Oppanna.com

ಉಪಮೆಗೊ

ಬರದೋರು :   ಗೋಪಾಲಣ್ಣ    on   04/06/2012    10 ಒಪ್ಪಂಗೊ

ಗೋಪಾಲಣ್ಣ

ಉಪಮೆ ಹೇಳಿದರೆ ಹೋಲಿಕೆ.
ಅಲಂಕಾರದ ಬಗ್ಗೆ ಅಭ್ಯಾಸ ಮಾಡುವ ಯಾವುದೇ ಮಕ್ಕೊಗೂ ಸುರುವಿಂಗೆ ಗೊಂತಪ್ಪ ಅಲಂಕಾರ ಉಪಮಾಲಂಕಾರ.

ರಾಮಾಯಣಲ್ಲಿ ವಾಲ್ಮೀಕಿ ಉಪಮೆಯ ಬಹಳವಾಗಿ ದುಡಿಸಿದ್ದ°.
ಅದೇರೀತಿ, ಕಾಳಿದಾಸನೂ ಕೂಡಾ- ಉಪಮಾ ಕಾಲಿದಾಸಸ್ಯ -ಹೇಳಿ ಪಂಡಿತರು ಹೇಳುಗು.
ಸಂಸ್ಕೃತ ಕಲಿಯದ್ದ [ಕೆಲವರು ಅಲ್ಪಸ್ವಲ್ಪ ಸಂಸ್ಕೃತ, ಮಂತ್ರ ಕಲ್ತವರೂ ಇದ್ದವು] ನಮ್ಮ ಹಿರಿಯರೂ ಹೋಲಿಕೆ ಕೊಡುವುದರಲ್ಲಿ ಭಾರೀ ಗಟ್ಟಿಗರು.

ಕೆಲವು ಅಂತಹ ಉದಾಹರಣೆಗಳ ಕೊಡುತ್ತೆ-

  1. ಅಜ್ಜಿ:  ಇದೆಂತಾ ಕೂಸೆ? ಇಷ್ಟು ಬೇಗ ಹೋಯೆಕ್ಕೊ?
    ಎಂತಾ ಕೆಸವಿನ ಕಾಲಿಂಗೆ ಕಂಜಿ ಕಟ್ಟಿ ಬಂದ ಹಾಂಗೆ ಮಾಡುತ್ತೆ?
  2. ಅಜ್ಜ: ಈ ಮಾಣಿಗೆಂತ ಇಷ್ಟು ಅಮ್ಸರ?
    ಅರ್ಧ ನಿಮಿಶಲ್ಲಿ ಉಂಡಿಕ್ಕಿ ಎದ್ದಾತು-ಎಲ್ಲ ಕೆಲಸವೂ ಹೀಂಗೆ, ಏಳು ತಿಂಗಳಿಲಿ ಹುಟ್ಟಿದವರ ಹಾಂಗೆ ಮಾಡುತ್ತ°!
  3. ಅಜ್ಜ: ಈಗಾಣ ಆಳುಗೊ ಹೀಂಗೇ ಮಾಡುದು.
    ಎರಡು ದಿನ ಇಲ್ಲಿ ಮಾಡಿದವು -ಮತ್ತೆ ಆಚಮನೆಲಿ ಒಂದುದಿನ, ಮರುದಿನ ಅದರಿಂದಾಚೆಗೆ,  ಹೀಂಗೆ ಗೋಕರ್ಣ ಕೆಲಸಿಯ ಹಾಂಗೆ ಎಲ್ಲಾ ಅರಿಕ್ಕರಿಕ್ಕೆಯೇ.

  4. ಅಜ್ಜ: ಆನು ಪುಳ್ಳಿ ಮಾಣಿಯ ಹತ್ತರೆ ಅಂದೇ ಹೇಯಿದೆ, ಅಷ್ಟು ದೊಡ್ಡವರ ಮನೆ ಕೂಸು ನವಗೆ ಬೇಡ ಹೇಳಿ- ಮನೆಂದ ದೊಡ್ಡ ಮೆಟ್ಟುಕಲ್ಲಪ್ಪಲಾಗ ಹೇಳಿ.
    ಅವಂಗೆ ಅದೇ ಆಯೆಕ್ಕು-ಆತು, ಇನ್ನು ಹೇಂಗೆ ಸುಧಾರ್ಸುತ್ತನೋ ಏನೋ?
  5. ಅಜ್ಜಿ: ನಮ್ಮ ಪೈಕಿಯವರ ನಾವೇ ಬೈವಲಾಗ ಮಗಾ°.. ಮೇಗೆ ನೋಡಿಂಡು ತುಪ್ಪಿದ ಹಾಂಗೆ ಅಕ್ಕು.
    ಅದು ನಮ್ಮ ಮೋರೆಗೆ ಅಲ್ಲದೊ ಬೀಳುತ್ಸು?
  6. ಅಜ್ಜ: ದುಷ್ಟರ ಹತ್ತರೆ, ಪೋಕ್ರಿಗಳ ಹತ್ತರೆ ನಾವು ಮಾತಾಡ್ಲೆ ಹೋಪಲಾಗ, ಅವು ಹತ್ತರೆ ಬಂದರೂ ನಾವು ದೂರ ಹೋಯೆಕು.
    ಬಾಳೆ ಮುಳ್ಳಿಂಗೆ ಬಿದ್ದರೂ ಮುಳ್ಳು ಬಾಳೆಗೆ ಬಿದ್ದರೂ ಹರಿವದು ಬಾಳೆಯೇ ಅಲ್ಲದೊ?

  7. ಅಪ್ಪ: ಕೆಲಸಲ್ಲಿ ಇಪ್ಪಾಗ ಅವೊ ಇವೊ ಎಂತಾರೂ ಲಂಚ ಕೊಡಲೆ ಬಕ್ಕು, ಅದರ ತೆಕ್ಕೊಂಬಲಾಗ-
    ನೆಳವು ತಿಂದು ಜಾತಿ ಕೆಟ್ಟ ಹಾಂಗೆ ಅಕ್ಕು.
  8. ಅಮ್ಮ: ಇವಂಗೆ ಎಷ್ಟು ಬುದ್ಧಿ ಹೇಳಿರೂ ಇಲ್ಲೆ , ಎಷ್ಟು ಬೈದರೂ ಇಲ್ಲೆ- ಕಂಬಳಿಗೆ ಕರೆ ಹಿಡಿಯದ್ದ ಹಾಂಗೆ.

  9. ಅಜ್ಜ: ಮಾಣಿಯ ಒಂದಾರಿ ಚಾವಡಿಲಿ ಕಂಡತ್ತು, ಕಣ್ಣ ಮಿಂಚಿನ ಹಾಂಗೆ.
    ಮತ್ತೆ ಅರೆ ಕ್ಷಣಲ್ಲಿ ಅವ ಗುಡ್ಡೆ ಹತ್ತಿ ಆತು, ಕೆಳಂಗೆ ಮಲೆ ಮಂಗನ ಹಾಂಗೆ ಲಾಗ ಹಾಕಿದ್ದೂ ಆತು.
  10. ಅಜ್ಜಿ: ಇದೆಂತಾ ಕೂಸೆ, ಹೆಜ್ಜೆಲಿ ಬಿದ್ದ ನೆಳವಿನ ಹಾಂಗೆ ಮಾಡುತ್ತೆ?
    ಬೇಗ ಎದ್ದು ನಿನ್ನ ಕೆಲಸ ಎಲ್ಲಾ ಮಾಡು… ಶಾಲೆಗೆ ಹೊತ್ತಾತು…
  11. ಪುಳ್ಳಿ: ಅಜ್ಜಾ, ಆಯನಕ್ಕೆ ಎಷ್ಟು ಜೆನ ಗೊಂತಿದ್ದಾ? ಭಾರೀ ರಶ್ಶು.. ಹೋಪಲೇ ಎಡಿತ್ತಿಲ್ಲೆ.
    ಎರುಗು ಹೋವುತ್ತ ಹಾಂಗೆ ಕ್ಯೂ.. ದೇವರ ನೋಡೆಕ್ಕು ಹೇಳಿಯೇ ಆವ್ತಿಲ್ಲೆ…
  12. ಅಜ್ಜ: ದೇವರ ನೋಡದ್ದರೆ ಆಯನಕ್ಕೆ ಹೋಪದೆಂತಕೆ?
    ಎಲ್ಲಾ ಬಗೆ ಬೆಂದಿ, ಪಾಕ ಮಾಡಿ ಅಶನ ಮಾಡದ್ದರೆ ಅಕ್ಕೊ? ಆತು, ಜೆನ ಸುಮಾರಾಯಿಕ್ಕು, ಸಾಸಮೆ ಕಾಳು ಇಡ್ಕಿರೆ ಕೆಳ ಬೀಳ ಆದಿಕ್ಕು.
    ಆಗಲಿ, ನೀನು ದೇವರ ದರ್ಶನ ಮಾಡಿದೆ ಅನ್ನೆ?
  13. ಅಮ್ಮ: ಮಗಳು ಮದುವೆ ಆದ ಮೇಲೆ ಕುಶಿಲಿದ್ದು ಹೇಳಿ ಗೊಂತಾವ್ತು- ಬೇಳೆಗೆ ಮಣ್ಣು ಉದ್ದಿದ ಹಾಂಗೆ ಆಯಿದು. [ರಜಾ ಗೆನ ಆಯಿದು ಹೇಳಿ ಅರ್ಥ].
  14. ಅಪ್ಪ: ಮೊನ್ನೆ ಮೊನ್ನೆ ಮಾಣಿ ಇಷ್ಟು ಸಣ್ಣ ಇತ್ತಿದ್ದ°.
    ಹೈಸ್ಕೂಲಿಂಗೆ ಸೇರಿ ಒಂದು ವರ್ಷಲ್ಲಿ ಬಾಳೆ ಬೆಳೆದ ಹಾಂಗೆ ಬೆಳೆದ°..
  15. ಅಮ್ಮ: ಈ ಪುಚ್ಚೆ ಎಂತ ಕಾಲಿಂಗೆ ಬಂದು ಸುಂದುದು?
    ಪುರುಷಾಮೃಗದ ಹಾಂಗೆ
    [ಮಹಾಭಾರತಲ್ಲಿ ಭೀಮನ ಕಾಲು ಹಿಡ್ಕೊಂಬ ಪುರುಷಾಮೃಗವ ನೆಂಪು ಮಾಡಿ]

ಹೀಂಗೆ , ಮೊದಲಾಣ ಜೆನಂಗ ಬಾಯಿ ತೆಗೆದರೆ ಒಂದಲ್ಲ ಒಂದು ಉಪಮೆ, ಗಾದೆ ಹೇಳುಗು.
ಕೆಲವು ವಾಕ್ಯಂಗೊ, ಉಪಮೆಗೊ ಅವಾಚ್ಯವೂ ಇಕ್ಕು.
ಅದರ ಇಲ್ಲಿ ಬರವಲಾಗ. ನಮ್ಮವು ಸುಸಂಸ್ಕೃತರು, ದೈವಭೀರುಗೊ ಆಗಿದ್ದರೂ ಗ್ರಾಮ್ಯ ಶಬ್ದಂಗೊ, ಬೈಗಳಿನ ಶಬ್ದಂಗೊ ಕೆಲವರ ಬಾಯಿಲಿ ಬಕ್ಕು.
ಅದು ಯಾವ ಜನಾಂಗಲ್ಲಾದರೂ, ಭಾಷೆಗಳಲ್ಲಾದರೂ ಇಪ್ಪದೇ.
ನಮ್ಮ ಒಟ್ಟು ಸಂಸ್ಕಾರ ನೋಡುವಾಗ ಇದು ಚಂದ್ರನ ಮೇಲಾಣ ಕಲೆಯ ಹಾಂಗೆ ನಮಗೆ ಕಳಂಕ ಅಲ್ಲ.

ನಿಂಗೊಗೆ ಮೊದಲಾಣವರ ಉಪಮೆಗೊ [ಬರೆವಲೆ ಅಕ್ಕಾದದ್ದರ] ನೆಂಪಾದರೆ ಬರೆಯಿ; ಈ ಲೇಖನವ ಬೆಳಶಿ ಹೇಳಿ ಕೇಳಿಕೊಳ್ತೆ.

10 thoughts on “ಉಪಮೆಗೊ

  1. ನಿಜ,ಗೋಪಾಲಣ್ಣ.ಪ್ರತಿ ಉಪಮೆಯೂ ಅರ್ಥಪೂರ್ಣವಾಗಿದ್ದು.ಪಟ್ಟಿಗೆ ಸೇರ್ಸುಲೆ ಹೇಳಿ ನೆ೦ಪು ಮಾಡ್ಲೆ ಪ್ರಯತ್ನ ಮಾಡಿರೆ..ಉಹು೦.ತಲೆಲಿಪ್ಪದು ಬಾಯಿಗೆ ಬಾರದ್ದ ಹಾ೦ಗಾಯಿದು.
    ಬರದು ಮಡುಗದ್ದರೆ ಮು೦ದ೦ಗೆ ಸಿಕ್ಕ. ಮನ್ನೆ ಒಬ್ಬ° ಕೇಳಿದ° ಎ೦ತ “ನಿನ್ನ ಹೊಕ್ಕುಳ ಬಳ್ಳಿಯ ಬೈಲಿಲಿಯೇ ಹುಗುದು ಹಾಕಿದ್ದೋ”.ನಾವು ಟೆಟ್ಟೆಟ್ಟೆ..

  2. ಎಲ್ಲರಿಂಗೂ ಧನ್ಯವಾದ.ಇಲ್ಲಿಪ್ಪ ಉಪಮೆಗೊ ಹಳತ್ತೇ. ಆನು ಮಾಡಿದ್ದಲ್ಲ. ಸಂಭಾಷಣೆ ಎನ್ನ ಸೃಷ್ಟಿ. ಅಜ್ಜ,ಅಜ್ಜಿಯಕ್ಕಳ ಹತ್ತರೆ ನಾವು ಕೂದು ಮಾತಾಡಿರೆ,ನಮಗೆ ಗೊಂತಕ್ಕು.ಇನ್ನು ಕೆಲವೇ ವರ್ಷಲ್ಲಿ ಅಷ್ಟು ಹಳೆಯ ತಲೆಮಾರು ದೂರ ಅಪ್ಪಲಿದ್ದು.ಸ್ವಾತಂತ್ರ್ಯ ಪೂರ್ವದ ನೆಂಪು ಇಪ್ಪವು ಕ್ರಮೇಣ ಕಮ್ಮಿ ಅಪ್ಪಲಿದ್ದು.ಇನ್ನು ಹೆಚ್ಚು ವರ್ಷ ನಮಗೆ ಆಂಗ್ಲ ಮಿಶ್ರಣ ಕಮ್ಮಿ ಇಪ್ಪ ನಮ್ಮ ಹಳೆ ಭಾಷೆ ಕೇಳುಲೆ ಸಿಕ್ಕ ಹೇಳಿ ಗ್ರೇಶುವಾಗ ಬೇಜಾರು ಆವುತ್ತು.
    ತಲೆಮಾರಿಂದ ತಲೆಮಾರಿಂಗೆ ಬೇರೆ ಭಾಷೆಯ ಶಬ್ದಂಗೊ ನಮ್ಮ ಭಾಷೆಲಿ ಸೇರುತ್ತಾ ಇದ್ದು-ನಾವು ಸೂಕ್ಷ್ಮವಾಗಿ ಇದರ ಗಮನಿಸೆಕ್ಕು.ಎನ್ನ ಈಗಾಣ ಭಾಷೆಯೇ ಶುದ್ಧ ಇದ್ದು ಹೇಳಿ ಆನು ಹೇಳೆ.
    ನಾವು ನಮ್ಮ ಶಬ್ದಂಗಳ ಉಳಿಸುದು ಹೇಂಗೆ?ಬಳಸದಿದ್ದರೆ ಒಳಿಯ.
    ಎಲ್ಲರಿಂಗೂ ಸಂತೋಷ ಆದ್ದದು ಕುಶಿ ಆತು.

  3. ಉಪಮೆಗಳ ಪ್ರಯೋಗ ಮಾಡಿಯಪ್ಪಗ ವಿಷಯ ಸರೀ ಅರ್ಥ ಆವ್ತು. ಉದಾಹರಣೆ ಸಮೇತ ಗೋಪಾಲಣ್ಣ ಚೆಂದಕೆ ವಿವರುಸಿದ್ದವು. ಕೆಲಾವು ಹೊಸ ಉಮಮೆಗೊ ಗೊಂತಾತು. ಕಂಬಳಿಗೆ ಕರೆ ಹಿಡಿಯದ್ದ ಹಾಂಗೆ ಕೇಳುವಗ ಗೋರ್ಕಲ್ಲ ಮೇರೆ ಮಳೆ ಸುರಿದಂತೆ, ಕೋಣನ ಮುಂದೆ ಕಿನ್ನರಿ ಬಾರುಸಿದ ಹಾಂಗೆ ನೆಂಪಾತು. ಪಕ್ಕನೆ ಬೇರೆ ಉಪಮೆ ನೆಂಪಾವ್ತಿಲ್ಲೆ.

  4. ಭಾರಿ ಕೊಶಿಯಾತು ಉಪಮೆಗೊ ಓದಿ… ಓದಿ ಮುಗುದಪ್ಪಗ ಎನ್ನ ಅಜ್ಜಿಯ ಒ೦ದಾರಿ ನೆ೦ಪಾತು ಗೋಪಾಲಣ್ಣ.. 🙂

  5. ಉಪಮೆಗಳ ಬರದು ಅದರ ಯಾವ ಸಂದರ್ಭಲ್ಲಿ ಉಪಯೋಗ ಮಾಡ್ತವು ಹೇಳಿ ವಿವರಣೆ ಕೊಟ್ಟದು ಲಾಯಿಕ ಆಯಿದು

  6. ಉಪಮೆಗೊ ಓದಿದೆ. ಆನು ಊರಿಲ್ಲಿಪ್ಪಾಗ ಕೇಳಿರದ್ದ ಕೆಲವು ಗಾದೆಗೊ, ಅಥ೯ಪೂಣ೯ ಹೋಲಿಕೆಗೊ ನಿ೦ಗಳ ಲೇಖನಲ್ಲಿ ಇದ್ದು.ನಮ್ಮ ಊರಿನ ಹವ್ಯಕ ಭಾಷೆಯ ವೈಶಿಷ್ಥ್ಗ್ಯ ಎಲ್ಲರಿ೦ಗು ಗೊ೦ತಪ್ಪಲೆ ಹೀ೦ಗಿಪ್ಪ ಲೇಖನ೦ಗೊ ಪ್ರಯೋಜನಕಾರಿ.

  7. ಸಾಮಾನ್ಯವಾಗಿ ಕೇಳುವ ಎಲ್ಲ ‘ಉಪಮೆ’ಗಳ ಪಟ್ಟಿ ನಿಂಗ ಮಾಡಿದ್ದಿ. ಬಾಕಿ ಇದ್ದೋ ಹೇಳುದು ಫಕ್ಕನೆ ತಲೆಗೆ ಹೋವುತ್ತಿಲೆ.
    ಒಳ್ಳೆ ಕಾರ್ಯಕ್ಕೆ ಅಭಿನಂದನೆಗೊ.

  8. ಊರಿಂದ ದೂರಾಗಿ ಹೀಂಗಿರ್ತರ ಕೇಳದ್ದೆ ಸುಮಾರು ಸಮಯ ಆತು. ಲಾಯಕ ಆಯ್ದು ಗೋಪಾಲಣ್ಣ.

  9. { ಮನೆಂದ ದೊಡ್ಡ ಮೆಟ್ಟುಕಲ್ಲಪ್ಪಲಾಗ ಹೇಳಿ} ; ಇದು ರೂಪಕ್ಕ ಅಲ್ದಾ ಮಾವಾ……

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×