ಸಮಸ್ಯೆ 75:ಆಟಿ ಸಮ್ಮಾನಕ್ಕು ಪುರುಸೊತ್ತಿರ

July 19, 2014 ರ 6:00 amಗೆ ನಮ್ಮ ಬರದ್ದು, ಇದುವರೆಗೆ 17 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈ ವಾರ ಕುಸುಮ ಷಟ್ಪದಿಲಿ ಸಮಸ್ಯೆ :

                                     “ಆಟಿ ಸಮ್ಮಾನಕ್ಕು ಪುರುಸೊತ್ತಿರ”

ಆಟಿ ತಿಂಗಳಿಲಿ ಹೊಸ ಮದುಮಕ್ಕೊಗೆ ಮಾವಗಳಲ್ಲಿ ಸಮ್ಮಾನ  ಮಾಡ್ತದು ನಮ್ಮ ಸಂಪ್ರದಾಯ . ಬೈಲಿನ ಕೆಲವು ಜವ್ವನಿಗರು ಪ್ರತಿ ವರ್ಷ ಸಮ್ಮಾನ ಇರ್ತಿದ್ದರೆ ಒಳ್ಳೆದು ಹೇಳ್ತವು ,ಅದಿರ್ಲಿ .. ಎಂತಗೆ ಪುರುಸೊತ್ತಿರ ಹೇಳಿ ಸಮಸ್ಯೆಗೆ ಪರಿಹಾರ ಹುಡುಕ್ಕುವನೋ ?

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 17 ಒಪ್ಪಂಗೊ

  1. ಇಂದಿರತ್ತೆ
    ಇಂದಿರತ್ತೆ

    ಸೂಟುಬೂಟಿನ ಹಾಕಿ
    ಕೋಟಿ ಪೈಸೆಯ ತರೆಕು ,
    ಮೇಟಿ ಕೆಲಸದ ಮಾಣಿ ಮಾಂತ್ರ ಬೇಡ |
    ಪೇಟೆ ಹುಡುಗನ ಹುಡುಕಿ
    ದಾಂಟಿಸಿರೆ ಮಗಳವ
    ಕ್ಕಾಟಿ ಸಮ್ಮಾನಕ್ಕು ಪುರುಸೊತ್ತಿರ ||

    [Reply]

    ಮುಳಿಯ ಭಾವ

    raghu muliya Reply:

    ಸ೦ಗತಿ ಅಪ್ಪು ಇಂದಿರತ್ತೆ . ಲಾಯ್ಕ ಆಯಿದು .

    [Reply]

    VA:F [1.9.22_1171]
    Rating: 0 (from 0 votes)
  2. K.Narasimha Bhat Yethadka

    ಊಟ-ಕೂಟ
    ಮೇಟಿ ಕೆಲಸದವಂಗೆ
    ಸೂಟಿಯುದೆ ಧಾರಾಳ
    ಊಟಕ್ಕು ಕೂಟಕ್ಕು ಹೋಪ ಲೆಡಿಗು |
    ನೋಟುಗಳ ಲೆಕ್ಕಿಸುವ
    ಕಾಟುಕುಕ್ಕೆಯ ರವಿಗೆ
    ಆಟಿ ಸಮ್ಮಾನಕ್ಕು ಪುರುಸೊತ್ತಿರ ||
    (ಮೇಟಿ=ಕೃಷಿ,ಸೂಟಿ=ರಜೆ,ಲೆಕ್ಕಿಸು=ಎಣಿಸು)

    [Reply]

    ಮುಳಿಯ ಭಾವ

    raghu muliya Reply:

    ನೋಟುಗಳ ಎಣುಸಿ ಎಣುಸಿ ಸಂಬಂಧ0ಗಳೇ ದೂರ ಆಗಿ ಹೋಕೋ ಮಾವಾ ? ಪದ್ಯ ರಸವತ್ತಾಯಿದು .

    [Reply]

    VA:F [1.9.22_1171]
    Rating: 0 (from 0 votes)
  3. ನಾಟಿ ವೈದ್ಯರದೆ ಕುಡಿ
    ನೋಟ ಬೀರುವ ಕೂಸು
    ಮಾಟಗಾತಿಗೆ ಕೊಟ್ಟೆ ಮಾಲೆ, ಮುತ್ತು I
    ‘ಕೋಟಿ ಸೇರಲಿ ಬಾಳಿ
    ನೋಟಲ್ಲಿ”!! ಹೇಳಿತ್ತ –
    ದಾಟಿ ಸಮ್ಮಾನಕ್ಕು ಪುರುಸೊತ್ತಿರ !! II

    ವೈದ್ಯರದೆ ಕುಡಿ =ವೈದ್ಯರ ವಂಶ
    ಕುಡಿ ನೋಟ =ಮನಸೆಳವ ನೋಟ
    ಬಾಳಿನ +ಓಟ =ಬಾಳಿನೋಟ
    ಹೇಳಿತ್ತು +ಅದು + ಆಟಿ = ಹೇಳಿತ್ತದಾಟಿ

    [Reply]

    ಮುಳಿಯ ಭಾವ

    raghu muliya Reply:

    ರಚನೆ ಲಾಯ್ಕ ಆಯಿದು ಭಾಗ್ಯಕ್ಕ . ಇನ್ನೂ ಒಂದೆರಡು ಚರಣ ಬರದು ಪೂರ್ತಿ ಅರ್ಥ ಬಪ್ಪ ಹಾಂಗೆ ಮಾಡ್ಳಕ್ಕು. ಒಂದು ಚರಣಲ್ಲಿ ಅಪೂರ್ಣ ಅನುಸುತ್ತು ..

    [Reply]

    ಭಾಗ್ಯಲಕ್ಷ್ಮಿ Reply:

    ಅಣ್ಣ ,ಕೆಲವೆಲ್ಲ ಅಪೂರ್ಣ ಆಗಿದ್ದರೆ ಅರ್ಥಪೂರ್ಣವಾಗಿರ್ತು .ಪದ್ಯಲ್ಲಿ ಬರೆಯದ್ದದು ಅವಕ್ಕವಕ್ಕೆ ( ಪ್ರತಿ ವರ್ಷ ಆಟಿ ಸಮ್ಮಾನ ಬೇಕು ಹೇಳುವೊರಿಂಗೆ )ಬೇಕಾದ ಹಾಂಗೆ ಅರ್ಥ ಮಡಿಗೊ೦ಬಲೆ ಬಿಟ್ಟದು.

    [Reply]

    VA:F [1.9.22_1171]
    Rating: 0 (from 0 votes)
  4. ಇಂದಿರತ್ತೆ
    ಇಂದಿರತ್ತೆ

    ಚೋಟುದ್ದ ಒಪ್ಪಕ್ಕ
    ಸಾಟಿಯು ಮದಿಮ್ಮಾಯ
    ಕೂಟಮೈತ್ರಿಯು ಸಮಕೆ ಕೂಡಿಬಂತು |
    ಊಟಿ ಸುತ್ತಿದ ಮತ್ತೆ
    ಘಾಟಿ ಹತ್ತಿದ ಜೋಡಿ
    ಗಾಟಿ ಸಮ್ಮಾನಕ್ಕು ಪುರುಸೊತ್ತಿರ ||

    [Reply]

    ಮುಳಿಯ ಭಾವ

    raghu muliya Reply:

    ಮುತ್ತಿನು೦ಗಿಲವ ಹಿಡು
    ದತ್ತೆ ಮಾವನೆ ನಾಳೆ
    ಬತ್ತವಡ ಸಮ್ಮಾನ ಮಾಡಿಬಿಡುಲೆ |
    ಹೆತ್ತ ಮಗಳಾ ಮೋರೆ
    ಹೊತ್ತು ಕ೦ತಿದ ಮೇಲೆ
    ಕತ್ತಲೆಲಿಯೂ ಹೊಳಗು ಪುರುಸೊತ್ತಿಲಿ ||

    [Reply]

    ಭಾಗ್ಯಲಕ್ಷ್ಮಿ Reply:

    ಆಹಾ !!
    … ಹೊಳವದು ”ವಜ್ರ”ದ ಉಂಗಿಲು ಅಲ್ಲದೋ?

    [Reply]

    VA:F [1.9.22_1171]
    Rating: 0 (from 0 votes)

    ಭಾಗ್ಯಲಕ್ಷ್ಮಿ Reply:

    ಚೋಟುದ್ದ ಕೂಸಿಂಗೆ ಮಾಣಿ ಸಿಕ್ಕುದು ಕಷ್ಟವೆ …. ಇಂದಿರತ್ತೆ ಕೂಟ ಮೈತ್ರಿ ನೋಡಿ ಕೂಸಿಂಗೆ ಮದುವೆ ಮಾಡ್ಸಿದ್ದು ಒಳ್ಳೆದಾಯಿದು .ನಿಂಗೊ ನೋಡಿದ್ದು ವೈಜಯಂತಿ ಪಂಚಾಂಗವೋ ?

    [Reply]

    VA:F [1.9.22_1171]
    Rating: 0 (from 0 votes)
  5. ಮುಳಿಯ ಭಾವ
    raghu muliya

    ಕಾಟುಬಲ್ಲೆಯ ಕಡುಶಿ
    ತೋಟ ಒತ್ತರೆ ಮಾಡಿ
    ಗೋಟುಕಾಯಿಯ ಹೊತ್ತು ತ೦ದ ಮೇಲೆ |
    ಈಟು ತಪ್ಪಲೆ ಪೆರ್ಲ
    ಪೇಟಗೋಪಲೆ ಇದ್ದು
    ಆಟಿ ಸಮ್ಮಾನಕ್ಕು ಪುರುಸೊತ್ತಿರ ||

    [Reply]

    VA:F [1.9.22_1171]
    Rating: 0 (from 0 votes)
  6. ಶೈಲಜಾ ಕೇಕಣಾಜೆ

    ರೇಟು ಚಿನ್ನದ್ದೇರೆ
    ನೋಟು ಪೈಸೆಯ ಬಿಚ್ಚ
    ಗೋಟಡಕ್ಕೆಯ ಕೆರಸಿ ತಿಂಬ ಜಾತಿ
    ಕಾಟು ಬೆಂದಿಲೆ ಉಂಬ
    ಘಾಟಿ ಮಾವಗಳಿಂಗ
    ದಾಟಿ ಸಮ್ಮಾನಕ್ಕು ಪುರುಸೊತ್ತಿರ || :)

    [Reply]

    ಮುಳಿಯ ಭಾವ

    raghu muliya Reply:

    ಹ.ಹ್ಹಾ .. ಮಾವುಗಳ ಕತೆಯೂ ಹೀಂಗೋ !! ರಸವತ್ತಾಯಿದು ಶೈಲಜಕ್ಕಾ ..

    [Reply]

    VA:F [1.9.22_1171]
    Rating: 0 (from 0 votes)
  7. ಶೈಲಜಾ ಕೇಕಣಾಜೆ

    ಅತ್ತೆಗಳ ಕತೆ ಬೇಕಾ ಮುಳಿಯದಣ್ಣಾ ಇದಾ…

    ರೋಟರಿ ಕ್ಲಬ್ಬಿಲ್ಲಿ
    ಕೂಟ ಮಾಡಿರೆ ಹಗಲು
    ಕಾಟು ಧಾರಾವಾಹಿಗಿರುಳು ನೋಡಿ
    ನೀಟು ಫರ್ನೀಚರಿನ
    ಸೂಟೆ ಬುದ್ಧಿಯ ಮಾಡಿ
    ರಾಟಿ ಸಮ್ಮಾನಕ್ಕು ಪುರುಸೊತ್ತಿರ. :)

    ಭಿನ್ನ ದೃಷ್ಟಿಯ ಉದ್ದೇಶ ವಷ್ಟೇ ಇಲ್ಲಿಪ್ಪದು…

    [Reply]

    VA:F [1.9.22_1171]
    Rating: 0 (from 0 votes)
  8. ಮುಳಿಯ ಭಾವ
    raghu muliya

    ಘಾಟು ವಾಸನೆ ಬಪ್ಪ
    ಚಾಟು ತಿನ್ನೆಡಿರೊ° ಕೊ೦
    ಡಾಟಲ್ಲಿ ಮಧುಮಾಸ ಕಳುಶಿ ಬನ್ನಿ|
    ಗೂಟ ಬಿಡುಸಿದ ಕ೦ಜಿ
    ಯೋಟ ಓಡಿರೆ ಮು೦ದೆ
    ಆಟಿ ಸಮ್ಮಾನಕ್ಕು ಪುರುಸೊತ್ತಿರ !!

    [Reply]

    VA:F [1.9.22_1171]
    Rating: 0 (from 0 votes)
  9. ಇಂದಿರತ್ತೆ
    ಇಂದಿರತ್ತೆ

    ಓಟೆ ಚೀಪಿದ°ನಾಲ್ಕು
    ಕಾಟುಮಾವಿನ ಗೊಜ್ಜಿ
    ಊಟ ಮಾಡೊಗ ಹೊಸಮದಿಮ್ಮಾಯನು |
    ಕಾಟಿಪಳ್ಳದ ಮಾಣಿ
    ಕೇಟನುಂಗಿಲನಂದೆ
    ಆಟಿಸಮ್ಮಾನಕ್ಕೆ ಪುರುಸೊತ್ತಿರ ||

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶುದ್ದಿಕ್ಕಾರ°ಸುವರ್ಣಿನೀ ಕೊಣಲೆಬಂಡಾಡಿ ಅಜ್ಜಿಪಟಿಕಲ್ಲಪ್ಪಚ್ಚಿವಾಣಿ ಚಿಕ್ಕಮ್ಮವಸಂತರಾಜ್ ಹಳೆಮನೆಮಾಲಕ್ಕ°ಅಡ್ಕತ್ತಿಮಾರುಮಾವ°ದೊಡ್ಮನೆ ಭಾವಡಾಮಹೇಶಣ್ಣಪೆರ್ಲದಣ್ಣಅನು ಉಡುಪುಮೂಲೆದೊಡ್ಡಭಾವಪವನಜಮಾವಯೇನಂಕೂಡ್ಳು ಅಣ್ಣವೇಣಿಯಕ್ಕ°ಹಳೆಮನೆ ಅಣ್ಣಚೂರಿಬೈಲು ದೀಪಕ್ಕದೇವಸ್ಯ ಮಾಣಿಅಜ್ಜಕಾನ ಭಾವಕೊಳಚ್ಚಿಪ್ಪು ಬಾವಬೋಸ ಬಾವಕೇಜಿಮಾವ°ಗೋಪಾಲಣ್ಣಅಕ್ಷರ°ಕೆದೂರು ಡಾಕ್ಟ್ರುಬಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ