Oppanna.com

ಗಣತಿಯ ದಿನ ಗಮನುಸಿ – ಅಬ್ಬೆ ಭಾಶೆ “ಹವ್ಯಕ”

ಬರದೋರು :   Admin    on   09/02/2011    34 ಒಪ್ಪಂಗೊ

ಪ್ರತಿ ಮೂವತ್ತೊರಿಶಕ್ಕೆ ಒಂದು ತಲೆಮಾರು – ಇದು ಹಳಬ್ಬರ ಲೆಕ್ಕ.
ಪ್ರತಿ ಹತ್ತೊರಿಶಕ್ಕೆ ಒಂದರಿ – ದಶಮಾನದ ಆರಂಭದ ಒರಿಶ – ಜನಗಣತಿ – ಇದು ನಮ್ಮ ಸರಕಾರದ ಲೆಕ್ಕ.
ಈ ದಶಮಾನದ್ದು ಈ ಒರಿಶ ಬತ್ತು, ದೇಶಮಟ್ಟಲ್ಲಿ ಇಂದು, ಪೆಬ್ರವರಿ ಒಂಬತ್ತರಿಂದ ಸುರು ಆವುತ್ತು.

ದೇಶದ ವೈವಿಧ್ಯತೆಲಿ ಜೆನಗಣತಿ ಬಹು ಮುಖ್ಯವಾದ ಅಂಗ.
ವೆಗ್ತಿ ಮಟ್ಟಂದ ತೊಡಗಿ, ಮನೆ – ಊರು – ಬೈಲು – ತಾಲೂಕು – ಜಿಲ್ಲೆ- ರಾಜ್ಯಮಟ್ಟಕ್ಕೆ ಒರೆಗೆ ಮುಂದುವರುದು, ಒಟ್ಟಾರೆಯಾಗಿ ಇಡೀ ದೇಶಲ್ಲಿ ಎಷ್ಟು ಜೆನ ಇದ್ದವು, ಆರಾರು ಯೇವಯೇವ ಜಾತಿ, ಪಂಗಡ, ಜನಾಂಗ, ಭಾಶೆ – ಇತ್ಯಾದಿಗೊಕ್ಕೆ ಒಳಪ್ಪಟ್ಟಿದವು, ಆರು ತೀರಿಗೊಂಡಿದವು, ಆರು ಜನನ ಆಯಿದವು – ಹೇಳ್ತ ದಾಖಲೆಯ ನವೀಕೃತಗೊಳುಸುತ್ತವು.
ಒಬ್ಬ ವೆಗ್ತಿಯ ದಾಖಲೆಯ ನಿಖರತೆ ವೆಗ್ತಿದೇ!
ನಾವು ಹೇಳಿದ್ದರನ್ನೇ ಅವು ಬರಕ್ಕೊಂಬದು – ನಾವು ಹೇಳಿದ್ದನ್ನೇ ಅವು ಬರಕ್ಕೊಳೇಕು.

ನಮ್ಮ ಭಾಷೆ "ಹವ್ಯಕ"

ಈ ಸಂದರ್ಭಲ್ಲಿ ಬೈಲಿನ ಪರವಾಗಿ ನಿಂಗಳ ಹತ್ತರೆ ಒಂದು ಕೋರಿಕೆ ಇದ್ದು.
ಜನಗಣತಿಗೆ ಬಪ್ಪಗ ನಮ್ಮ ಮಾತೃಭಾಶೆಯ ಬೇರೆ ಯೇವದೇವದೋ ಬರೆತ್ತದಲ್ಲ, ಬದಲಾಗಿ ನಮ್ಮ ಹೆಮ್ಮೆಯ “ಹವ್ಯಕ” ಹೇಳಿಯೇ ಬರೆಶುವೊ.
ಅಂತೆಯೇ ಜಾತಿಯೂ – ಬರೇ “ಬ್ರಾಹ್ಮಣ” ಹೇಳಿ ಬರೆಶುತ್ತದರಿಂದ “ಹವ್ಯಕ ಬ್ರಾಹ್ಮಣ” ಹೇಳಿ ಬರೆಶಿಗೊಂಡು ನಮ್ಮ ವೈಶಿಷ್ಟ್ಯತೆಯ ರಾಷ್ಟ್ರಮಟ್ಟಲ್ಲಿ ಗುರುತುಸುವೊ.
ಎಂತ ಹೇಳ್ತಿ?

ಅಜಕ್ಕಳ ಮಾಷ್ಟ್ರಣ್ಣ, ಕಾಂತಣ್ಣ – ಈ ಬಗ್ಗೆ ವಿವರವಾಗಿ ಒಂದರಿ ಹೇಳಿದ್ದವು.

7 ನೇ ಗೆರೆಪೆಟ್ಟಿಗೆ(ಕಾಲಂ) ಧರ್ಮ: ಸನಾತನ / ವೈದಿಕ / ಹಿಂದೂ
8 ನೇ
ಗೆರೆಪೆಟ್ಟಿಗೆಲಿ: ಹವ್ಯಕ ಬ್ರಾಹ್ಮಣ
10 ನೇ ಗೆರೆಪೆಟ್ಟಿಗೆ
: ಮಾತೃಭಾಷೆ: ಹವ್ಯಕ

e- ಬೈಲಿಂಗೆ ಬಪ್ಪಲೆಡಿಗಾಗದ್ದೋರಿಂಗೆ, ನಿಂಗಳ ಆಚ ಮನೆಯೋರಿಂಗೆ, ಈಚ ಮನೆಯೋರಿಂಗೆ, ಎದುರಾಣ ಮನೆಯೋರಿಂಗೆ ಒಂದು ತಿಳುಶಿಬಿಡ್ತಿರೋ?
ಅಂತೇ ಗಂಟೆಗಟ್ಳೆ ಮಾತಾಡ್ಳೆ ಪೋನು ಮಾಡ್ತಡ, ಈ ಲೆಕ್ಕಲ್ಲಿ ಹತ್ತು ಪೋನು ಬಡುದರೆ ದೊಡ್ಡ ತಲೆಬೆಶಿ ಇದ್ದೋ?
ಅಲ್ಲದೋ?


ಒಪ್ಪಣ್ಣ

ಗಣತಿಗೆ ಬೈಲಿನ ಮಾಷ್ಟ್ರಣ್ಣಂಗೊ ಬತ್ತವಲ್ಲದೋ? – ಅಂಬಗ ನೆಂಪಿರಳಿ:
ನಮ್ಮ ಅಬ್ಬೆ ಭಾಶೆ “ಹವ್ಯಕ”
~
ಗುರಿಕ್ಕಾರ°

ಸೂ: ಜನಗಣತಿಯ ವಿಶಯವಾರು ವಿಭಾಗಂಗಳ ಮಾಹಿತಿ ಶರ್ಮಪ್ಪಚ್ಚಿ ಕೊಟ್ಟು ಕಳುಸಿದ್ದವು, ಸಂಕೊಲೆ ಇಲ್ಲಿದ್ದು: Janaganati-Form.pdf

34 thoughts on “ಗಣತಿಯ ದಿನ ಗಮನುಸಿ – ಅಬ್ಬೆ ಭಾಶೆ “ಹವ್ಯಕ”

  1. ಜನಗಣತಿಲಿ ಜಾತಿಯ ಹೆಸರು ಬರವಲೆ ಜಾಗೆ ಇಲ್ಲೆ. ಜಾತಿ ಬರವಲೆ ಇಪ್ಪದು ಪ.ವರ್ಗ ಮತ್ತೆ ಪ.ಜಾತಿಗೊಕ್ಕೆ ಮಾಂತ್ರ.

  2. ಗೊ೦ತಿಪ್ಪ ಭಾಷೆಗಳ ನಮೂದಿಸಲೆ ಕೋಲಮ್ ಒ೦ದಿದ್ದಡ, ಅಪ್ಪೊ ದೊಡ್ಡಭಾವ? ಎಲ್ಲೊರುದೆ ಅದರಲ್ಲಿ ಸ೦ಸ್ಕೃತ ಹೇಳಿ ಬರಶಲೆ ಮರೆಡಿ. ಅಲ್ಲಿ ಬೇರೆ ಭಾಷೆಗಳಿ೦ದ ಮೊದಲು ಸ೦ಸ್ಕೃತಕ್ಕೆ ಪ್ರಾಧಾನ್ಯ ಕೊಟ್ರೆ ಒಳ್ಳೆದು. ನಮ್ಮವಕ್ಕೆ ಎಲ್ಲೋರಿ೦ಗುದೆ ಸ೦ಸ್ಕೃತ ಗೊ೦ತಿದ್ದು. ರಜ್ಜ ಸಾಣೆಗೆ ಹಿಡುದರೆ ಸಾಕು!!

    1. ಇದು ಸರಿಯಾದ ಮಾತು ಮಹೇಶಣ್ಣಾ, ಹಾಂಗೇ ಮಾಡುವೊ°

  3. ಡಾಮಹೇಶಣ್ಣ ಒಂದು ಉಪಕಾರ ಮಾಡಿದ°…
    ಪುಣ್ಯಕ್ಕೆ ಮಾತೃಭಾಷೆ ಸಂಸ್ಕೃತ ಹೇಳಿ ಬರೆಶುಲೆ ಹೇಳಿದ್ದಾ° ಇಲ್ಲೆ…
    {ಮೊ-ಬೈಲಿಲ್ಲಿ ಕೆಲವು ಸಮೋಸಂಗೊ ಹಾಂಗುದೇ ಬತ್ತಾ ಇದ್ದು}

  4. {7 ನೇ ಗೆರೆಪೆಟ್ಟಿಗೆ(ಕಾಲಂ) ಧರ್ಮ: ಸನಾತನ / ವೈದಿಕ / ಹಿಂದೂ}
    ಇದರಲ್ಲಿ ಯಾವುದಾದರೂ ಒಂದು ಹೇಳಿ ಎಂತಕೆ? ಹಿಂದೂ ಹೇಳಿ ನಿರ್ದಿಷ್ಟವಾಗಿ ಹೇಳ್ಳಾವುತ್ತಿತ್ತನ್ನೆ?

  5. ನಮ್ಮ ಭಾಷೆ ಕನ್ನಡದ ಒಂದು ಶಾಖೆ ಅಷ್ಟೆ.
    ನಿಂಗೊ ದಯಮಾಡಿ ಬಳ್ ಳಾರಿ ಮತ್ತೆ ಗುಲ್ಬರ್ಗದ ಭಾಷೆಯ ನೋಡಿ.[ಗೀತಾ ನಾಗಭೂಷಣ ಯಾ ಕುಂ.ವೀರಭದ್ರಪ್ಪನ ಕತೆ] ನಿಂಗೊ ಅದರ ಕನ್ನಡ ಹೇಳುತ್ತಿ ಹೇಳಿ ಆದರೆ,ನಮ್ಮ ಹವ್ಯಕ ಭಾಷೆಯ ಕನ್ನಡ ಹೇಳುಲೆ ನಮಗೆ ಯಾವ ಸಂಕೋಚವೂ ಇಲ್ಲೆ.ನಮ್ಮ ಹಿರಿಯರು ಕನ್ನಡ ಹೇಳಿಯೇ ಬರೆದ್ದವು .ನಮ್ಮಲ್ಲಿ ಮುಳಿಯ ತಿಮ್ಮಪ್ಪಯ್ಯ,ಮರಿಯಪ್ಪ ಭಟ್ಟರ ಹಾಂಗಿಪ್ಪ ದೊಡ್ಡ ವಿದ್ವಾಂಸರು ಇದ್ದಿದ್ದವು-ಅವು ನಮ್ಮ ಮಾತೃ ಭಾಷೆಯ ಕನ್ನಡ ಹೇಳಿ ಬರೆಯೆಡಿ ಹೇಳಿದ್ದವೊ?ನಾವು ಕನ್ನಡಿಗರೆ ಸರಿ-ಇದು ತ್ರಿಕಾಲಾಬಾಧಿತ ಸತ್ಯ. ಇದರ ಲೊಟ್ಟೆ ಹೇಳಿ ದಯಮಾಡಿ ಹೇಳೆಡಿ ಸುಭಗಣ್ಣಾ.
    ಇನ್ನು ಹವ್ಯಕ ಮಹಾಸಭೆಯವರ ಕಾರ್ಯ ಆನು ಗೌರವಿಸುತ್ತೆ.ಆದರೆ ಅವರ ಹವಿಗನ್ನಡ ಹೇಳುವ ಒಂದು ಉಪಕ್ರಮ ಎನಗೆ ಸರಿ ಕಾಣುತ್ತಿಲ್ಲೆ.ನಮ್ಮವು ಕೊಡಗಿಲಿ ಶುದ್ಧ ಕನ್ನಡ[ನಮ್ಮ ವ್ಯಾವಹಾರಿಕ ಕನ್ನಡ]ವನ್ನೇ ಮಾತಾಡುತ್ತವು.ಅವರ ಬಿಟ್ಟಿರೊ ಹಾಂಗಾರೆ?
    ನಮ್ಮ ಅಸ್ತಿತ್ವ ಉಳಿಯೆಕ್ಕಾದರೆ ನಾವು ಮನೆಲಿ ನಮ್ಮಭಾಷೆಯನ್ನೇ ಮಾತಾಡುವೊ.ನಮ್ಮ ಮಕ್ಕೊಗೆ -ಇಂಗ್ಲಿಷ್ ಮಾಧ್ಯಮಲ್ಲಿ ಕಲಿವವಕ್ಕೆ -ಸರಿಯಾಗಿ ಕನ್ನಡ,ಸಂಸ್ಕೃತ ಹೇಳಿಕೊಡುವೊ.
    ಅದರ ಬಿಟ್ಟು ನಾವು ಹವ್ಯಕ /ಹವಿಗನ್ನಡ ಹೇಳಿ ಬರಶಿರೆ ಎಂತ ಗುಣ?
    ನಮಗೆ ಭಾಷಾ ಅಲ್ಪಸಂಖ್ಯಾತರು ಹೇಳಿಸಿಕೊಂಡರೆ ಗುಣ ಇದ್ದೊ-ಏವ ಸರಕಾರ ಬಂದರೂ ಅದು ನಮಗೆ ಸಿಕ್ಕ.
    ಕನ್ನಡವ ಬಲಗುಂದಿಸಿದ್ದು ಮಾತ್ರ ನಮಗೆ ಸಿಕ್ಕುವ ಲಾಭ!
    ಎನಗೆ ನಮ್ಮ ಭಾಷೆಯ ಮೇಲೆ ಪ್ರೀತಿ ಇದ್ದು-ಕನ್ನಡದ ಮೇಲೆ ತುಂಬಾ ಅಭಿಮಾನವೂ ಇದ್ದು.ನಮ್ಮ ಹಿರಿಯ ವಿದ್ವಾಂಸರು ಕನ್ನಡವ ಉಳಿಶಿದ್ದು,ಬೆಳೆಶಿದ್ದು ಆರೂ ಮರೆಯೆಡಿ.ನಮ್ಮದು ತುಳುವಿನ ಹಾಂಗೊ,ಕೊಂಕಣಿಯ ಹಾಂಗೊ ಸ್ವತಂತ್ರ ಭಾಷೆ ಅಲ್ಲ. ನಮ್ಮ ಮಿತಿಯ ತಿಳುಕ್ಕೊಂಬೊ.
    ನಾವು ಕನ್ನಡಿಗರು ಹೇಳಿಕೊಂಬದರಲ್ಲೇ ನಮ್ಮ ಸಮುದಾಯಕ್ಕೆ,ಸಮಾಜಕ್ಕೆ ಹಿತ.
    ಮತ್ತೆ ಒಂದಾರಿ ಎಲ್ಲರಲ್ಲೂ ಕೈ ಮುಗಿದು ವಿನಂತಿ ಮಾಡುತ್ತೆ,ರಜಾ ಯೋಚಿಸಿ-ಜಾತಿಯ ಮೋಹ ನಮ್ಮ ಕಣ್ಣಿಂಗೆ ಕಾಣೆಕ್ಕಾದ ಸತ್ಯವ ಮರೆಮಾಚದ್ದೇ ಇರಲಿ.
    ನಾವು ಕನ್ನಡಿಗರು ಹೇಳಿ ನಿಸ್ಸಂಕೋಚವಾಗಿ ಹೇಳಿ.

  6. ಈ ವಿಚಾರ ಧಾರೆ ನಮ್ಮ ಸಮಾಜಕ್ಕೆ ಸಿಕ್ಕೆಕ್ಕಪ್ಪ ಪ್ರಾತಿನಿಧ್ಯವ ಕೊಡುಸುವಲ್ಲಿ ಪ್ರಯೋಜನ ಅಕ್ಕು ಹೇಳಿ ಅನುಸುತ್ತು.
    ಇದು ಉಚಿತ ಸಲಹೆ , ತುಂಬಾ ಪ್ರಭಾವ ಯುತ ಪ್ರಯತ್ನ ಅಕ್ಕು ಹೇಳಿ ಎನ್ನ ಅಭಿಪ್ರಾಯ.
    ಇದು ಈಗ ಮೊಬೈಲಿ ಬಪ್ಪ ಮೆಸೇಜು … ಪ್ರಚಲಿತ. ವಿಚಾರ.: ” ನಾಳೆ ಆರಂಭ ಅಪ್ಪ ಜನ ಗಣತಿಲಿ ಮೀಸಲಾತಿ ಸೌಲಭ್ಯಕ್ಕಾಗಿ ನಮ್ಮ ಭಾಷೆ ” ಹವಿಗನ್ನಡ ” ಹಾಂಗೆ ನಮ್ಮ ಜಾತಿ ” ಹವ್ಯಕ ”
    ಹೇಳಿ ನಮೂದಿಸೆಕ್ಕಾಗಿ ವಿನಂತಿ.

    ಪಕಳಕುಂಜ ಗೋಪಾಲಕೃಷ್ಣ,
    ಗೋಕೃಪ ,
    ಮಂಗಳೂರು
    ೧೦-೦೨-೨೦೧೧
    ಹರೇ ರಾಮ .
    ಶ್ರೀ ಗುರುಭ್ಯೋನಮಃ

  7. ತುಳುವಿನವು ತುಳು , ಕೊಂಕಣಿಯವು ಕೊಂಕಣಿ ಹೇಳಿ ಕೊಡುವಾಗ ನಾವು ಹವಿಕನ್ನಡ ಹೆಳುಲೆ ಎಂತಕೆ ಸಂಕೋಚ , ದಾಕ್ಷಿಣ್ಯ?! ಭಟ್ಟ , ಶರ್ಮ ಹೇಳಿ ನಮ್ಮ ಹೆಸರಿನೊಟ್ಟಿನ್ಗೆ ಎಂತಕೆ ಸೇರ್ಸದ್ದೆ ಕೂರೆಕು?!

  8. ಹವಿಗನ್ನಡ ಹೇಳುದು ಸರಿ ಹೇಳಿ ಎನ್ನ ಅಭಿಪ್ರಾಯ

  9. ಎಂಗ ಹವ್ಯಕ ಪತ್ರಿಕೆಲಿ ” ಹವಿಗನ್ನಡ ಹೇಳಿ ” ಬರೆಶೆಕು ಹೇಳಿ ಪ್ರಕಟಣೆ ಮಾಡಿ ಆಯ್ದು, ಮಹಾಸಭೆ ಕೆಲ ವರ್ಷಗಳಿಂದ ಯಂಗಳ ಭಾಷೆಗೆ ಹವಿಗನ್ನಡ ಹೇಳಿ ಬ್ರಾಂಡ್ ಮಾಡಿದ್ದು.

  10. ಹವ್ಯಕ -ಕನ್ನಡ ಹೇಳಿ ಬರಶುದೆ ಒಳ್ಳೇದು

  11. Olle Vishaya…

    Havyaka Brahmana heli bareshidare navagondu identity irthu. Indu bere rajyalli yenthake karnatakalliye kelavu dikke havyaka brahmana helire mele kela nodthavu. Thumba jenakke gonthille.

    Ade eega ningo Iyer, Iyengar helire yellaringoo gonthiddu. Navagondu Identity beke beku.

    Matthe mathru bhashe “Kannada” da badalagi “Havyaka Kannada” heli bareshudarinda munde yavude thondare bakka heli nodigollekku. Govt record li ee dakhale hovuttha karana Kanndigaringe govt koduva saulabhyanda navu vanchithrakko heli nodekku.

    Yenthadakkoo ee ondu vishayava aararu olle Vakilara hathre kelekku.

    1. ವಿಷ್ಣು ಅಣ್ಣ,
      identityಯ ಮಾತು ಸರಿ ಇಲ್ಲೆ ಹೇಳ್ತಿಲ್ಲೆ, ನಾವು ಹವ್ಯಕ ಭ್ರಾಹ್ಮಣರು ಹೇಳಿಗೊಂಬದರಲ್ಲಿ ನವಗೆ ಹೇಮ್ಮೆ ಇದ್ದು. ಆದರೆ, ಇಷ್ತು ದಿನ ಕನ್ನದ ಮಾತ್ರುಭಾಶೆ ಹೇಳಿ ಈಗ ಹವ್ಯಕ ಹೇಳಿತ್ತು ಹೇಳಿ ಆದರೆ, ಮದಲೇ ನಾವು general merit ಗೊ.. ಇನ್ನು ಅದು ಹೇಂಗೆ ಮಾತ್ಱುಭಾಷೆ ಬದಲಾತು ಹೇಳಿರೆ ಉತ್ತರ ಇದ್ದೊ?

  12. ಈ ಸುದ್ದಿ ನೋಡದ್ದೆ ಆನೊ೦ದು ಒಪ್ಪ ಕೊಟ್ಟಿದ್ದಿದ್ದೆ.ಹೇ೦ಗಾರು ವಿಷಯ ಇದುವೆ.ಒಪ್ಪ೦ಗಳೊಟ್ಟಿ೦ಗೆ

  13. ಹವ್ಯಕ ಕನ್ನಡ ಹೇಳಿ ಬರಶುತ್ತದೆ ಒ ಳ್ಳೆದೋ ಹೇಳಿ ಎನ್ನ ಅಭಿಪ್ರಾಯ.

  14. ಗೋಪಾಲಣ್ಣನ ಅಭಿಪ್ರಾಯ ನೋಡೆಕ್ಕಾದ್ದದೆ. ಚುಬ್ಬಣ್ಣನ ಸಲಹೆಯ ಹಾ೦ಗೆ ಹವ್ಯಕ ಕನ್ನಡ ಹೇಳಿ ಬರದರೆ ಸಮಸ್ಯೆ ಬಾರದೊ ಹೇಳಿ ತೋರ್ತು. ತೊ೦ದರೆ ಇದ್ದರೆ ಕೂಡಲೆ ಥಟ್ತೆ೦ದು ಹೇಳಿ.ಲೆಕ್ಕ ಮಾಡುವವು ಬಪ್ಪಲಾತು.

  15. ಗುರಿಕ್ಕಾರೆ, ಭಾರೆ ಒಳ್ಳೆ ಚಿ೦ತನೆ.. ನಿ೦ಗೊ ಹೇಳಿದ್ದು ೧೦೦ ರಕ್ಕಿ ೧೦೦ ಸತ್ಯ..
    ಮತ್ತೆ ನಾವು ಹವ್ಯಕರು ಮಾಡೆಕಾದ ವಿಚಾರ,ಇದರಿ೦ದ ನಮ್ಮ ಹವ್ಯಕರ ಸರೀ ಲೆಕ್ಕ ಸಿಕ್ಕುತ್ತು ಮಾ೦ತ್ರ ಅಲ್ಲದ್ದೆ.. ನಮ್ಮ ಹಿರಿಮೆಯೂ ಹೆಚ್ಚುತ್ತು…ನಾವೆಲ್ಲಾ ಇದರ ಕಢಾಯವಾಗಿ ಪಾಲಿಸುತ್ಯೊ..

  16. ಇಲ್ಲೆ,ಆನು ಇದರ ಒಪ್ಪುತ್ತಿಲ್ಲೆ.
    ನಮ್ಮ ಜಾತಿ ಹವ್ಯಕ ಬ್ರಾಹ್ಮಣ ಹೇಳಿಯೇ ಬರೆಸೆಕ್ಕು-ಆನು ಒಪ್ಪುತ್ತೆ.
    ಆದರೆ ಭಾಷೆ ಕನ್ನಡ ಹೇಳಿ ಮಾತ್ರ ಬರೆಸೆಕ್ಕು-ಈ ವರೆಗೆ ಇದ್ದ ಹಾಂಗೆ.
    ಈಗಳೆ ಕನ್ನಡವ ಕೇಳುವವು ಇಲ್ಲೆ ಹೇಳಿ ಆಯಿದು ಕರ್ಣಾಟಕದ ಕೆಲವು ಹೊಡೆಲಿ.ಬೇರೆ ಭಾಷೆಗಳ ಪ್ರಾಬಲ್ಯ ಜಾಸ್ತಿ ಆಯಿದು.
    ಕಾಸರಗೋಡಿಲಂತೂ ಕನ್ನಡವ ಹೇಂಗೆ ಕಮ್ಮಿ ಮಾಡೆಕ್ಕು ನೋಡುತ್ತಾ ಇದ್ದವು.ಇನ್ನು ನಾವೂ ಹವ್ಯಕ ಹೇಳಿ ಗಣತಿಗೆ ಕೊಟ್ಟರೆ ಕನ್ನಡಿಗರಿಂಗೆ ಕಷ್ಟ ಅಪ್ಪಲಿದ್ದು.
    ದಯವಿಟ್ತು ಬೇಡ.
    ಕನ್ನಡ ಹೇಳಿಯೆ ಕೊಡಿ ಎಲ್ಲರೂ ಹೇಳಿ ಕಳಕಳಿಯ ವಿನಂತಿ.

    1. ಮಾವ ನಿ೦ಗೊ ಹೇಳಿದ್ದು ಒ೦ದು ಲೆಕ್ಕಲಿ ಸರಿಯೇ. ನಾವು ಇದಕ್ಕೆ ಒ೦ದು ಉಪಾಯ ಮಾಡುವೊ..
      ಎಲ್ಲಾ ಹಿರಿಯರು ಅಕ್ಕು ಹೇಳಿರೆ, “ಹವ್ಯಕ-ಕನ್ನಡ” ಹೇಳಿ ಬರದರೆ ಹೇ೦ಗೆ??
      ಎ೦ತ ಹೇಳ್ತೆ ಗುರಿಕ್ಕಾರೆ??

    2. ಗೋಪಾಲಣ್ಣಾ..
      ಆಹ್! ಇಡೀ ಬೈಲನ್ನೇ ಒಂದು ಚಿಂತನೆಗೆ ಇಳುಶಿದಿ.
      ನಿಂಗಳ ಕಳಕಳಿ ಕುಶಿ ಆತು!

      ಕಾಸ್ರೋಡು ಕೇರಳಕ್ಕೆ ಹೋದ್ದದುದೇ ಇದೇ ರೀತಿಯ ಒಂದು ಕಾರಣಲ್ಲಿ – ಹೇಳ್ತ ವದಂತಿ ಇದ್ದು.
      ಆ ಮಟ್ಟಿಂಗೆ ನೋಡಿರೆ ಕಾಸ್ರೋಡಿನ ಜೆನಂಗೊ ಮಾತೃಭಾಶೆ ’ಕನ್ನಡ’ ಹೇಳ್ತದುದೇ ಅಷ್ಟೇ ಮುಖ್ಯ! 🙂
      ಅಲ್ಲಿಂದ ಹೆರ ಇರ್ತೋರಿಂಗೆ ಇದು ಲಗಾವಿಲ್ಲೆ; ಆಡುಭಾಶೆ ’ಹವ್ಯಕ’ ಹೇಳ್ತದು ಒಳ್ಳೆದೇ ಅಲ್ಲದೋ?

      ಬೈಲಿನ ಸಮಷ್ಟಿಯ ಅಭಿಪ್ರಾಯ ನೋಡುವೊ°, ಅಲ್ಲದೋ?

      1. ತುಂಬಾ ವಿಮರ್ಶೆ ಮಾಡೆಕ್ಕಾದ್ಸು ಇದ್ದು.
        ಇದುವರೆಗೂ ಈ ವಿಷಯಲ್ಲಿ ಎಲ್ಲಿಯೂ ಎನ್ನ ಅಭಿಪ್ರಾಯ ವ್ಯಕ್ತ ಪಡುಸಿತ್ತಿದ್ದಿಲ್ಲೆ.
        ಈ ವೇದಿಕೆ ತುಂಬಾ ಪೂರಕವಾಗಿ ಇಪ್ಪ ಹಾಂಗೆ ಕಾಣ್ತಾ ಇದ್ದು.
        ಹವೀಕರಿಂಗೆ ಎಲ್ಲಿಯೂ ಭಾಷೆಯ ಬಗ್ಗೆ ಒಂದು ಸರ್ವ ಸಮ್ಮತ ಅಭಿಪ್ರಾಯ ವ್ಯಕ್ತಪಡುಸುಲೆ ಇಷ್ಟರವರೆಗೆ ಎಡಿಗಾಯಿದಿಲ್ಲೆ. ಹವಿಗನ್ನಡವೋ, ಹವ್ಯಕವೋ, ಹವ್ಯಕ ಕನ್ನಡವೋ, ಅಲ್ಲದ್ರೆ ಹೊಸಾ ಸಮೋಸಂಗೊ ಬತ್ತಾ ಇಪ್ಪ ಹಾಂಗೆ ಸಂಸ್ಕೃತ ಹೇಳಿಯೋ ಬರದರೆ ನಾವು ಸಾಧುಸುಸ್ಸ್ಸು ಎಂತ್ಸರ…?
        ಲೆಕ್ಕ ತೆಗವಲೆ ಬಪ್ಪ ಮಾಷ್ಟಕ್ಕೊ ಇದರ ಸಮಗ್ರ ವರದಿ ಕೊಡುವಾಗ ಅವರ ಬೊಡುಷಿ ತಿಂದ ಹಾಂಗೆ ಅಕ್ಕಷ್ಟೆ…
        ಜಾತಿ ಹವ್ಯಕ ಹೇಳಿ ಬರೆಶುವೋ° ಅದರಲ್ಲಿ ಎರಡು ಅಭಿಪ್ರಾಯ ಬಾರ ತೋರ್ತು.
        ಆದರೆ,
        ಕಾಸರಗೋಡಿನ ಬ್ರಾಹ್ಮರು ಹೀಂಗೆ ಒಂದೊಂದು ಭಾಷೆ ಬರವಲೆ ಹೆರಟರೆ…
        ಈಗಾಗಲೇ ಭಾಷೆಯ ಆಧಾರಲ್ಲಿ ಭಾರತ ಹರಿಹಂಚಾಗಿ ಹೋಯಿದು. ನಾವು ಬೇರೆ ಬೇರೆ ಭಾಷೆಗಳ ಬರೆಸ್ಸು ಇನ್ನಷ್ಟು ಸಮಸ್ಯೆಗೊಕ್ಕೆ ಕಾರಣ ಅಕ್ಕು. ಎಲ್ಲವೂ ದೂರಗಾಮಿ ಪರಿಣಾಮಂಗೊಕ್ಕೆ ಕಾರಣ ಅಕ್ಕು. ಎಲ್ಲಿಯೂ ಕನ್ನಡ ಒಳಿಯ.
        ಇಂದ್ರಾಣದ್ದು ಕಾಸರಗೋಡು, ನಾಳಂಗೆ ಅದು ಕರ್ನಾಟಕದ ಸಮಸ್ಯೆಯೂ ಅಕ್ಕು.
        ಒಂದು ಉದಾಹರಣೆ ಹೇಳುಲೆ ಇಷ್ಟ ಪಡ್ತೆ.
        ಕೇರಳದ ಮಂಜೇಶ್ವರ ಶಾಸಕ ತುಂಬಾ ಪ್ರಯತ್ನ ಪಟ್ಟು ತುಳು ಅಕಾಡೆಮಿ ಸ್ಥಾಪಿಸಿದ್ದು. ಬಹುಶ: ಕರ್ನಾಟಕಲ್ಲಿ ಇಪ್ಪ ತುಳು ಅಕಾಡೆಮಿ ಪ್ರಯತ್ನ ಮಾಡುಸ್ಸಕ್ಕಿಂತ ಮೊದಲೇ ಈ ಮಲಯಾಳಿಗೊ ತುಳುವಿನ ಎಂಟನೇ ಪರಿಚ್ಚೇದಕ್ಕೆ ಸೇರುಸಿ ಅಕ್ಕು. ಲಕ್ಷ್ಯ, ತುಳು ಜೆನಂಗಳ ಒಡೆಸ್ಸು. ಮಲಯಾಳ ಲಿಪಿಯ ಒಟ್ಟಿಂಗೆ ಹೋಲಿಕೆ ಇಪ್ಪ ಕಾರಣ ಕಾಲಾಂತರಲ್ಲಿ ತುಳು ಮನುಷ್ಯಂಗೊ ಎಲ್ಲ ಮಲಯಾಳಿಗಳ ಪ್ರಭಾವಲಯಕ್ಕೆ ಬಕ್ಕು. ಅಷ್ಟಾದರೆ ತುಳು ಜೆನಂಗೊ ಎಲ್ಲ ಕಮ್ಮ್ಯುನಿಷ್ಟಂಗಳ ವೋಟ್ ಬ್ಯಾಂಕ್ ಆವ್ತವು. ಹಾಂಗೆ ಕಾಸರಗೋಡಿನ ಕನ್ನಡವನ್ನೂ ತುಳುವನ್ನೂ ಒಡದು ಹಾಕಿ, ಇನ್ನು ಕಾಸರಗೋಡು ಕರ್ನಾಟಕಕ್ಕೆ ಸೇರೆಕ್ಕು ಹೇಳುಲೆ ಆರೂ ಇಲ್ಲೆ ಹೇಳ್ತ ಹಾಂಗೆ ಮಾಡ್ತ ಕೆಣಿಗೊ ಇದೆಲ್ಲ…
        ಸಾಲದ್ದಕ್ಕೆ ನಮ್ಮ ಭಾಶೆಗೆ ಪ್ರತ್ಯೇಕ ಲಿಪಿ ಇಲ್ಲೆ.
        ನಾವು ಉಪಯೋಗುಸುತ್ತಾಇಪ್ಪದು ಕನ್ನಡವನ್ನೇ ಆದ ಕಾರಣ ಭಾಶೆ ಕನ್ನಡ ಹೇಳಿ ಬರವದೇ ಸೂಕ್ತ.
        ಬಾಕಿ ಸಮಷ್ಟಿಯ ಅಭಿಪ್ರಾಯಕ್ಕೆ ಬಿಡ್ತೆ…

        1. ಒಳ್ಲೇಯ ಅಭಿಪ್ರಾಯ ಬಾವ…….

        2. ದೊಡ್ಡ ಭಾವಾ, ಆನುದೆ ವೇದಿಕೆಗೆ (ರಂಗಸ್ಟಳಕ್ಕೆ ?) ಬಂದೆ. ಕೊಣಿವಲೆ ಅರಡಿಯ. ಕುಂಬ್ಳೆ ಸುಂದರ್ರಾಯನ ಹಾಂಗೆ ಕುತ್ತ ನಿಂದಂಡು ಮಾತಾಡ್ತೆ. 😉
          1. ಸುರೂವಿಂಗೇ ಕಂಡದು- ಶುದ್ದಿಯ ತಲೆಬರಹಲ್ಲಿಯೂ ವಿವರಲ್ಲಿಯೂ ಒಪ್ಪಂಗಳಲ್ಲಿಯೂ ‘ಭಾಶೆ’ ಹೇಳಿ ಬರದ್ದದು. ನೋಡಿಯಪ್ಪಗ ರಜ ಕಿರಿಕಿರಿ ಆತಪ್ಪ.ಇದು ಗಮನುಸದ್ದೆ ಆದ ದೋಷವೋ? ಅಲ್ಲ, ‘ಭಾಷೆ’ಯ ಹವ್ಯಕಕ್ಕೆ ತಂದದೋ? ಗೊಂತಾಯಿದಿಲ್ಲೆ.
          2. ಜನಗಣತಿಲಿ ಮಾತೃ ಭಾಷೆ ‘ಹವಿಗನ್ನಡ’ ಹೇಳಿಯೇ ಬರಶೆಕ್ಕು ಹೇಳಿ ಎನ್ನ ಅಭಿಪ್ರಾಯ. ಏಕೆ ಹೇಳಿರೆ ಅದು ಸತ್ಯ ವಿಷಯ!! ನಾವು ಮಾತಾಡುವ ಭಾಷೆ ‘ಹವಿಗನ್ನಡ’ವೇ ಆಗಿದ್ದೊಂಡು ‘ಕನ್ನಡ’ ಹೇಳಿ ಎಂತಗೆ ಲೊಟ್ಟೆ ಬರಶೆಕ್ಕು? ವ್ಯಾವಹಾರಿಕವಾಗಿ ನಮ್ಮ ಭಾಷೆ ಕನ್ನಡ ಹೇಳುದರ ಒಪ್ಪಲೆ ತೊಂದರೆ ಇಲ್ಲೆ. ಅದಕ್ಕೆ ಪ್ರತ್ಯೇಕ ಕಾಲಂ ಇದ್ದರೆ ಬೇಕಾರೆ ಹಾಂಗೇ ಬರಶುವೊ. ಆದರೆ ಮಾತೃ ಭಾಷೆ ಮಾಂತ್ರ ಹವಿಗನ್ನಡವೇ ಹೊರತು ಇನ್ನೊಂದಲ್ಲ.
          3. ಕನ್ನಡವ ಒಳುಶುತ್ತ ಬೆಳಶುತ್ತ ಉಮೇದು ಬೈಲಿನವಕ್ಕೆ ಬಂದದು ಸಂತೋಷದ ಸಂಗತಿಯೇ. ಆದರೆ ಇಲ್ಲಿ ಈ ಸಂದರ್ಭಲ್ಲಿ ಮದಾಲು ನಾವು ನಮ್ಮ ಭಾಷೆಯ ಅಸ್ತಿತ್ತ್ವವ ಅಧಿಕೃತ ದಾಖಲೆಗೆ ತಪ್ಪಲೆ ಗಮನ ಕೊಡೆಕು. ಇದು ನಮಗೆ ಸಿಕ್ಕಿದ ಸುವರ್ಣ ಅವಕಾಶ ಹೇಳಿ ಗ್ರೇಶೆಕ್ಕು. ಇಲ್ಲಿ ಒಂದು ಸೂಕ್ಷ್ಮವ ಆನು ಹೇಳ್ತೆ- ನಮ್ಮ ಭಾಷೆ ಹವಿಗನ್ನಡ ಹೇಳಿ ಬರಶಿರೆ ಕನ್ನಡಕ್ಕೆ ಹೆಚ್ಚಿನ ಬಾಧಕ ಏನೂ ಆಗ. ಎಂತಗೆ ಹೇಳಿರೆ ಜನಗಣತಿಯ ಮಾಹಿತಿಗಳ ಆಧರಿಸಿ ಅಕೇರಿಗೆ ವರದಿ ತಯಾರುಸುವಗ ” ಕನ್ನಡದ ಅನೇಕ ಪ್ರಬೇಧಗಳಲ್ಲಿ ಒಂದಾದ ಹವಿಗನ್ನಡ” ಹೇಳಿ ಅಂಕಿ ಅಂಶಂಗಳ ಕೊಡುಗು. ಇದರಿಂದ ಕನ್ನಡಕ್ಕೆ ತೊಂದರೆ ಏನೂ ಆವ್ತಿಲ್ಲೆನ್ನೆ? ಆದರೆ,ನಾವು ನೇರ ‘ಕನ್ನಡ’ ಹೇಳಿಯೇ ಬರಶಿತ್ತುಕಂಡ್ರೆ- ನಮ್ಮ ಭಾಷೆಯ ವಿಚಾರ ರಿಕಾರ್ಡಿಲ್ಲಿ ಎಲ್ಲಿಯೂ ಸಿಕ್ಕ!
          4. ಕಾಸರಗೋಡು- ಕನ್ನಡ ವಿಚಾರಲ್ಲಿ ಎನಗೂ ರಜ ಹೇಳ್ಳಿದ್ದು. ದೊಡ್ಡಭಾವ, ನಿಂಗೊ ಅಕಾಡೆಮಿ-ತುಳುವರ ಒಡೆಸ್ಸು-ಕಮ್ಯುನಿಷ್ಟು-ಓಟುಬೇಂಕು ಇತ್ಯಾದಿ ಹೇಳಿದಿ. ರಾಜಕೀಯ ಸುಡ್ಲಿ..!! ನವಗದು ಬೇಡ. ಅಥವಾ ರಜ ಹೊತ್ತು ಕರೇಲಿ ಇರಲಿ. ಭಾವಾ, ಆನು ಕೇಳ್ತೆ- ಕಾಸರಗೋಡಿಲ್ಲಿ ಕನ್ನಡವ ಕುಟ್ಟೆತೆಗೆತ್ತಾ ಇಪ್ಪದು ಬರೀ ರಾಜಕೀಯದವು ಮಾಂತ್ರವೊ? ಖಂಡಿತ ಅಲ್ಲ. ಈ ಸ್ಥಿತಿಗೆ ಮುಖ್ಯವಾಗಿ ಅಲ್ಲ್ಯಾಣ ಕನ್ನಡಿಗರ ನಿರ್ಲಕ್ಷ್ಯವೇ ಕಾರಣ. ಕಾಸರಗೋಡಿನ ‘ಕನ್ನಡಿಗರು’ ಹೇಳಿಗೊಂಬವು ಸ್ವಯಂ ವಿಮರ್ಶೆ ಮಾಡಿಕೊಳ್ಳೆಕ್ಕಾದ ಅಗತ್ಯ ಈಗ ಒಳ್ಳೆತ ಇದ್ದು. ಕಾಸರಗೋಡಿನ ಈಗಾಣ ಕನ್ನಡಕ್ಕೆ ಭಾಷಾ ಶುದ್ಧಿ ಇಲ್ಲೆ. ಪೂರ್ತಿ ಮಲಯಾಳ ಆವರಿಸಿಗೊಂಡಿದು. ಪಾಠ ಪುಸ್ತಕಂಗಳಲ್ಲಿ ಸರ್ಕಾರಿ ಕಛೇರಿಗಳಲ್ಲಿ ಕನ್ನಡದ ಕೊರಳು ಅಮುಕ್ಕುವ ಚೆಂದ ನೋಡೆಕ್ಕು! ‘ವಿಲೇಜ್ ಓಫೀಸು’ ‘ಗವ.ಡಿಸ್ಪೆನ್ಸರಿ’ ಇತ್ಯಾದಿ. ಕನ್ನಡ ಲಿಪಿಲಿ ಬರದ ಕಾರಣ ಅದು ಕನ್ನಡ ಶಬ್ದ ಹೇಳಿ ನಾವು ತಿಳ್ಕೊಳ್ಳೆಕ್ಕು! ಇದರ ಪ್ರತಿಭಟಿಸಿ ಸರಿ ಮಾಡ್ಸಲೆ ಕಾಸರಗೋಡಿನ ಕನ್ನಡಿಗರಿಂಗೆ ಎಡಿತ್ತಿಲ್ಲ್ಯ? ಹೋಗಲಿ, ಸರ್ಕಾರದವು ಮಾಡುವ ಅನರ್ಥಂಗಳ ಪಕ್ಕಕೆ ಸರಿ ಮಾಡ್ಲೆ ಎಡಿತ್ತಿಲ್ಲೆ ಹೇಳುದರ ಒಪ್ಪುವೊ- ಅಲ್ಲ್ಯಾಣ ಪತ್ರಿಕೆಗಳಲ್ಲಿ ಉಪಯೋಗುಸುವ ಭಾಷೆ ಹೇಂಗಿದ್ದು? ‘ಕಮಿಟಿ ರೂಪೀಕರಣ’ ‘ಸಾಮೂಹ್ಯ ವಿಕಸನ ಪದ್ಧತಿ’ ‘ದಾರಿದ್ರ್ಯ ನಿರ್ಮಾರ್ಜನ’.. ಹೀಂಗಿಪ್ಪ ಮಲಯಾಳಂ ಶಬ್ದಂಗಳ ಕನ್ನಡ ಲಿಪಿ ಉಪಯೋಗಿಸಿ ಪತ್ರಿಕೆಲಿ ಬರವದು ಬೇರಾರೂ ಅಲ್ಲ, ಕಾಸರಗೋಡಿನ ಕನ್ನಡಿಗರೇ. ಓದುದೂ ಅವ್ವೇ..! ಶುದ್ಧ ಕನ್ನಡಕ್ಕೆ ಕಾಸರಗೋಡಿಲ್ಲಿ ದಾರಿದ್ರ್ಯ ಇದ್ದು ಹೇಳಿ ಅಲ್ಲದೊ ಇದರ ಅರ್ಥ? ಭಾಷಾ ಶುದ್ಧಿ ಇಲ್ಲದ್ದೆ ‘ನಮ್ಮದು ಕನ್ನಡ ಭಾಷೆ’ ಹೇಳಿ ಹೇಳಿರೆ ಎಂತ ಸಾಧಿಸಿದಹಾಂಗೆ ಆತು?

          ಎನ್ನ ಪ್ರತಿಕ್ರಿಯೆಯ ಉದ್ದೇಶ ಕಾಸರಗೋಡನ್ನೋ ಅಲ್ಲ್ಯಾಣ ಕನ್ನಡಿಗರನ್ನೋ ತಾಪು ಮಾಡುದು ಹೇಳಿ ಆರುದೆ ಗ್ರೇಶಲಾಗ ಭಾವ..ಅಥವಾ ಕರ್ನಾಟಕಲ್ಲಿ ಕನ್ನಡ ಭಾರಿ ಚೆಂದಲ್ಲಿ ಇದ್ದು ಹೇಳುವ ಭಾವನೆಯೂ ಎನಗಿಲ್ಲೆ. ಆನು ಹುಟ್ಟಿ ಬಾಲ್ಯ ಕಳೆದ ಊರಿನ ಮೇಗೆ ಎನಗೆ ಈಗಳೂ ತುಂಬ ಅಭಿಮಾನ ಇದ್ದು. ಆದರೆ ಅಲ್ಲಿ ಈಗ ಕನ್ನಡ ಇಪ್ಪ ಅವಸ್ಥೆ ಜಾನ್ಸಿ ಸಂಕಟ ಸಂಕಟ ಆವ್ತು. ಕಾಸರಗೋಡಿನ ಕನ್ನಡಿಗರೆಲ್ಲ ಸೇರಿ ಭಾಷೆಗೆ ಕಾಯಕಲ್ಪ ಕೊಡುವ ಪ್ರಯತ್ನ ಮಾಡಿ. ನಿಂಗಳ ಬೆಂಬಲಕ್ಕೆ ನಾವಿದ್ದು.

          ಜನಗಣತಿಲಿ ನಮ್ಮ ಭಾಷೆ ‘ಹವಿಗನ್ನಡ’ ಹೇಳಿಯೇ ನೆಂಪಿಲ್ಲಿ ಹಾಕಿ

          1. ದೊಡ್ಡ ಭಾವನ ಒಪ್ಪ ನೋಡಿಯಪ್ಪಗಳೇ ಅವಂಗೆ ಇಂದು ರಜ ‘ಎಳಗಿದ್ದು’ ಹೇಳಿ ಎನಗೆ ಅಂದಾಜಿ ಆಯಿದು! ಹಾಂಗೆ ಇನ್ನೊಂದರಿ ಬಾಯಿಗೆ ಕೋಲು ಹಾಕುವೊ ಹೇಳಿ ಕಂಡತ್ತು.. ಹೆ ಹೆ ಹೆ..!! ನೋಡುವೊ, ಇದಕ್ಕೆ ಬೆಶಿ ಬೆಶಿ ಒಪ್ಪ ಕೊಡದ್ದೆ ಇರ ಅವ 😉

            (ಮಾಂತ್ರ ಆನು ಹೇಳಿದ ಸಂಗತಿಯೆಲ್ಲ ಕುಶಾಲಲ್ಲ ಮಿನಿಯ.. ಹ್ಞಾ..)

          2. ಬೆಂಗ್ಳೂರಿನ ಕನ್ನಡಲ್ಲಿ ಇಂಗ್ಲೀಷು ತುಂಬಿದ್ದು, ಕಾಸರಗೋಡಿಲ್ಲಿ ಮಲಯಾಳ…ಅಷ್ಟೆ ! ಅದರಲ್ಲಿ ಬೇಜಾರು ಮಾಡುವದು ಎಂತ ಇದ್ದು ?
            ಇಂದು ಕೇರಳ ಉಚ್ಛ ನ್ಯಾಯಾಲಯ ತೀರ್ಪು ಕೊಟ್ಟಿದು. ಕೇರಳದ ಎಲ್ಲಾ ಶಾಲೆಗಳಲ್ಲಿಯೂ ಮಲಯಾಳ ಕಡ್ಡಾಯ ಮಾಡೆಕ್ಕಡ ಅಷ್ಟೆ ! ಅದರಲ್ಲಿ ಎಂತ ಅಪ್ಪಲೆ ಇದ್ದು ?
            ನಾಳಂಗೆ ಜನಗಣತಿ ವರದಿಯ ಕೋರ್ಟು ತರುಸಿ ನೋಡುತ್ತು.
            ಕಾಸರಗೋಡಿಲ್ಲಿ ಇಪ್ಪ ಶಿವಳ್ಳಿ, ಸ್ಥಾನಿಕಂಗೊ ತುಳು…
            ಕರ್ಹಾಡಸ್ಥರು ಕರಾಡ,
            ಬಂಟ್ರು, ಮೂಲ್ಯಂಗೊ ತುಳು…
            ಸಾರಸ್ವತರು ಕೊಂಕಣಿ,
            ಮುಖಾರಿ, ಮಣಿಯಾಣಿಗೊ ಮಲಯಾಳ.. ಹೇಳಿ ಮಾತೃಭಾಷೆ ಬರೆಶಿದ್ಸರ ನೋಡ್ತು.
            ಕಾಸರಗೋಡಿಲ್ಲಿ ಕನ್ನಡವೇ ಇಲ್ಲೆ, ಹೇಳ್ತು… ಅಷ್ಟೆ ಅದರಲ್ಲಿ ಎಂತ ಅಪ್ಪಲೆ ಇದ್ದು…?
            ಕನ್ನಡ ಮಾಧ್ಯಮ ಶಾಲೆಗಳೇ ಬೇಡ ಹೇಳುಗು ಸರ್ಕಾರ, ಅಷ್ಟೆ…
            ಮತ್ತೆ ದೂರು ಹಾಕಿರೆ ಸುಲಾಭಲ್ಲಿ ಮುಗಾತನ್ನೆ..
            ಕಾಸರಗೋಡಿನ ಕನ್ನಡಿಗರು ಕನ್ನಡವ ಒಳುಶಿದ್ದವಿಲ್ಲೆ…!
            ಅಷ್ಟೆ…
            ಜಾತಿ ಹವ್ಯಕ ಹೇಳ್ಸರಲ್ಲಿ ಅಭಿಮಾನ ಇದ್ದು ನವಗೆ,
            ಬ್ರಾಹ್ಮಣ್ಯವ ಹೇಂಗೆ ಒಳುಶಿಗೊಳ್ತಾ ಇದ್ದು ನಾವು…?
            ಬೆಂಗ್ಳೂರು ಕನ್ನಡದ್ದು ಹೇಳ್ತು ನಾವು,
            ಬೆಂಗ್ಳೂರು ಕನ್ನಡದ ಶುದ್ಧತೆ ಒಳಿಶಿಗೊಂಬಲೆ ಎಡಿತ್ತಾ ಇದ್ದಾ ?
            ಪಶ್ಚಿಮ ಘಟ್ಟ ನಮ್ಮದು ಹೇಳ್ತು ನಾವು,
            ಮಲಯಾಳಿಗೊ ಬಂದು ಕಾಡು ಕಡುದು ರಬ್ಬರ್ ಹಾಕುಸ್ಸರ ತಡವಲೆ ಎಡಿತ್ತಾ ಇದ್ದಾ?

            ಹಾಂಗೆಯೇ…
            ಕಾಸರಗೋಡು ಅಷ್ಟೆ…!

      2. ನಮಸ್ಕಾರ!
        ಮತ್ತೆಂತ ವಿಶೇಷ ಒಪ್ಪಣ್ಣಾ…

        ಗೋಪಾಲಣ್ಣನ ಮಾತಿಲಿಪ್ಪ ಕಳಕಳಿಯ ಆನು ಅಭಿನಂದುಸುತ್ತೆ.

        ಗುರಿಕ್ಕಾರಣ್ಣ
        ಇದೇ ರೀತಿಯ ಒಂದು ಕಾರಣ ಏವದು ಹೇಳಿ ನಿಂಗಳ ಮಾತಿಲಿ ಗೊಂತಾಯಿದಿಲ್ಲೆ.

        ಸುಭಗಣ್ಣ
        ಹಾಂಗಾರೆ ಕುಂದಾಪುರದವು ‘ಕುಂದಗನ್ನಡ’ ಹೇಳಿ ಕೊಡೆಕ್ಕೋ?
        ‘ಹವಿಗನ್ನಡ’ ಹೇಳಿ ಕನ್ನಡದ ಬೀಲ ಸೇರ್ಸುತ್ತರೆ ‘ಕನ್ನಡ’ ಹೇಳ್ಲೆ ಎಂತ ಅಡ್ಡಿ?
        ವ್ಯಾವಹಾರಿಕವಾಗಿ ನಮ್ಮ ಭಾಷೆ ಕನ್ನಡ ಹೇಳುದರ ಒಪ್ಪಲೆ ತೊಂದರೆ ಇಲ್ಲದ್ದರೆ ಮಾತೃ ಭಾಷೆ ‘ಕನ್ನಡ’ ಹೇಳ್ಲೆ ಎಂತ ತೊಂದರೆ?
        ಕನ್ನಡವ ಒಳುಶುತ್ತ ಬೆಳಶುತ್ತ ಉಮೇದು ಈಗ ಬಂದದಲ್ಲ.
        ನಿಂಗಳ ಅಭಿಪ್ರಾಯಲ್ಲಿ ನಮ್ಮ ಭಾಷೆಯ ಅಸ್ತಿತ್ತ್ವವ ಅಧಿಕೃತ ದಾಖಲೆಗೆ ತಂದರೆ ಅಪ್ಪಲಿಪ್ಪ ಉಪಯೋಗ ಎಂತರ?

        “ಕನ್ನಡದ ಅನೇಕ ಪ್ರಬೇಧಗಳಲ್ಲಿ ಒಂದಾದ ಹವಿಗನ್ನಡ” ಹೇಳಿಯೇ ದಾಖಲಪ್ಪಗ ನಮ್ಮ ಭಾಷೆಯ ವಿಚಾರ ರಿಕಾರ್ಡಿಲ್ಲಿ ಎಲ್ಲಿ ಸಿಕ್ಕುಗು? ನಿಂಗಳ ಮಾತಿಲಿ ವಿರೋಧಾಭಾಸ ಎದ್ದು ಕಾಣ್ತು.

        ಕಾಸರಗೋಡಿನ ಮಟ್ಟಿಂಗೆ “ಕನ್ನಡ ಮಾತೃಭಾಷೆಯವರೆಂದರೆ ಅಧಿಕೃತವಾಗಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಪೂರೈಸಿರುವವರು” ಹೇಳಿ ಒಂದು ಸಾಮಾನ್ಯ ತಿಳುವಳಿಕೆ. ಅದರ ಅರ್ಥ “ಅಧಿಕೃತವಾಗಿ ಶಾಲೆಯಲ್ಲಿ ಮಲೆಯಾಳ ಮಾಧ್ಯಮದಲ್ಲಿ ಅಧ್ಯಯನ ಪೂರೈಸಿರುವವರು
        ಮಲೆಯಾಳ ಮಾತೃಭಾಷೆಯವರು” ಹೇಳಿಯೂ ಆವುತ್ತು. ಇಲ್ಲಿ ಕನ್ನಡ ಇಷ್ಟರವರೆಗೆ ‘ಭಾಷಾ ಅಲ್ಪಸಂಖ್ಯಾತ’ ವಿಭಾಗಲ್ಲಿ ಇದ್ದದು. ಎಲ್ಲೋರುದೇ ಅವರವರ ಮನೆಭಾಷೆಯನ್ನೇ ಬರದರೆ ಆ ಸ್ಥಾನ ಸಿಕ್ಕುಗು ಹೇಳಿ ಹೇಳ್ಲೆ ಎಡಿಯ.

        [ಕಾಸರಗೋಡಿನ ಈಗಾಣ ಕನ್ನಡಕ್ಕೆ ಭಾಷಾ ಶುದ್ಧಿ ಇಲ್ಲೆ] ಹಾಂಗೆ ಹೇಳ್ತವು “ಭಾಷಾ ಶುದ್ಧಿ” ಹೇಳಿ ಬಿಡುಸಿ ಬರದ್ದು ಎಂತಕೆ?
        ‘ವಿಲೇಜ್ ಓಫೀಸು’ ‘ಗವ.ಡಿಸ್ಪೆನ್ಸರಿ’ ಹಾಂಗೆಲ್ಲ ಇಕ್ಕು. ‘ಆರಕ್ಷಕ ಠಾಣೆ’, ‘ಅಭಿಯಂತರರವರ ಕಛೇರಿ’, ‘ದಂಡಾಧಿಕಾರಿಯವರ ಕಛೇರಿ’… ಹಾಂಗುದೇ ಇಕ್ಕು. ದಂಡ ಹಾಕುವ ಅಧಿಕಾರಿ…

        [ಅಲ್ಲಿ ಈಗ ಕನ್ನಡ ಇಪ್ಪ ಅವಸ್ಥೆ ಜಾನ್ಸಿ ಸಂಕಟ ಸಂಕಟ ಆವ್ತು.] ನಿಂಗೊ ಹೇಳಿದ್ದು ನಿಜವೇ ಆದರೂ ರಜ್ಜ ಯೋಚನೆ ಮಾಡ್ತರೆ ಈ ಸಂದರ್ಭಲ್ಲಿ ಹೇಳೆಕ್ಕಾದ್ದು ಅಲ್ಲದೋ ಹೇಳಿ ತೋರುತ್ತು. “ಕನ್ನಡದ ಬದಲು ‘ಹವಿಗನ್ನಡ’ ಹೇಳಿ, ನಿಂಗಳ ಕನ್ನಡವ ನಿಂಗೊ ಮದಾಲು ‘ಸರಿ’ ಮಾಡಿಗೊಳ್ಳಿ” ಹೇಳುವ ಹಾಂಗಿದ್ದು.
        ಇನ್ನೊಂದು ಮಾತು, ಮೋರೆ ನೋಡಿ ಹೇಳಿರೆ ಬೇಜಾರ ಅಕ್ಕು. ಕರ್ಣಾಟಕಲ್ಲಿ ಕೆಲವು ಜನಕ್ಕೆ ಕೇರಳದ ಗಡಿ ದಾಂಟಿ ಬಂದವೆಲ್ಲ ಮಲೆಯಾಳಿಗೊ ಹೇಳಿಯೇ ಲೆಕ್ಕ. ಕಾಸರಗೋಡಿಲಿ ಇಪ್ಪಗ ಮಲೆಯಾಳದ ಪ್ರಭಾವ ಇಲ್ಲದ್ದೆ ಇರ. ಪುತ್ತೂರಿಲಿ ಇಪ್ಪಗ ತುಳುವಿನ ಪ್ರಭಾವವೂ ಇಲ್ಲದ್ದೆ ಇರ. ಬೆಂಗಳೂರಿಲಿ ಇಪ್ಪಗ ತಮಿಳಿನ ಪ್ರಭಾವವೂ ಇಲ್ಲದ್ದೆ ಇರ. ಆದರೆ ಈ ಮೂರರಲ್ಲಿ ಬೆಂಗಳೂರು (ಅಧಿಕೃತವಾಗಿ) ಕನ್ನಡನಾಡಿಲೇ ಇಪ್ಪದು ವಿಪರ್ಯಾಸ. ಟಿವಿ ಚಾನಲುಗಳಲ್ಲಿ ‘ಏನು… ಏನು…’ ಹೇಳಿ ವಾಕ್ಯಕ್ಕೊಂದು ‘ಏನು’ ಸೇರ್ಸುತ್ತದರೆ ತಪ್ಪುಸಲೆ ಆರಿಂಗೆ ಎಡಿಗಾಯಿದು?

        ಕೇಶಿರಾಜ ಹೇಳಿದ್ದು ನೋಡಿ: ಆವನಧಿಕಪುಣ್ಯನವನೇ ಸೇವ್ಯಂ – ಇದು ಸಂಸ್ಕೃತಾನುಕರಣೆಯ ವಾಕ್ಯ ಹೇಳಿಗೊಂಡು.
        ಬಿಡುಸಿ ಬರದರೆ ಹೀಂಗಾವುತ್ತು. ಆವನ್+ಅಧಿಕ+ಪುಣ್ಯನ್+ಅವನೇ+ಸೇವ್ಯಂ
        ‘ಯಾವನು ಗೆಯ್ವನೋ ಅವನು ಉಣ್ಣುವನು’
        ಸಂಸ್ಕೃತಾನುಕರಣೆ ಮಾಡ್ಲಾಗ ಹೇಳಿ ಕೇಶಿರಾಜ ಉದಾಹರಣೆ ಕೊಟ್ಟದು. ಸಂಸ್ಕೃತದ ಶಬ್ದಂಗಳ ಉಪಯೋಗ್ಸಲಾಗ ಹೇಳಿ ಅಲ್ಲ, ‘ಸಂಸ್ಕೃತದ ಸಂರಚನೆಗೆ ತಕ್ಕ ಹಾಂಗೆ ಕನ್ನಡಲ್ಲಿ ವಾಕ್ಯಗಳ ಕಟ್ಟುಲಾಗ’ ಹೇಳಿ ಕೇಶಿರಾಜನ ಅಭಿಮತ. ಈಗಾಣ ಟಿವಿ ಚಾನಲುಗಳಲ್ಲಿ ಅಪ್ಪದು ಹಿಂದಿಯ ಅನುಕರಣೆ. ‘ಭಾಷೆ ಸಂತಿಗೆ ಭಾವನೂ ಬರವು’ ಹೇಳಿ ಕಾಂತಣ್ಣ ಹೇಳಿದವು.

        [ಕುಂಬ್ಳೆ ಸುಂದರ್ರಾಯ] ಹಾಂಗೆ ಬರದರೆ ಕರ್ಕಶ ಆವುತ್ತು. ಸರಿಯಾಗಿ ಬರೆತ್ತರೆ ‘ಸುಂದರರಾಯ’ ಹೇಳಿ ಬರೆಯೆಕ್ಕು.
        [ಆನು ಹುಟ್ಟಿ ಬಾಲ್ಯ ಕಳೆದ ಊರಿನ] ಈ ಮಾತಿನ ಶೈಲಿಂದಲೇ ಗೊಂತಾತು, ನಿಂಗೊ ಹುಟ್ಟಿ ಬೆಳದ ಊರು ಯಾವದು ಹೇಳ್ತ ವಿಷಯ.

        ದೊಡ್ಡಭಾವ° ಹೇಳಿದ್ದರೆ ಬಗ್ಗೆ ಇನ್ನೊಂದಾರಿ ಯೋಚನೆ ಮಾಡಿ. ಈಗಳೇ ಶಾಲೆಗಳಲ್ಲಿ ಮಲೆಯಾಳ ಕಡ್ಡಾಯ ಹೇಳಿ ಮಾಡ್ಲೆ ಎಲ್ಲಾ ವೆವಸ್ತೆಗಳೂ ಆಯಿದು.

    3. Havyaka kannadada ondu aadu bhashe (Dialect).

      Ningo heliddu sari. Mathru bhashe heluvaga navu Havyaka heli baradare thondare akko heli kanthu.

    4. ಈ ವಿಷಯಲ್ಲಿ ಸುರೂವಿಂಗೆ ಒಪ್ಪ ಕೊಟ್ಟ ಗೋಪಾಲಣ್ಣನ ಅಭಿಪ್ರಾಯವೇ ಎನ್ನದು ಕೂಡ. ಕನ್ನಡ ಶಾಲೆಗಳ ಮಲೆಯಾಳೀಕರಣ ಮಾಡಲೆ ಬೇಕಾದ ಎಲ್ಲ ವೆವಸ್ಥೆಗೊ ಆವುತ್ತಾ ಇದ್ದು ಹೇಳಿ ಬೊಳುಂಬು ಭಾವನೂ ಹೇಳ್ತಾ ಇದ್ದವು. ಅದು ವಿಷಯ ಅಪ್ಪು. ನಿಂಗೊಗೆ ಕರ್ನಾಟಕಕ್ಕೆ ಸೇರಿದವಕ್ಕೆ ಈ ವಿಷಯದ ತೀವ್ರತೆ ಅರ್ಥ ಆಗದ್ದೆ ಇಪ್ಪದೂ ಇದಕ್ಕೆ ಕಾರಣ ಆಗಿಕ್ಕು. ಎಂಗೊ ಕೇರಳಕ್ಕೆ ಸೇರಿ ಹೋಗಿ ಈಗ ಕೆಲಾವು ವಿಷಯಲ್ಲಿ ಕಷ್ಟ ಅನುಭವಿಸುತ್ತಾ ಇದ್ದೆಯೊ. ಇನ್ನೂ ಕನ್ನಡ, ತುಳು ಹೇಳಿ ವಿಭಜನೆ ಆವುತ್ತಾ ಹೋದರೆ ಇಲ್ಲಿ (ಕಾಸರಗೋಡಿಲ್ಲಿ, ಕುಂಬ್ಳೆ ಸೀಮೆಲಿ) ನಾವು ಮಲಯಾಳಿಗಳ ದರ್ಪಕ್ಕೆ ಬಗ್ಗೆಕಾಗಿ ಬಕ್ಕು. ತುಳು ಅಕಾಡೆಮಿಯ ಸ್ಥಾಪನೆ ಈ ಮಲಯಾಳೀಕರಣದ ಒಂದು ಟರ್ನಿಂಗ್ ಪಾಯಿಂಟ್. ಈಗ ತುಳು ಮಾತಾಡ್ತ ಮನುಷ್ಯರು ಎಲ್ಲ ತುಳು ಮಾತೃಭಾಷೆ ಹೇಳಿ ಬರೆಯೆಕ್ಕು ಹೇಳಿ ಧರ್ಮಸ್ಥಳದ ಹೆಗ್ಗಡೆ ಕೂಡ ಪತ್ರಿಕೆಗಳಲ್ಲಿ ಪ್ರಚಾರ ಕೊಟ್ಟಿದ°. ಇದು ಕರ್ನಾಟಕದ ಮಟ್ಟಿಂಗೆ ಸರಿ ಆಗಿಕ್ಕು. ಆದರೆ ಕೇರಳಕ್ಕೆ ಸೇರಿ ಹೋದ ಕಾಸರಗೋಡಿಲ್ಲಿ ಕನ್ನಡಕ್ಕೇ ಜೈ…

      ಮತ್ತೊಂದು ವಿಷಯ. ನಾವು ನೂಲು ಹಾಕಿದವಕ್ಕೆ ಆರಾದರೂ ಎಂದಾದರೂ ಯಾವುದಾದರೂ ಮೀಸಲಾತಿ ಕೊಡುಗು ಹೇಳಿ ನಿಂಗೊ ಗ್ರೇಶುತ್ತಿರೋ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×