Oppanna.com

ಪಂಜಸೀಮೆ ಹವಿಗನ್ನಡಲ್ಲಿ ಬಳಕೆಲಿ ಇಪ್ಪ ಪದಗಳ ಸಂಗ್ರಹ -1

ಬರದೋರು :   ಜಯಗೌರಿ ಅಕ್ಕ°    on   19/03/2013    18 ಒಪ್ಪಂಗೊ

ಜಯಗೌರಿ ಅಕ್ಕ°

ನಮ್ಮ ಬೈಲಿಲ್ಲಿ ಹಲವಾರು ಭಾಷೆಗ್ಳು ಇದ್ದು ಹೇಳೂದು ನವಗೆ ಗೊತ್ತಿದ್ದು.
ಕುಂಬ್ಳೆ ಭಾಷೆ, ವಿಟ್ಳ ಭಾಷೆ, ಪಂಜ ಭಾಷೆ, ಚೊಕ್ಕಾಡಿ ಭಾಷೆ, ಶಿರ್ಸಿ, ಸಾಗರ, ಕುಮ್ಟಾ- ಹೀಂಗೆ ಬೇರೆ ಬೇರೆ ಊರುಗಳಲ್ಲಿ ಅಲ್ಲಿಯ ಸ್ಥಳೀಯ ಜನಜೀವನದ ಪ್ರಭೆಯಿಂದಾಗಿ ಸ್ವಲ್ಪ ವ್ಯತ್ಯಾಸ ಆಗಿರ್ತು.
ಈಗ, ಪಂಜ ಭಾಶೆಯ ವಾಡಿಕೆ -ಬಳಕೆಲ್ಲಿ ಇಪ್ಪ ಕೆಲವು ವಿಶೇಷ ಶಬ್ದಂಗ್ಳ “ನಮ್ಮ ಭಾಷೆ” ವಿಭಾಗಲ್ಲಿ ಬೈಲಿಗೆ ಹೇಳ್ತಾ ಇದ್ದವು, ನಮ್ಮ ಜಯಗೌರಿ ಅಕ್ಕ.
ಬನ್ನಿ, ಅವ್ರ ಸಂಗ್ರಹವ ನಾವು ನೋಡಿ ಕಲ್ತುಕೊಂಬ, ನಮ್ಮ ಸಂಗ್ರಹಲ್ಲಿ ಇಪ್ಪುದ್ರ ಅವ್ಕೆ ಹೇಳುವ; ಬೈಲಿಗೂ ಹೇಳುವ.

ಪಂಜಸೀಮೆ ಹವಿಗನ್ನಡದ ಕೆಲವು ಶಬ್ದಗೊಕ್ಕೆ ಬೇರೆ (ಕುಂಬ್ಳೆ, ಕೋಳ್ಯೂರು, ವಿಟ್ಲ ಮುಂತಾದ) ಸೀಮೆಗಳ ಹವಿಗನ್ನಡಲ್ಲಿ ಬಳಕೆಲಿಪ್ಪ ವಿಶೇಷ ಪದಗಳ ಪಟ್ಟಿ ಮಾಡಿದ್ದೆ.
ಎನಗೆ ಗೊತ್ತಿಪ್ಪ ಪದಗ ಮತ್ತು ಎಂಗಳ ಹಿರಿಯರ, ನೆಂಟರ ಸಹಾಯಂದ ಕೆಲವು ವಿಶೇಷ, ಸಮಾನಾರ್ಥಕ ಮತ್ತು ಬೇರೆ ಬೇರೆ ಅರ್ಥ ಬಪ್ಪ ಪದಗಳ ಸಂಗ್ರಹ ಮಾಡಿದ್ದೆ. ಇದಲ್ಲದ್ದೆ ನಿಂಗೊಗೆ ಗೊತ್ತಿಪ್ಪ ಪದಗ ಬೇರೆ ಇದ್ದರೆ ಈ ಸಂಗ್ರಹಕ್ಕೆ ಸೇರ್ಸುಲಕ್ಕು.
ಒಂದೇ ಸರ್ತಿಗೆ ಎಲ್ಲಾ ಪದಗಳ ಓದುಲೆ ಉದಾಸಿನ ಅಕ್ಕು ಹೇಳಿ ಪ್ರತಿ ಸುದ್ದಿಲಿ ಹತ್ತು ಪದಗಳ ಪಟ್ಟಿಯ ಕೊಡುದು ಹೇಳಿ  ನಿರ್ಧರಿಸಿದ್ದೆ.

ಇಂದು ‘ಅ’ ಮತ್ತು ‘ಇ’ ಕಾರಂದ ಸುರುವಪ್ಪ ಪದಗ ಇಲ್ಲಿದ್ದು..ಏನಾದ್ರೂ ತಪ್ಪಿದ್ದರೆ ದಯವಿಟ್ಟು ತಿದ್ದಿ ಸಹಕರುಸಿ.

  • ಅಂಗಳ – ಜಾಲು
  • ಅಡಿಗೆ ಕೋಣೆ – ಅಟ್ಟುಂಬಳ, ಕಂಞಿ  ಕೊಟ್ಟಗೆ
  • ಅಬ್ಬಿ ಕೊಟ್ಟಿಗೆ – ಬೆಶಿನೀರ ಕೊಟ್ಟಗೆ
  • ಅಮ್ಮ – ಅಬ್ಬೆ
  • ಅಡಿಕೆ – ಅಡಕ್ಕೆ
  • ಅಡ್ಡ ಬೀಳು – ಹೊಡಾಡು
  • ಅಲ್ಸಂಡೆ – ಅಲತ್ತೊಂಡೆ, ಎಳಸೆಂಡಿಗೆ
  • ಅನ್ನ – ಅಶನ
  • ಅವಾಗ – ಅಂಬಗ, ಹಾಂಗಾರೆ
  • ಅನ್ನ ಇಕ್ಕು – ಅಶನ  ಬಳುಸು

  • ಇರುಸು – ಮಡುಗು

 

ಇನ್ನಾಣ ಕಂತು ಬಪ್ಪ ವಾರಕ್ಕೆ…

 

18 thoughts on “ಪಂಜಸೀಮೆ ಹವಿಗನ್ನಡಲ್ಲಿ ಬಳಕೆಲಿ ಇಪ್ಪ ಪದಗಳ ಸಂಗ್ರಹ -1

  1. ಹವ್ಯಕ ಪದ ಭಂಡಾರಕ್ಕೆ ಸ್ವಾಗತ..ಹೀಂಗೇ ಮುಂದುವರಿಯಲಿ..ಕೊನೆಗೆ ಹವ್ಯಕ ಪದಕೋಶವ ಬಿಡುಗಡೆ ಮಾಡುಗು ಬೈಲಿನ ಲೆಕ್ಕಲ್ಲಿ..

  2. ಒಳ್ಳೆ ಕಾರ್ಯ. ಶಬ್ದಾರ್ಥಂಗಳ ವಿನಿಮಯ ಮಾಡಿಗೊಂಡು ನಮ್ಮ ಶಬ್ದ ಭಂಡಾರ ವೃದ್ಧಿ ಮಾಡಿಗೊಂಬೊ. ಹವ್ಯಕ ವಿವಿಧ ಪ್ರಬೇದಂಗಳ ತಿಳಿವಲೆ ಒಳ್ಳೆ ಅವಕಾಶ. ಮುಂದುವರಿಯಲಿ

  3. ಹಾ಼……ನಿಂಗಳ ಪರಿಚಯ ಆದ್ದು ಖುಷಿ ಆತು….

  4. ಸುಬ್ರಹ್ಮಣ್ಯಲ್ಲಿಪ್ಪ ಎನ್ನ ಅತ್ತೆ ಮಕ್ಕೊ ಅಪ್ಪಂಗೆ ಅಪ್ಪಯ್ಯಾ ಹೇಳ್ತವು….. ಇದು ಪಂಜ ಸೀಮೆ ಪ್ರಯೋಗ ಅಲ್ಲದಾ..

    1. ಅಪ್ಪು, ಪಂಜಸೀಮೆ ಪ್ರಯೋಗವೇ.
      ಸುಬ್ರಹ್ಮಣ್ಯ ಹೇಳಿರೆ ಕುಕ್ಕೆ ಸುಬ್ರಹ್ಮಣ್ಯವಾ ? ಅಲ್ಲಿ ಆರು ?
      ಅದು ಎಂಗಳ ಅಜ್ಜನ ಮನೆ.

      1. ಡಾ | ನೇ.ಗೋ.ಭ ಎನ್ನ ಸೋದರತ್ತೆ ಗಂಡ….

        1. ಅವರ ಗೊತ್ತಿದ್ದು. ಎನ್ನ ಸೋದರಮಾವ (ಬಾಲ ಭಟ್ರು ಹೇಳಿರೆ ಗೊತ್ತಕ್ಕು) ಅಲ್ಲಿಯೇ ಇಪ್ಪದು. ಅವಕ್ಕೆಲ್ಲ ಒಳ್ಳೆ ಪರಿಚಯ ಇದ್ದು ಅವರದ್ದು.

  5. ಒಳ್ಳೆ ಕಾರ್ಯ ಮಾಡ್ತಾ ಇದ್ದಿ, ಜಯಗೌರಿ ಅಕ್ಕ. ಕೆಲವು ಕನ್ನಡ ಶಬ್ದಂಗಳೇ ಆದ್ದರಿಂದ ಅರ್ಥ ಅಪ್ಪಲೆ ಕಷ್ಟ ಆವ್ತಿಲ್ಲೆ.
    ಪದ ಪರಿಚಯ ಕಾರ್ಯ ಮುಂದುವರಿಯಲಿ. ಬೈಲಿನವಕ್ಕೆ ಒಳ್ಳೆ ಪ್ರಯೋಜನ ಸಿಕ್ಕಲಿ.

  6. ಒಪ್ಪ ಕೊಟ್ಟು ಪ್ರೋತ್ಸಾಹಿಸಿದ ಚೆನ್ನೈ ಭಾವ,ರಾಮಚಂದ್ರ ಮಾವ,ನರಸಿಂಹಣ್ಣ, ಸುಮನಕ್ಕ ಮತ್ತು ಉಡುಪುಮೂಲೆ ಅಪ್ಪಚ್ಚಿಗೆ ಧನ್ಯವಾದಗ…

    @ಸುಮನಕ್ಕ,
    ನಿಂಗ ಹೇಳಿದ ಪದವ ಎನ್ನ ಲೀಸ್ಟಿಲಿ ಸೇರ್ಸಿದ್ದೆ. ಪಂಜ ಸೀಮೆಲಿ ‘ಇಕ್ಕು’ ಹೇಳುವ ಪದ ಬಳಕೆ ಇದ್ದುಳಿ ಗೊಂತಾತು..
    @ಉಡುಪುಮೂಲೆ ಅಪ್ಪಚ್ಚಿ,
    ‘ಕ೦ಞಿ’ ಹೇಳುವ ಪದ ಮಲಯಾಳಂದ ಇದ್ದ ಹಾಂಗೆ ಆಮದಾಯ್ದು ಹೇಳುದು ಎನ್ನ ಮಾವಗಳ ಹತ್ರ ಕೇಳಿಯಪ್ಪಗ ತಿಳುದ ವಿಷಯ.ನಿಂಗೊಗೆ ಇದರ ಬಗ್ಗೆ ಹೆಚ್ಚಿನ ವಿಷಯ ಗೊತ್ತಿದ್ರೆ ದಯವಿಟ್ಟು ತಿಳುಸಿ.

  7. ಬಾಳ ಒಳ್ಳೆ ಕೆಲಸ ಇದು. ಹವಿಗನ್ನಡದ ಬೇರೆ ಬೇರೆ ಪ್ರದೇಶದ ಉತ್ತರ ಕನ್ನಡ, ಸಾಗರ, ಕುಮ್ಟ, ಹಾ೦ಗೆ ನಮ್ಮ ಕಡೆಯ ಬೇರೆ ಬೇರೆ ಸೀಮಗಳ ವಿವಿಧ ಶಬ್ದ ರೂಪ೦ಗಳ ಆಯಾಯ ಭಾಷೆಯ ಗೊ೦ತಿಪ್ಪವು ಇಲ್ಲಿ ಕೊಡುವ ಪ್ರತಿಶಬ್ದ೦ಗ(ಗೊ)ಕ್ಕೆ ಸಮಾನಾರ್ಥಕವ ಬರದರೆ ಅದರಿ೦ದ ನಮ್ಮ ನೆಡುಸರೆ ಇಪ್ಪ ಆ ಭಾಷಾಯ “ ಸೆರೆಯ ” ಕಳವಲೆ ಸುಲಭ.ಅಷ್ಟೇ ಅಲ್ಲ ಅದು ಭಾಷೆಗೆ ಒ೦ದು ಒಳ್ಳೆ ರೀತಿಯ ಕೊಡುಗೆಯೂ ಅಕ್ಕು! ಈ ಹಾದಿಲಿ ನಾವೆಲ್ಲರುದೆ ಅಕ್ಕ೦ಗೆ ಸಕಾಯ ಮಾಡುವೊ° ಆಗದಾ.?
    ಅಲ್ಸಂಡೆ = ಅಲತ್ತೊಂಡೆ, ಎಳಸೆಂಡಿಗೆ;– ಅಳತ್ತೊ೦ಡೆ ಹೇದು ಕು೦ಬಳೆ ಸೀಮೆಲಿ ಪ್ರಯೋಗ ಇದ್ದು. ಇದರಲ್ಲಿ ರಜ್ಜ ಉದ್ದ ಹಾ೦ಗೂ ತೋರಕ್ಕೆ ಇಪ್ಪ ಜಾತಿಗೆ ಕು೦ಬಳೆ ಸೀಮೆಲಿ “ ಅಜ್ಜಿಅಳಸ೦ಡೆ” ಹೇದು ಹೇಳ್ತವು. ಇನ್ನು ಅಟ್ಟು೦ಬಳಕ್ಕೆ = ಕ೦ಞಿ ಕೊಟ್ಟಗೆ ಹೇಳ್ವದು ನಮ್ಮ ಅಜ್ಜ೦ದಿರ ತೆ೦ಕ್ಲಾಗ್ಯಾಣ “ಶಾ೦ತಿ ಸಮ್ಮ೦ದ೦” ಮಾಡಿದರಿ೦ದ ಬ೦ದ೦ದು.ಭಾಷೆ ಬರೇ ವ್ಯವಹಾರಕ್ಕಷ್ಟೇ ಸೀಮಿತ ಅಲ್ಲ ಅದು ಒ೦ದು ಜೆನಾ೦ಗದ ಸ೦ಪರ್ಕ- ಸ೦ಸ್ಕೃತಿ ಇವೆಲ್ಲದರ ಮೇಗೆ ಹೇ೦ಗೆ ಬೆಣಚ್ಚು ಬೀರುತ್ತು ಹೇಳುವದಕ್ಕೆ ಇದೊ೦ದು ಸ೦ಣ ಋಜುವಾತಿದಾ !
    ಕ೦ಞಿ(ಮಲೆಯಾಳ.)= ಹೆಜ್ಜೆ(ಹವಿಗನ್ನಡ);ಗ೦ಜಿ(ಕ೦ನಡ);ಒ೦ದು ಸ೦ಶಯ- ಇದು ಕನ್ನಿಕೊಟ್ಟಗೆ ಹೇದು ಆದಿಕ್ಕಾ? ಅಕ್ಕಾ ನಿ೦ಗಳ ಈ ಕೆಲಸಕ್ಕೆ ತು೦ಬು ಹೃದಯದ ಸ್ವಾಗತ+ಧನ್ಯವಾದ೦ಗ. ನಮಸ್ತೇ…

  8. ಇಕ್ಕು = ಬಳುಸುದು. (ಅನ್ನ ಇಕ್ಕು = ಅಶನ ಬಳುಸುದು)

  9. ಕಲ್ಪನೆಂದ ವಾಸ್ತವಕ್ಕೆ ‘ಪಾಲ’ ಹಾಕಿದ್ದದು ಕಂಡು ಸಂತೋಷ ಆತು.ಮುಂದುವರಿಯಲಿ.

    1. ‘ಹಾಂಗಾರೆ’ ಹೇಳಿ ಪಂಜ ಸೀಮೆಲಿ ಬಳಸುತ್ತವು..’ಅವಾಗ’ ದ ಸಮನಾರ್ಥಕ ಪದ..

  10. ಪದ್ಯ ಬರವಲ್ಲಿಂದ ಶುದ್ದಿ ಬರವಲ್ಲಿಗೆ ಬಂದದು ಸಂತೋಷ. ಸ್ವಾಗತ. ಬರೆತ್ತಾ ಇರಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×