ಸಮಸ್ಯೆ 107 : ಕೊಳಲಿನಿ೦ಪಿನ ಸುಧೆಗೆ ಗೋಕುಲ ಚಳಿಯ ಮರದತ್ತು

ಚೆನ್ನೈಯ ಮಹಾಪ್ರವಾಹಲ್ಲಿ ಬೈಲಿನ ಸಮಸ್ಯಾಪೂರಣವೂ ಕೊಚ್ಚಿ ಹೋತೋ ಹೇಳ್ತ ಸ೦ಶಯ ಆಗಿತ್ತು..ಸದ್ಯ..ಹಾ೦ಗಾಯಿದಿಲ್ಲೆ.
ಇದಾ ಈ ವಾರದ ಸಮಸ್ಯೆ  :

“ಕೊಳಲಿನಿ೦ಪಿನ ಸುಧೆಗೆ ಗೋಕುಲ ಚಳಿಯ ಮರದತ್ತು”

ಈ ಭಾಮಿನಿ ಷಟ್ಪದಿಗೆ ಬೈಲಿಲಿ ಪೂರಣ೦ಗೊ ಹರುದು ಬರಳಿ..

 

ಸಂಪಾದಕ°

   

You may also like...

13 Responses

 1. ಶೈಲಜಾ ಕೇಕಣಾಜೆ says:

  ಮತ್ತೆ ಬಂದದು ಖುಷಿಯಾತಿದ…

  ಹೊಳವ ಬೆಶಿಲಿನ ಉದಿಯ ಕಾಲದ
  ತಳಿವ ಮೈಂದಿನ ಶೀತ ಮಾರುತ
  ಛಳಿಯ ಮಾಸಲಿ ಷಷ್ಠಿ ಕಳುದರೆ ಊರು ನಡುಗುತ್ತು |
  ಸುಳುದು ಬೀಸುವ ಗಾಳಿ ತಾಳ
  ಕ್ಕಿಳುದು ನುಡಿಸುವ ಮೇಘ ಶಾಮನ
  ಕೊಳಲಿನಿಂಪಿನ ಸುಧೆಗೆ ಗೋಕುಲ ಛಳಿಯ ಮರದತ್ತು ||

 2. ಬೊಳುಂಬು ಗೋಪಾಲ says:

  ಮಳೆಯ ವೈಭವ ಕಡಮೆಯಪ್ಪಗ
  ಕೊಳದು ಹೋಗಿಹ ಸೊಪ್ಪು ಕರಟದ
  ಒಳಗೆ ಹುಟ್ಟಿದ ಹುಳುಗೊ ಲಾರ್ವದ ಮೇಳ ಮೆರದತ್ತು |
  ಹಳೆಯ ಹಟ್ಟಿಲಿ ಸಗಣ ನೆಲದಲಿ
  ಕುಳಿತು ಝೇಂಕರಿಸುತ್ತ ನುಸಿಗಳ
  ಕೊಳಲಿನಿಂಪಿನ ಸುಧೆಗೆ ಗೋಕುಲ ಚಳಿಯ ಮರದತ್ತು ||

 3. ಭಾಗ್ಯಲಕ್ಷ್ಮಿ says:

  ತೆಳುದು ಬೀಸುವ ಚಳಿಯ ಗಾಳಿಗೆ
  ಮುಳಿಯ ಗುಡ್ಡೆಲಿ ಹಣ್ಣು ಹುಲ್ಲಿನ
  ಬೆಳಿಯ ಬೆಳ್ಳಿದೆ ಕರಿಯ ಕಾಳಿಯ ಕುಲವು ಮೇವಗಳೆ I
  ಇಳೆಯ ಮೇಲಣ ಕಾಟು ಮಾವಿನ
  ತಳಿರಿನೆಡೆಲಿಯೆ ಪಿಕವು ಕೂಗೊಗ
  ಕೊಳಲಿನಿ೦ಪಿನ ಸುಧಗೆ ಗೋಕುಲ ಚಳಿಯ ಮರದತ್ತು II

  ಚಳಿ ಕಾಲಲ್ಲಿ ದನಗಳ ಗುಡ್ಡಗೆ ಎಬ್ಬೊಗ, ಉದಾಸೀನ ಮಾಡಿಗೊಂಡು ಮೇವಲೆ ಹೆರಟ ಬೆಳಿ ಬಣ್ಣದ ಬೆಳ್ಳಿ ಮತ್ತೆ ಕಪ್ಪು ಬಣ್ಣದ ಕಾಳಿ ಹೇಳಿ ಹೆಸರಿಪ್ಪ ಎರಡು ದನಗಳೂ ಅವುಗಳ ಗಡಸುಗೊ, ಕಂಜಿಗೊ ಎಲ್ಲಾ ಮುಳಿ ಗುಡ್ದಲಿ ಹುಲ್ಲು ಮೇವಗ , ಕೋಗಿಲೆಯ ಧನಿ ಅವಕ್ಕೆ ಕೊಳಲು ನುಡಿಸಿದ ಹಾಂಗೆ ಕೇಳಿತ್ತು ಹೇಳುದು ಮೇಲಾಣ ಪದ್ಯದ ಸಾರ

 4. indiratte says:

  ಹಳುವಿನೊಳದಿಕೆ ದನವ ಮೇಶುಲೆ
  ಗೆಳೆಯರೆಲ್ಲರ ಬಪ್ಪಲೇಳಿರೆ
  ಎಳದು ಹೊದಕೆಯ ಗುಡಿಯ ಹೆಟ್ಟಿಯೆ ಗೊರಕೆ ಹೊಡದವದಾ |
  ಬಳಸಿ ನಿಂದವು ದನಗೊ ಹಿಂಡಿಲಿ
  ಹಳದಿವಸ್ತ್ರದ ಬಾಲಕೃಷ್ಣನ
  ಕೊಳಲಿನಿಂಪಿನ ಸುಧೆಗೆ ಗೋಕುಲ ಚಳಿಯ ಮರದತ್ತು ||

 5. indiratte says:

  ಮಳೆಯು ನಿಂದಿದು ಬೆಂಗಳೂರಿಲಿ ,
  ಕುಳಿರುಗಾಳಿಯು ಬೀಸಿ ಬಪ್ಪಗ
  ಬಳಿಯ ಬಸವನಗುಡಿಯ ಮಂದಿರ ತುಂಬಿತುಳುಕಿತ್ತು |
  ಚಳಕ ತೋರಿದ ಮುರಳಿ ಮಾಂತ್ರಿಕ
  ಪುಳಕಗೊಳಿಸಿದ ಗೋಡಖಿಂಡಿಯ
  ಕೊಳಲಿನಿಂಪಿನ ಸುಧೆಗೆ ಗೋಖಲೆ ಚಳಿಯ ಮರದತ್ತು ||

 6. ಎಳೆಯ ಮಕ್ಕಳ ಕೊ೦ದ ಕ೦ಸನ
  ಅಳಿಯ ಸಿರಿಪತಿ ಗುಡುಗು ಮಿ೦ಚಿನ
  ಮಳೆಗೆ ಗುಡ್ಡೆಯ ಕಿರು ಬೆರಳಕೊಡಿಲೆತ್ತಿಯಪ್ಪಗಳೇ|
  ತಳಿವ ಪನ್ನೀರಿ೦ಗೆ ಬೀಸುವ
  ಕುಳಿರುಗಾಳಿಯು ಸೇರಿ ಮೂಡಿದ
  ಕೊಳಲಿನಿ೦ಪಿನ ಸುಧೆಗೆ ಗೋಕುಲ ಚಳಿಯ ಮರದತ್ತು ||

  • ಬೊಳುಂಬು ಗೋಪಾಲ says:

   ಭಳಿರೆ ಮುಳಿಯ ಭಾವಯ್ಯ. ಪದ್ಯ ರೈಸಿತ್ತು. ಎಲ್ಲೋರ ಪದ್ಯಂಗಳುದೆ ಲಾಯಕಿತ್ತು.

 7. K.Narasimha Bhat Yethadka says:

  ಅನಿಸಿಕೆ
  ಸುಳಿವ ಚಳಿಗಾಳಿಗೆ ಹೊದದು ಕಂ-
  ಬಳಿಯ ಮನುಗಿ ಒರಗುವ ವಂಗೇ
  ಚಳಿಯ ಗೊಡವೆ ಯೆ ಇಲ್ಲೆ ಹೇದರೆ ತಪ್ಪು ಆವುತ್ತು
  ಬಳಸಿ ನಿಂದಾ ಗೋಪಿಯರ ಕೈ
  ಬಳಗಳ ಗಿಲಿಗಿಲಿ ದೆನಿ ಸೇರಿದ
  ಕೊಳಲಿನಿಂ ಪಿನ ಸುಧೆಗೆ ಗೋಕುಲ ಚಳಿಯ ಮರದತ್ತು
  (ಬಳಸಿ=ಸುತ್ತುಗಟ್ಟಿ,ದೆನಿ=ಶಬ್ದ )

 8. ರಘು ಮುಳಿಯ says:

  ಏತಡ್ಕ ಮಾವಾ ,
  ಎರಡನೇ ಸಾಲಿಲಿ ಸಣ್ಣ ಯತಿ ಸಮಸ್ಯೆ ಇದ್ದರೂ ಮಾತ್ರಾದೋಷ ಕಾಣ್ತಿಲ್ಲೆ .
  ಗುಡಿ ಹೆಟ್ಟಿ ಮನುಗಿದವಂಗೆ ಚಳಿ ಇಲ್ಲೆ, ಕೊಳಲ ಗಾನದ ಸುತ್ತ ಚಳಿ ಸುಳಿತ್ತಿಲ್ಲೆ.. ಒಳ್ಳೆ ಪೂರಣ .

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *