ಸಮಸ್ಯೆ 112 : ಕಮಲ ಕೆ೦ಪೇರಿತ್ತು ಸೂರ್ಯನ ಶಾಖ ತಡೆಯದ್ದೆ

ಈ ವಾರದ ಸಮಸ್ಯೆ ಸೆಕೆಗಾಲದ್ದು.ಶಿವರಾತ್ರಿಗೆ ಮದಲೇ ಇಷ್ಟು ಸೆಕೆ ಆದರೆ ಹೇ೦ಗೆ ?

ಭಾಮಿನಿ ಷಟ್ಪದಿಲಿಪ್ಪ ಸಮಸ್ಯೆಗೆ ಪರಿಹಾರ೦ಗೊ ಬರಲಿ.

ಸಮಸ್ಯೆ  : ಕಮಲ ಕೆ೦ಪೇರಿತ್ತು ಸೂರ್ಯನ ಶಾಖ ತಡೆಯದ್ದೆ

ಸಂಪಾದಕ°

   

You may also like...

13 Responses

 1. ಶೈಲಜಾ ಕೇಕಣಾಜೆ says:

  ಭ್ರಮೆಯ ಸುಖಲಿದ ಹಸಿರು ಪರಿಸರ
  ತಮಕೆ ನೂಕಿರೆ ಮಲಿನ ಹೆಚ್ಚಿಕಿ
  ಕಮಲ ಕೆಂಪೇರಿತ್ತು ಸೂರ್ಯನ ಶಾಖ ತಡೆಯದ್ದೆ |
  ಕ್ರಮವೆ ತಪ್ಪುಗು ಕಾಲ ಚಕ್ರದ
  ಹಿಮವು ಕರಗಿರೆ ಬಂದು ಭರನೆರೆ
  ಸಮಲಿ ಹೋಕದ ಕಲಕಿ ಶಾಂತಿಯ ವಿಕೃತಿ ಹೆರವೊಳವು ||

  • ರಘು ಮುಳಿಯ says:

   ಶೈಲಜಕ್ಕಾ , “ಕಾಲ ಚಕ್ರದ ಹಿಮವು ಕರಗಿರೆ” – ಒಳ್ಳೆ ಪೂರಣ, ಅಭಿನ೦ದನೆ .

 2. indiratte says:

  ಕಮಲಮಿತ್ರನು ಹೊತ್ತಿ ಉರಿವಗ
  ಕಮಲನೇತ್ರಗೆ ಕಣ್ಣುಬೇನೆಯು
  ಕಮಲಪೀಠನ ಮನೆಯ ಬಾಗಿಲು ಕಾದುಹೋಯಿದಡ |
  ಕಮಲಮುಖಿ ಶಿವೆಯ ನೆಲ ಕರಗುಗು
  ಕಮಲನಾಭಗೆ ಉಷ್ಣ ಹೆಚ್ಚುಗು
  ಕಮಲ ಕೆಂಪೇರಿತ್ತು ಸೂರ್ಯನ ಶಾಖ ತಡೆಯದ್ದೆ ||

  • ರಘು ಮುಳಿಯ says:

   ಕಮಲ ಶಬ್ದವನ್ನೇ ಉಪಯೋಗ ಮಾಡಿ ಒ೦ದು ಪೂರಣ ಮಾಡಿದ್ದರ ನೋಡಿ ಬೈಲಿನ ಮುಖಕಮಲ ಅರಳಿತ್ತು .. ಭಲೇ ಅತ್ತೆ ..

 3. ಬೊಳುಂಬು ಗೋಪಾಲ says:

  ಗಮನ ಹರುಸೀ ಚೆಂದ ನೋಡಲೆ
  ನಮಿಸಿ ಭಕುತಿಲಿ ಪುಣ್ಯ ಪಡವಲೆ
  ತಮಿಳುನಾಡಿನ ವಿವಿಧ ಜಾಗೆಲಿ ಪಯಣ ಹೊಡದತ್ತು |
  ಅಮರ ಲೋಕದ ರಂಭೆ ಬೆಡಗಿನ
  ನಮುನೆ ತೋರುವ ಲಲನೆಯಾಮುಖ
  ಕಮಲ ಕೆಂಪೇರಿತ್ತು ಸೂರ್ಯನ ಶಾಖ ತಡೆಯದ್ದೆ ||

  ಕೆಂಪೇರಿ, ಮತ್ತೆ ಕರಟಿ ಕಪ್ಪುದೆ ಆತು !

  • ರಘು ಮುಳಿಯ says:

   ಹ..ಹಾ.. ನವನವೀನ ಪೂರಣ .ಕಲ್ಪನೆ ಲಾಯಕ ಆಯಿದು ಬೊಳುಂಬು ಮಾವಾ .ಆ ಲಲನೆ ಜಯ – ಲಲಿತೆಯೋ ?

 4. K.Narasimha Bhat Yethadka says:

  ಕಾಯಕ
  ಸುಮತಿ ಹೆರಟದು ಕೆಲಸದ ಮನಗೆ
  ಅಮರಿದ ಮಗುವಿನಾ ಎಳೆಯ ಮುಖ-
  ಕಮಲ ಕೆಂಪೇರಿತ್ತು ಸೂರ್ಯನ ಶಾಖ ತಡೆಯದ್ದೆ
  ವಿಮಲ ಜಲವುದೆ ಅಶನ ವಸನವು-
  ದೆ ಮನೆಯುದೆ ಬೇಕು ಮನುಜ ಕುಲಕೆ
  ಮಮತೆ ತುಂಬಿದ ಮಾತೃ ಮಡಿಲಿನ ಕೆಲಸ ನಿತ್ಯದ್ದೆ
  (ವಿಮಲ=ಶುದ್ಧವಾದ )

  • ರಘು ಮುಳಿಯ says:

   ಪೂರಣ ಲಾಯ್ಕ ಆಯಿದು ಮಾವ .
   ಅಲ್ಲಲ್ಲಿ ಯತಿ ಸಮಸ್ಯೆ , ಐದನೆ ಸಾಲಿಲಿ ರಜ ಹೆಚ್ಚು .

 5. ರಘು ಮುಳಿಯ says:

  ಗಮಕ ನವ್ಯದ ಸುಳಿಯ ನೀರಿನ
  ಸಮಲುವಿಕೆಯಬ್ಬರಕೆ ಸಿಕ್ಕುವ
  ನಮುನೆಯಾತನ್ನೆಪ್ಪ ಚಳಿಗಾಲಲ್ಲಿ ಈ ವರುಷ |
  ತಮವ ನೂಕಿದ ಘಳಿಗೆ ಚಿರ ಸ೦
  ಗಮದ ಆಸೆಲಿ ಮೋರೆಯರಳಿದ
  ಕಮಲ ಕೆ೦ಪೇರಿತ್ತು ಸೂರ್ಯನ ಶಾಖ ತಡೆಯದ್ದೆ ||

 6. ರಘು ಮುಳಿಯ says:

  ಹಿಮದ ಗುಡ್ಡೆಯ ಕೊಡಿಲಿ ಮನ್ಮಥ
  ಅಮರಿ ಬಿಟ್ಟಾ ಪ೦ಚ ಬಾಣಕೆ
  ಗಮನ ತಪ್ಪಿದ ಶಿವನ ಮೂರನೆ ಕಣ್ಣು ಒಡೆವದ್ದೆ
  ದಮನವಾದನೊ ಮದನ ಕಿಡಿ ನೋ
  ಡುಮೆಯೆ ಹೆದರಿತ್ತೊ೦ದು ಚಣ ಮುಖ
  ಕಮಲ ಕೆ೦ಪೇರಿತ್ತು ಸೂರ್ಯನ ಶಾಖ ತಡೆಯದ್ದೆ

 7. ರೇವತಿ.ಯು.ಎಮ್. says:

  ಅಮಿತ ಒಲವಿಂದ ಉದಿಯಪ್ಪಗ
  ಮಮತೆಲಿಯೆ ಕಾದುಗೊಂಡಿತ್ತಾ
  ಅಮಲ ಒಲುಮೆಯ ದಳಗಳಲಿ ತುಂಬಿದಾ ಶ್ವೇತಾಂಬುಜ
  ತಮವ ಓಡುಸಿ ಬಂದ ರವಿಯಾ
  ಗಮನದಾ ರಭಸಕ್ಕೆ ಆ ಬೆಳಿ
  ಕಮಲ ಕೆಂಪೇರಿತ್ತು ,ಸೂರ್ಯನ ಶಾಖ ತಡೆಯದ್ದೆ.

 8. ರಘು ಮುಳಿಯ says:

  ಬೆಳಿ ಹೂಗು ಸೂರ್ಯನ ಶಾಖಕ್ಕೆ ಕೆಂಪಾತು.. ರೇವತಿ ಅಕ್ಕನ ನವ ಕಲ್ಪನೆ ತುಂಬಾ ಲಾಯ್ಕ ಇದ್ದು . ಸಣ್ಣ ತಿದ್ದುಪಡಿ ಮಾಡಿದೆ .

  ಅಮಿತ ಒಲವಿಂದ ಉದಿಯಪ್ಪಗ
  ಮಮತೆಲಿಯೆ ಕಾದುಗೊಂಡಿತ್ತಾ
  ಅಮಲ ಒಲುಮೆಯ ತುಂಬು ದಳಗಳ ಹೂಗು ಕೆಸರಿನೊಳ
  ತಮವ ಓಡುಸಿ ಬಂದ ರವಿಯಾ
  ಗಮನದಾ ರಭಸಕ್ಕೆ ಆ ಬೆಳಿ
  ಕಮಲ ಕೆಂಪೇರಿತ್ತು ಸೂರ್ಯನ ಶಾಖ ತಡೆಯದ್ದೆ.

  • ರೇವತಿ.ಯು.ಎಮ್. says:

   ತಪ್ಪು ಇಪ್ಪಲ್ಲಿ ಅಥವಾ ಸರಿ ಕಾಣದ್ದಲ್ಲಿ ಧಾರಾಳವಾಗಿ ತಿದ್ದುಪಡಿ ಮಾಡ್ಲಕ್ಕು ರಘು ಅಣ್ಣ. ಧನ್ಯವಾದಂಗೊ,

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *