ವ್ಯಾಕರಣದ ಬಗೆಗೆ

February 21, 2010 ರ 8:00 amಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ವ್ಯಾಕರಣ ಹೇಳಿರೆ ಎಂತದು?

ಹೆಚ್ಚಿನೋರಿಂಗೆ ಈ ವ್ಯಾಕರಣ ಹೇಳಿರೆ ತಲೆತಿಂಬ ಸಂಗತಿ ಹೇಳಿ ಭಾವನೆ ಇರ್ತು. ಆದರೆ ಅದರಲ್ಲಿ ಅಷ್ಟು ದೊಡ್ಡ ಮಣ್ಣಾಂಗಟ್ಟಿ ಎಂತ ಇಲ್ಲೆ.
ಯಾವದೇ ಭಾಷೆಲಿ ಆದರೂ ಮೂಲಭೂತವಾಗಿ ಇಪ್ಪದು ಕೆಲವು ಘಟಕಂಗೊ.
ಅದರ ಹೀಂಗೆ ಹೇಳ್ಳಕ್ಕು-

 1. ಧ್ವನಿ
 2. ಅಕ್ಷರ
 3. ಪದ/ಶಬ್ದ
 4. ವಾಕ್ಯ

ವ್ಯಾಕರಣ ಹೇಳಿರೆ ಮುಖ್ಯವಾಗಿ ಈ ನಾಲ್ಕರ ಬಗ್ಗೆ ವಿವೇಚನೆ ಮಾಡುದು ಅಷ್ಟೆ.

ಧ್ವನಿ:

ಧ್ವನಿ ಬಗ್ಗೆ ಹೆಚ್ಚು ತಲೆಬೆಶಿ ಮಾಡೆಕಾಗಿ ಬತ್ತಿಲ್ಲೆ.
ನವಗೆ ಗೊಂತಿಪ್ಪ ಭಾಷೆಗಳಲ್ಲಿ ಇಪ್ಪ ಧ್ವನಿಗಳ ಎಲ್ಲ ನವಗೆ ಸಾಮಾನ್ಯವಾಗಿ ಉಚ್ಚಾರ ಮಾಡ್ಳೆ ಎಡಿತ್ತು.
ಮಲಯಾಳಲ್ಲಿ ಬಾಳೆಹಣ್ಣು ಹೇಳುವಗ ಉಚ್ಚರಿಸುವ (ಆನು ಸಣ್ಣ ಇಪ್ಪಗ, ಸರಿಯಾಗಿ ಉಚ್ಚರಿಶೆಕ್ಕು ಹೇಳಿ ಎನ್ನ ಭಾವ ಒಬ್ಬಹೇಳಿಗೊಂಡಿತ್ತಿದ್ದ.) ಳಕಾರ ಎಲ್ಲ ಎನಗೆ ಕಷ್ಟ ಆವುತ್ತು ಹೇಳುದು ಬೇರೆ ವಿಷಯ.
ಕೆಲವು ಭಾಷೆಲಿ ಇಪ್ಪ ಧ್ವನಿಗೊ ಮತ್ತೆ ಕೆಲವು ಭಾಷೆಲಿ ಇರ.
ಉದಾ: ಇಂಗ್ಲಿಷಿಲಿ ಬಪ್ಪ ಜೂ, ಮೆಜರ್, ಪ್ಲೆಜರ್ – ಇಲ್ಲೆಲ್ಲ ಉಚ್ಚರಿಸುವ ‘ಜ’ ಧ್ವನಿಗೊ ನಮ್ಮ ಕನ್ನಡಲ್ಲಿ ಎಲ್ಲ ಮೂಲತಃ ಇಲ್ಲೆ.

ನಮ್ಮತ್ರೆ ಇಪ್ಪ ಕೆಲವು ಅವರತ್ರೆ ಇಲ್ಲೆ.
ಹಾಂಗೆ ಕನ್ನಡಲ್ಲಿ ಇಪ್ಪ ಕೆಲವು ತುಳುವಿಲಿ ಇಲ್ಲೆ. ನಮ್ಮ ಭಾಷೆಲಿ ಇಪ್ಪ ಪದಾಂತ್ಯದ ಅನುನಾಸಿಕ ಬೇರೆ ಭಾಷೆಗಳಲ್ಲಿ ಬಹುಶ ಇಲ್ಲೆ.
ಆದರೂ ಇಡೀ ಜಗತ್ತಿಲಿ ಇಪ್ಪ ಭಾಷೆಗಳಲ್ಲಿ ಒಟ್ಟು ಇಪ್ಪ ಧ್ವನಿಗಳ ಸಂಖ್ಯೆ ಕಂಡಾಬಟ್ಟೇ ಎಂತ ಇಲ್ಲೆ.
೧೦೦ರ ಒಳ ಇಕ್ಕು. ಸರಿ ಫಿಗರ್ ಎಲ್ಯಾರು ನೋಡಿ ಇನ್ನೊಂದರಿ ಹೇಳ್ತೆ.

ಧ್ವನಿ ಮತ್ತೆ ಅಕ್ಷರ ಒಂದೇ ಅಲ್ಲ.
ಧ್ವನಿಗಳ ಸಂಯೋಜನೆಂದ ಅಕ್ಷರ ಅಪ್ಪದು.
ಉದಾ: ಕ್+ಅ=ಕ
(ನಾವು ಈ ಬರಹ ತಂತ್ರಾಂಶಲ್ಲಿ ಕುಟ್ಟುದು ಈ ಧ್ವನಿಗಳನ್ನೆ ಇದ ಹೆಚ್ಚಾಗಿ.)

ಅಕ್ಷರ:

ಇಲ್ಲಿ ಒಟ್ಟು ವರ್ಣಮಾಲೆ ಹೇಂಗಿದ್ದು ಹೇಳುವ ಬಗ್ಗೆ ವಿವೇಚನೆ ನಡೆತ್ತು.
ಒಂದು ರೀತಿಲಿ ನೋಡಿದರೆ ಧ್ವನಿಯ ವಿಸ್ತರಣೆ ಅಷ್ಟೆ ಇದು. ಮಹಾಪ್ರಾಣ ಅಲ್ಪಪ್ರಾಣ ಇತ್ಯಾದಿ.

ಪದ:

ಪದರಚನಾ ನಿಯಮಂಗೊ ಭಾಷೆಂದ ಭಾಷೆಗೆ ಬೇರೆ ಬೇರೆ ಇರ್ತು.
ಕೆಲವು ಹೋಲಿಕೆವೂ ಇಕ್ಕು. ನವಗೆ ಗೊಂತಿಪ್ಪ ಭಾಷೆಯ ಪದರಚನಾ ನಿಯಮವ ನಾವೇ ಭಾರಿ ಸುಲಭಲ್ಲಿ ತಿಳಿವಲಕ್ಕು. ಲಿಂಗ, ವಚನ, ಕಾಲ, ಇದೆಲ್ಲ ಬೇರೆ ಬೇರೆ ಸಂದರ್ಭಲ್ಲಿ ಹೇಂಗೆ ಬದಲಾವುತ್ತು ಹೇಳಿ ನೋಡಿರೆ ಮುಗ್ತು.
ಇದಕ್ಕೆ ಯಾವ ವ್ಯಾಕರಣ ಪುಸ್ತಕವೂ ಬೇಡ.

ವಾಕ್ಯ:

ವಾಕ್ಯರಚನೆಗೂ ಬೇರೆ ಬೇರೆ ಭಾಷೆಲಿ ಬೇರೆ ಬೇರೆ ನಿಯಮಂಗೊ ಇರ್ತು.
ಇದರನ್ನು ಅರ್ಥಮಾಡಿಗೊಂಬಲೆ ನಾವು ಕ್ರಿಯಾಪದ, ಕ್ರಿಯೆ ಮಾಡುದು ಆರು ಹೇಳುದರ ಎಲ್ಲ ನೋಡಿದರೆ ಆತು.
ಅಷ್ಟಪ್ಪಗ ಇಂಗ್ಲಿಷಿಲಿ ಆದರೆ “ರಾಮ ಕಿಲ್ಡ್ ರಾವಣ” ಹೇಳಿಯೂ ನಮ್ಮ ಭಾಷೆಲಿ ಆದರೆ “ರಾಮ ರಾವಣನ ಕೊಂದ” ಹೇಳಿಯೂ ಇಪ್ಪ ವ್ಯತ್ಯಾಸ ಗೊಂತಾವುತ್ತು.

ಇದು ಒಂದು ಉದಾಹರಣೆ ಮಾಂತ್ರ.

ಇಲ್ಲಿ ಕ್ರಿಯೆ ಮಾಡುವವ ವಾಕ್ಯಲ್ಲಿ ಎಲ್ಲಿದ್ದ, ಕ್ರಿಯೆಯ ಸೂಚಿಸುವ ಪದ ಎಲ್ಲಿದ್ದು, ಕ್ರಿಯೆಗೆ ಒಳಗಪ್ಪವ ಎಲ್ಲಿದ್ದ – ಇದರೆಲ್ಲ ನೋಡಿ ಹೇಳಿದರೆ – ಅದುವೇ ಆಯಾ ಭಾಷೆಯ ವ್ಯಾಕರಣ ಅಷ್ಟೇ ಹೊರತು ವ್ಯಾಕರಣ ಹೇಳುದರ್ಲಿ ಎಂತ ಪೊದುಂಕ್ಳೂ ಇಲ್ಲೆ.
ಈ ವಿಷಯಂಗಳ ಆಲೋಚನೆ ಮಾಡ್ಳೆ ಎಡಿಗಾದರೆ ನಮ್ಮ ಭಾಷೆಯ ವ್ಯಾಕರಣನಾವು ನಾವೇ ಹೇಳ್ಳಕ್ಕು ಅಲ್ಲದೋ?

ಬೇರೆ ಭಾಷೆ ಒಟ್ಟಿಂಗೆ ಹೋಲಿಸಿ ಅಪ್ಪಗ ನವಗೆ ನಮ್ಮ ಭಾಷೆಲಿ ಹಲವು ವಿಶೇಷಂಗೊ ಕಾಂಗು.
ಅದರ ಬಗ್ಗೆ ನಿದಾನಕ್ಕೆ ಆಲೋಚನೆ ಮಾಡುವೊ ಆಗದ?

ವ್ಯಾಕರಣದ ಬಗೆಗೆ, 3.6 out of 10 based on 10 ratings

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ಗುತ್ತಿನ ಸದಾಶಿವ°

  ಧ್ವನಿ ಹೇಳುವದಕ್ಕೆ ಸ್ವರ ಹೇಳಿಯುದೆ, ಅಕ್ಷರ ಹೇಳುವದಕ್ಕೆ ವ್ಯಂಜನ ಹೇಳಿಯುದೆ ಹೇಳುವ ಪದ್ಧತಿದೆ ಇದ್ದೋ?

  [Reply]

  ajakkala girisha Reply:

  ಧ್ವನಿ ಹೇಳುದಕ್ಕೆ ಸ್ವರ ಹೇಳಿ ಮತ್ತೆ ಅಕ್ಷರ ಹೇಳುದಕ್ಕೆ ವ್ಯಂಜನ ಹೇಳಿಯುದೆ ಹೇಳಿದರೆ ಪೂರ್ತಿ ಸರಿಯಾವುತ್ತಿಲ್ಲೆ. ಧ್ವನಿ ಹೇಳಿದರೆ ಉಚ್ಚಾರದ ಅತಿ ಸಣ್ಣ ಘಟಕ. ಹಾಂಗಾಗಿ ಕ್ ,ಗ್, ಪ್,ಬ್, ಇದೆಲ್ಲ ಧ್ವನಿಗಳೇ ಆವುತ್ತು. ಸ್ವರಾಕ್ಷರಂಗೊ ಧ್ವನಿಯೂ ಅಪ್ಪು. ಇಡೀ ಅಕ್ಶರವೂ ಅಪ್ಪು. ನಮ್ಮ ಭಾಷೆ ಅಥವಾ ಕನ್ನಡಲ್ಲಿ ಸಾಮಾನ್ಯವಾಗಿ ವ್ಯಂಜನಕ್ಕೆ ಸ್ವರ ಸೇರಿಸಿ ಬಳಕೆ ಹೆಚ್ಚು. -ಅಜಕ್ಕಳ.

  [Reply]

  VA:F [1.9.22_1171]
  Rating: 0 (from 0 votes)
 2. Darbhe Jayarama Bhat

  I am fascinated by reading the material so far uploaded in this site. If a number of people of the community interact on issues of common interest, it will turn out to be a constructive think-tank.

  Wishing all well.

  Sincerely,

  Dr. D.Jayaram Bhat
  Professor of Botany
  Goa University
  Goa-403 206

  [Reply]

  VA:F [1.9.22_1171]
  Rating: 0 (from 0 votes)
 3. ಸುವರ್ಣಿನೀ ಕೊಣಲೆ
  Suvarnini Konale

  ವ್ಯಾಕರಣದ ಬಗ್ಗೆ ಬರದ್ದು ತುಂಬಾ ಲಾಯ್ಕ ಆಯ್ದು, ಉಪಯುಕ್ತ ವಿಷಯ.

  [Reply]

  VA:F [1.9.22_1171]
  Rating: 0 (from 0 votes)
 4. ಕಾಂತಣ್ಣ

  ವ್ಯಾಕರಣ ಭಾಷೆಯ ಆತ್ಮ, ಭಾಷೆ ವಾಹನವಾದ್ರೆ ಅದರ ಇಂಜಿನ್ನು ವ್ಯಾಕರಣ, ಅದ್ರ ಮರ್ತ್ರೆ ಭಾಷೆ ಬದುಕಗಾ ?

  [Reply]

  VN:F [1.9.22_1171]
  Rating: 0 (from 0 votes)
 5. ನಮ್ಮ ಭಾಷೆಯ ವಿಷಯಲ್ಲಿ ಈ ರೀತಿಯ ಚಿಂತನೆ ಬಾರೀ ಉತ್ತಮ ಬೆಳವಣಿಗೆ. ಕಾಂತಣ್ಣ ಭಾಷೆ ಇಂಜಿನ್ ಆದರೆ ಅದರ ನಡೆಸುವ ಇಂಧನ (ಪೆಟ್ರೋಲ್) ವ್ಯಾಕರಣ !, ಅಲ್ಲದೋ ?.

  [Reply]

  VA:F [1.9.22_1171]
  Rating: 0 (from 0 votes)
 6. ಅಜೆಕ್ಕಳ್ ಅಂಣ್ಣಂಗೆ ವಂದನಗೊ. ವ್ಯಾಕರಣ ವಿಷಯಲ್ಲಿ ನಮ್ಮ ಭಾಷೆ, ಕನ್ನಡ, ಸಂಸ್ಕೃತ ತುಂಬಾ ಸಾಮ್ಯತೆ ಇದ್ದು ಹೇಳಿ ಎನ್ನ ಅನಿಸಿಕೆ. ನಿಂಗೊ ಚುತುಕಾಗಿ ಬರದ್ದು ತುಂಬಾ ಶ್ಲಾಘನೀಯ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಡ್ಕತ್ತಿಮಾರುಮಾವ°ಅಕ್ಷರ°ದೊಡ್ಡಮಾವ°ನೆಗೆಗಾರ°ದೊಡ್ಮನೆ ಭಾವಶಾ...ರೀಶೀಲಾಲಕ್ಷ್ಮೀ ಕಾಸರಗೋಡುಹಳೆಮನೆ ಅಣ್ಣಚೆನ್ನಬೆಟ್ಟಣ್ಣವಾಣಿ ಚಿಕ್ಕಮ್ಮಪುತ್ತೂರಿನ ಪುಟ್ಟಕ್ಕಶರ್ಮಪ್ಪಚ್ಚಿಚೆನ್ನೈ ಬಾವ°ಶೇಡಿಗುಮ್ಮೆ ಪುಳ್ಳಿಅನಿತಾ ನರೇಶ್, ಮಂಚಿಮಂಗ್ಳೂರ ಮಾಣಿಸಂಪಾದಕ°ಕಳಾಯಿ ಗೀತತ್ತೆಬೋಸ ಬಾವಡೈಮಂಡು ಭಾವಪೆರ್ಲದಣ್ಣದೀಪಿಕಾವಿದ್ವಾನಣ್ಣಕಾವಿನಮೂಲೆ ಮಾಣಿಸುಭಗಪೆಂಗಣ್ಣ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ