ಪಂಜಸೀಮೆ ಹವಿಗನ್ನಡಲ್ಲಿ ಬಳಕೆಲಿ ಇಪ್ಪ ಪದಗಳ ಸಂಗ್ರಹ – 4

April 12, 2013 ರ 10:12 amಗೆ ನಮ್ಮ ಬರದ್ದು, ಇದುವರೆಗೆ 10 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈ ವಾರಲ್ಲಿ ಮತ್ತೊಂದಷ್ಟು ಪದಗಳ ಪರಿಚಯ. ಮಾಮೂಲಿನ ಹಾಂಗೆ ನಿಂಗೊಗೆ ಗೊತ್ತಿಪ್ಪದರ ಸೇರ್ಸಿ.

• ಗುಡುಸು – ಉಡುಗು
ಪ್ರಯೋಗ : ಹಬ್ಬದ ಸಂದರ್ಭಗಳಲ್ಲಿ ಪೇಟೆಗಳ ಕಸವಿನ ರಾಶಿಯ ತೆಗುದು ಗುಡುಸುಲೆ ಪೌರ ಕಾರ್ಮಿಕರಿಗೆ ತುಂಬಾ ಕಷ್ಟ ಆವ್ತು.

• ಗೊತ್ತಿಲ್ಲೆ – ಅರಡಿಯ, ಗೊಂತಿಲ್ಲೆ
ಪ್ರಯೋಗ : ಅವರ ವಿಷಯ ಎಂತಾಳಿ ನವುಗೆ ಗೊತ್ತಿಲ್ಲೆ.

• ಗಂಜಿ – ಹೆಜ್ಜೆ
ಪ್ರಯೋಗ : ಎಂಗ ಇಂದು ಕಾಪಿಗೆ ಗಂಜಿ ಮಾಡಿದ್ದು.

• ಗುಜ್ಜೆ -ಕುಜುವೆ
ಪ್ರಯೋಗ : ಗುಜ್ಜೆ ತಾಳ್ಳ ಮಾಡದ್ದೆ ಸುಮಾರು ದಿನ ಆತು.

• ಗಾಯ – ಗಡಿ
ಪ್ರಯೋಗ : ಗಾಯ ನೋಡಿರೆ  ಹೆಚ್ಚೇ ತಾಗಿದಾಂಗೆ ಕಾಣ್ತು.

• ಚೂರಿ – ಪೀಶಕತ್ತಿ
ಪ್ರಯೋಗ : ಈ ಬಡ್ಡು ಚೂರಿಲಿ ಎಂತರ ಮಾಡುದು?
ಮೇಲಾರಕ್ಕೆ ಕೊರಿಲೆ, ಅಡಿಕೆ ಸೊಲಿಲೆ ಹೇಳಿಕೊಂಡು ಚೂರಿಗಳಲ್ಲಿಯೂ ನಮೂನೆಗೊ ಇದ್ದು. ಒಂದು ನಮೂನೆ ಚೂರಿಯ ಜಿಂಕೆ ಕೊಂಬಿಂದ ಮಾಡ್ತವು.ಇದು ಕೇರಳ ಕಡೆ ಹವ್ಯಕರಲ್ಲಿ ಹೆಚ್ಚಾಗಿ ಉಪಯೋಗಲ್ಲಿ ಇದ್ದು. ಇದು ಭಾರಿ ಹರಿ ಇಪ್ಪ ಚೂರಿ ಹೇಳಿ ಲೆಕ್ಕ.ಇದಕ್ಕೆ ‘ಉಳೆಕ್ಕೊಂಬಿನ ಚೂರಿ’ ಹೇಳುವ ಹೆಸರೂ ಇದ್ದು.ಹೆಚ್ಚಾಗಿ ಹಿಡಿಯ ಒಳಂಗೆ ಮಡುಚುಲೆ ಎಡಿಗಾವ್ತು.ಮೇಲಾರಕ್ಕೆ ಕೊರಿಲೆ ಉಪಯೋಗುಸುದು ಮಡುಚುಲೆ ಎಡಿಗಾಗದ್ದಂತದ್ದು. ಇದರಲ್ಲಿ ಹಿಡಿಗೆ ಚೂರಿಯ ಕುತ್ತಿಕೊಂಡಿರ್ತು.ಹಾಂಗಾಗಿ ‘ಹಿಡಿಕುತ್ತಿ ಚೂರಿ’ ಹೇಳಿಯೂ ಹೇಳ್ತವು.

• ಚೆಂಡಿ ತುಂಡು/ಹರ್ಕು – ಭೈರಾಸು ,ನೀರುಡೆ
ಪ್ರಯೋಗ : ಮಿಂದಾಗಿ ಉದ್ದುಲೆ ಒಂದು ಚೆಂಡಿ ಹರ್ಕು ಬೇಕು.

• ಚೂಟು – ಚೂಂಟು
ಪ್ರಯೋಗ : ಎಲ್ಲರ ಎದುರಿಗೆ ಎಂತಾರು ಮಾತಾಡುವಾಗ ಒಂದು ಚೂಟೆಕ್ಕು ಹೇಳಿ ಕಾಣ್ತು.

• ಚೂರು – ರಜ, ರಜ್ಜ, ಮಿಂದ
ಪ್ರಯೋಗ : ಎಲ್ಲವೂ ಚೂರು ಚೂರು ತೆಕ್ಕೊಳ್ಳಿ.

• ಚಿಗುರು – ಚೆಗುಳು
ಪ್ರಯೋಗ : ಬೇಸಿಗೆ ಬಪ್ಪಗ ಹೂ ಎಲೆ ಚಿಗುರುತ್ತು.

• ಚೆಕ್ಕೆ/ದಾಲ್ಚಿನ್ನಿಯ ಎಲೆ – ಬೆಲ್ಲಂತೊಟ್ಟು
ಪ್ರಯೋಗ : ಇದು ‘ಇಜಿನು’ ಹೇಳುವ ಮರದ ಎಲೆ.ಈ ಎಲೆಯ ತೊಟ್ಟು  ಬೆಲ್ಲದ ಹಾಂಗೇ ಸೀವು  ಮತ್ತು ಚೂರು ಖಾರ ಇರ್ತು.ಹಾಂಗಾಗಿ ಇದರ ಬೆಲ್ಲಂತೊಟ್ಟು ಹೇಳುದು.ಇದರ ಕಷಾಯ ಮಾಡಿ ಬಾಯಿ ಮುಕ್ಕುಳುಸುದರಿಂದ ಹಲ್ಲು ಬೇನೆ ಕಡಿಮೆ ಆವ್ತು. ಇದರ ಆಯುರ್ವೇದ ವೈದ್ಯ ಪದ್ದತಿಲಿ ಮದ್ದಾಗಿ ಉಪಯೋಗುಸುತ್ತವು. ಇಜಿನಿನ ಹೂಗು ಕೂಡ ಗರಂ ಮಸಾಲೆಲಿ ಉಪಯೋಗ ಇದ್ದು.ಇದಕ್ಕೆ ಪೇಟೇಲಿ ಕೇಜಿಗೆ ೩೫೦-೪೦೦ ರೂ ಇದ್ದು.

• ಚಿಟ್ಟೆ/ಕಟ್ಟೆ – ಮಣ್ಣಂಚಿಟ್ಟೆ
ಪ್ರಯೋಗ : ಹಿಂದಣ ಕಾಲಲ್ಲಿ ಮನೆಯ ಒಳವೇ ಮಣ್ಣಿನ ಚಿಟ್ಟೆ ಒಂದು ಹೊಡೆಂದ ಇರ್ತಿತ್ತು.ಇದು ಮಂಚದ ಬದಲಾಗಿ ಇದ್ದ ವ್ಯವಸ್ಥೆ. ಮಂಚದಷ್ಟೇ ಎತ್ತರ ಮತ್ತು ಒಬ್ಬಂಗೆ ಮನುಗುವಷ್ಟು ಉದ್ದಕ್ಕೆ ಇರ್ತು.

• ಚೆಕ್ಕೆ – ಕೆತ್ತೆ
ಪ್ರಯೋಗ: ಚೆಕ್ಕೆಯ ಗರಂ ಮಸಾಲೆ ತಯಾರುಸುಲೆ ಉಪಯೋಗುಸುತ್ತವು.

• ಚೋಳು – ಮಲಂಪು
ಪ್ರಯೋಗ : ಈ ಬಸ್ ಚೋಳು ರಟ್ಟುಸಿಯೇ ಹೋಕ್ಕಷ್ಟೆ.

• ಜಗಿಲಿ – ಹೆರ ಚಾವಡಿ
ಪ್ರಯೋಗ : ಜಗಿಲಿಯ ಕರೇಲಿ ಒಂದು ಚಿಟ್ಟೆ ಇದ್ದು.

• ಜೋಡು – ಮೆಟ್ಟು
ಪ್ರಯೋಗ : ಹೊಸ ಜೋಡಿನ ಅಡುಗುಸಿ ಇರ್ಸದ್ರೆ ಕದ್ದುಕೊಂಡು ಹೊಕ್ಕು.

• ಜಾತ್ರೆ – ಆಯನ
ಪ್ರಯೋಗ : ಸುಬ್ರಹ್ಮಣ್ಯದ ಷಷ್ಠಿ ಜಾತ್ರೆ ಭಾರಿ ಗೌಜಿಯಾಗಿ ಅಲ್ಲಿಯೂ ಸಂಚಾರ ದಟ್ಟಣೆ ಆತಡ.

• ತಾಳ್ಳ/ತಾಳ್ಳು – ತಾಳು
ಪ್ರಯೋಗ : ಇಂದು ಸೌತೆ ತಾಳ್ಳು. ಸೌತೆಯ ಬಾಳೆ ಬಳ್ಳಿಲಿ ಕಂಬಕ್ಕೆ ಕಟ್ಟಿ ಇರ್ಸಿ ಹಾಳಾಗದ್ದಂಗೆ ಕಾಪಾಡ್ತವು. ಇದರಂದಾಗಿ ವರ್ಷ ಇಡೀ ಸೌತೆ ಸಿಕ್ತಿತ್ತು. ಇದರ ಮಂಗಳೂರು ಸೌತೆ ಅಥವಾ ಬಣ್ಸೌತೆ ಹೇಳ್ತವು.

• ತೊಂದರೆ ಇಲ್ಲೇ – ಸಾರ ಇಲ್ಲೇ
ಪ್ರಯೋಗ : ನಿಂಗ ಒಂದು ಗಂಜಿ ಮಾಡಿ ,ತೊಂದರೆ ಇಲ್ಲೆ.

• ತಲೆ ಕೂದಲು -ತಲೆ ಕಸವು
ಪ್ರಯೋಗ : ಹೀಂಗೆ ತಲೆ ಕೂದಲು ಬಿಚ್ಚಿ ಹಾಯ್ಕೊಂಡು ಹೋಗೆಡ.

• ತುಟಿ – ತೊಡಿ
ಪ್ರಯೋಗ : ಚಳಿಗಾಲಲ್ಲಿ ತುಟಿ ಒಡಿಯುದ್ರಲ್ಲಿ ತಡಿಲೆಡಿತ್ತಿಲ್ಲೆ.

• ತಲೆಗೆ ಮೀಯುದು – ತಲಗೆ ಮೀವದು
ಪ್ರಯೋಗ : ಶನಿವಾರ ತಲೆಗೆ ಮೀಲಾಗ ಹೇಳಿ ದೊಡ್ಡವ್ವು ಹೇಳ್ತವು.

• ತರಕಾರಿ -ನೆಟ್ಟಿಕಾಯಿ
ಪ್ರಯೋಗ : ಈಗ ಇನ್ನು ಮೇಲಾರಕ್ಕೆ ತರಕಾರಿ ಕೊಯ್ಯೆಕ್ಕಷ್ಟೆ. ನೆಟ್ಟು ಬೆಳುಸಿದ ಕಾಯಿಪಲ್ಲೆಗ ನೆಟ್ಟಿಕಾಯಿ. ಹಿಂದಣ ಕಾಲಲ್ಲಿ ಬೇಕಾದ್ದರ ಅವ್ವವ್ವೇ ಬೆಳ್ಕೊಂಡಿತ್ತಿದ್ದವು ಹೇಳುದಕ್ಕೆ  ಇದೊಂದು ಉದಾರಣೆ.

• ತಿಮರೆ -ಉರಗೆ
ಪ್ರಯೋಗ : ತಿಮರೆ ತಂಬುಳಿ ತುಂಬಾ ಲಾಯ್ಕಾವ್ತು.ತಿಮರೆಯ ಕೆಲವೊಂದು ಮದ್ದಿಗೂ ಉಪಯೋಗುಸುತ್ತವು.ತಿಮರೆ ಹಾವಿನಾಂಗೆ ನೆಲಲ್ಲಿ ಹರ್ಕೊಂಡು ಗಂಟು ಗಂಟಿಲಿ ಬೇರಿನ ಭೂಮಿಗೆ ಬಿಡುವ ಕಾರಣಕ್ಕೆ ಉರಗೆ ಹೇಳುವ ಹೆಸರು ಬಂದದ್ದು.

• ತಕ್ಕಡಿ – ಚಿಂತಾಲು , ತ್ರಾಸು
ಪ್ರಯೋಗ : ಇದ ಆ ತಕ್ಕಡಿ ತೆಕ್ಕೊಂಡು ಬಾ, ಕಾಳು ಮೆಣಸು ತೂಗೆಕ್ಕಷ್ಟೆ. ಬೇರೆ ಸೀಮೆಗಳಲ್ಲಿ ‘ನಮ್ಮಂದ ಪೂರೈಸ’ ಹೇಳುದಕ್ಕೂ ಚಿಂತಾಲು ಹೇಳುವ ಪದ ಉಪಯೋಗುಸುತ್ತವು. ಉದಾ: ‘ಒಟ್ಟಾರೆ ಕಷ್ಟ ಭಾವ, ಕಷ್ಟಲ್ಲಿ ಒಂದು ಕಾರು ತೆಗದರೂ ಪೆಟ್ರೋಲು ಹೀಂಗೆ ಏರಿರೆ ಚಿಂತಾಲು ಹಂದ’.

• ಎಳಿಯುದು – ಬಲುಗು
ಪ್ರಯೋಗ : ಕರೆಂಟು ಶಾಕು ಬಂದರೆ ಎಳುದು ಬಿಸಾಡುಗು..ಕೆಲವು ಸೀಮೆಗಳಲ್ಲಿ ಅವ ಬೀಡಿ, ಸಿಗರೇಟು ಬಲುಗುತ್ತ ಹೇಳುವ ಪ್ರಯೋಗವೂ ಇದ್ದು.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 10 ಒಪ್ಪಂಗೊ

 1. Sandesh

  Athe.. Ninga udaharane(prayoga) kodtha ippa shabda iddalda.. Adu yava seemedu?

  [Reply]

  VA:F [1.9.22_1171]
  Rating: 0 (from 0 votes)
 2. ಜಯಗೌರಿ ಅಕ್ಕ°

  ಉದಾರಣೆಗ ಪಂಜ ಸೀಮೆದು. ಕೆಲವು ಕಡೆ ಪದಗಳ ಬಗ್ಗೆ ವಿವರಣೆ ಸೀಮೆಗೆ ಹೊರತಾಗಿದ್ದು.

  [Reply]

  VN:F [1.9.22_1171]
  Rating: 0 (from 0 votes)
 3. Sandesh

  Kelavu shabdanga sirsi hodena havyakara shabda heli avthenage. Enna doddamma athalaganavu. Avvu mathadvaga gamansidde. Panja seemeli sirsi hodenavu ikko?

  [Reply]

  ಉಡುಪುಮೂಲೆ ಅಪ್ಪಚ್ಚಿ

  ಉಡುಪುಮೂಲೆ ಅಪ್ಪಚ್ಚಿ Reply:

  ನಮಸ್ತೇ ಅಕ್ಕ.ಪ೦ಜ ಸೀಮೆಯ ಪದ೦ಗಕ್ಕೆ ನಿ೦ಗ ಇಲ್ಲಿ ಕೊಟ್ಟ ಪರ್ಯಾಯ ಪದ೦ಗ ಬೇರೆ ಬೇರೆ ಹವ್ಯಕ ಭಾಷಾ ಸೀಮೆದಾಗಿ ಕ೦ಡು ಬತ್ತು. ಸಾಧ್ಯವಾದರೆ ನಿ೦ಗಳ ಅನುಭವಲ್ಲಿ ಅ೦ಥ ಪದ೦ಗ ಯೇವೇವ ಸೀಮೆದು ಹೇದು ಆಯಾಯ ಪದ೦ಗಳ ಹತ್ತರೆ ಕ೦ಸ [bracket]ಲ್ಲಿ ತಿಳಿಶವದು ಸಾಧ್ಯವಾದರೆ ಅದಕ್ಕೆ ಮು೦ದೆ ಒ೦ದು ನಿಘ೦ಟಿನ[ಶಬ್ದಕೋಶದ]ರೂಪ ಕೊಡ್ಳೆ ತು೦ಬಾ ಸಕಾಯ ಅಕ್ಕು.ಇನ್ನು ಮು೦ದಾಣ ಕ೦ತುಗೊ ಹಾ೦ಗೆ ಮೂಡಿ ಬರಲಿ ಹೇದು ಇತ್ಲಾ೦ಗಿ೦ದ ವಿನ೦ತಿ.ಧನ್ಯವಾದ; ಹರೇ ರಾಮ.

  [Reply]

  ಜಯಗೌರಿ ಅಕ್ಕ°

  ಜಯಗೌರಿ ಅಕ್ಕ° Reply:

  ಮುಂದಣ ಕಂತಿಲಿ ಆ ಪ್ರಯತ್ನ ಖಂಡಿತ ಮಾಡ್ತೆ ಅಪ್ಪಚ್ಚಿ..

  [Reply]

  VN:F [1.9.22_1171]
  Rating: 0 (from 0 votes)
  ಜಯಗೌರಿ ಅಕ್ಕ°

  ಜಯಗೌರಿ ಅಕ್ಕ° Reply:

  [Reply]

  VN:F [1.9.22_1171]
  Rating: 0 (from 0 votes)
  ಜಯಗೌರಿ ಅಕ್ಕ°

  ಜಯಗೌರಿ ಅಕ್ಕ° Reply:

  ಎನಿಗೆ ಸರಿಯಾದ ಮಾಹಿತಿ ಇಲ್ಲೆ.ತಿಳಿವ ಪ್ರಯತ್ನ ಮಾಡುಲಕ್ಕು.

  [Reply]

  VN:F [1.9.22_1171]
  Rating: 0 (from 0 votes)
 4. ಮುಳಿಯ ಭಾವ
  ರಘುಮುಳಿಯ

  ಉದಾಹರಣೆಗಳ ಒಟ್ಟಿ೦ಗೆ ಶಬ್ದಪ್ರಯೋಗ೦ಗೊ ಭಾರೀ ಪ್ರಯೋಜನಕಾರಿ.ಒಳ್ಳೆ ಪ್ರಯತ್ನ ಅಕ್ಕ.
  ಚೋಳು – ಇದುವರೆಗೆ ಕೇಳದ್ದ ಶಬ್ದ ಎನಗೆ.

  [Reply]

  VA:F [1.9.22_1171]
  Rating: 0 (from 0 votes)
 5. ಮುಣ್ಚಿಕಾನ ಭಾವ

  ಜಾತ್ರೆ – ಆಯನ
  ಜಾತ್ರೆ – 3 ದಿನದ ಉತ್ಸವ.
  ಆಯನ – 5 ಅಥವಾ ಹೆಚ್ಚು ದಿನದ ಉತ್ಸವ.
  ಎಲ್ಲೋ ಕೇಳಿದ ನೆನಪು. ಶಬ್ದಾರ್ಥ ಒಂದೇ. ಆದರೆ ಎರಡರ ಮೂಲಾರ್ಥ ಒಂದೆಯಾ ಹೇಳಿ ಗೊಂತಿಪ್ಪವು ಹೇಳೆಕ್ಕು.

  [Reply]

  ರಾಮಚಂದ್ರ ಮಾವ°

  a ramachandra bhat Reply:

  haangirado kaantu. putturu mahalingeswarana jaatre heluttavu, aayana heli alla. kelavu dinangala utsava aayana, halavu dinangala utsava jaatre hechu samarparka. kaarana kannadallide jaatre halavu dina munduvarittu.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಿದ್ವಾನಣ್ಣಡಾಗುಟ್ರಕ್ಕ°ಚೆನ್ನಬೆಟ್ಟಣ್ಣಸರ್ಪಮಲೆ ಮಾವ°ಎರುಂಬು ಅಪ್ಪಚ್ಚಿಚುಬ್ಬಣ್ಣಜಯಗೌರಿ ಅಕ್ಕ°ಬೋಸ ಬಾವತೆಕ್ಕುಂಜ ಕುಮಾರ ಮಾವ°ಬಟ್ಟಮಾವ°ಬೊಳುಂಬು ಮಾವ°ಪಟಿಕಲ್ಲಪ್ಪಚ್ಚಿಅಜ್ಜಕಾನ ಭಾವಪವನಜಮಾವಶುದ್ದಿಕ್ಕಾರ°ಗೋಪಾಲಣ್ಣಪುತ್ತೂರಿನ ಪುಟ್ಟಕ್ಕವೇಣೂರಣ್ಣಶೀಲಾಲಕ್ಷ್ಮೀ ಕಾಸರಗೋಡುವಸಂತರಾಜ್ ಹಳೆಮನೆಮಾಷ್ಟ್ರುಮಾವ°ನೆಗೆಗಾರ°ನೀರ್ಕಜೆ ಮಹೇಶಹಳೆಮನೆ ಅಣ್ಣಪುಟ್ಟಬಾವ°ಬಂಡಾಡಿ ಅಜ್ಜಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ