ನಾಲಗೆ ತೆರಿಚ್ಚಕ

ನಾಲಗೆ ಮನುಷ್ಯನ ವಿಶೇಷ.
ನಾಲಗೆ ಹರಿತ ಮಾಡುಲೆ, ಉಚ್ಚಾರ ಸರಿ ಬಪ್ಪಲೆ ಮಕ್ಕೊಗೆ ಬಜೆ ತಿನ್ನಿಸುತ್ತವು.
ಪಾಠವನ್ನೇ ಆಗಲಿ, ಪದ್ಯವನ್ನೇ ಆಗಲಿ ಮಕ್ಕೊ ರಾಗವಾಗಿ ಸ್ಪಷ್ಟವಾಗಿ ಓದೆಕ್ಕು, ಮಗ್ಗಿ ಬಾಯಿಪಾಠ ಮಾಡೆಕ್ಕು- ಹಾಂಗಾರೆ ಮಾತ್ರ ಮಕ್ಕೊ ಹುಶಾರಿ- ಇದು ಮೊದಲಾಣವರ ಲೆಕ್ಕ.
ಪಾಠಕ ಆಗಿಪ್ಪವಂಗೆ ಬೇಕಾದ ಅರ್ಹತೆಗೊ-ಸ್ವರದ/ಓದಿನ ಧಾಟಿಲಿ ಮಾಧುರ್ಯ, ಅಕ್ಷರಂಗಳ ಸರಿಯಾದ ಸ್ವರೂಪ/ ಉಚ್ಚಾರದ ಬಗ್ಗೆ ತಿಳಿವಳಿಕೆ, ಶಬ್ದವ ಎಲ್ಲಿ ತುಂಡು ಮಾಡೆಕ್ಕು ಹೇಳಿ ಗೊಂತಿಪ್ಪದು, ಒಳ್ಳೆ ದನಿ[ಕಂಠ], ಧೈರ್ಯ, ಒಂದೇ ಲಯವ ಕಾಪಾಡಿಕೊಂಬ ಸಾಮರ್ಥ್ಯ.

[ಮಾಧುರ್ಯಮಕ್ಷರವ್ಯಕ್ತಿಃ ಪದಚ್ಛೇದಸ್ತು ಸುಸ್ವರಃ ಧೈರ್ಯಂ ಚ ಲಯಸಾಮರ್ಥ್ಯಂ ಷಡೇತೇ ಪಾಠಕಾಃ ಗುಣಾಃ]. ಮಕ್ಕಳ ಕೈಂದ ಪುಸ್ತಕಂಗಳ ಗಟ್ಟಿಯಾಗಿ ಓದಿಸುದು ಅತಿ ಅಗತ್ಯ.ಈಗಲೂ ಇದು ಅನುಕರಣೀಯವೇ.

ಮೊದಲು ನಾಲಗೆ ತೆರಿಚ್ಚಲೆ ಕೆಲವು ವಿನೋದವಾದ ವಾಕ್ಯಂಗಳ ಹೇಳುಗು.[ಟಂಗ್ ಟ್ವಿಸ್ಟರ್].

ಉದಾ-ಕುಂಟರಣೆ ಕುರುಡರಣೆ ಕೊಡದೊಳಗೆ ಎರಡರಣೆ..

ಹೀಂಗಿಪ್ಪ ವಾಕ್ಯಕ್ಕೆ ಆನು “ನಾಲಗೆ ತೆರಿಚ್ಚಕ” ಹೇಳಿದ್ದು.

ಬೈಲಿಲಿ ಆರಿಂಗಾರೂ ಇಂತ ವಾಕ್ಯ ನೆಂಪಿದ್ದರೆ ಬರೆತ್ತೀರೊ?

ಗೋಪಾಲಣ್ಣ

   

You may also like...

19 Responses

 1. jayalakshmi says:

  ಪೀಟರ್ ಪೈಪರ್ ಪಿಕ್‍ಡ್ ಎ ಪೆಕ್ ಆಫ್ ಪಿಕ್‍ಲ್‍ಡ್ ಪೆಪ್ಪರ್
  ಎ ಪೆಕ್ ಆಫ್ ಪಿಕ್‍ಲ್‍ಡ್ ಪೆಪ್ಪರ್ ಪೀಟರ್ ಪೈಪರ್ ಪಿಕ್‍ಡ್
  ಇಫ್ ಪೀಟರ್ ಪೈಪರ್ ಪಿಕ್‍ಡ್ ಎ ಪೆಕ್ ಆಫ್ ಪಿಕ್‍ಲ್‍ಡ್ ಪೆಪ್ಪರ್
  ವೇರ್ ಈಸ್ ದ ಪೆಕ್ ಆಫ್ ಪಿಕ್‍ಲ್‍ಡ್ ಪೆಪ್ಪರ್ ಪೀಟರ್ ಪೈಪರ್ ಪಿಕ್‍ಡ್?

  – ಕುಕ್ಕಿಲ ಜಯತ್ತೆ.

 2. ಗೋಪಾಲ ಬೊಳುಂಬು says:

  ನಾಲಗೆ ತಿರುಗುಸಲೆ ಒಳ್ಳೆ ಪದಂಗೊ. ಗೋಪಾಲಣ್ಣ ಸುರು ಮಾಡಿದ್ದಕ್ಕೆ, ಸುರು ಸುರು ಹೇಳಿ ಪದಂಗಳ ಸುರಿಮಳೆ ಬೈಲಿಲ್ಲಿ ಸೊರುಗಿತ್ತದ. ಸುರುಮಾಡಿದ ಗೋಪಾಲಣ್ಣಂಗೆ ಧನ್ಯವಾದಂಗೊ.

 3. ಆಚಕರೆ ಮಾಣಿ says:

  BETTY BOUGHT SOME BUTTER, THE BUTTER WAS BITTER. BETTY BOUGHT SOME BETTER BUTTER TO MAKE BITTER BUTTER BETTER BUTTER….

  • ಬೋಸ ಬಾವ says:

   ಏ ಮಾವ… ಈ BETTY ಹೇದರೆ ಆರು??
   ಬಟ್ಯ೦ಗೆ ಅರಡಿಗೋ?? 😛

   ಬೆಟ್ಟಿಯೋ?? ಅಲ್ಲ ಬೆರಟ್ಟಿಯೊ?

   • ಸುಮನ ಭಟ್ ಸಂಕಹಿತ್ಲು. says:

    ಹಹ್ಹಹ್ಹಾ…. ಬೆಟ್ಟೀ ಹೇದರೆ ಬಟ್ಯಂಗೆ ಅರಡಿಗೋ? ಹೇಳಿ ಬೋಸ ಭಾವ ಬರದ್ದು ಓದಿ ನೆಗೆ ಬಂತು.

 4. ಹೋ, ಶುದ್ದಿ ಮೊನ್ನೆಯೇ ಓದಿದ್ದೆ. ನಾಲಗೆ ತೆರಚ್ಚದ್ದೆ ಒಪ್ಪಕೊಡ್ಳೆ ಬಾಕಿ ಆದ್ದು.

  ಪರಡಿ ಪರಡಿ ಹರಡಿ ಮಡಗಿದ ಎನ್ನದೊಂದೆರಡು:

  ಹೆಬಗ ಗಬಗಬನೆ ತಿಂಬಗ ಭಗಭಗನೆ ಪಿಸರಿಲಿ ಸುಭಗ ಬೈಗು!
  ಬರೆಕರೆಲಿ ಅರಳಿದ ಸುರುಳಿ ಸುಳುದರೆ ತಲೆಸೆಳಿಗು.

  • jayalakshmi says:

   ನೆಗೆಗಾರ ಹರಡಿ ಹರಡಿ ಮಡುಗಿದೆರಡು ಹರಗಣ ಕಂಡು ಎನ್ನ ತಲೆ ಗರಗರನೆ ತಿರುಗಿತ್ತು.

   – ಕುಕ್ಕಿಲ ಜಯತ್ತೆ.

 5. ಶ್ರೀಶ says:

  ಕನ್ನಡದ್ದು ಅಕ್ಕೊ?

 6. ಶ್ರೀಶ says:

  ಅಬ್ಬ!ಇದರೆಲ್ಲ ನೋಡುವಗ ಮಂಡೆಬೆಶಿ ಆವ್ತು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *