ಸಮಸ್ಯೆ 116 : ಸೇತು ಮುರುದು ಹೋತು ಕಟ್ಟಿಗೊ೦ಡು ಇಪ್ಪಗ

ಈ ವಾರದ ಸಮಸ್ಯೆ ಯುಗ ಯುಗ೦ಗಳದ್ದು.ತ್ರೇತಾಯುಗಲ್ಲಿ ಸಮುದ್ರಕ್ಕೆ ಸೇತುವೆ ಕಟ್ಟೊಗ ಕಲ್ಲುಗೊ ಮುಳುಗಿದ್ದಕ್ಕೆ ಪರಿಹಾರ ಸಿಕ್ಕಿದ್ದು.ಆದರೆ ಕಲಿಯುಗಲ್ಲಿ ಕಟ್ಟೊಗಳೇ ಮುರುದು ಬೀಳುವ ಸೇತುವೆಗೊಕ್ಕೆ ಯಾವ ಪರಿಹಾರವೂ ಇಲ್ಲೆಯೋ?

ಸಮಸ್ಯೆ  : “ಸೇತು ಮುರುದು ಹೋತು ಕಟ್ಟಿಗೊ೦ಡು ಇಪ್ಪಗ”

ಭೋಗ ಷಟ್ಪದಿಲಿ ಇಪ್ಪ ಈ ಸಮಸ್ಯೆಗೆ ಬೈಲಿಲಿ ಖ೦ಡಿತಾ ಪರಿಹಾರ ಸಿಕ್ಕುಗು,ಅಲ್ಲದೋ?

ಸಂಪಾದಕ°

   

You may also like...

8 Responses

 1. indiratte says:

  ಕೋತಿ ಹೇಳಿ ಹಳಿದ ಪಾರ್ಥ
  ಛಾತಿಯಿಂದ ಸಾಗರಕ್ಕೆ
  ಸೇತುವೆಯನೆ ಕಟ್ಟಿ ಬಿಟ್ಟ ಬಾಣರಾಶಿಲಿ
  ಮಾತಿನುಳಿಶಿಕೊಂಬಲೇಳಿ
  ವಾತನಣುಗ ಸಂಕ ಮೆಟ್ಟೆ
  ಸೇತು ಮುರುದುಹೋತು ಕಟ್ಟಿಯಾಗಿ ಅಪ್ಪಗ ||

 2. K.Narasimha Bhat Yethadka says:

  ತನಿಖಾ ವರದಿ
  ಆತು ಕೆಲಸ ಬಿಲ್ಲು ಪಾಸು
  ಮಾತು ಇಲ್ಲೆ ಸನ್ನೆ ಮಾಂತ್ರ
  ಸೇತು ಮುರುದು ಹೋತು ಕಟ್ಟಿ ಗೊಂಡು ಇಪ್ಪಗ
  ಹೋತು ದೂರು ಮೇಗೆ ವರೆಗೆ
  ಹೇತು ಎಂತ ತನಿಖೆ ಮಾಡಿ
  ಕೀತು ಕೀತು ವರದಿ ಪುಕುಳಿಯಡಿಗೆ ಹೋತದ

 3. indiratte says:

  ಜಾತಿ ಬೇರೆಯಾದರೆಂತ
  ನೀತಿನಿಷ್ಠೆಲಿಪ್ಪ ಹೇಳಿ
  ಮಾತುಕೊಟ್ಟುಗೊಂಡವಲ್ಲಿ ಕೂಸುಮಾಣಿಯು
  ಬೇತುಮಾಡಿ ಅವರ ನೆಡುಕೆ
  ಮೀಟಿಬಿಡಲು ಜೋಡಿಸಖ್ಯ –
  ಸೇತುಮುರುದು ಹೋತು ಕಟ್ಟಿಗೊಂಡು ಇಪ್ಪಗ ||

 4. ರೇವತಿ.ಯು.ಎಮ್. says:

  ಆತು ಮೊನ್ನೆ ಮೂಡ ಹೊಡೆಲಿ
  ಮಾತೆ ದುರ್ಗೆ ಊರಿನೊಳವೆ
  ಸೇತು ಮುರುದು ಹೋತು ಕಟ್ಟಿಗೊಂಡು ಇಪ್ಪಗ.
  ಹೋತು ಜನರ ಜೀವ ಅಲ್ಲಿ
  ಸೋತು ಒಳುದೊರಿಂಗೆ, ಮಮತ
  ಮಾತು ಕೊಟ್ಟು ಸಾಂತ್ವನವನು ಹೇಳಿ ಹೋದವು.

 5. indiratte says:

  ಆತತಾಯಿ ಮನುಜರೆಲ್ಲ
  ನೀತಿನಿಯಮ ಮೀರಿ ಕಟ್ಟೆ
  ಸೇತು ಮುರುದು ಹೋತು ಕಟ್ಟಿಗೊಂಡು ಇಪ್ಪಗ
  ಭೂತಲದೊಳ ಸಿಕ್ಕಿಬಿದ್ದು
  ಹೂತುಹೋದ ಜನರ ಕಂಡು
  ಭೀತರಾಗಿ ನಿಂದವೆಲ್ಲ ವಂಗರಾಜ್ಯದಿ ||

 6. ಶೈಲಜಾ ಕೇಕಣಾಜೆ says:

  ಆತು ಹೇಳಿ ಎಲ್ಲದಕ್ಕು
  ಛಾತಿ ಮೀರಿ ಒಪ್ಪಿಗೊಂಡ್ರೆ
  ಮಾತು ಒಳುದು ಹೋಕು ಲೊಟ್ಟೆರೈಲು ಬಿಟ್ಟದೂ |
  ಧಾತು ಮೀರಿ ಪಾಕ ಮಾಡೆ
  ಜೋತು ಬಿದ್ದು ಅಂತರಾತ್ಮ
  ಸೇತು ಮುರುದು ಹೋತು ಕಟ್ಟಿಗೊಂಡು ಇಪ್ಪಗ ||

 7. ಶೈಲಜಾ ಕೇಕಣಾಜೆ says:

  ಕೇತು ರಾಹು ಸಮಕೆ ಹೊಂದಿ
  ಜಾತಕಲ್ಲಿ ಕೂಡಿ ಬಂದು
  ಮಾತುಕತೆಗೊ ಮದುವೆ ಮಂಟಪಕ್ಕೆ ಬಂತದಾ |
  ಹೇತುವಾಗಿ ಪೈಸೆ ಆಶೆ
  ಸೂತಕ ನೆಪ ಹೇಳಿ ತಾಳಿ,
  ಸೇತು ಮುರುದು ಹೋತು, ಕಟ್ಟಿಗೊಂಡು ಇಪ್ಪಗ ||

 8. ಬೊಳುಂಬು ಗೋಪಾಲ says:

  ಸಂಕ ಮುರಿತ್ತ ವಿಷಯಲ್ಲೇ ಎಷ್ಟೊಂದು ವಿಧಂಗೊ. ಎಲ್ಲ ಕಲ್ಪನೆಗಳೂ ಲಾಯಕಾಯಿದು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *