ಸಮಸ್ಯೆ 26 : ”ಹೊಸ ಜೋಡಾದರೆ ಹುಗ್ಗುಸಿಕ್ಕು ಮಿನಿಯಾ ಕದ್ದೊ೦ಡು ಹೋತಿಕ್ಕುಗೂ ॥ “

April 6, 2013 ರ 6:00 amಗೆ ನಮ್ಮ ಬರದ್ದು, ಇದುವರೆಗೆ 32 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈ ವಾರ ” ಮತ್ತೇಭ ವಿಕ್ರೀಡಿತ ಹೇಳುವ ಛ೦ದಸ್ಸಿಲಿ ಸಮಸ್ಯಾಪೂರಣದ ಪ್ರಯತ್ನ ಮಾಡುವ.

ಇದು ಪ್ರತಿ ಸಾಲಿಲಿಯೂ ಇಪ್ಪತ್ತು ಅಕ್ಷರ೦ಗೊ ಇಪ್ಪ ಅಕ್ಷರ ವೃತ್ತ. ಲಘು ಗುರುಗಳ ಸ್ಥಾನ ನಾಲ್ಕೂ ಸಾಲುಗಳಲ್ಲಿ ಒ೦ದೇ ಹಾ೦ಗೆ ಈ ರೀತಿ ಇರೇಕು –

೧೧- -೧೧-೧-೧೧೧- – -೧- -೧- ( ನನನಾ/ನಾನನ/ನಾನ/ನಾನ/ನನನಾ/ನಾನಾನ/ನಾನಾನನಾ).

ಕನ್ನಡ ಪ೦ಡಿತರು  ಸುಲಾಭಲ್ಲಿ ನೆ೦ಪು ಒಳಿವಲೆ – ಲಘುವು೦ ಮೇಣ್ ಗುರುವು೦ ಬರಲ್ಕೆರಡು ಸೂಳ್ ಮತ್ತೇಭವಿಕ್ರೀಡಿತ೦” ಹೇಳಿ ಹೇಳುಗು.

ಅ.ರಾ.ಮಿತ್ರರು ಭಾರೀ ಕುಶಾಲಿಲಿ ಛ೦ದಸ್ಸುಗಳ ಪರಿಚಯ ಮಾಡಿ ಕೊಟ್ಟಿದವು ”ಛ೦ದೋಮಿತ್ರ” ಕೈಪಿಡಿಲಿ.ಅದರ್ಲಿ ಒ೦ದು ಹೀ೦ಗಿದ್ದುಃ

ನನಗೇಕಿಲ್ಲಿಗೆ ಬೆ೦ಗಳೂರು ನಗರಕ್ಕಾಯ್ತಪ್ಪ ವರ್ಗಾ೦ತರ೦

ಮನೆಯೇ ಸಿಕ್ಕುವುದಿಲ್ಲಿ ಕಷ್ಟ ಮನೆಗಡ್ವಾನ್ಸೇನು ಸಾಮಾನ್ಯವೇ

ಕೊನೆಗಾ ನರ್ಸರಿ ಶಾಲೆಗೂನು ತೆರಬೇಕಲ್ಲಪ್ಪ ಭಾರೀ ಹಣ೦

ಅನುಮಾನಕ್ಕೆಡೆಯಿಲ್ಲದ೦ಥ ಬದುಕೇ ದುಸ್ತಾರಮೀ ಊರಿನೊಳ್ ॥

ನಮ್ಮ ಸಮಸ್ಯೆ ಹೀ೦ಗಿದ್ದು ಃ

”ಹೊಸ ಜೋಡಾದರೆ ಹುಗ್ಗುಸಿಕ್ಕು ಮಿನಿಯಾ ಕದ್ದೊ೦ಡು ಹೋತಿಕ್ಕುಗೂ ॥ 

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 32 ಒಪ್ಪಂಗೊ

 1. ಇಂದಿರತ್ತೆ
  ಇಂದಿರತ್ತೆ

  ಕೊಶಿಲೀ ಜೆಂಬ್ರಕೆ ಹೋಪಗಾ ಹೊಸತು ಮೆಟ್ಟಿದ್ದಾಳಿ ಕೇಳಿಕ್ಕಿಯೇ
  ಹೊಸ ಜೋಡಾದರೆ ಹುಗ್ಗುಸಿಕ್ಕು ಮಿನಿಯಾ ಕದ್ದೊಂಡು ಹೋತಿಕ್ಕುಗೂ
  ಕಿಸೆಗಳ್ಲಂಗೆ ಸುಭಿಕ್ಷ ಕಾಲವಿದು, ಅಜ್ಜಯ್ಯಾ ಪರಂಚುತ್ತವೂ
  ನಸುಬೆಣ್ಚಿಪ್ಪಗ ಮಾರ್ಗದಾ ನಡಿಗೆ ತುಂಬಾ ಜೋಕೆ ಹೇಳಿದ್ದವೂ ॥

  [Reply]

  VA:F [1.9.22_1171]
  Rating: +1 (from 1 vote)
 2. ಬಾಲಣ್ಣ (ಬಾಲಮಧುರಕಾನನ)
  ಬಾಲಣ್ಣ (ಬಾಲಮಧುರಕಾನನ)

  ಹೊಸ ನೋಟೆಷ್ಟದೊ ಕೊಟ್ಟು ತಂದದಿದುವೇ ಜೋಡೊಂದು ಪೇಟೆಂದಲೇ

  ಕೊಶಿಲೊಂದೇ ದಿನವಾದರೂ ಎನಗದೆಷ್ಟಕ್ಕು ಸಿಕ್ಕೇಕನ್ನೇ

  ಪಿಸು ಮಾತೆಂತಕೆ ಗಟ್ಟಿ ಹೇಳು ಮಗನೇ ” ದಾಂಬೂಸು ಚೀಲಲ್ಲಿಯೋ

  ಹೊಸ ಜೋಡಾದರೆ ಹುಗ್ಗುಸಿಕ್ಕು ಮಿನಿಯಾ ಕದ್ದಂಡು ಹೋತಿಕ್ಕುಗೂ ”

  (ಬೈಲಿಂಗೆ ಬಾರದ್ದೆ ತುಂಬಾ ದಿನ ಆತು ,ಹಲವಾರು ಕೆಲಸಂಗೊ.ಸಮಯ ಇಪ್ಪಗ ‘ಲೋಡು ಶೆಡ್ಡಿಂಗು ‘ ಹಾಂಗಾಗಿಪ್ಪಗ ಇಂದು ದಿನ ಕೂಡಿ ಬಂತು ,ಬರದ್ದು ತಪ್ಪಿಪ್ಪಲೂ ಸಾಕು .ಕ್ಷಮಿಸಿ)

  [Reply]

  ಶೈಲಜಾ ಕೇಕಣಾಜೆ Reply:

  ಅಬ್ಬಾ… ಜಂಭದ ಚೀಲಲ್ಲಿ ಹೇದು ಬರದ್ದಿಲ್ಲಿರನ್ನೇ….. ಬಚಾವ್… ಲಾಯ್ಕಾಯಿದಣ್ಣ… :)

  [Reply]

  VA:F [1.9.22_1171]
  Rating: 0 (from 0 votes)
 3. ಕೆ.ನರಸಿಂಹ ಭಟ್

  ರಸಪಾಕಂಗಳ ಮೈಗೆ ಮೆತ್ತಿ ಬಹುಕಾಲಂದಲ್ಲಿಯೇ ನಿಂದ ಹಾಂ
  ಗೆ ಸದಾ ದರ್ಶನ ಭಾಗ್ಯ ಕೊಟ್ಟು ಪೊರೆವಾ ದೇವಾದಿದೇವರ್ಗಳಾ
  ಪಸ ರೂಪಕ್ಕೆದುರಾಗಿ ನಿಂದು ಮನಸಾ ವಂದುಸ್ಲೆ ಹೋವುತ್ತರೇ
  ಹೊಸ ಜೋಡಾದರೆ ಹುಗ್ಗುಸಿಕ್ಕು ಮಿನಿಯಾ ಕದ್ದೊಂಡು ಹೋತಿಕ್ಕುಗೂ

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಮಾವ೦ಗೆ ವೃತ್ತ ಬರವ ಅಭ್ಯಾಸ ಮದಲೇ ಇತ್ತೋ ಹೇ೦ಗೇ?ಭಾರೀ ಹದ ಇದ್ದು.
  ಪಸ – ಅರ್ಥ ಗೊ೦ತಾತಿಲ್ಲೆ ಮಾವ.

  [Reply]

  VA:F [1.9.22_1171]
  Rating: 0 (from 0 votes)
 4. ಶೈಲಜಾ ಕೇಕಣಾಜೆ

  ಸುರುವಾಣ ಗೆರೆಯಂತೂ ಸೂಪರ್…. ಲಾಯ್ಕಾಯಿದು ಮಾವ….

  [Reply]

  VA:F [1.9.22_1171]
  Rating: 0 (from 0 votes)
 5. ಕೆ.ನರಸಿಂಹ ಭಟ್

  ಧನ್ಯವಾದ ಅಕ್ಕ.

  [Reply]

  VA:F [1.9.22_1171]
  Rating: 0 (from 0 votes)
 6. ಕೆ.ನರಸಿಂಹ ಭಟ್

  ಧನ್ಯವಾದ ಮುಳಿಯದಣ್ಣ.ಪಸ=ಚೆಂದ ಹೇಳುವ ಅರ್ಥಲ್ಲಿ ಆನು ತೆಕ್ಕೊಂಡದು.,

  [Reply]

  VA:F [1.9.22_1171]
  Rating: 0 (from 0 votes)
 7. parvathi marakini

  ಎನಗೆ ಕವನ ಬರವಲೆ ಅರಡಿತ್ತಿಲ್ಲೆ…ಛಂದಸ್ಸು ಮದಲೇ ಗೊಂತಿಲ್ಲೆ…ಆದರೆ ನಿಂಗೊ ಎಲ್ಲಾ ಬರದ್ದರ ಓದುಲೆ ಗಮ್ಮತ್ತು ಆವ್ತು. … ಹೀಂಗಿಪ್ಪ ಭಾರೀ ಐಡಿಯಂಗೊ ನಿಂಗೊಗೆ ಎಲ್ಲಿ ಸಿಕ್ಕುತ್ತು ಹೇಳಿ ಆಶ್ಚರ್ಯ ಆವ್ತು ಎನಗೆ….!!! ಒಟ್ಟಾರೆ ಸಮಸ್ಯಾ ಪೂರಣ ವಿಭಾಗ ಭಾರೀ ಲಾಯಿಕಕ್ಕೆ ಬತ್ತಾ ಇದ್ದು.. ಹೀಂಗೇ ಮುಂದುವರಿಸಿ..

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶೀಲಾಲಕ್ಷ್ಮೀ ಕಾಸರಗೋಡುಎರುಂಬು ಅಪ್ಪಚ್ಚಿಕಾವಿನಮೂಲೆ ಮಾಣಿಮಾಲಕ್ಕ°ಅಡ್ಕತ್ತಿಮಾರುಮಾವ°ಕಜೆವಸಂತ°ಶಾ...ರೀವೇಣೂರಣ್ಣಡಾಮಹೇಶಣ್ಣಚುಬ್ಬಣ್ಣದೀಪಿಕಾಬೋಸ ಬಾವಕಳಾಯಿ ಗೀತತ್ತೆಅಕ್ಷರ°ಶಾಂತತ್ತೆಕೆದೂರು ಡಾಕ್ಟ್ರುಬಾವ°ಸಂಪಾದಕ°ಪೆರ್ಲದಣ್ಣಶರ್ಮಪ್ಪಚ್ಚಿಪೆಂಗಣ್ಣ°ಮಾಷ್ಟ್ರುಮಾವ°ಮಂಗ್ಳೂರ ಮಾಣಿದೊಡ್ಡಭಾವವಿದ್ವಾನಣ್ಣಮುಳಿಯ ಭಾವಪುತ್ತೂರಿನ ಪುಟ್ಟಕ್ಕ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ