Oppanna.com

ಪಂಜಸೀಮೆ ಹವಿಗನ್ನಡಲ್ಲಿ ಬಳಕೆಲಿ ಇಪ್ಪ ಪದಗಳ ಸಂಗ್ರಹ -2

ಬರದೋರು :   ಜಯಗೌರಿ ಅಕ್ಕ°    on   26/03/2013    6 ಒಪ್ಪಂಗೊ

ಜಯಗೌರಿ ಅಕ್ಕ°

ಕಳುದ ವಾರ ‘ಅ’ ಅಕ್ಷರಂದ ಸುರು ಅಪ್ಪ ಪದಗಳ ಪರಿಚಯ ಮಾಡಿಕೊಂಡಿದು. ಈ ವಾರ ‘ಉ’, ‘ಎ’ ಮತ್ತು ‘ಒ’ ಕಾರಂದ ಸುರು ಅಪ್ಪ  ಪದಗಳ ನೋಡುವ.

ಈ ಸರ್ತಿ ಒಂದು ಸಣ್ಣ ಬದಲಾವಣೆ ಇದ್ದು. ಬರೀ ಶಬ್ದಾರ್ಥಗಳ ಬರಿವ  ಬದಲು, ಅದ್ರೊಟ್ಟಿಗೆ ಇನ್ನೂ ಏನಾದ್ರೂ ಉಪಯೋಗ ಅಪ್ಪಂಥದ್ದು ಬರಿವ  ಹೇಳಿ ಕಂಡತ್ತು. ಹಾಂಗಾಗಿ ಈ ಸರ್ತ್ಯಣ ಪಟ್ಟಿಲಿಪ್ಪ ಶಬ್ದಗಳನ್ನೇ ಉಪಯೋಗಿಸಿ ಕೆಲವು ಸಣ್ಣ ಸಣ್ಣ ಮಾಹಿತಿ ಕೊಡುವ ಪ್ರಯತ್ನ ಮಾಡಿದ್ದೆ.

ಕಳುದ ಸರ್ತ್ಯಣ ಹಾಂಗೆ ಈ ಸರ್ತಿಯೂ ನಿಂಗೊಗೆ ಗೊತ್ತಿಪ್ಪ ಪದವ ಇದಕ್ಕೆ ಸೇರುಸಿ.

  • ನಾವು ಎಲ್ಲವೂ ಸೇರಿ ಹವ್ಯಕ ಭಾಷೆಯ ಒಳುಸುವ ಬೆಳಸುವ.
  • ಉಂಗುರ ಕಪ್ಪಾದರೆ ನರುವೊಳು ಹಾಕಿ  ತಿಕ್ಕಿ ತೊಳುದ್ರೆ ಫಳಫಳ ಆವ್ತು.
  • ಅಡಿಗೆ ಮಾಡುವಾಗ ಕೈ ಸುಟ್ಟರೆ, ಸುಟ್ಟ ಜಾಗೆಗೆ ತೆಂಗಿನೆಣ್ಣೆ ಉದ್ದೆಕ್ಕು.
  • ಉಣುಗೋಲು ತೆಗಿವಾಗ ಕಂಚುಗಾರ ಕಚ್ಚಿತ್ತಾ ? ಹಾಂಗಾರೆ ಕಚ್ಚಿದ ಜಾಗೆಗೆ ಅರಿಶಿನ ಉದ್ದಿ.
  • ಹೊಸ ಪಾತ್ರೆಯ ಒಳ ಅಂಟಿಕೊಂಡಿಪ್ಪ ಲೇಬುಲು  ತೆಗೆಯಕ್ಕಾದ್ರೆ, ಆ ಪಾತ್ರೆಯ ಹೆರ ಭಾಗವ ೧/೨ ನಿಮಿಷ ಹೊತ್ತುಸಿದ ದೀಪಕ್ಕೆ
    (ಉದ್ದ ಹಿಡಿಯ ದೀಪವೇ ಬೇಕು ಹೇಳಿ ಇಲ್ಲೆ. ಮೇಣದ ಬತ್ತಿಯೂ ಆವ್ತು) ಒಡ್ಡೆಕ್ಕು. ಮತ್ತೆ ಸುಲಾಬಲ್ಲಿ ಲೇಬುಲು  ತೆಗಿಲಾವ್ತು. ಹೊಸ ಪಾತ್ರೆ ಆದ ಕಾರಣ ಮಸಿ ಹಿಡುದ್ದರ ತೆಗಿಲೆ ಕಷ್ಟ ಇಲ್ಲೆ. ಒಂದು ಹರ್ಕಿಲಿ ಉದ್ದಿ ತೆಗ್ದರೆ ಆತು.
  • ಉಪ್ಪರಿಗೆಂದ ಇಳಿವಾಗ ಕಾಲು ಉಳುಕಿತ್ತಾ? ದಪ್ಪಕ್ಕೆ ತೆಗೆದ ಹುಳಿ ನೀರಿನ ಉಳುಕಿದ ಜಾಗೆಗೆ ಪಟ್ಟಿ ಹಾಕೆಕ್ಕು.
    • (ಅದು ಪ್ರಥಮ ಚಿಕಿತ್ಸೆ, ಡಾಕುಟ್ರನ ಹತ್ರಕ್ಕೆ  ಹೋಗದ್ದೆ ಕೂರೆಡಿ. )
  • ವಾಹನಲ್ಲಿ ಹೋಪಾಗ ಕಾರುಲೆ ಬಪ್ಪದರ/ ಹೊಟ್ಟೆ ತೊಳುಸುದರ ತಡಿವ ಉಪಾಯ ಹೇಂಗೆ ? ಕಂಠ ಬಿರಿಯ ತಿಂಬದು, ಹೆಚ್ಚು ಹುಳಿ ಇಪ್ಪ ಹಣ್ಣುಗಳ ತಿಂಬದು ಮಾಡ್ಲಾಗ. ಸಾಧ್ಯ ಇದ್ದರೆ ಕಿಟಕಿ ಹತ್ರ ಕೂದು ಗಾಳಿ ಬಡ್ಕೊಂಡು ಇದ್ರೆ ಒಳ್ಳೆದು.
  • ದೋಸೆ ಒಳ್ಳೆ ಚಿನ್ನದ ಬಣ್ಣ ಬರೆಕ್ಕಾದ್ರೆ, ಅಕ್ಕಿ ಬೊದುಲುಸುವಾಗ ಒಟ್ಟಿಗೆ ಅರ್ಧ ಹಿಡಿ ಅವಲಕ್ಕಿ ಹಾಕಿ.
  • ಒಂದೊಂದು ಸರ್ತಿ ಕಾಲಿನ ನರ ಹಿಡಿದು ಕಾಲು ಹಂದುಸುಲೆ ಎಡಿಗಾಗದ್ದೇ ಇಪ್ಪಗ ಮೆಲ್ಲುಗೆ ಮತ್ತು ಆಳವಾದ ಉಸಿರಾಟ ಮಾಡಿದರೆ ಬೇನೆ ಕಡ್ಮೆ ಆವ್ತು.

ಮೇಲೆ  ದಪ್ಪಕ್ಷರಲ್ಲಿ ಇಪ್ಪ ಪದಗ ಪಂಜಸೀಮೆಲಿ ಪ್ರಯೋಗಲ್ಲಿ ಇಪ್ಪುದು. ಕೆಳ ಇಪ್ಪುದು ಅದಕ್ಕೆ ಸಮಾನಾರ್ಥಕವಾಗಿ ಬೇರೆ ಸೀಮೆಲಿಪ್ಪ ಪದಗಳ ಪಟ್ಟಿ.

  • ಉಂಗುರ – ಉಂಗಿಲು
  • ಉದ್ದುದು – ಕಿಟ್ಟುದು
  • ಉದ್ದ ಹಿಡಿ ದೀಪ – ಕುತ್ತೋಳ್ಕ
  • ಉಪ್ಪರಿಗೆ – ಮೇಲಂಚು
  • ಉಪಾಯ(ಬಗೆ) – ಕೆಣಿ
  • ಉಣುಗೋಲು – ಉರುವೆಲು

  • ಎನಿಗೆ/ನಿನಿಗೆ – ಎನಗೆ/ನಿನಗೆ
  • ಎಡಿಯ –  ಆವ್ತಿಲ್ಲೆ

  • ಒಟ್ಟಿಗೆ – ಒಟ್ಟಿಂಗೆ
  • ಒಳುಸುವ/ಬೆಳಸುವ – ಒಳುಶುವ/ಬೆಳಶುವ
  • ಒಂದು ಸರ್ತಿ – ಒಂದರಿ

ಇನ್ನಷ್ಟು  ಪದಂಗ ಬಪ್ಪ ವಾರಕ್ಕೆ,..

6 thoughts on “ಪಂಜಸೀಮೆ ಹವಿಗನ್ನಡಲ್ಲಿ ಬಳಕೆಲಿ ಇಪ್ಪ ಪದಗಳ ಸಂಗ್ರಹ -2

  1. ದೀಪ೦ಗಳ ಮಡುಗಲೆ ,ಸಣ್ಣ -ದೊಡ್ಡ ಗು೦ಟಗಳು ಇರುತ್ತವು. ಗು೦ಟದೀಪ೦ಗಳಲ್ಲಿ ಉಪಯೋಗ ಹೊ೦ದಿಕೊ೦ಡು ,ಆಚಾರಿಗ ಕೈಚಳಕ ತೋರಿಸುತ್ತವು.

    ಹಾ೦ಗೆ ಇ೦ದು ಪ್ರಭಾದ, ಬೈಟೂ ಕಾಪಿ ಪುಟಲ್ಲಿ ,ಉಡುಪಮೂಲೆಯವರ ಪರಸ್ಪರ ಸಕಾಯ೦ಗಳ ವಿವರವು ಕ೦ಡತ್ತು.

  2. ಪಂಜ ಸೀಮೆಲಿ ‘ಅರಡಿಯ’ ಹೇಳುವ ಪದ ಪ್ರಯೋಗ ಇಲ್ಲೆ. ಬೇರೆ ಸೀಮೆಗಳಲ್ಲಿ ‘ಎಡಿಯ’ ಹೇಳುದಕ್ಕೆ ‘ಅರಡಿಯ’ ಹೇಳುದಾಳಿ ಗ್ರೇಸಿತ್ತಿದ್ದೆ.ವ್ಯತ್ಯಾಸ ತಿಳುಸಿದ್ದಕ್ಕೆ ಧನ್ಯವಾದ ಮಾವ. ಮೇಲಣ ಪಟ್ಟಿಲಿ ತಿದ್ದಿದ್ದೆ. ‘ಅರಡಿಯ'(ಗೊತ್ತಿಲ್ಲೆ/ಗೊಂತಿಲ್ಲೆ) ಪದವ ‘ಗ’ ಕಾರಕ್ಕೆ ಸೇರುಸಿದ್ದೆ.(‘ಗ’ ಕಾರಂದ ಮುಂದಣ ಕಂತುಗಳಲ್ಲಿದ್ದು).

    ಮುಂದೆಯೂ ತಿದ್ದುತ್ತಾ ಇರಿ, ಶಬ್ದ ಪರಿಚಯಕ್ಕೆ ಖಂಡಿತಾ ಎಲ್ಲರ ಸಹಾಯ ಬೇಕು..

    1. ॥ ಶುಭ೦ ಭೂಯಾತ್॥

      ಗೌರಿಯಕ್ಕ, ನಮಸ್ತೇ.
      [• ಉಂಗುರ – ಉಂಗಿಲು;[ಉ೦ಗುರ- ಶಿರಸಿ]
      • ಉದ್ದುದು – ಕಿಟ್ಟುದು[ಉದ್ದುದು- ಶಿರಸಿ.]
      • ಉದ್ದ ಹಿಡಿ ದೀಪ – ಕುತ್ತೋಳ್ಕ
      • ಉಪ್ಪರಿಗೆ – ಮೇಲಂಚು[ಮೆತ್ತು.- ಶಿರಸಿ.]
      • ಉಪಾಯ(ಬಗೆ) – ಕೆಣಿ[ಉಪಾಯ – ಶಿರಸಿ.
      • ಉಣುಗೋಲು – ಉರುವೆಲು [ಸರುಗೋಲು – ಶಿರಸಿ.]–
      ಇಲ್ಲಿ ಕ೦ಸಲ್ಲಿ ಕೊಟ್ಟ ಪದ೦ಗೊ ಶಿರಸಿ ಕಡೆಯಾಣದ್ದು.ಇದರ ಎನ್ನ ಹೆ೦ಡತಿಯ ಸಕಾಯ೦ದ ಕೊಟ್ಟದ್ದು.ಇಲ್ಲಿಯ ಸಾಮ್ಯೆತೆಯ ನೋಡಿರೆ, ಪ೦ಜ ಸೀಮೆಯ ಹವೀಕರ ಪೂರ್ವಜರು ಮೂಲತಃ ಸಾಗರ – ಶಿರಸಿ ಕಡೆ೦ದ ಇಲ್ಲಿಗೆ ಬ೦ದು ನೆಲಸಿದವಾಗಿರೆಕು ಹೇದು ತೋರುತ್ತು.ಇದಕ್ಕೆ ಇನ್ನು ಒ೦ದು ಋಜುವಾತು ಎ೦ತದು ಹೇಳಿರೆ,ಉ.ಕ. ಹಾ೦ಗೂ ಶಿವಮೊಗ್ಗ ಜಿಲ್ಲೆಲಿ ಮಾ೦ತ್ರ ಕಾ೦ಬಲೆ ಸಿಕ್ಕುವ “ಹೆಗೆಡೆ ” ಹೇಳುವ ಕುಲನಾಮ – ಉಪನಾಮ[Surname.]ಇಲ್ಲಿ ಕಾ೦ಬಲೆ ಸಿಕ್ಕುತ್ತು. ಇನ್ನು ಎರಡೂ ಭಾಷಗಳ ತೌಲನಿಕ ಅಧ್ಯಯನ ಮಾಡಿರೆ ಇನ್ನೂ ಹೆಚ್ಚಿನ ಮಹತ್ವದ ಮಾಹಿತಿಗ ಬೆಣಚ್ಚಿ೦ಗೆ ಬಪ್ಪದರಲ್ಲಿ ಸ೦ಶಯ ಇಲ್ಲೆ. ಆದರೆ ಪ೦ಜ ಸೀಮೆಯ ಹವಿಗನ್ನಡಲ್ಲಿ ಪರಿಸರದ ಗೌಡರ ಅರೆಗ೦ನಡ ಭಾಷೆಯುದೆ ಸಾಕಷ್ಟು ಪರಿಣಾಮ ಮಾಡಿದ್ದು.ಸಾಧ್ಯವಾದರೆ, ಲಭ್ಯವಿದ್ದರೆ ಆದಷ್ಟು ಪ್ರಾಚೀನ ಪದ೦ಗಳನ್ನುದೆ ನಮ್ಮ ಹೆರಿಯೋರ ಸಕಾಯ ತೆಕ್ಕೊ೦ಡು ಈ ಕೆಲಸವ ಅದೇ ಸೀಮೆಯವು ಮಾಡಿರೆ, ನಮ್ಮ ಬಾಷೆ, ಸ೦ಸ್ಕೃತಿಯ ಬಗ್ಗೆ ಮತ್ತಷ್ಟು ಮಹತ್ವದ ಮಾಹಿತಿ ತಿಳ್ಕೊ೦ಬಲೆಡಿಗು.ಈ ದೃಷ್ಟಿಲಿ ಪ೦ಜಸೀಮೆಯ ನಮ್ಮ ಜಯಗೌರಿಯಕ್ಕನಾ೦ಗಿರ್ತ ಯುವ ಜನಾ೦ಗ ಮನಸ್ಸು ಮಾಡೆಕು ಹೇದು ಎನ್ನ ಕೋರಿಕೆ.
      ಜಯಗೌರಿ ಅಕ್ಕ ನಿ೦ಗೊ ತು೦ಬಾ ಒಳ್ಳೆ ಕೆಲಸ ಮಾಡ್ತಾ ಇದ್ದಿ.ಸಾ೦ಗವಾಗಿ ಮು೦ದುವರ್ಸಿ.ಯೇವಗಳೋ ಮಾಡೆಕಾಗಿದ್ದ ಕೆಲಸ ಇದು.“Better Late Than Never.”ಹೇದಿದ್ದನ್ನೆ;ನಿ೦ಗಳ ಈ ಸತ್ಕಾರ್ಯಕ್ಕೆ ತು೦ಬು ಹೃದಯದ ಧನ್ಯವಾದ೦ಗೊ;ಹರೇ ರಾಮ.

      1. ನಮಸ್ತೆ ಅಪ್ಪಚ್ಚಿ,

        ನಿಂಗಳ ಒಪ್ಪ ನೋಡಿ ತುಂಬಾ ಕುಶಿ ಆತು. ನಿನ್ನೆ ಎನ್ನ ಮಾವಗಳ ಹತ್ರ ಮಾತಾಡುವಾಗ ನಿಂಗ ಹೇಳದಾಂಗೆ ಪಂಜ ಸೀಮೆಲಿ ಅರೆಭಾಷೆ ಮತ್ತು ಕಾಸರಗೋಡು ,ಕುಂಬ್ಳೆ ಹೊಡಲಿ ಮಲಯಾಳ ಪದಂಗ ಮಿಶ್ರ ಆವ್ತು ಹೇಳಿಕೊಂಡಿತ್ತಿದ್ದವು.
        ಸಾಧ್ಯವಾದಷ್ಟು ಹಳೆಯ ಪದಗಳ ಹುಡ್ಕುಲೆ ಪ್ರಯತ್ನ ಮಾಡ್ತಾ ಇದ್ದೆ.ಆ ನಿಟ್ಟಿಲಿ ಕುತ್ತೋಳ್ಕ ಹೇಳುವ ಪದ ಹಳೆಗಾಲದ್ದು,ಈಗ ಅದರ ಬಳಕೆ ಅಷ್ಟಿಲ್ಲೆ ಹೇಳಿ ಕಾಣ್ತು.
        ನಿಂಗ ಭಾಷೆಯ ಬಳಕೆಯ ಮೇರೆಗೆ ನಮ್ಮ ಪೂರ್ವಿಕರ, ಪರಂಪರೆಯ ದಿಕ್ಕಿಗೆ ಆಲೋಚನೆ ಮಾಡುವಾಂಗೆ ಮಾಡುದು ತುಂಬಾ ಸ್ಪೂರ್ತಿ ಕೊಡುತ್ತು.ಸಾಗರ ಕಡೆಯ ಪದಗಳನ್ನೂ ತಿಳುಸಿಕೊಟ್ಟಿದಿ..
        ತುಂಬಾ ಧನ್ಯವಾದ ಅಪ್ಪಚ್ಚಿ.

        1. ಕುತ್ತು+ವಿಳಕ್ಕು= ಕುತ್ತುವಿಳಕ್ಕು>ಕುತ್ತುಬೆಳಕ್ಕು>ಹುತ್ತೋಳುಕ್ಕು[ಕುತ್ತಿಳೆಕ್ಕು]ಹೇದು ರೂಪಾ೦ತರ ಹೊ೦ದಿರೆಕು.ಇದು ಮಲೆಯಾಳ೦ದ ನಮ್ಮ ಅಜ್ಜ೦ದಿರ ಕಾಲಲ್ಲಿ ಆಮದಾದ ಶಬ್ದ ಹೇದು ತೋರುತ್ತು.ಇದರ ಇನ್ನೂ ಹೆಚ್ಚಿನ ಮಾಹಿತಿ ಗೊ೦ತಿಪ್ಪವು ಬರವಲಕ್ಕು.ಕುತ್ತೋಳುಕ್ಕು ಹೇದರೆ ಅದು ಮರದ ಉದ್ದದ stanad ನಾ೦ಗಿಪ್ಪದರ ಮೇಗೆ ಮಡಗುವ ದೀಪ.ಆನು ಸ೦ಣಾಗಿಪ್ಪಾಗ ಎ೦ಗಳಲ್ಲಿ ಅ೦ತಹ ಒ೦ದು ದೀಪ ಇದ್ದದರ ನೋಡಿದ ನೆ೦ಪಾವುತ್ತು.ಇ೦ದದರ ನಾವೆಲ್ಲಿ ಕಾ೦ಬದು?ಇ೦ಥ ಪಳೆಯುಳಿಕಗಳ ನಾವು ಒಳ್ಶಿಕಾದ ಅನಿವಾರ್ಯತೆ ಇದ್ದು. ಅದು ನಮ್ಮ ಭಾಷೆ- ಸ೦ಸ್ಕೃತಿಗೆ ಒ೦ದು ದೊಡ್ಡ ಕೊಡುಗೆ ಅಪ್ಪದರಲ್ಲಿ ಸ೦ದೇಹ ಇಲ್ಲೆ.ದಯಮಾಡಿ ಆರ ಮನೆಲಿಯಾದರೂ ಇ೦ಥ ಹಳೆಯ ವಸ್ತುಗ ಇದ್ದರೆ ಅದರ ತಿಳಿಶಿರೆ ಎ೦ಗ ಅದರ ಕಾಪಾಡುವ ಶ್ರಮ ವಹಿಸುತ್ತಿಯೊ ಹೇದು ಸ೦ತೋಷಲ್ಲಿ ತಿಳುಶುತ್ತಾ ಇದ್ದಿಯೊ°. ಈಗಾಗಳೇ ಇ೦ಥ ಕೆಲವು ವಸ್ತುಗಳ ಲಾಯಕ್ಕಿಲ್ಲಿ ರಕ್ಷಣೆ ಮಾಡಿದ್ದಿಯೊ.ಉದಾರ ಮನಸ್ಸಿಲ್ಲಿ ಕೊಡುವ ಮನಸ್ಸಿದ್ದವು ದಯಮಾಡಿ ತಿಳುಶಿ. ನಮಸ್ತೇ. ಹರೇ ರಾಮ.

  3. ediya – aavuttille, aradiya- gontille heli hechu hatraana shabdamgo aadikko ? eegana makkoge namma balakeya shabda parichaya agatyadde.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×