ಸಮಸ್ಯೆ 110 : ಮನ ನೆ೦ಪಿಲಿ ಕೊರಗಿತು ಇರುಳು

ಈ ವಾರ ಶರಷಟ್ಪದಿಲಿ ಸಮಸ್ಯೆ : “ಮನ ನೆ೦ಪಿಲಿ ಕೊರಗಿತು ಇರುಳು”

ಯಾವ ಕಾರಣಕ್ಕೆ ಮನ ಮರುಗಿತ್ತು ನೋಡುವ,ಬನ್ನಿ..

ಸಂಪಾದಕ°

   

You may also like...

25 Responses

 1. ರೇವತಿ.ಯು.ಎಮ್. says:

  ಜನಕನ ಪ್ರೀತಿಯ
  ತನುಜೆಯು ಆನೂ.
  ಮನ ಅಪ್ಪನ ಮರವಲೆ ಇಲ್ಲೆ
  ಜನಕನು ಅಗಲಿದ
  ದಿನದಿಂದಲೆ ಈ
  ಮನ ನೆಂಪಿಲಿ ಕೊರಗಿತು ಇರುಳು.

  • indiratte says:

   ಲಾಯ್ಕ ಆಯಿದು ರೇವತಿ …

   • ರೇವತಿ.ಯು.ಎಮ್. says:

    ಧನ್ಯವಾದಂಗೊ ಇಂದಿರಕ್ಕ.

    ಆರಂಭದ ಸಾಲಿಲಿ ಪ್ರೀತಿಯ ಹೇಳಿ ಬರದರೆ ಸರಿ ಆವ್ತೋ ಅಲ್ಲಾ ನೆಚ್ಚಿನ ಹೇಳಿದರೆ ಸರಿಯೋ?

  • ಬೊಳುಂಬು ಗೋಪಾಲ says:

   ಒಳ್ಳೆ ಕಲ್ಪನೆ ರೇವತಿಯಕ್ಕಾ. ಲಾಯಕಾಯಿದು.

 2. ರಘು ಮುಳಿಯ says:

  ಒಳ್ಳೆ ಪ್ರಯತ್ನ ರೇವತಿ ಅಕ್ಕಾ.ಬೈಲಿನ ಹಳೆ ಸಮಸ್ಯೆಗೊಕ್ಕೂ ಪೂರಣ ಬರೆಯಿ.
  ಜನಕನ ಮುದ್ದಿನ
  ತನುಜೆಯು ಆನೀ
  ತನಕವು ಬದುಕಿದೆ ನೆಮ್ಮದಿಲಿ
  ದಿನ ಕಳುದತ್ತು ಮ
  ಸಣ ಮಾಡಿದವೀ
  ಮನ ನೆಂಪಿಲಿ ಕೊರಗಿತು ಇರುಳು

  ಹೇಳಿ ಮಾಡುಲಕ್ಕು.ಜನಕ, ಮನ ಹೇಳ್ತ ಶಬ್ದಂಗೊ ಪುನರಾವರ್ತನೆ ಆಗಿ ಕವನದ ತೂಕ ರಜ ಕಮ್ಮಿ ಅಪ್ಪಲೆ ಸಾಧ್ಯ ಇದ್ದು.ನಮ್ಮ ಶಬ್ಧ ಭಂಡಾರವನ್ನು ಹೆಚ್ಚು ಮಾಡುಲೆ ಈ ಆದಿಪ್ರಾಸದ ನಿಯಮ ಸಹಕಾರಿ.

  ತನಕವು ಕ

  • ರೇವತಿ.ಯು.ಎಮ್. says:

   ರಘು ಅಣ್ಣ,ಎನ್ನ ಸಣ್ಣ ಪ್ರಯತ್ನಕ್ಕೆ ನಿಂಗ ಎಲ್ಲೊರು ನೀಡಿದ ಪ್ರೋತ್ಸಾಹಕ್ಕೆ ಬಹಳಷ್ಟು ಧನ್ಯವಾದಂಗೊ.

   • ರೇವತಿ.ಯು.ಎಮ್. says:

    ಇನ್ನೊಂದು ಪ್ರಯತ್ನ, ತಪ್ಪಿದ್ದರೆ ತಿಳಿಶಿಕ್ಕಿ.

 3. ರೇವತಿ.ಯು.ಎಮ್. says:

  ತನುಜೆಯ ಮೇಲೆಯೆ
  ಅನುಪಮ ಮಮತೆಯ
  ಅನುದಿನ ತೋರ್ಸಿದೆ ಓ ಪಿತನೆ
  ಜನಕನು ಅಗಲಿದ
  ದಿನದಿಂದಲೆ ಈ
  ಮನ ನೆಂಪಿಲಿ ಕೊರಗಿತು ಇರುಳು.

  • ರಘು ಮುಳಿಯ says:

   ಭಾರೀ ಲಾಯಕ ಪೂರಣ . ತಪ್ಪಿಲ್ಲೆ.. ಅಭಿನಂದನೆ .

 4. manjunath says:

  ‘ಕೊರಗಿತು ಇರುಳು’ ವಿಸಂಧಿ ದೋಷ ಆಗ್ತಿಲ್ಯ? ಅದು ಕೊರಗಿತಿರುಳು ಆಗಡ್ದ ?

 5. ರಘು ಮುಳಿಯ says:

  ಮಂಜುನಾಥ ಅಣ್ಣನ ಸಂಶಯ ಸರಿ ಇದ್ದು . ಆದರೆ ಹವಿಗನ್ನಡಲ್ಲಿ ಬರವಗ ಭಾಷಾ ಶುದ್ಧಿಯ ಉಳಿಸಿಗೊ೦ಬಲೆ ಅನಿವಾರ್ಯವಾಗಿ ವಿಸಂಧಿಯ ದೋಷ ಹೇಳಿ ಪರಿಗಣಿಸೊದು ಬೇಡ ಹೇಳಿ ಒಪ್ಪಣ್ಣನ ಬೈಲಿಲಿ ತೀರ್ಮಾನ ಮಾಡಿದ್ದು .

 6. ರಘು ಮುಳಿಯ says:

  ” ಮನ ನೆ೦ಪಿಲಿ ಕೊರಗಿತ್ತಿರುಳು” ಹೇಳಿ ಮಾಡಿರೆ ಸರಿ ಆವುತ್ತು ,ಅಣ್ಣ . ತಿದ್ದುಪಡಿಗೆ ಧನ್ಯವಾದ .

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *