ಸಮಸ್ಯೆ 104 : ಹೊಳೆಯ ನೀರು ಘಟ್ಟ ಹತ್ತಿ ಹರಿವಲಿದ್ದಡ

September 26, 2015 ರ 6:00 amಗೆ ನಮ್ಮ ಬರದ್ದು, ಇದುವರೆಗೆ 12 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈ ವಾರದ ಸಮಸ್ಯೆ ನಮ್ಮ ಕರಾವಳಿದು.
ಕರಾವಳಿಯ ಪ್ರಜೆಗೊ ಸಮಸ್ಯೆಗೆ ಪರಿಹಾರ ಬೇಕು ಹೇಳಿ ಹೋರಾಟ ಸುರು ಮಾಡಿದ್ದವು.

ನಮ್ಮ ಸಮಸ್ಯೆ  : ಹೊಳೆಯ ನೀರು ಘಟ್ಟ ಹತ್ತಿ ಹರಿವಲಿದ್ದಡ

ಬೈಲಿಲಿ ಭೋಗ ಷಟ್ಪದಿಯ ಈ ಸಮಸ್ಯೆಗೆ ಪರಿಹಾರ ಸಿಕ್ಕಿಗು ಅಲ್ಲದೊ?

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 12 ಒಪ್ಪಂಗೊ

 1. ಭಾಗ್ಯಲಕ್ಷ್ಮಿ

  ಕಳದ ವಸ್ತ್ರ ಕಬಡಿಯಾಡಿ
  ನೆಲಲಿ ಹೊರಳಿ ಕೆಸರು ಹಿಡ್ದ
  ರೆಳದುಯೆಳದು ಕಲ್ಲ ಮೇಲೆ ಅಮ್ಮ ಬಡಿವಗI
  ಬಳುದು ಕೆಸರು ನೀರದಲ್ಲಿ
  ತೆಳಿಯ ಹಾಂಗೆ ಮಂದವಾಗಿ
  ಹೊಳೆಯ ನೀರು ಘಟ್ಟ ಹತ್ತಿ ಹರಿವಲಿದ್ದಡ II

  ಕಳದ ವಸ್ತ್ರ =checks ಇಪ್ಪ ವಸ್ತ್ರ

  . ನಿ೦ಗಳ ವಸ್ತ್ರಲ್ಲಿಪ್ಪ ಮಣ್ಣಿನ ಹೊಳೆಕರೆಲಿ ಹೋಗಿ ತೊಳದಿಕ್ಕಿ ಬತ್ತೆ ಹೇಳಿ ಅಮ್ಮ ಹೇಳುವಗ ಮಕ್ಕಳ ಒಪ್ಪ (ಕಮೆಂಟ್ )ಪದ್ಯಲ್ಲಿ . ಇಲ್ಲಿ ಘಟ್ಟ ಹೇಳಿದರೆ ಮೆಟ್ಲು (ಸ್ನಾನ ಘಟ್ಟ ಹೇಳುವ ಹಾಂಗೆ) ಹೇಳುವ ಅರ್ಥಲ್ಲಿ ಉಪಯೋಗಿಸಿದ್ದು .

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ಒಳ್ಳೆ ಕಲ್ಪನೆ ಭಾಗ್ಯಕ್ಕ.

  [Reply]

  VA:F [1.9.22_1171]
  Rating: 0 (from 0 votes)
 2. K.Narasimha Bhat Yethadka

  ಕರಾಳ ಯೋಜನೆ
  ಹೊಳಗೆ ಅಡ್ಡ ಕಟ್ಟ ಕಟ್ಟಿ
  ಮಳೆಯ ನೇರ ಒಟ್ಟು ಮಾಡಿ
  ಹೊಳೆಯ ನೀರು ಘಟ್ಟ ಹತ್ತಿ ಹರಿವಲಿದ್ದ ಡ
  ಅಳತೆ ಮೀರಿ ನೇರ ಬಲುಗಿ
  ಇಳೆಯು ಬರಡು ಅಕ್ಕು ನೋಡಿ
  ಕಳಕಳಿಲಿ ಎದುರುಸಿ ಮಾಡಿ ದೊಡ್ಡ ಚಳವಳಿ

  [Reply]

  K.Narasimha Bhat Yethadka Reply:

  ನಾಲ್ಕನೆಯ ಗೆರೆಲಿ ನೇರ ಬದಲಾಗಿ ನೀರ ಹೇಳಿ ಓದಿಯೊಂ ಬದು.

  [Reply]

  VA:F [1.9.22_1171]
  Rating: 0 (from 0 votes)
  ಮುಳಿಯ ಭಾವ

  ರಘು ಮುಳಿಯ Reply:

  ಚಳುವಳಿ ಮಾಡಿ ನಾಯಕರ ಚಳಿ ಬಿಡುಸೆಕ್ಕಷ್ಟೇ ಮಾವ , ಲಾಯ್ಕ ಆಯಿದು .

  [Reply]

  VA:F [1.9.22_1171]
  Rating: 0 (from 0 votes)
 3. ಶೈಲಜಾ ಕೇಕಣಾಜೆ

  ಮಳೆಲಿ ನೀರು ಸಹಜ ಭುವಿಯ
  ತೊಳದು ಹರಿಯೆ ದಾರಿ ಚೆಂದ
  ತಳದು ಬಂದ ಗಾಧ ಕಂಡು ತಂದ ಯೋಜನೆ |
  ಬಳುದು ಪೂರ ತಿರುಗುಸುಲದ
  ತೊಳುದು ನಮ್ಮ ಜಲದ ಮೂಲ
  ಹೊಳೆಯ ನೀರು ಘಟ್ಟ ಹತ್ತಿ ಹರಿವಲಿದ್ದಡ ||

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ಗಾಧ ಹೇಳಿರೆ ಎಂತ ಶೈಲಜಕ್ಕ ?

  [Reply]

  ಶೈಲಜಾ ಕೇಕಣಾಜೆ Reply:

  ಆನಿಲ್ಲಿ ಗಾಢ ,ಅಗಾಧ ಹೇಳುವ ಅರ್ಥಲ್ಲಿ ಬಳಸಿದ್ದದು..

  [Reply]

  VA:F [1.9.22_1171]
  Rating: 0 (from 0 votes)
 4. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಬೆಳೆದ ಮೈಯ ಬೋಚು ಮಂದಿ
  ಬೆಳಿಯ ನೆಗೆಲಿ, ಪೈಸೆ ಮಾಡ್ಳೆ
  ತೆಳಿಯ ಕುಡಿವ ಜನಕೆ ನಾಮ ಹಾಕಲಿದ್ದಡ |
  ಫಲದ ಪಚ್ಚೆ ಕಾಡು ಕಡುದು
  ಇಳೆಯನೆಲ್ಲ ಗರ್ಪಿ ಬಗದು
  ಹೊಳೆಯ ನೀರು ಘಟ್ಟ ಹತ್ತಿ ಹರಿವಲಿದ್ದಡ ||

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ತೆಳಿಯ ಕುಡಿವ ಕರಾವಳಿಯ ಜೆನ .. ಒಳ್ಳೆ ಪೂರಣ ಬೊಳುಂಬು ಮಾವ .

  [Reply]

  VA:F [1.9.22_1171]
  Rating: 0 (from 0 votes)
 5. ಇಂದಿರತ್ತೆ
  indiratte

  ಕೊಳವೆಯೊಳವೆ ನೀರ ತುಂಬಿ
  ಎಳದುಬಿಡುವ ಬಯಲಸೀಮೆ
  ಹೊಳೆಯ ನೀರು ಘಟ್ಟ ಹತ್ತಿ ಹರಿವಲಿದ್ದಡ |
  ಸಲಿಲ ಭಾಗ್ಯ ತಪ್ಪಿ ಹೋಗೆ
  ಹಲುಬಿ ಬೊಬ್ಬೆ ಹಾಕಿ ನಿಂಗು
  ಬೆಳೆಯು ನಾಶವಕ್ಕು ಕಡಲದಂಡೆಲಿದ್ದದೂ ||

  [Reply]

  VA:F [1.9.22_1171]
  Rating: 0 (from 0 votes)
 6. ಚೆನ್ನೈ ಬಾವ°
  ಚೆನ್ನೈ ಭಾವ°

  ನಿಂಗ ಈ ವರೇಂಗೆ ನೂರ ನಾಕು ಸಮಸ್ಯೆ ಹೇದರೂ ಎನ್ನಂದ ಒಂದರನ್ನೂ ಬಗೆಹರುಸಲೆ ಎಡಿಗಾಯಿದಿಲ್ಲೆ ಸಂಪಾದಕರೇ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಿನಯ ಶಂಕರ, ಚೆಕ್ಕೆಮನೆಅಕ್ಷರ°ರಾಜಣ್ಣಹಳೆಮನೆ ಅಣ್ಣvreddhiವಸಂತರಾಜ್ ಹಳೆಮನೆಕಾವಿನಮೂಲೆ ಮಾಣಿಒಪ್ಪಕ್ಕಪುತ್ತೂರಿನ ಪುಟ್ಟಕ್ಕಪುತ್ತೂರುಬಾವಪಟಿಕಲ್ಲಪ್ಪಚ್ಚಿಡಾಮಹೇಶಣ್ಣಶರ್ಮಪ್ಪಚ್ಚಿಪವನಜಮಾವಪೆರ್ಲದಣ್ಣಸುವರ್ಣಿನೀ ಕೊಣಲೆಗಣೇಶ ಮಾವ°ಬೊಳುಂಬು ಮಾವ°ಶ್ರೀಅಕ್ಕ°ದೇವಸ್ಯ ಮಾಣಿಕೇಜಿಮಾವ°ದೊಡ್ಡಮಾವ°ಅನು ಉಡುಪುಮೂಲೆಜಯಗೌರಿ ಅಕ್ಕ°ಯೇನಂಕೂಡ್ಳು ಅಣ್ಣಜಯಶ್ರೀ ನೀರಮೂಲೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ