ಸಮಸ್ಯೆ 19 : ಚಿತ್ರಕ್ಕೆ ಪದ್ಯ (1)

February 16, 2013 ರ 6:00 amಗೆ ನಮ್ಮ ಬರದ್ದು, ಇದುವರೆಗೆ 28 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

IMG_7910ಈ ವಾರ ಒ೦ದು ಹೊಸ ಪ್ರಯತ್ನ ಮಾಡಿರೆ೦ತ?

ನಿ೦ಗೊಗೆ ಇಷ್ಟ ಇಪ್ಪ ಯೇವದೇ ಛ೦ದಸ್ಸಿಲಿ ಈ ಪಟಕ್ಕೆ ಸೂಕ್ತ ಅಪ್ಪ ಒ೦ದು ಕವನ ಬರೆಯಿ.

 

(ಚಿತ್ರಕೃಪೆಃ ಪವನಜ ಮಾವ)

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 28 ಒಪ್ಪಂಗೊ

 1. ಬಾಲಣ್ಣ (ಬಾಲಮಧುರಕಾನನ)
  ಬಾಲಣ್ಣ (ಬಾಲಮಧುರಕಾನನ)

  ‘ಪುಟ್ಟು’ ಎಂತಕೆ ಹಾಂಗೆ ನೋಡುವೆ
  ಅಟ್ಟುಗದ ನಮ್ಮೆಲ್ಲರನ್ನುದೆ
  ಬೆತ್ತ ಹಿಡುದೇ ಜೆಪ್ಪುಗಡ ಓಡೆಕದ ನಾವು !
  ಕಟ್ಟಿದವು ಬಹು ದೊಡ್ದ ಮನೆಗಳ
  ಒಟ್ಟಿದವು ಕಡಿ ಕಡಿದು ಮರಗಳ
  ಬಟ್ಟ ಬಯಲಾತೀಗ ಕಾಡೇ ಬೋಳು ಬೋಳಾತು

  *** **** ***

  ಇದುವೆ ರಾಮನ ದಿವ್ಯ ದೇಗುಲ
  ವಿದುವೆ ಎಂಗೊಗೆ ಪುಣ್ಯ ಭೂಮಿಯು
  ಇದುವೆ ಕಪಿ ಕುಲ ಜೀವ ನೆಲೆ ಇದುವೆ’ ತರವಾಡು’
  ಮದುವೆ ಆಯಿದೊ? ಹೇಳಿ ಕೇಳೆಡಿ
  ಸದಯ ರಾಮನ ಕರುಣೆಯಿಂದಲೆ
  ಬದುಕಿ,’ಬಾಳುವೆ ನೆಡಶಿಂಡಿದ್ದೆಯೊ ಭಾರಿ ಪ್ರೀತಿಂದ’*

  * love marriage ನಮ್ಮಲ್ಲುದೇ ಇದ್ದನ್ನೆ.

  (ತಪ್ಪಿದ್ದರೆ ಕ್ಶಮಿಸಿ)

  [Reply]

  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ ಮಾವ° Reply:

  ಪದ್ಯಂಗೊ ಲಾಯಿಕಿದ್ದು ಬಾಲಣ್ಣ. ಕೆಲವು ದಿಕ್ಕೆ ‘ವಿಸಂಧಿ’ ಆದ್ದರ ನೋಡಿಗೊಳ್ಳಿ.

  [Reply]

  ಬಾಲಣ್ಣ (ಬಾಲಮಧುರಕಾನನ)

  ಬಾಲಣ್ಣ (ಬಾಲಮಧುರಕಾನನ) Reply:

  ಅಪ್ಪು ಕುಮಾರಣ್ಣ , ವಿಸಂಧಿ ದೋಷಂಗೊ ಬೈಂದು. ಅರ್ಜೆ೦ಟಿಲಿ ಬರದೆ,ಕೂಡಲೇ ಕಂಪ್ಯೂಟರಿಲಿ ಕುಟ್ಟಿ ಕಳುಸಿದೆ.ಸಮಯವುದೆ ಸಿಕ್ಕುತ್ತಿಲ್ಲೆ .ನಿಂಗಳ ಅಭಿಪ್ರಾಯಕ್ಕೆ ಕೃತಜ್ಞ.

  [Reply]

  VN:F [1.9.22_1171]
  Rating: 0 (from 0 votes)
 2. ಇಂದಿರತ್ತೆ
  ಇಂದಿರತ್ತೆ

  ಹುಗ್ಗಿ ಕೂಪಲೆ ಜಾಗೆ ಹುಡುಕುಲೆ
  ಬಗ್ಗಿ ನೋಡಿತು ಪುಟ್ಟು ಮಂಗವು
  ನೆಗ್ಗಿ ನೋಡದು ತಲೆಯನಬ್ಬೆಯು ಮಗನು ಹುಗ್ಗುದರಾ ।
  ಲಗ್ಗೆ ಹಾಕಿರೆ ಬಾಳೆತೋಟಕೆ
  ಬೊಗ್ಗಿ ಬಕ್ಕದ ಕೊರದೆಯಟ್ಟುಲೆ
  ನುಗ್ಗಿ ಹೋಪಲೆ ದಾರಿ ಯಾವುದು ಚಿಂತೆಯಪ್ಪಂಗೇ ॥

  [Reply]

  ಅದಿತಿ Reply:

  ಪದ್ಯ ತುಂಬಾ ಲಾಯ್ಕಾಯ್ದು. ಸರಾಗ ಓದುಲಾವ್ತು. ಚಿತ್ರಲ್ಲಿಪ್ಪ ಮೂರೂ ಮಂಗಗಳ ಬಗ್ಗೆ ಬರದ್ದು ಕುಶಿ ಕೊಟ್ಟತ್ತು.

  [Reply]

  ಇಂದಿರತ್ತೆ

  ಇಂದಿರತ್ತೆ Reply:

  ಪಟಲ್ಲಿ ಎದ್ದುಕಾಂಬದು ಮರಿಮಂಗನ ಚೇಷ್ಟೆಬುದ್ದಿಯೇ. ಆದರೆ ಆ ಭಾವವ ನಿಂಗೊ ನಿಂಗಳ ಪದ್ಯಲ್ಲಿ ಲಾಯ್ಕಲ್ಲಿ ತುಂಬಿಕೊಟ್ಟಿದಿ. ಹಾಂಗಾಗಿ ಆ ಮೂರು ಮಂಗಗಳನ್ನೂ ಸೇರ್ಸಿ ಬರದೆ .

  [Reply]

  VA:F [1.9.22_1171]
  Rating: 0 (from 0 votes)
  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ ಮಾವ° Reply:

  ಈ ಪದ್ಯವ ಈಗ ನೋಡಿದೆ. ರೈಸಿದ್ದು ಅತ್ತೆ.

  [Reply]

  ಇಂದಿರತ್ತೆ

  ಇಂದಿರತ್ತೆ Reply:

  ರೈಸಿದ್ದೋ ಬಿಟ್ತಿದೋ ,ಅಂತೂ ನಿಂಗಳ ರೈಟ್ ಮಾರ್ಕು ಸಿಕ್ಕಿತ್ತನ್ನೆ ,ಸಾಕು.ಒಳಿಶಿಗೊಂಬಲೆ ಇನ್ನೂ ಉರುಡುತ್ತೆ .

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶೇಡಿಗುಮ್ಮೆ ಪುಳ್ಳಿಸುವರ್ಣಿನೀ ಕೊಣಲೆಅಕ್ಷರ°ಕಳಾಯಿ ಗೀತತ್ತೆತೆಕ್ಕುಂಜ ಕುಮಾರ ಮಾವ°ವಿನಯ ಶಂಕರ, ಚೆಕ್ಕೆಮನೆಹಳೆಮನೆ ಅಣ್ಣಪೆಂಗಣ್ಣ°ವಿದ್ವಾನಣ್ಣಕೇಜಿಮಾವ°ಅನಿತಾ ನರೇಶ್, ಮಂಚಿವಿಜಯತ್ತೆಒಪ್ಪಕ್ಕಪುಣಚ ಡಾಕ್ಟ್ರುದೀಪಿಕಾಪಟಿಕಲ್ಲಪ್ಪಚ್ಚಿಅಡ್ಕತ್ತಿಮಾರುಮಾವ°ದೇವಸ್ಯ ಮಾಣಿವಸಂತರಾಜ್ ಹಳೆಮನೆvreddhiಸುಭಗನೆಗೆಗಾರ°ಜಯಶ್ರೀ ನೀರಮೂಲೆಕೆದೂರು ಡಾಕ್ಟ್ರುಬಾವ°ದೊಡ್ಡಮಾವ°ಪುತ್ತೂರಿನ ಪುಟ್ಟಕ್ಕ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ