ಸಮಸ್ಯೆ 115 : “ಬೆಲ್ಲದ೦ಡೆಗೆ ಬಪ್ಪ ಎರುಗಿನಾ೦ಗೆ”

March 26, 2016 ರ 6:00 amಗೆ ನಮ್ಮ ಬರದ್ದು, ಇದುವರೆಗೆ 13 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

 ಈ ವಾರದ ಸಮಸ್ಯೆ ಚೌಪದಿಲಿ.
ಸಮಸ್ಯೆ :ಬೆಲ್ಲದ೦ಡೆಗೆ ಬಪ್ಪ ಎರುಗಿನಾ೦ಗೆ”

ಪ್ರತಿ ಮನೆಲಿ ಕಾ೦ಬ ಈ ಸಮಸ್ಯೆಗೆ ಒ೦ದು ಪರಿಹಾರ ಹುಡುಕ್ಕುವ,ಬನ್ನಿ.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 13 ಒಪ್ಪಂಗೊ

 1. ಇಂದಿರತ್ತೆ
  indiratte

  ಚೆಲ್ಲಿತ್ತು ಬಾನಸುಧೆ ಯಮುನೆನದಿ ತೀರಲ್ಲಿ…..
  ಗೊಲ್ಲ ಬಾಲನ ಕೊಳಲಗಾನಕ್ಕೆ ಕೊಣುದ
  ವೆಲ್ಲ ಗೋಪಿಕೆಗೊ ಕೃಷ್ಣನ ಸುತ್ತ ಮರುಳಾಗಿ
  ಬೆಲ್ಲದಂಡೆಗೆ ಬಪ್ಪ ಎರುಗಿನಾಂಗೆ ||

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ಆಹಾ.. ಯಮುನಾತಟದ ನೃತ್ಯ ರೂಪಕ ಕಣ್ಣ ಮುಂದೆ ಕಟ್ಟಿತ್ತು , ಒಳ್ಳೆ ಕಲ್ಪನೆ ಇಂದಿರತ್ತೆ .

  [Reply]

  VA:F [1.9.22_1171]
  Rating: 0 (from 0 votes)
 2. ವಿಜಯತ್ತೆ

  ಬಹು ಲಾಯ್ಕಾಯಿದು ಇಂದಿರತ್ತೆ

  [Reply]

  ಇಂದಿರತ್ತೆ

  indiratte Reply:

  ಧನ್ಯವಾದಂಗೊ ಅತ್ತೆ

  [Reply]

  VA:F [1.9.22_1171]
  Rating: 0 (from 0 votes)
 3. K.Narasimha Bhat Yethadka

  ಹಾಂಗೆ-ಹಾಂಗೆ
  ಮಲ್ಲಿಗೆಯ ಹೂಗಿಂಗೆ ಬಪ್ಪ ಹುಳುವಿನ ಹಾಂಗೆ
  ಗಲ್ಲಿ ಗಲ್ಲಿಲಿಯಿಪ್ಪ ಕುಡಿಮನೆಯ ಹಾಂಗೆ
  ಕೊಲ್ಲಿ ರಾಷ್ಟ್ರದ ಹಣವ ಊರಿಂಗೆ ತಂದಾಂಗೆ
  ಬೆಲ್ಲದಂಡೆಗೆ ಬಪ್ಪ ಎರುಗಿನಾಂಗೆ

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ಹಾ೦ಗೆ -ಹಾ೦ಗೆ , ಉಪಮೆಗಳ ಚೌಪದಿ ಬಹು ಲಾಯ್ಕಾಯಿದು ಮಾವ .

  [Reply]

  VA:F [1.9.22_1171]
  Rating: 0 (from 0 votes)
 4. ಶೈಲಜಾ ಕೇಕಣಾಜೆ

  ಗೆಲ್ಲ ಹತ್ತಿಯೆ ಕೊಯಿಗು ಜೊಂಕೆ ಜೊಂಕೆಲಿ ನೇಲ್ವ
  ಮೆಲ್ಲಿ ತಿಂಬಲೆ ಬೀಜ, ಮಾವಿನಣ್ಣೂ
  ಎಲ್ಲ ಸೇರುಗು ಬಚ್ಚಿಯಿರುಳು ಅಜ್ಜಿಯ ಬುಡಲಿ
  ಬೆಲ್ಲದಂಡೆಗೆ ಬಪ್ಪ ಎರುಗಿನಾಂಗೇ || :)

  ಚೆಲ್ಲಿ ತೋಂಕುವ ಪೈಸೆ, ಲೊಟ್ಟೆ ಹೇಳುವ ಬುದ್ಧಿ
  ಕೊಲ್ಲುಗಿಂದಿನ ಜನರ ಬದುಕ ಭಾವ
  ಜೊಲ್ಲು ಅರುಶಿಯೆ ಕಿಸಿಗು ಲಾಭ ಹೊಡವಲೆ ಎಲ್ಲ
  ಬೆಲ್ಲದಂಡೆಗೆ ಬಪ್ಪ ಎರುಗಿನಾಂಗೇ ||

  [Reply]

  VA:F [1.9.22_1171]
  Rating: 0 (from 0 votes)
 5. ಮುಳಿಯ ಭಾವ
  ರಘು ಮುಳಿಯ

  ಎರಡು ವಿಭಿನ್ನ ಪೂರಣ೦ಗಳೂ ಭಾರೀ ಲಾಯ್ಕಾಯಿದು ಶೈಲಜಕ್ಕಾ..

  [Reply]

  VA:F [1.9.22_1171]
  Rating: 0 (from 0 votes)
 6. ಮುಳಿಯ ಭಾವ
  ರಘು ಮುಳಿಯ

  ಕಲ್ಲಿಡ್ಕಿ ಓಡುಸಲೆ ಎಡಿಯದ್ದ ಮ೦ಗ೦ಗೊ
  ಹಲ್ಲು ಕಿಸಿವದು ನೋಡು ಗೊರಟು ಚೀಪಿ
  ಗೆಲ್ಲುಗಳ ಮೇಲೆಲ್ಲ ಹತ್ತಿ ಸುಳುದವು, ಮನೆಲಿ
  ಬೆಲ್ಲದ೦ಡೆಗೆ ಬಪ್ಪ ಎರುಗಿನಾಂಗೇ ||

  [Reply]

  VA:F [1.9.22_1171]
  Rating: 0 (from 0 votes)
 7. ಮುಳಿಯ ಭಾವ
  ರಘು ಮುಳಿಯ

  ಎಲ್ಲಿ ನೋಡಿದರಲ್ಲಿ ಕಾ೦ಚಾಣ ಝಣಝಣವು
  ಚೆಲ್ಲಿತ್ತು ಸರಕಾರ ತರತರದ ಭಾಗ್ಯ
  ಗುಲ್ಲು ಮಾಡುತ ಬಕ್ಕು ಸ೦ಚಿ ತು೦ಬುಸಲೆ ಜೆನ
  ಬೆಲ್ಲದ೦ಡೆಗೆ ಬಪ್ಪ ಎರುಗಿನಾ೦ಗೆ ||

  [Reply]

  VA:F [1.9.22_1171]
  Rating: 0 (from 0 votes)
 8. ರೇವತಿ.ಯು.ಎಮ್.

  ಆಲ್ಲಲ್ಲಿ ಸಭೆ ಮಾಡೊ ರಾಜಕಾರಣಿಗೊಕ್ಕೆ
  ನಾಲಗೆಯ ಮಾತೇ ಸಾಕು, ಮಾತಿನ
  ಮಲ್ಲರಿಪ್ಪ ಕಡೆ ಸೇರುತ್ತವೊಂದಷ್ಟು ಜನ
  ಬೆಲ್ಲದಂಡೆಗೆ ಬಪ್ಪ ಎರುಗಿನಾಂಗೆ.

  [Reply]

  ಮುಳಿಯ ಭಾವ

  ಮುಳಿಯ ಭಾವ Reply:

  ಒಳ್ಳೆ ಪ್ರಯತ್ನ ಅಕ್ಕ , ಸಣ್ಣ ತಿದ್ದುಪಡಿ .

  ಅಲ್ಲಲ್ಲಿ ಸಭೆ ಮಾಡ್ತ ರಾಜಕಾರಣಿಗೊಕ್ಕೆ
  ಚೆಲ್ಲುಲಿಪ್ಪದು ಮಾತು ಬ೦ಡವಾಳ
  ಮಲ್ಲ೦ಗೊ ಇಪ್ಪ ಕಡೆ ಸೇರುತ್ತವಷ್ಟು ಜನ
  ಬೆಲ್ಲದಂಡೆಗೆ ಬಪ್ಪ ಎರುಗಿನಾಂಗೆ.

  [Reply]

  VN:F [1.9.22_1171]
  Rating: 0 (from 0 votes)
 9. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಹಲ್ಲು ತಿಕ್ಕುವ ಮದಲೆ ಜೊಲ್ಲು ಹರುಶುತ ಹೆರಟು
  ಮೆಲ್ಲ ಪೀಂಕುಸಿ ಪೈಸೆ ಮಗಳ ಪರ್ಸಿಂದ
  ಕಳ್ಳಿನಂಗಡಿ ಕಡಗೆ ನೆಡದತ್ತು ಬಟ್ಯಪ್ಪ
  ಬೆಲ್ಲದಂಡಗೆ ಬಪ್ಪ ಎರುಗಿನಾಂಗೆ ||

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುಣಚ ಡಾಕ್ಟ್ರುಚೂರಿಬೈಲು ದೀಪಕ್ಕಅನು ಉಡುಪುಮೂಲೆಪಟಿಕಲ್ಲಪ್ಪಚ್ಚಿವಸಂತರಾಜ್ ಹಳೆಮನೆಮುಳಿಯ ಭಾವಶ್ಯಾಮಣ್ಣಕೇಜಿಮಾವ°ಜಯಶ್ರೀ ನೀರಮೂಲೆಅನಿತಾ ನರೇಶ್, ಮಂಚಿಚೆನ್ನಬೆಟ್ಟಣ್ಣಬೊಳುಂಬು ಮಾವ°ಮಾಷ್ಟ್ರುಮಾವ°ಪುಟ್ಟಬಾವ°ಕಾವಿನಮೂಲೆ ಮಾಣಿಶುದ್ದಿಕ್ಕಾರ°ಬಟ್ಟಮಾವ°ಉಡುಪುಮೂಲೆ ಅಪ್ಪಚ್ಚಿಸುವರ್ಣಿನೀ ಕೊಣಲೆಶ್ರೀಅಕ್ಕ°ಪುತ್ತೂರುಬಾವಸಂಪಾದಕ°ಎರುಂಬು ಅಪ್ಪಚ್ಚಿಅಜ್ಜಕಾನ ಭಾವಪ್ರಕಾಶಪ್ಪಚ್ಚಿಶೇಡಿಗುಮ್ಮೆ ಪುಳ್ಳಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ