ಸಮಸ್ಯೆ 70 : ಚಿತ್ರಕ್ಕೆ ಪದ್ಯ

May 24, 2014 ರ 6:00 amಗೆ ನಮ್ಮ ಬರದ್ದು, ಇದುವರೆಗೆ 9 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಪವನಜ ಮಾವ ಕಳುಸಿದ ಈ ಚಿತ್ರಕ್ಕೆ ಈ ವಾರ ಒ೦ದು ಪದ್ಯ ಕಟ್ಟುವನೋ?

 

ಹಸುರಿನೆಲೆ ಮೇಲೆ

 

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 9 ಒಪ್ಪಂಗೊ

 1. ಅದಿತಿ

  ಯಾರು ಹಸುರಿನೆಲೆಯ ಮೇಲೆ
  ನೀರು ದೋಸೆ ಹನುಸಿ ಹೋದ್ದು?
  ಚಾರುಕನ್ಯೆ ನಿನ್ನೆಯಿರುಳು ನೆಲಲಿ ಕಂಡಿದಾ?
  ಕಾರಿರುಳಿಲಿ ಬಿದ್ದು ಹೋಯ್ದು
  ತಾರೆಯೊಂದು, ಕಡೆಗದುವೆಯೆ
  ಹಾರಿ ಬಂದು ಮೋಕೆಲಪ್ಪಿ ಹಿಡುದು ಕೂತದಾ?

  ಹನುಸಿ = ಎರದು
  ಚಾರುಕನ್ಯೆ = ಸುಂದರ ಕನ್ಯೆ (ಪದ್ಯಲ್ಲಿ ದೇವಕನ್ಯೆ ಹೇಳುವ ಅರ್ಥಲ್ಲಿ ಬರದ್ದು)

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಆಹಾ.. ಚಿಟ್ಟೆ ನೀರುದೋಸೆಯಾತೋ !!
  ಎರಡನೆ ಉಪಮೆಯೂ ತೂಕದ್ದು. ಒಳ್ಳೆ ಕಲ್ಪನೆ ಅದಿತಿ ಅಕ್ಕಾ.

  [Reply]

  VA:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘುಮುಳಿಯ

  ಕೆ. ನರಸಿಂಹ ಭಟ್ ಏತಡ್ಕ೦ದ ಕಳುಸಿದ ಪೂರಣ ಇಲ್ಲಿದ್ದು.

  ಶ್ವೇತಾಂಬರಿ
  ————–
  ಪಾತರಗಿತ್ತಿಯೆ ನಿನ್ನಾ
  ಪಾತರವೇ ಚೆಂದ ನೀನು ಸುತ್ತಿದ ಭಾರೀ
  ಶ್ವೇತ ವಸನದಾ ಮಣಿಗಳೆ
  ನೇತೊಂಡಿಪ್ಪ ತರ ಕಪ್ಪು ದೃಷ್ಟಿಯ ಬೊಟ್ಟೋ?
  (ಪಾತರ=ನಾಟ್ಯ )

  [Reply]

  VA:F [1.9.22_1171]
  Rating: 0 (from 0 votes)
 3. ಮುಳಿಯ ಭಾವ
  ರಘುಮುಳಿಯ

  ನಿನ್ನೆಯುದೆಗಾಲಲ್ಲಿ ಮನೆ ಹೊಡೆ
  ಬೆನ್ನು ಹಾಕುತ್ತೆರಡು ಮೈಲಾ
  ತಿನ್ನು ನೆಡದರೆ ಹೊಟ್ಟೆ ಕರಗುಗು ಸೋಲುಗೋ ಹೇಳಿ।
  ಎನ್ನ ಮು೦ದೆಯೆ ಕ೦ಡ ಹೂಗಿನ
  ಸಣ್ಣ ಸೆಸಿಕರೆ ಬ೦ದು ಸೊ೦ಟದ
  ದಿನ್ನವಾ ಸುಖವಾಗಿ ಹೊತ್ತರೆಗಳಿಗೆ ನಿ೦ದಾತು।।

  ಎಲ್ಲಿ ನೋಡಿದರಲ್ಲಿ ಹಸುರಿನ
  ಚೆಲ್ಲಿ ನಿ೦ದಿದು ಸುತ್ತ ಸೆಸಿಮರ
  ನಿಲ್ಲು ಓಡೆಡ ನೋಡಿ ಕಣ್ಮನ ತು೦ಬುಸಿಗೊ ಹೇಳಿ।
  ಮೆಲ್ಲುಲಿಯ ತ೦ಗಾಳಿ ಬೀಸೊಗ
  ಹುಲ್ಲ ಮೇಲೆಯೆ ಕೂದರೆಕ್ಷಣ
  ಗೆಲ್ಲುಗಳ ಮೇಲೆನ್ನ ಕಣ್ಣಿನ ನೋಟ ಹಾರಿತ್ತು।।

  ಹಸುರ ಹಸೆ ಮೇಲಿತ್ತು ಸೂರ್ಯನ
  ಹೊಸಕಿರಣಗಳ ಕಾ೦ತಿಯನೆ ಮೀ
  ರುಸುವ ಶುಭ್ರದ ಬೆಳಿಯ ಚಿಟ್ಟೆಯ ಸೀರೆ ಕಪ್ಪ೦ಚು।
  ನಸುಕ ಚಿಲಿಪಿಲಿ ಮರದು ಮೇಲಾ
  ಗಸವೆ ನೋಡುಗು ರೆಪ್ಪೆ ಮುಚ್ಚದೆ
  ರಸದ ಊಟವಿದಾತು ಹರಗಿದ ದೃಶ್ಯವೈಭವವು।।

  [Reply]

  VA:F [1.9.22_1171]
  Rating: 0 (from 0 votes)
 4. ಭಾಗ್ಯಲಕ್ಷ್ಮಿ

  ಈಗಷ್ಟೆ ಗೂಡಿ೦ದ ಹೆರ ಬಂದದು ಹೇಳುವ ಕಲ್ಪನೆಲಿ —
  ಹಸುರೆಲೆ ಹಾಸಿಲಿ ಕೋಶದ
  ಮುಸುಕಿನ ಬಿಡುಸಿಕ್ಕಿ ಹಾರುವಹೊಸತನಲ್ಲೀ I
  ಕುಸುಮದ ಬೆಳಿ ಎಸಳಿ೦ಗಾ
  ವಸನದ ಶುಭ್ರತೆಗೆ ಸೃಷ್ಟಿ ಮಡುಗಿದ ಬೊಟ್ಟೋ !!?

  [Reply]

  ಮುಳಿಯ ಭಾವ

  ರಘುಮುಳಿಯ Reply:

  ತಡವಾಗಿ ನೋಡಿದೆ ಭಾಗ್ಯಕ್ಕ.ಕ೦ದ ಲಾಯ್ಕ ಆಯಿದು.

  [Reply]

  VA:F [1.9.22_1171]
  Rating: 0 (from 0 votes)
 5. K.Narasimha Bhat Yethadka

  ಹೊಸ ಬೆಳಿಯಂಗಿಲಿ
  ಕುಸುರಿನ ಕಲೆಯ ಮಣಿ
  ಬಸರಿ ಪತಂಗಕ್ಕೆ ಹೊಸ ಹೊಣೆ
  ಹಸುರಿನ ಪತ್ರೆಲಿ
  ಬಸರಿನ ಕಳದೂ
  ಹೊಸಕುಲ ರಚನೆಯೆ ಸುರುವಾತು

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಶರಷಟ್ಪದಿಲೊ೦
  ದೆರಡಕ್ಷರದೆಡೆ
  ಸರಿಮಾಡಿರೆ ಗಣ ಸರಿಯಾತು..
  ಲಾಯ್ಕ ಆಯಿದು ಮಾವ.ಒ೦ದೆರಡು ಸಣ್ಣ ತಿದ್ದುಪಡಿ..

  ಹೊಸ ಬೆಳಿಯಂಗಿಲಿ
  ಕುಸುರ ಕಲೆಯ ಮಣಿ
  ಬಸರಿ ಪತಂಗಕೆ ಹೊಸ ಹೊಣೆಯು
  ಹಸುರಿನ ಪತ್ರೆಲಿ
  ಬಸರಿನ ಕಳದೂ
  ಹೊಸಕುಲ ರಚನೆಯೆ ಸುರುವಾತು

  [Reply]

  VA:F [1.9.22_1171]
  Rating: 0 (from 0 votes)
 6. ಶೈಲಜಾ ಕೇಕಣಾಜೆ

  ಕಾವ ಬೆಶಿಗೆ ಮೊಟ್ಟೆ ಬಿರುದು
  ಜೀವ ಬಂದ ಲಾರ್ವ ಹರದು
  ಹಾವ ಭಾವ ಬದಲೆ ಪ್ಯೂಪವೊಡದು ರೆಂಕೆಲೀ
  ರಾವು ತಿಂಬಲೀಗ ಹಸುರ
  ಮೇವು ಶ್ವೇತದಂಗಿ ಚಿಟ್ಟೆ
  ಸಾವು ಬಪ್ಪ ಮದಲೆ ಹಾರಿ ಬೆಳಶು ಸಂತತೀ ||

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಳಾಯಿ ಗೀತತ್ತೆವೇಣಿಯಕ್ಕ°ಚುಬ್ಬಣ್ಣಅಕ್ಷರದಣ್ಣಶುದ್ದಿಕ್ಕಾರ°ಶಾಂತತ್ತೆಕೊಳಚ್ಚಿಪ್ಪು ಬಾವಮಂಗ್ಳೂರ ಮಾಣಿವೇಣೂರಣ್ಣದೊಡ್ಮನೆ ಭಾವಜಯಶ್ರೀ ನೀರಮೂಲೆಅನು ಉಡುಪುಮೂಲೆಡಾಗುಟ್ರಕ್ಕ°ಅಜ್ಜಕಾನ ಭಾವಗೋಪಾಲಣ್ಣಸರ್ಪಮಲೆ ಮಾವ°ದೇವಸ್ಯ ಮಾಣಿಶೀಲಾಲಕ್ಷ್ಮೀ ಕಾಸರಗೋಡುಬಟ್ಟಮಾವ°ಪುತ್ತೂರುಬಾವಶೇಡಿಗುಮ್ಮೆ ಪುಳ್ಳಿಅಕ್ಷರ°ವಿನಯ ಶಂಕರ, ಚೆಕ್ಕೆಮನೆಮಾಲಕ್ಕ°ವಾಣಿ ಚಿಕ್ಕಮ್ಮವಸಂತರಾಜ್ ಹಳೆಮನೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ