“ನಮ್ಮ ಭಾಷೆ” ಬಗ್ಗೆ

ನಾಕೈದು ತಿಂಗಳ ಹಿಂದೆ ಪೇಪರ್ಲಿ ಬಂದ ಒಂದು ಶುದ್ದಿ ಎಂತರ ಹೇಳಿ ಕೇಳಿರೆ, ಬೋ ಹೇಳುವ ಭಾಷೆ ಮಾತಾಡಿಗೊಂಡಿದ್ದ ಅಕೇರಿಯಾಣ ಬೋವ ಹೇಳುವ ಹೆಸರಿನ ಅಜ್ಜಿ ತೀರಿ ಹೋತು ಹೇಳಿ. ಅದು ಅಂಡಮಾನಿಲಿ ಇತ್ತಡ. ಹೀಂಗೆ ಕೆಲವು ಭಾಷೆಗೊ ನಿಧಾನಕ್ಕೆ ಸತ್ತೇ ಹೋಕು ಹೇಳಿ ಕೆಲವು ಜನಂಗಳ ಆತಂಕ.

ಅಜಕ್ಕಳ ಮಾಷ್ಟ್ರಣ್ಣನ ತಾಪತ್ರೆಗಳ ಎಡೇಲಿ ಬರವಲೇ ಆತಿಲ್ಲೆ.( ಒಂದು ಮಾತಿದ್ದು- ವಿಷ್ಣು ದೇವರಿಂಗೆ ತುಳಸಿ ಪತ್ರೆ, ಶಿವದೇವರಿಂಗೆ ಬಿಲ್ವಪತ್ರೆ, ಮನುಷ್ಯರಿಂಗೆ ತಾಪತ್ರೆ ಹೇಳಿ-). ಕಳೆದ ಸರ್ತಿ ಆನು ಭಾಷೆ ಬಗ್ಗೆ ಒಂದು ಸೆಮಿನಾರಿಂಗೆ ಡೆಲ್ಲಿಗೆ ಹೋದ ಬಗ್ಗೆ ಹೇಳಿತ್ತಿದ್ದೆ. ಅಲ್ಲಿ ಅಲ್ಪಸಂಖ್ಯಾತ ವಿಷಯಂಗಳ ಮಂತ್ರಿ ಸಲ್ಮಾನ್ ಖುರ್ಶಿದ್ , ಅಲ್ಪಸಂಖ್ಯಾತ ಭಾಷೆಗಳ ಇಲಾಖೆ ಕಮಿಶನರ್ ಎಲ್ಲ ಬಂದಿತ್ತಿದ್ದವು. ಆನು ಹವಿಕ ಭಾಷೆ ಬಗ್ಗೆ ಒಂದು ಪತ್ರ ಕೊಟ್ತೆ ಅವಕ್ಕೆ. ಹಾಂಗಿದ್ದ ಕಾಗತಂಗಳ ಅವು ಬಲದ ಕೈಲಿ ತೆಕ್ಕೊಂಡು ಎಡದ ಕೈಲಿ ಅವರ ಅಪ್ತ ಸಹಾಯಕಂಗೊಕ್ಕೆ ಕೊಡ್ತೊವು . ಅದರ ಬಗ್ಗೆ ವಿಶೇಷವಾಗಿ ಆಲೋಚನೆ ಮಾಡ್ತವು ಹೇಳಿ ಹೇಳ್ಳಾವುತ್ತಿಲ್ಲೆ. ಹಾಂಗಾಗಿ ಆನು ಇಲ್ಲಿಗೆ ಬಂದ ಮೇಲೆ ಮನ್ನೆ ಪುನ ಒಂದು ದೀರ್ಘ ಪತ್ರ ಹಾಕಿದ್ದೆ. ಅದರ್ಲಿ ಬರದ ವಿಷಯಂಗೊ ಸಂಕ್ಷಿಪ್ತವಾಗಿ ಹೇಳುದಾದರೆ ಹೀಂಗಿದ್ದು.

ಹವ್ಯಕ ಭಾಷೆ ಕರ್ನಾಟಕದ ಕರಾವಳಿಲಿ ಮುಖ್ಯವಾಗಿ ಹರಡಿಗೊಂಡಿದ್ದು. ಅದರ ತುಂಬ ಜನ ಹವ್ಯಕ ಕನ್ನಡ ಹೇಳಿ ಹೇಳುತ್ತವು . ಇದು ಚರ್ಚಾರ್ಹ ವಿಚಾರ. ಯಾವುದೇ ಭಾಷೆಯ ಅಧ್ಯಯನ ಮಾಡುವಗ ಎರಡು ನೆಲೆಗಳಲ್ಲಿ ಮಾಡುವ ಕ್ರಮ ಇದ್ದು. ಒಂದು- ರಾಚನಿಕ, ಇನ್ನೊಂದು- ಸಾಮಾಜಿಕ ನೆಲೆ.ರಾಚನಿಕವಾಗಿ ನೋಡಿದರೆ, ಹವಿಕ ಭಾಷೆ ದ್ರಾವಿಡ ಕುಟುಂಬಕ್ಕೆ ಸೇರಿದ್ದು. ಆದರೆ ದ್ರಾವಿಡ ಭಾಷೆ ಬಗ್ಗೆ ಇಪ್ಪ ಪುಸ್ತಕಂಗೊ ಇದರ ” ಕನ್ನಡದ ಒಂದು ಉಪಭಾಷೆ” ಹೇಳಿ ಉಪೇಕ್ಷೆ ಮಾಡುತ್ತವು.

ಡಾ.ಡಿ.ಎನ್.ಶಂಕರ ಭಟ್ಟ್ರು ಹವಿಕ ಭಾಷೆಗೆ ಒಂದು ಗ್ರಾಮ್ಮಾರ್ ಪುಸ್ತಕ ಬರದ್ದವು. ಹಾಂಗಾಗಿ ರಾಚನಿಕವಾಗಿ ಇದು ಕನ್ನಡಂದ ಬೇರೆ ಹೇಳಿ ಗೊಂತಾವುತ್ತು. ಬೇರೆ ಅಲ್ಲದ್ರೆ ಇದಕ್ಕೆ ಬೇರೆ ಗ್ರಾಮ್ಮರ್ ಎಂತಕೆ? ( ಶಂಕರ ಭಟ್ರ ಇತ್ತೀಚಿನ ಕೆಲವು ವಾದಂಗಳ ಬಗ್ಗೆ ಎನ್ನ ಆಕ್ಷೇಪ ಇದ್ದು. ” ಕನ್ನಡಕ್ಕೇಕೆ ಶಂಕರ ಬಟ್ಟರ ಕತ್ತರಿ? ” ಹೇಳುವ ಎನ್ನ ಇತ್ತೀಚಿನ ಪುಸ್ತಕಲ್ಲಿ ಅದರ ವಿವರವಾಗಿ ಬರದ್ದೆ).ಕನ್ನಡಕ್ಕೂ ಹವ್ಯಕಕ್ಕೂ ಇಪ್ಪ ಕೆಲವು ವ್ಯತ್ಯಾಸಂಗೊ ಹೀಂಗಿದ್ದು.-

(೧) ಹವ್ಯಕಲ್ಲಿ ವ್ಯಕ್ತಿಗಳ ಹೆಸರಿನ ಅಕೇರಿಗೆ ಅನುನಾಸಿಕ ಉಚ್ಚಾರ ಇದ್ದು.ಕ್ರಿಯಾಪದದ ಅಕೇರಿಗೂ ಬತ್ತು.

(೨) ಹವ್ಯಕಲ್ಲಿ ಮುಖ್ಯವಾಗಿ ಎರಡೇ ಲಿಂಗ ಇಪ್ಪದು.

(೩) ಉತ್ತಮ ಪುರುಷಲ್ಲಿ ಸಮಾವೇಶಕ ,ಅಸಮಾವೇಶಕ ಹೇಳಿ ಎರಡು ಹವ್ಯಕಲ್ಲಿ ಇದ್ದು. (ನಾವು,ಎಂಗೊ)

(೪) ಹಿರಿಯ ಹೆಮ್ಮಕ್ಕಳ ಬಗ್ಗೆ ಹೇಳುವಗ ಅನುನಾಸಿಕವಲ್ಲದ ಪುಲ್ಲಿಂಗದ ರೀತಿಲಿ ಹೇಳುವ ಕ್ರಮ ಇದ್ದು.(ಅಬ್ಬೆ ಬಂದ, ಅಜ್ಜಿ ಬಂದ)

ಸಾಮಾಜಿಕ ನೆಲೆಲಿ ನೋಡಿದರೆ ,

(೧) ಹವ್ಯಕ ಭಾಷೆಯ ಮಾತಾಡುದು ಹವ್ಯಕ ಹೇಳುವ ಒಂದು ಪ್ರತ್ಯೇಕ ಸಾಮಾಜಿಕ ಗುಂಪು. ಅದು ಆ ಗುಂಪಿನ ಐಡೆಂಟಿಟಿ.

(೨) ಹವ್ಯಕರು ಆ ಭಾಷೆಯ “ಹವ್ಯಕ ಭಾಷೆ ” ಅಥವಾ “ನಮ್ಮ ಭಾಷೆ” ಇತ್ಯಾದಿಯಾಗಿ ಹೇಳ್ತವು ಹೊರತು( ಪಂಜ ಹೊಡೆಲಿ “ಹೋಪದು ಬಪ್ಪದು ಭಾಷೆ” ಹೇಳಿ ಹೇಳುದು ಕೇಳಿದ್ದೆ) “ಹವ್ಯಕ ಕನ್ನಡ” ಹೇಳಿ ಹೇಳುತ್ತವಿಲ್ಲೆ. ಹವ್ಯಕ ಕನ್ನಡ ಹೇಳಿದ್ದು ಭಾಷಾವಿಜ್ಞಾನಿಗೊ ಮಾಂತ್ರ. ಅವಕ್ಕೆ ಭಾಷೆಯ ಸಾಮಾಜಿಕ ಆಸ್ಪೆಕ್ಟ್ ಗೊಂತಿಲ್ಲೆ.

(೨) ಹವ್ಯಕ ಭಾಷೆ ಮತ್ತೆ ಕನ್ನಡದ ನಡುಕೆ ಕೊಡ್ ಸ್ವಿಚ್ಚಿಂಗ್ ಮತ್ತೆ ಕೋಡ್ ಮಿಕ್ಸಿಂಗ್ ಆವುತ್ತು. ಈ ಪ್ರಕ್ರಿಯೆಗೊ ಪ್ರತ್ಯೇಕ ಐಡೆಂಟಿಟಿ ಇಪ್ಪ ಭಾಷೆಗಳ ಮಧ್ಯೆ ಮಾಂತ್ರ ಸಾಮಾನ್ಯವಾಗಿ ನಡವದು. ಕೋಡ್ ಸ್ವಿಚ್ಚಿಂಗ್ ಹೇಳಿರೆ ಮಾತಿನ ನಡುಕೆ ಭಾಷೆ ಬದಲುಸುದು ಬೇರೆ ಆರಾರು ಬಂದಪ್ಪಗ ಇತ್ಯಾದಿ. ಕೋಡ್ ಮಿಕ್ಸಿಂಗ್ ಹೇಳಿರೆ ಹವ್ಯಕ ಮಾತಾಡುವಗ ಎಡೆಡೇಲಿ ಕನ್ನಡ ಶಬ್ದಂಗಳ ಹಾಕುದು.

(೩) ಹವ್ಯಕ ಭಾಷೆಲಿ ಬೇಕಾದಷ್ಟು ಸಾಹಿತ್ಯ ಇದ್ದು. ಕನ್ನಡದ ಮದಲಾಣ ನಾಟಕ ಹೇಳಿ ಪ್ರಚಾರಲ್ಲಿಪ್ಪ “ಇಗ್ಗಪ್ಪ ಹೆಗ್ಗಡೆ ವಿವಾಹ ಪ್ರಹಸನ” ಹವ್ಯಕ ಭಾಷೆಲಿ ಇಪ್ಪದು. ಈಗ ಕತೆ , ಕಾದಂಬರಿ, ಕವನ ಎಲ್ಲ ಬತ್ತಾ ಇದ್ದು. (ಒಪ್ಪಣ್ಣ ಡೋಟ್ ಕಾಮ್ ವೆಬ್ ಸೈಟ್ ಇದ್ದು ಹೇಳಿ ಕೂಡ ಮೆನ್ಶನ್ ಮಾಡಿದ್ದೆ.)

(೪) ಹವ್ಯಕಲ್ಲಿ ಬೇಕಾದಷ್ಟು ಜನಪದ ಸಹಿತ್ಯ ಇದ್ದು.

ಮೇಲಾಣ ಇಡೀ ಮಾತಿನ ಸಾರಾಂಶ ಎಂತದು ಹೇಳಿರೆ ಹವ್ಯಕ ಭಾಷೆಗೆ ಒಂದು ಪ್ರತ್ಯೇಕ ಅಸ್ತಿತ್ವ ಇದ್ದು ಹೇಳುದು . ಹಾಂಗಾಗಿ ಆನು ಕೊಟ್ಟ ಮನವಿಲಿ ಹವ್ಯಕವ ಒಂದು ಪ್ರತ್ಯೇಕ ಮಾತೃ ಭಾಷೆ ಹೇಳಿ ಮಾನ್ಯ ಮಾಡೆಕ್ಕು ಹೇಳಿ ಒತ್ತಾಯಿಸಿದ್ದೆ. ( ಉಪ ಭಾಷೆಗೊಕ್ಕೆ ಸರಕಾರ ಮಾನ್ಯತೆ ಕೊಡ್ತಿಲ್ಲೆ. ಆದರೆ, “ಮಾತೃಭಾಷೆ”ಗೊಕ್ಕೆ ವಿಶೇಷ ಅವಕಾಶ ಮುಂದೆ ಆದರೂ ಸಿಕ್ಕುವ ಚಾನ್ಸ್ ಇದ್ದು.

ಅಜಕ್ಕಳ ಮಾಷ್ಟ್ರಣ್ಣ

You may also like...

19 Responses

 1. ಬೊಳುಂಬು ಕೃಷ್ಣಭಾವ° says:

  ತಾಳ್ತಜೆ ಕೇಶವ ಭಟ್ರೋ? ಅತ್ರಿಲಿ ಕೇಳಿ ನೋಡೆಕ್ಕು.
  ಧನ್ಯವಾದ ಗೋಪಾಲಣ್ಣ.

 2. Gopi says:

  Already “Havyaka Bhase” is loosing it’s identity.

  I am brorn and brougt up in Sirsi. I speak havyaka. It does not have ಒಟ್ಟಿಂಗೆ , ಗೊಂತಾವುತ್ತು etc.

  It is “ottige” etc as in Kannada.

  It is an eye opener.
  Thanks

  • ರಘುಮುಳಿಯ says:

   ಗೋಪಿ ಭಾವ,
   ಪ್ರಾದೇಶಿಕವಾಗಿ ನಾವು ಮಾತಾಡುವ ಭಾಷೆಲಿ ರಜಾ ( ಸ್ವಲ್ಪ) ವ್ಯತ್ಯಾಸ ಇಪ್ಪದು ಸ್ವಾಭಾವಿಕ. ಆದರೆ ನಮ್ಮ ಭಾಷೆ ತನ್ನ ಸ್ವ೦ತಿಕೆಯ ಕಳಕ್ಕೊ೦ಡಿದಿಲ್ಲೆ ಹೇಳಿ ಎನ್ನ ಅಭಿಪ್ರಾಯ.

 3. ರಮಾಕಾಂತ ಹೆಗಡೆ says:

  ದಿನದಿಂದ ದಿನಕ್ಕೆ ತಾಯಿನುಡಿ ಸಲ್ಪ ಸಲ್ಪದಲ್ಲೇ ಬದ್ಲು ಆಗ್ತಾ ಇಪ್ಪದು ಯಾವಾಗಲೂ ಎಲ್ಲ ಕಡೆ ನಡೆದು ಬಂದ ಕ್ರಮ ಹೇಳಿ ಹೇಳ್ಲಕ್ಕು. ಎಂತಕ್ಕೆ? ಕೆಲವು ಉದಾಹರಣೆ ಕೊಟ್ಟರೆ ಸುಲಭ ಅನ್ನಸ್ತು.

  ಆನು ಹವಿಗ. ಯನ್ನ ಹುಟ್ಟೂರು ಶಿರಸಿಯ ಹತ್ತರದ ಒಂದು ಹಳ್ಳಿ. ಅರವತ್ತು ವರ್ಷದ ಹಿಂದೆ ಆಡ್ತಿದ್ದ ಯಂಗಳ ಆಗಿನ ಹವಿಗನ್ನಡ ಇವತ್ತು ಉಳ್ಕಂಜಿಲ್ಲೆ. ಆನು ಶಿರಸಿಗೆ ಹೋದಾಗ ಅಲ್ಲಿ ಯನ್ನ ತಮ್ಮ ತಂಗೀರ ಜತೆ ಆಡದು ಶಿರಸಿಯ ಇಂದಿನ ಹವಿಗನ್ನಡ. ಅರವತ್ತು ವರ್ಷದ ಹಿಂದೆ ಯಂಗಳಲ್ಲಿ ಯಲ್ಲರೂ ಸೊಂತ ತಾಯಿನ ಕರೇತಿದ್ದದ್ದು ’ಅಬ್ಬೆ’ ಹೇಳಿ. ಅಂದು ಅಪ್ಪನ ತಾಯಿನ ಕರೇತಿದ್ದದ್ದು ’ಅಜ್ಜಿ’ ಹೇಳಿ ಅಥವ ’ಅಮ್ಮ’ ಹೇಳಿ. ಯನ್ನ ಅಪ್ಪಯ್ಯ, ಚಿಕ್ಕಯ್ಯ ಎಲ್ಲ ಕರೇತಿದ್ದದ್ದು ಹಂಗೆ. ಆದರೆ ಕ್ರಮೇಣ ಅದು (ಶಿರಸಿ ಶಹರದ ಕೊಂಕಣಿಗರಿಂದಾಗಿ ಅನುಸ್ತು) ’ಅಬ್ಬೆ’ ಹೋಗಿ ’ಆಯಿ’ ಆತು. ಆದರೆ ಅಂದಿನ ’ಅಜ್ಜಿ’ ಅಥವ ’ಅಮ್ಮ’ ಮಾತ್ರ ಇವತ್ತಿಗೂ ಹಂಗೇ ಉಳ್ಕಂಜು. ಆದರೆ ಯಮ್ಮನೆಲಿ ಮಾತ್ರ ಅದು ಹಂಗಾಜೇ ಇಲ್ಲೆ. ಎಂತಕ್ಕೆ? ಯನ್ನ ತಾಯಿ ಹವಿಗಳದ್ದಾದರೂ ಅದರ ತವರೂರು ಕೊಲ್ಲೂರು. ಅದರ ಅಜ್ಜಿಯ ಊರು ಹೊಸನಗರದ ಹತ್ತಿರ. ಅದಕ್ಕೆ ಹುಟ್ಟಿನಿಂದ ರೂಢಿಯಿದ್ದ ’ಹೋಯಕು’ ’ಬರಕು’ಗಳನ್ನು ಶಿರಸಿಯಲ್ಲಿ ಯಮ್ಮನೆಗೆ ತರಲೆ ಅದಕ್ಕೆ ಸಾಧ್ಯ ಆಜಿಲ್ಲೆ. ಆದರೂ ಅದರ ರೂಢಿಯ ಕೆಲ ಅಂಶ ಯಮ್ಮನೆಗೆ ಬಂಜು. ಯಂಗಳ ತಾಯಿಯನ್ನ ಯಂಗ ’ಅಮ್ಮ’ ಹೇಳೇ ಕರದ್ಯ. ಅದಕ್ಕಾಗಿ ಯಂಗಳ ಅಪ್ಪನ ತಾಯಿಯನ್ನ ’ಅಬ್ಬೆ’ ಹೇಳಿ (ಅಂದರೆ ಅಪ್ಪನ ಅನುಕರಣೆ ಮಾಡಿ) ಕರೆಯದು ಯಂಗಕ್ಕೆ ರೂಢಿ ಆತು.

  ಯನ್ನ ಹೆಂಡತಿ ಹವಿಗಳದ್ದಾದರೂ ಅದರ ತವರೂರು ಹೊನ್ನಾವರದ ಹತ್ತಿರದ ಹಳ್ಳಿ. ವೃತ್ತಿಗಾಗಿ ಕನ್ನಡ ನಾಡಿನಿಂದಲೇ ದೂರ ಉಳಿದ ಸಂದರ್ಭ ಯಂಗಳದ್ದು. ಯಂಗ ಗಂಡ-ಹೆಂಡತಿ-ಮಕ್ಕಳ ನಡುವಿನ ಭಾಷೆಗೂ, ಶಿರಸಿಯ ಇಂದಿನ ಹವಿಗನ್ನಡಕ್ಕೂ ಕೆಲವಷ್ಟು ಅಂತರ ಇದ್ದೇ ಇದ್ದು.

  ನಿಂಗಳ ಒಪ್ಪಣ್ಣನ ಬೈಲಿನ ಹವಿಗನ್ನಡಕ್ಕೂ, ಯಂಗಳ ಶಿರಸಿಯ ಇಂದಿನ ಹವಿಗನ್ನಡಕ್ಕೂ ಬಹಳ ಅಂತರ!

  ಈ ಎಲ್ಲ ಗೊಂದಲದ ನಡುವೆನೂ ಹಳೆ ಹವಿಗನ್ನಡದ ಇಂಪನ್ನು ಉಳಿಸಬೇಕಾದದ್ದು ಯಂಗಳೆಲ್ಲರ ಕರ್ತವ್ಯ. ಈ ದಿಕ್ಕಿನಲ್ಲಿ ನಡೀತ ಇದ್ದ ಯಲ್ಲರಿಗೂ ಯನ್ನ ಅಭಿನಂದನೆ ಹೇಳ್ತಾ ಇದ್ದಿ!!

 4. ರಮಾಕಾಂತ ಹೆಗಡೆ says:

  ದಿನದಿಂದ ದಿನಕ್ಕೆ ತಾಯಿನುಡಿ ಸಲ್ಪ ಸಲ್ಪದಲ್ಲೇ ಬದ್ಲು ಆಗ್ತಾ ಇಪ್ಪದು ಯಾವಾಗಲೂ ಎಲ್ಲ ಕಡೆ ನಡೆದು ಬಂದ ಕ್ರಮ ಹೇಳಿ ಹೇಳ್ಲಕ್ಕು. ಎಂತಕ್ಕೆ? ಕೆಲವು ಉದಾಹರಣೆ ಕೊಟ್ಟರೆ ಸುಲಭ ಅನ್ನಸ್ತು.

  ಆನು ಹವಿಗ. ಯನ್ನ ಹುಟ್ಟೂರು ಶಿರಸಿಯ ಹತ್ತರದ ಒಂದು ಹಳ್ಳಿ. ಅರವತ್ತು ವರ್ಷದ ಹಿಂದೆ ಆಡ್ತಿದ್ದ ಯಂಗಳ ಆಗಿನ ಹವಿಗನ್ನಡ ಇವತ್ತು ಉಳ್ಕಂಜಿಲ್ಲೆ. ಆನು ಶಿರಸಿಗೆ ಹೋದಾಗ ಅಲ್ಲಿ ಯನ್ನ ತಮ್ಮ ತಂಗೀರ ಜತೆ ಆಡದು ಶಿರಸಿಯ ಇಂದಿನ ಹವಿಗನ್ನಡ. ಅರವತ್ತು ವರ್ಷದ ಹಿಂದೆ ಯಂಗಳಲ್ಲಿ ಯಲ್ಲರೂ ಸೊಂತ ತಾಯಿನ ಕರೇತಿದ್ದದ್ದು ’ಅಬ್ಬೆ’ ಹೇಳಿ. ಅಂದು ಅಪ್ಪನ ತಾಯಿನ ಕರೇತಿದ್ದದ್ದು ’ಅಜ್ಜಿ’ ಹೇಳಿ ಅಥವ ’ಅಮ್ಮ’ ಹೇಳಿ. ಯನ್ನ ಅಪ್ಪಯ್ಯ, ಚಿಕ್ಕಯ್ಯ ಎಲ್ಲ ಕರೇತಿದ್ದದ್ದು ಹಂಗೆ. ಆದರೆ ಕ್ರಮೇಣ ಅದು (ಶಿರಸಿ ಶಹರದ ಕೊಂಕಣಿಗರಿಂದಾಗಿ ಅನುಸ್ತು) ’ಅಬ್ಬೆ’ ಹೋಗಿ ’ಆಯಿ’ ಆತು. ಆದರೆ ಅಂದಿನ ’ಅಜ್ಜಿ’ ಅಥವ ’ಅಮ್ಮ’ ಮಾತ್ರ ಇವತ್ತಿಗೂ ಹಂಗೇ ಉಳ್ಕಂಜು. ಆದರೆ ಯಮ್ಮನೆಲಿ ಮಾತ್ರ ಅದು ಹಂಗಾಜೇ ಇಲ್ಲೆ. ಎಂತಕ್ಕೆ? ಯನ್ನ ತಾಯಿ ಹವಿಗಳದ್ದಾದರೂ ಅದರ ತವರೂರು ಕೊಲ್ಲೂರು. ಅದರ ಅಜ್ಜಿಯ ಊರು ಹೊಸನಗರದ ಹತ್ತಿರ. ಅದಕ್ಕೆ ಹುಟ್ಟಿನಿಂದ ರೂಢಿಯಿದ್ದ ’ಹೋಯಕು’ ’ಬರಕು’ಗಳನ್ನು ಶಿರಸಿಯಲ್ಲಿ ಯಮ್ಮನೆಗೆ ತರಲೆ ಅದಕ್ಕೆ ಸಾಧ್ಯ ಆಜಿಲ್ಲೆ. ಆದರೂ ಅದರ ರೂಢಿಯ ಕೆಲ ಅಂಶ ಯಮ್ಮನೆಗೆ ಬಂಜು. ಯಂಗಳ ತಾಯಿಯನ್ನ ಯಂಗ ’ಅಮ್ಮ’ ಹೇಳೇ ಕರದ್ಯ. ಅದಕ್ಕಾಗಿ ಯಂಗಳ ಅಪ್ಪನ ತಾಯಿಯನ್ನ ’ಅಬ್ಬೆ’ ಹೇಳಿ (ಅಂದರೆ ಅಪ್ಪನ ಅನುಕರಣೆ ಮಾಡಿ) ಕರೆಯದು ಯಂಗಕ್ಕೆ ರೂಢಿ ಆತು.

  ಯನ್ನ ಹೆಂಡತಿ ಹವಿಗಳದ್ದಾದರೂ ಅದರ ತವರೂರು ಹೊನ್ನಾವರದ ಹತ್ತಿರದ ಹಳ್ಳಿ. ವೃತ್ತಿಗಾಗಿ ಕನ್ನಡ ನಾಡಿನಿಂದಲೇ ದೂರ ಉಳಿದ ಸಂದರ್ಭ ಯಂಗಳದ್ದು. ಯಂಗ ಗಂಡ-ಹೆಂಡತಿ-ಮಕ್ಕಳ ನಡುವಿನ ಭಾಷೆಗೂ, ಶಿರಸಿಯ ಇಂದಿನ ಹವಿಗನ್ನಡಕ್ಕೂ ಕೆಲವಷ್ಟು ಅಂತರ ಇದ್ದೇ ಇದ್ದು.

  ನಿಂಗಳ ಒಪ್ಪಣ್ಣನ ಬೈಲಿನ ಹವಿಗನ್ನಡಕ್ಕೂ, ಯಂಗಳ ಶಿರಸಿಯ ಇಂದಿನ ಹವಿಗನ್ನಡಕ್ಕೂ ಬಹಳ ಅಂತರ!

  ಈ ಎಲ್ಲ ಗೊಂದಲದ ನಡುವೆನೂ ಹಳೆ ಹವಿಗನ್ನಡದ ಇಂಪನ್ನು ಉಳ್ಸಲೇಬೇಕು. ಇದು ಯಂಗಳೆಲ್ಲರ ಕರ್ತವ್ಯ. ಈ ದಿಕ್ಕಿನಲ್ಲಿ ನಡೀತ ಇದ್ದ ಯಲ್ಲರಿಗೂ ಯನ್ನ ಅಭಿನಂದನೆ ಹೇಳ್ತಾ ಇದ್ದಿ!!

  ಒಂದು ನಮ್ರ ಸಲಹೆ.

  ನಿಂಗ ಒಪ್ಪಣ್ಣ್ನದಲ್ಲೇ ಸೊತಂತ್ರವಾಗಿ ಒಂದು ಹವಿಗನ್ನಡದ ನಿಘಂಟು ಶುರುಮಾಡವು. ಅದರಲ್ಲಿ ಈಗಳೇ ಚಾಲ್ತಿಲಿದ್ದ (ಅಥವಾ ಬೇರೆ ಹವಿಗರು ಈಗಳೇ ಇಂಟರ್ನೆಟ್ಟಲ್ಲಿ ಸಂಗ್ರಹಿಸಿಟ್ಟ) ಪದಗಳನ್ನೆಲ್ಲ ಹಾಕವು. ಪದದೊಟ್ಟಿಗೆ ಅದರ ಅರ್ಥ ಮತ್ತೆ ಪದ ಚಾಲ್ತಿಯಲ್ಲಿದ್ದ ಕಾಲ ಪ್ರದೇಶನೂ ಕಾಣಿಸವು. ಒಮ್ಮೆ ನಿಂಗ ಶುರು ಮಾಡಿದರೆ ಉಳಿದವು ಎಲ್ಲರೂ ಕೈಜೋಡಿಸದು ಸುಲಭ ಅನಿಸ್ತು!

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *