ಕಾಯಿ -ಬೆಲ್ಲ -ಅಕ್ಕಿ

July 13, 2014 ರ 7:01 pmಗೆ ನಮ್ಮ ಬರದ್ದು, ಇದುವರೆಗೆ 8 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಭಾರೀ ಗಾಳಿ -ಮಳೆ !
ಚುಬ್ಬಣ್ಣನ ತೋಟಲ್ಲಿ ತೆಂಗಿನಮರ-ರಜಾ ಹಳೆ ಮರವೇ -ಮುರಿದು ಬಿದ್ದತ್ತು .
ಮಕ್ಕೊ ತೋಟಕ್ಕೆ ಓಡಿದವು.
ಕರ್ಕು-ಬೊಂಡ-ಬನ್ನಂಗಾಯಿ -ಬೆಳೆದ ಕಾಯಿ ಎಲ್ಲಾ ತಂದು ಮನೆ ಜಗಲಿಲಿ ರಾಶಿ ಹಾಕಿದವು.
ಮರ ಮುರಿದು ಹೋದದ್ದು ನಷ್ಟ ; ಮರದ ಕೊಬೇಲಿ ಇಪ್ಪದರ ಬಿಟ್ಟರೆ ಅದೂ ನಷ್ಟವೇ.ಹಾಂಗಾಗಿ ಚುಬ್ಬಣ್ಣ ಎಂತದೂ ಬೈವ ಮನಸ್ಸು ಮಾಡಿದ್ದ ಇಲ್ಲೆ. ಮಕ್ಕೊಗೆ ಬೊಂಡ ಕೆತ್ತಿ ಕೊಟ್ಟ. ನೀರು ಕುಡುದ ಮೇಲೆ ಅದಕ್ಕೆ ಪಾವೆಗೆ ಅವಲಕ್ಕಿ -ಸಕ್ಕರೆ ಹಾಕಿ ಬೆರಸಿ ತಿಂದೂ ಆತು. ಬನ್ನಂ ಗಾಯಿ ಮರದಿನ ದೋಸೆ ಮಾಡಲೆ ಬೇಕು ಹೇಳಿ ಸೊಲುದು ಮಡಗಿ ಆತು.
ಮತ್ತೆ ಅವನದ್ದು ಮಕ್ಕಳ ಹತ್ತರೆ ಚೋದ್ಯ-
“ಇದಾ, ಈಗ ಎಲ್ಲರಿಂಗೂ ಬೊಂಡ ತಿಂದಾತು .ಈಗ ಹೇಳಿ, ನಮ್ಮಲ್ಲಿ ಅಕ್ಕಿ ಕಾಯಿ ಬೆಲ್ಲ/ಸಕ್ಕರೆ -ಇದರ ಬೇರೆ ಬೇರೆ ರೂಪವ ಮಾತ್ರ ಸೇರಿಸಿ ಎಷ್ಟು ಬಗೆ ಪಾಕ ಮಾಡ್ಲೆ ಆವುತ್ತು? ಆದರೆ ಒಂದು ಶರ್ತ -ಅದಕ್ಕೆ ಉದ್ದು,ಹಸರು ,ಕಡ್ಲೆ ಮುಂತಾದ ಏವ ಧಾನ್ಯ ಸೇರಿಸಲಾಗ. ಪರಿಮಳಕ್ಕೆ ಏಲಕ್ಕಿ ,ರಜಾ ತುಪ್ಪ ಬೇಕಾದರೆ ಸೇರಿಸಲಕ್ಕು .”
ಮಗ-ಅವಲಕ್ಕಿ ,ಹೊದಳು,ಕಡಿ ಅಕ್ಕಿ,ಅಕ್ಕಿ ಹೊಡಿ -ಎಂತಾದರೂ ಅಕ್ಕನ್ನೇ ? ಕಾಯಿ,ಕೊಬ್ಬರಿ,ಬೊಂಡ,ತೆಂಗಿನೆಣ್ಣೆ ಯಾವುದೂ ಅಕ್ಕನ್ನೇ ?
ಮಗಳು -ಹಿಂಡಿಯೂ ಅಕ್ಕು ,ಅಲ್ಲದೋ ಅಪ್ಪ?[ಕಿಲಕಿಲನೆ ನೆಗೆ ಮಾಡುತ್ತು ]
ಚುಬ್ಬಣ್ಣ- ಅಕ್ಕು.
ಮಗಳು-ಹಾಂಗಾರೆ ಎನಗೆ ಗೊಂತಾತು ! ಅಕ್ಕಿ ಪಾಯಸ,ಸುಟ್ಟವು,ಪಚ್ಚಪ್ಪ ,ಈಗ ನಾವು ತಿಂದ ಬೊಂಡ ಅವಲಕ್ಕಿ ಸಕ್ಕರೆ ,ಸೇಮಗೆ-ಕಾಯಿ ಹಾಲು ,ತೆಳ್ಳವು -ಕಾಯಿಸುಳಿ-ಬೆಲ್ಲ !
ಚುಬ್ಬಣ್ಣ-ಇನ್ನೂ ಇದ್ದು.
ಮಗ-ಅದೆಲ್ಲಾ ಎನಗೆ ಗೊಂತಿದ್ದು .
ಮಗಳು-ಹಾಂಗಾರೆ ಹೇಳು ಅಂಬಗ ! ಸುಮ್ಮನೆ ಬಡಾಯಿ ಕೊಚ್ಚುತ್ತ ಇವ!
ಮಗ-ಆನು ನಾಳೆ ಎಲ್ಲಾ ಬರದು ತೋರಿಸುತ್ತೆ .
[ಹವ್ಯಕರು ಈ ಮೂರು ಬಗೆಗಳ ವಿವಿಧ ರೂಪಂಗಳ ಹೊಂದಿಸಿ ಬೇರೆ ಬೇರೆ ರೀತಿ ಕಡೆದು,ಬೇಯಿಸಿ,ಕಾಸಿ,ಹೊರಿದು-ತಿಂಡಿ ಮಾಡಲೆ ಉಷಾರಿ. ನಿಂಗಳೂ ರಜಾ ರಜ್ಜ ಆಲೋಚನೆ ಮಾಡಿ ಮಾಣಿ ಬರೆವ ಪಟ್ಟಿಗೆ ಸೇರಿಸಿ ಸಹಾಯ ಮಾಡಿ ].

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 8 ಒಪ್ಪಂಗೊ

  1. ಶ್ಯಾಮಣ್ಣ
    ಶ್ಯಾಮಣ್ಣ

    ಹೋ.. ವೇಣಿಯಕ್ಕನೇ ಆಯೆಕ್ಕಷ್ಟೆಯೋ ಹೇಳಿ ಕಾಣ್ತು…

    [Reply]

    ತೆಕ್ಕುಂಜ ಕುಮಾರ ಮಾವ°

    ತೆಕ್ಕುಂಜ ಕುಮಾರ ಮಾವ° Reply:

    ಅಡಿಗೆ ಸತ್ಯಣ್ಣ…?

    [Reply]

    ಶ್ಯಾಮಣ್ಣ

    ಶ್ಯಾಮಣ್ಣ Reply:

    ಅಪ್ಪಪ್ಪು… ಅಡಿಗೆ ಸತ್ಯಣ್ಣಂದೇ ಅಕ್ಕು…

    [Reply]

    VN:F [1.9.22_1171]
    Rating: 0 (from 0 votes)
  2. ತೆಕ್ಕುಂಜ ಕುಮಾರ ಮಾವ°
    ತೆಕ್ಕುಂಜ ಕುಮಾರ ಮಾವ°

    ಬನ್ನಂಗಾಯಿ ದೋಸೆ, ರವೆ.

    [Reply]

    VN:F [1.9.22_1171]
    Rating: 0 (from 0 votes)
  3. ಶೈಲಜಾ ಕೇಕಣಾಜೆ

    ಕಾಯಿ ಬರ್ಫಿ, ಬೆಲ್ಲಸುಳಿಯ ಹೊದಳವಲಕ್ಕಿ, ಬೊಂಡದ ಓಡುಪ್ಪಾಳೆ, ಕಡಿ ಅಕ್ಕಿ ಉಂಡೆ -ರವೆ ಎಲ್ಲ ಮಾಡ್ಲಕ್ಕು

    [Reply]

    VA:F [1.9.22_1171]
    Rating: 0 (from 0 votes)
  4. ವಿಜಯತ್ತೆ

    ಹರೇರಾಮ, ವಾಹ್ ಒಳ್ಳೆ ಶುದ್ದಿ ಗೋಪಾಲ . ಇದರ ಓದುವಾಗ ಕೊದಿ-ಕೊದಿ ಅವುತ್ತನ್ನೇ! ಬನ್ನಂಗಾಯಿ, ಅಕ್ಕಿ ಹಾಕಿ ಓಟುಪ್ಪಾಳೆ ಮಾಡ್ಳಾವುತ್ತು. ಎಳೆ ಬೊಂಡದ ಪಾವೆಯ ಸಕ್ಕರೆ ಹಾಕಿ,ಮಿಕ್ಸಿಲಿ ತಿರುಗಿಸಿ ಜೂಸು ಮಾಡ್ಳವುತ್ತು. . ಫ್ರಿಜ್ಜಿಲ್ಲಿ ಮಡಗೀರೆ ಬೇಸಗೆಲಿ ಕುಡಿವಲೆ ಒಳ್ಳೆದಾವುತ್ತು .ಇನ್ನೂ ಕೆಲಾವಿದ್ದು ಮತ್ತೆ ಹೇಳ್ತೆ ಆಗದೋ?

    [Reply]

    VN:F [1.9.22_1171]
    Rating: 0 (from 0 votes)
  5. Asha Balakrishna Bhat

    ಹಸಿಕಾಯಿ , ಏಲಕ್ಕಿ, ಬೆಲ್ಲ ಹಾಕಿ ಹೆಚ್ಚು ನೀರು ಹಾಕದ್ದೆ ಕಡದರೆ ಸೀವು ಚಟ್ನಿ ದೋಸೆ, ತೆಳ್ಳವಿಂಗೆ ಲಾಯಿಕಾವುತ್ತು. ಮತ್ತೆ ಹಾಲುಬಾಯಿ ನಮ್ಮ ಮದಲಣವರ ಅಡಿಗೆಯೇ ಅಲ್ಲದೋ?

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣರಾಜಣ್ಣಹಳೆಮನೆ ಅಣ್ಣವಿಜಯತ್ತೆದೊಡ್ಡಭಾವದೊಡ್ಮನೆ ಭಾವಚೆನ್ನೈ ಬಾವ°ಶ್ಯಾಮಣ್ಣಕಾವಿನಮೂಲೆ ಮಾಣಿವೇಣೂರಣ್ಣಶ್ರೀಅಕ್ಕ°ಅಜ್ಜಕಾನ ಭಾವಬಟ್ಟಮಾವ°ದೀಪಿಕಾಗೋಪಾಲಣ್ಣಬೊಳುಂಬು ಮಾವ°ದೇವಸ್ಯ ಮಾಣಿಶಾಂತತ್ತೆವಿದ್ವಾನಣ್ಣಪುಣಚ ಡಾಕ್ಟ್ರುಮುಳಿಯ ಭಾವಕಜೆವಸಂತ°ಗಣೇಶ ಮಾವ°ಅನುಶ್ರೀ ಬಂಡಾಡಿಪುತ್ತೂರುಬಾವಸರ್ಪಮಲೆ ಮಾವ°ಮಂಗ್ಳೂರ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ