಕ್ಕೆಮನೆಶ್ರೀಅಕ್ಕ°ನೆಗೆಗಾರ°ಪವನಜಮಾವವಿದ್ವಾನಣ್ಣದೊಡ್ಡಭಾವಬೋಸ ಬಾವಗೋಪಾಲಣ್ಣದೇವಸ್ಯ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ