ಸಮಸ್ಯೆ 102 : “ಸೇಮಗೆ ಒತ್ತುಲೆ ಆತಿದ ಬೇಗನೆ ಬಾ ಮಗನೇ”

September 12, 2015 ರ 6:00 amಗೆ ನಮ್ಮ ಬರದ್ದು, ಇದುವರೆಗೆ 37 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಳುದ ವಾರದ ಕಡ್ಲೆ ಪಾಯಸ ರೈಸಿದ ಲೆಕ್ಕಲ್ಲಿ ಈ ವಾರ ಸೇಮಗೆ ಮಾಡುವ ಮನಸ್ಸಾತಿದ.
ಈ ವಾರ “ಲ೦ಗರುಚ೦” ಅಥವಾ “ಜಗದ್ವ೦ದಿತ೦” ಹೇಳ್ತ ಅಕ್ಷರವೃತ್ತದ ಪರಿಚಯ ಮಾಡಿಗೊ೦ಬ° .
ಈ ವೃತ್ತದ ಲಕ್ಷಣ ಹೀ೦ಗಿದ್ದು : ನಾನನನಾ ನನ/ನಾನನನಾ/ನನ/ನಾನನನಾ

ಸಮಸ್ಯೆ : “ಸೇಮಗೆ ಒತ್ತುಲೆ ಆತಿದ ಬೇಗನೆ ಬಾ ಮಗನೇ”

ಎಲ್ಲೋರೂ ಸೇಮಗೆಯ ರುಚಿ ನೋಡುವ° , ಬನ್ನಿ.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 37 ಒಪ್ಪಂಗೊ

 1. ಇಂದಿರತ್ತೆ
  indiratte

  ಜಾಮಿಲಿ ಅದ್ದುವ ತಿಂಡಿಯ ಕಂಡರೆ ಕೂಗುವೆ ನೀನ್
  ಕೂರ್ಮವು ಪೂರಿಯು ನಿನ್ನೆಯೆ ಮಾಡಿದೆ ; ನಿತ್ಯವುದೇ
  ನೇಮವ ನಿಷ್ಠೆಲಿ ಮಾಡುವ ಅಜ್ಜನು ಹೇಳಿದ ಈ
  ಸೇಮಗೆ ಒತ್ತುಲೆ ಆತಿದ ಬೇಗನೆ ಬಾ ಮಗನೇ ||

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ಎರಡೂ ಪೂರಣ0ಗೊ ಲಾಯಕ ಆಯಿದು ಅತ್ತೆ .

  [Reply]

  VA:F [1.9.22_1171]
  Rating: 0 (from 0 votes)

  ಅದಿತಿ Reply:

  ಅತ್ತೆಯ ಎರಡೂ ಪದ್ಯಂಗ ಲಾಯಕ ಆಯ್ದು

  [Reply]

  VA:F [1.9.22_1171]
  Rating: 0 (from 0 votes)
 2. ಭಾಗ್ಯಲಕ್ಷ್ಮಿ

  ಕೈಲಾಸಲ್ಲೂ ಸೇಮಗೆ
  ಏ ಮಗ° ಸಿದ್ದಿವಿನಾಯಕ ನೀನಿದ ಏಳುವೆಯಾ?
  ಸೇಮಗೆ ಒತ್ತುಲೆ ಆತಿದ ಬೇಗನೆ ಬಾ ಮಗನೇ I
  ನೀಮೊದಲಾ ಶಿಖಿ ಷಣ್ಮುಖನೊಂದರಿ ಏಳ್ಸುವೆಯಾ?
  ಹೇ ಮಹದೇವನೆ ನಿ೦ಗಳೆ ಸೇಮಗೆ ಒತ್ತುವಿರಾ ?

  ಪಾರ್ವತಿ ಸೇಮಗೆ ಮಾಡ್ಲೆ ಗಣಪ್ಪನ ಏಳ್ಸುಲೆ ಹೆರಟತ್ತು . ಮೊದಾಲು ಷಣ್ಮುಖ ಒತ್ತಲಿ ,ಮತ್ತೆ ಆನು ಒತ್ತುತ್ತೆ ಹೇಳ್ತ ಅವ° . ಈ ಮಕ್ಕಳ ಕಾದರಾಗ ಹೇಳಿ ಶಿವನತ್ತರೆ ಸೇಮಗೆ ಒತ್ತಿ ಕೊಡ್ಲೆಡಿಗಾ ಕೇಳ್ತು .

  [Reply]

  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ ಮಾವ° Reply:

  ಅಬ, ಅದ್ಭುತ ಕಲ್ಪನೆ. ಪ್ರಾಸವ ಉಪಯೋಗಿಸಿದ ರೀತಿಯೇ ಸೂಪರ್..

  [Reply]

  VN:F [1.9.22_1171]
  Rating: 0 (from 0 votes)
  ಬೊಳುಂಬು ಮಾವ°

  ಬೊಳುಂಬು ಗೋಪಾಲ Reply:

  ಗೆಣಪ್ಪ ಚುಬ್ಬಣ್ಣನ ಲಡಾಯಿ, ಶಿವನ ಹತ್ರೆ ಸೇಮಗೆ ಒತ್ತಲೆ ಹೇಳಿದ್ದು, ಕಲ್ಪನೆ ಚೆಂದ ಆಯಿದು. ಓದಿ ಕೊಶಿಯಾತು.

  [Reply]

  ಭಾಗ್ಯಲಕ್ಷ್ಮಿ Reply:

  ಗೋಪಾಲಣ್ಣ ಹೇಳಿದಾಂಗೆ, ಗೆಣಪ್ಪ ಚುಬ್ಬಣ್ಣ ಹೇಳಿದರೆ ಹವ್ಯಕ ಸೊಗಡು ಒಳ್ಳೆತ ನೆಗೆತ್ತು

  [Reply]

  VA:F [1.9.22_1171]
  Rating: 0 (from 0 votes)
  ಇಂದಿರತ್ತೆ

  indiratte Reply:

  ಭಾಗ್ಯಕ್ಕಾ…ಕಡ್ಲೆಬೇಳೆ ಪಾಯಸದ ಹಾಂಗೆ ಸೇಮಗೆಯೂ ಒಳ್ಳೆತ ರುಚೀ…. ಆಯಿದನ್ನೇ ..

  [Reply]

  VA:F [1.9.22_1171]
  Rating: 0 (from 0 votes)

  ಶೈಲಜಾ ಕೇಕಣಾಜೆ Reply:

  ಸಕಾಲಿಕ ಆದ ಪೂರಣ ಲಾಯ್ಕ ಆಯಿದನ್ನೆ ಭಾಗ್ಯಕ್ಕಾ..

  [Reply]

  VA:F [1.9.22_1171]
  Rating: 0 (from 0 votes)
  ಮುಳಿಯ ಭಾವ

  ರಘು ಮುಳಿಯ Reply:

  ಅಪ್ಪು ,ಮಗನ ಹುಟ್ಟುಹಬ್ಬಕ್ಕೆ ಅಪ್ಪನೇ ಸೇಮಗೆ ಒತ್ತೆಕ್ಕಾದ್ದು .
  ಭಾಗ್ಯಕ್ಕ , ಅಮೋಘ ಪೂರಣ .ಚೌತಿ ಹಬ್ಬದ ಹೋಳಿಗೆಗೆ ಹೂರಣ ಆತು . ಅಭಿನಂದನೆ .

  [Reply]

  VA:F [1.9.22_1171]
  Rating: 0 (from 0 votes)

  ಭಾಗ್ಯಲಕ್ಷ್ಮಿ Reply:

  ಶೈಲಕ್ಕ,ಇಂದಿರತ್ತೆ, ತೆಕ್ಕುಂಜಮಾವ, ಬೊಳುಂಬು ಗೋಪಾಲಣ್ಣ ,ಮುಳಿಯದಣ್ಣ ..ಎಲ್ಲೋರಿಂಗೂ ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)

  ಅದಿತಿ Reply:

  ಸೂಪರೋ ಸೂಪರ್

  [Reply]

  VA:F [1.9.22_1171]
  Rating: 0 (from 0 votes)
 3. ಮುಳಿಯ ಭಾವ
  ರಘು ಮುಳಿಯ

  ಈ ಮಹರಾಯನ ಬೈದರೆ ಬಾಯಿಯೆ ಬಚ್ಚುಗಿದಾ
  ಹೋಮವ ನೀರಿನ ಮಾಡಿದ ಹಾಂಗೆಯೆ , ಕಾರ್ಕಳದಾ
  ಗೋಮಟನಾಂಗೆಯೆ ನಿಲ್ಲೆಡ ಚಡ್ಡಿಯ ಏರುಸಿಯೇ
  ಸೇಮಗೆ ಒತ್ತುಲೆ ಆತಿದ ಬೇಗನೆ ಬಾ ಮಗನೇ I

  [Reply]

  ಭಾಗ್ಯಲಕ್ಷ್ಮಿ Reply:

  ”ನೀರಿಲಿ” …ಹೇಳಿ ಆಯೆಕ್ಕಾತಾ?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮುಳಿಯ ಭಾವಪೆರ್ಲದಣ್ಣಕಳಾಯಿ ಗೀತತ್ತೆಕಾವಿನಮೂಲೆ ಮಾಣಿಡಾಮಹೇಶಣ್ಣಚೆನ್ನಬೆಟ್ಟಣ್ಣಕಜೆವಸಂತ°ವಿದ್ವಾನಣ್ಣಶರ್ಮಪ್ಪಚ್ಚಿಕೆದೂರು ಡಾಕ್ಟ್ರುಬಾವ°ಜಯಶ್ರೀ ನೀರಮೂಲೆನೆಗೆಗಾರ°ಎರುಂಬು ಅಪ್ಪಚ್ಚಿvreddhiಡಾಗುಟ್ರಕ್ಕ°ಪುಣಚ ಡಾಕ್ಟ್ರುಪಟಿಕಲ್ಲಪ್ಪಚ್ಚಿಕೇಜಿಮಾವ°ಸಂಪಾದಕ°ರಾಜಣ್ಣವೆಂಕಟ್ ಕೋಟೂರುಗೋಪಾಲಣ್ಣಯೇನಂಕೂಡ್ಳು ಅಣ್ಣಪವನಜಮಾವಉಡುಪುಮೂಲೆ ಅಪ್ಪಚ್ಚಿಶ್ಯಾಮಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ