ಸಮಸ್ಯೆ 118 : ಯೋಗ ಕೂಡಿತ್ತಿ೦ದು ಸುಳ್ಯದ ಪೇಟೆ ಮಧ್ಯಲ್ಲಿ

ಇ೦ದು ಸುಳ್ಯದ ಶಿವಕೃಪಾಲ್ಲಿ ನೆಡೆತ್ತ ನಮ್ಮ ಬೈಲಿನ ಕಾರ್ಯಕ್ರಮ ಚೆ೦ದಕೆ ನೆಡೆಯಲಿ ಹೇಳಿ ಹಾರೈಸುತ್ತಾ,

ಸಮಸ್ಯೆ : ಯೋಗ ಕೂಡಿತ್ತಿ೦ದು ಸುಳ್ಯದ ಪೇಟೆ ಮಧ್ಯಲ್ಲಿ

ಭಾಮಿನಿ ಷಟ್ಪದಿಲಿ ಇಪ್ಪ ಈ ಸಮಸ್ಯೆಗೆ ಪರಿಹಾರ೦ಗೊ ಬರಲಿ.

 

ಸಂಪಾದಕ°

   

You may also like...

10 Responses

 1. indiratte says:

  ಮಾಗಿದನುಭವ ಹೊಂದಿದಣ್ಣಗೆ
  ಪಾಗು ಕಟ್ಟುವ ಚೆಂದ ನೋಡುವ
  ಯೋಗ ಕೂಡಿತ್ತಿಂದು ಸುಳ್ಯದ ಪೇಟೆ ಮಧ್ಯಲ್ಲಿ |
  ಹೋಗಿ ನೋಡುಲೆ ಯಕ್ಷನಾಟಕ
  ಬೇಗ ಕೂದವು ಎದುರು ಸಾಲಿಲಿ
  ಭಾಗಿಯಾದವು ಕೈಯ ತಟ್ಟುತ ದೊಡ್ಡ ಚಪ್ಪಾಳೆ ||

 2. K.Narasimha Bhat Yethadka says:

  ಪರಿಚಯ ಯೋಗ
  ಬೇಗ ಬೇಗನೆ ಬಂದು ಸೇರಿದೆ
  ಆಗ ಕಂಡದು ಸಣ್ಣ ಸಭೆಯೇ
  ಯೋಗ ಕೂಡಿತ್ತಿಂದು ಸುಳ್ಯದ ಪೇಟೆ ಮಧ್ಯಲ್ಲಿ
  ಭಾಗವಹಿಸಿದ ಒಪ್ಪ ಬಳಗವ
  ಮೇಗೆ ಕೂಡಾ ಗಣ್ಯ ಗಡಣವ
  ಬಾಗಿ ವಂದುಸಿ ಗುರ್ತ ಪರಿಚಯ ಆತು ನೆರೆಕರೆಯ

  • ರಘು ಮುಳಿಯ says:

   ಮಾವಾ ,
   ನಿಂಗೊ ಭಾಗವಹಿಸಿದ್ದು ನೋಡಿ ಕೊಶಿಯಾತು . ಪೂರಣ ಲಾಯ್ಕಿದ್ದು .

 3. ಶೈಲಜಾ ಕೇಕಣಾಜೆ says:

  ಸಾಗಿ ಸಾಧನೆ ಶಿಖರವೇರಿದ
  ಮಾಗಿದನುಭವದಜ್ಜ ಮಾದರಿ
  ಯಾಗಿ ನಿಂದವು ಬೈಲ ಬಾಳಿಲ ಪಾರಿತೋಷಕಲಿ |
  ತೂಗಿ ಕೃತಿ ಬಹುಮಾನ ಕೊಟ್ಟರೆ
  ಲಾಗ ಹಾಕುವ ಯಕ್ಷ ನಾಟಕ
  ಯೋಗ ಕೂಡಿತ್ತಿ೦ದು ಸುಳ್ಯದ ಪೇಟೆ ಮಧ್ಯಲ್ಲಿ ||

  • ರಘು ಮುಳಿಯ says:

   ಆಹಾ , ಕಾರ್ಯಕ್ರಮದ ವಿವರಂಗಳೂ ಬಂತು . ರೈಸಿತ್ತು ಪೂರಣ .

 4. ಬೇಗ ಊರಿನ ಸೇರಿಗೊ೦ಬಲೆ
  ಸಾಗಿ ಹೋಪಗ ಬಂತು ಪರಿಮಳ –
  ವಾಗ ಜಾನ್ಸಿದೆ ಸುಭಗ ಭಾವನ “ಕುಣಿಯ” ಅಗಿಕ್ಕೋ?|
  ರಾಗ ಹೆರಟತ್ತಯ್ಯ ಬಾಯಿಯ
  ಬೀಗ ತೆಗದಾ೦ಗಾತು “ಹರಟೆ”ಗೆ
  ಯೋಗ ಕೂಡಿತ್ತಿ೦ದು ಸುಳ್ಯದ ಪೇಟೆ ಮಧ್ಯಲ್ಲಿ ||

  ಯೇವದೋ ನೆರೆಕರೆಯ ಬೈಲಿಲಿ ಸುಭಗ ಭಾವಂಗೆ “ಹರಟೆ ಮಲ್ಲ ” ಹೇಳಿ ಬಿರುದು ಪ್ರದಾನ ಆಯಿದಡ,ಅಪ್ಪೋ ?!

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *